ನೀವು ಮೊದಲ ಬಾರಿಗೆ ಐಫೋನ್ ಖರೀದಿಸಲು ಬಯಸುತ್ತಿದ್ದರೆ ಅಥವಾ ಈಗಾಗಲೇ ನೀವು ಐಫೋನ್ ಬಳಸುತ್ತಿದ್ದು ಅದನ್ನು ಅಪ್‌ಗ್ರೇಡ್ ಮಾಡಲು ಯೋಚಿಸುತ್ತಿದ್ದರೆ ಇಂದು ಒಂದೊಳ್ಳೆ ಸಮಯ ನಿಮಗಾಗಿದೆ. ಯಾಕೆಂದರೆ ಇಂದು ಈ Apple iPhone 15 ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ (Amazon GIF Sale) ಸೇಲ್‌ನಲ್ಲಿ ಈ ಹೊಸ ಐಫೋನ್ ಅನ್ನು ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಪಟ್ಟಿ ಮಾಡಲಾಗಿದ್ದು ಅತ್ಯುತ್ತಮ ವಿನಿಮಯ ಡೀಲ್ ಅನ್ನು ನೀಡುತ್ತಿದೆ. ಪ್ರಸ್ತುತ ಸ್ಮಾರ್ಟ್‌ಫೋನ್‌ಗಳ ಮೇಲೆ ಉತ್ತಮ ಡೀಲ್‌ಗಳು ಪಡೆಯಲು ಇದು ಒಂದು ಒಳ್ಳೆಯ ಸಮಯ ಇಲ್ಲಿದೆ. ಈ ವರ್ಷ iPhone 15 ಮೇಲೆ ಹೆಚ್ಚಿನ ರಿಯಾಯಿತಿ ಸಿಗುತ್ತಿದ್ದು ಈ ಫೋನ್ ಇನ್ನೂ ಹೆಚ್ಚಿನ ಜನರು ಖರೀದಿಸಲು ಸಾಧ್ಯವಿದ್ದು ಈ ಅಮೆಜಾನ್ ಸೇಲ್‌ನಲ್ಲಿ ಈ ಫೋನ್ ಅನ್ನು ಸುಮಾರು ₹45,000 ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು.
ಪ್ರಸ್ತುತ ಐಫೋನ್ ಅಂದರೆ ನಮ್ಮೆಲ್ಲರ ತಲೆಗೆ ಬರುವ ಪ್ರಶ್ನೆ ಅಂದ್ರೆ ದುಬಾರಿ ಮತ್ತು ಪ್ರೀಮಿಯಂ ಫೋನ್ ಅನ್ನೋ ಮಾತುಗಳು. ಆದರೆ ಇಂದಿನ ದಿನಗಳಲ್ಲಿ ಈ iPhone ಜನಸಾಮಾನ್ಯರ ಕೈಗೆಟಕುವ ಬೆಲೆಗೆ ಮಾರಾಟವಾಗುತ್ತಿರು ವುದನ್ನು ನೀವು ಗಮನಿಸಬಹುದು. ಆದರೆ ಇದರ ಬಗ್ಗೆ ಕೊಂಚ ಹೆಚ್ಚಾಗಿ ಯೋಚನೆ ಮಾಡುವವರ ಪ್ರಕಾರ ಈ iPhone ಸಾಮಾನ್ಯ ಆಂಡ್ರಾಯ್ಡ್ ಫೋನ್ಗಳಿಗೆ ಹೋಲಿಸಿದರೆ ಹೆಚ್ಚು ಸುರಕ್ಷಿತ ಮತ್ತು ಸೇಫ್ ಅನ್ನೋದು ಅವರ ಅನಿಸಿಕೆಯಾಗಿದೆ. ಅಲ್ಲದೆ ಹೊಸ ಐಫೋನ್ ಅನ್ನು ಒಮ್ಮೆ ಪೂರ್ತಿಯಾಗಿ ಬಳಸಬೇಕೆನ್ನುವುದು ಸಾಮಾನ್ಯವಾಗಿ ಪ್ರತಿಯೊಬ್ಬರ ಬಯಕೆಯೂ ಸಹ ಹೌದಲ್ಲವೆ.
ಪ್ರಸ್ತುತ ಅಮೆಜಾನ್ ಮಾರಾಟದಲ್ಲಿ iPhone 15 ಆರಂಭಿಕ ಮಾದರಿ 128GB ತುಂಬ ಕಡಿಮೆ ಬೆಲೆಗೆ ಅಂದ್ರೆ ₹47,999 ರೂಗಳಿಗೆ ಪಟ್ಟಿಯಾಗಿದೆ ಆದರೆ ವಿನಿಮಯ ಆಫರ್ ಅಡಿಯಲ್ಲಿ ಲಿಮಿಟೆಡ್ ಸಮಯಕ್ಕೆ ಇನ್ನೂ ಕಡಿಮೆ ಬೆಲೆಗೆ ಲಭ್ಯವಿದೆ. ಇದ್ರಾ ಕ್ರಮವಾಗಿ 256GB ಮಾದರಿಗೆ ₹58,499 ರೂಗಳು ಮತ್ತು ಕೊನೆಯದಾಗಿ ಇದರ 512GB ಮಾದರಿಯನ್ನು ₹76,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಪ್ರಸ್ತುತ ಇಲ್ಲಿ ಆರಂಭಿಕ ಮಾದರಿಯ ಬಗ್ಗೆ ಹೆಚ್ಚು ಗಮನಹರಿಸುವುದರೊಂದಿಗೆ ನಿಮ್ಮ iPhone 13 ಅಥವಾ iPhone 14 ಬದಲಾಯಿಸಿಕೊಂಡರೆ ಸುಮಾರು ₹22,000 ರೂಗಳ Exchange Bonus ನಿರೀಕ್ಷಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
Also Read: JBL 2.1ch Dolby Soundbar ಇಂದು ಅಮೆಜಾನ್‌ನಲ್ಲಿ ಭರ್ಜರಿ ಡಿಸ್ಕೌಂಟ್ಗಳೊಂದಿಗೆ ಲಭ್ಯ!
ಈ ಪವರ್ಫುಲ್ iPhone 15 ಅನೇಕ ಉತ್ತಮ ಫೀಚರ್‌ಗಳೊಂದಿಗೆ ಬರುತ್ತದೆ. ಇದರ 6.1 ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇ ಇದೆ. ಇದರ ರೆಸಲ್ಯೂಶನ್ 2556×1179 ಪಿಕ್ಸೆಲ್ಸ್ ಮತ್ತು 2000 ನಿಟ್ಸ್ ಬ್ರೈಟ್‌ನೆಸ್ ನೀಡುತ್ತದೆ. ಅಲ್ಲದೆ ಐ ಫೋನ್ ಅನ್ನು ನೀವು ದಿನದಲ್ಲಿ ಸೂರ್ಯನ ಬೆಳಕಿನಲ್ಲೂ ಸ್ಪಷ್ಟವಾಗಿ ಕಾಣುತ್ತದೆ. ಡೈನಾಮಿಕ್ ಐಲ್ಯಾಂಡ್ ಫೀಚರ್ ಇದರ ಮುಖ್ಯ ವೈಶಿಷ್ಟ್ಯವಾಗಿದೆ. ಇದರಲ್ಲಿ A16 ಬಯೋನಿಕ್ ಚಿಪ್ ಇದೆ. ಇದು 6-ಕೋರ್ CPU ಮತ್ತು 5-ಕೋರ್ GPU ಹೊಂದಿದೆ.
ಇದರ ಕ್ಯಾಮೆರಾ ಕೂಡ ಬಹಳ ಉತ್ತಮವಾಗಿದೆ. ಫೋನ್ 48MP ಪ್ರೈಮರಿ ಕ್ಯಾಮೆರಾ ಮತ್ತು 12MP ಅಲ್ಟ್ರಾ-ವೈಡ್ ಲೆನ್ಸ್ ಇದೆ. ಇದು ಉತ್ತಮ ಗುಣಮಟ್ಟದ ಫೋಟೋಗಳನ್ನು ಮತ್ತು 4K ವಿಡಿಯೋಗಳನ್ನು ಸೆರೆಹಿಡಿಯಬಹುದು. ಒಂದು ಪೂರ್ಣ ಶುಲ್ಕದಲ್ಲಿ 20 ಗಂಟೆಗಳವರೆಗೆ ವಿಡಿಯೋ ಪ್ಲೇಬ್ಯಾಕ್ ಸಿಗುತ್ತದೆ. ಇದು IP68 ವಾಟರ್ ಮತ್ತು ಡಸ್ಟ್ ರೆಸಿಸ್ಟೆಂಟ್ ರೇಟಿಂಗ್ ಹೊಂದಿದೆ. ಇದು ಬಹಳ ಕಾಲ ಬಾಳಿಕೆ ಬರುತ್ತದೆ. ಅಲ್ಲದೆ ಇದರಲ್ಲಿ ನೀವು USB C ಚಾರ್ಜ್ ಪೋರ್ಟ್ ಪಡೆಯುತ್ತೀರಿ ಇದು ತುಂಬಾ ಜನರಿಗೆ ಸಂತಸದ ವಿಷಯವಾಗಿದೆ.