Realme GT 6T 5G price cut
Realme GT 6T 5G Price Cut: ಈ ಪ್ರಸಿದ್ಧ ಸ್ಮಾರ್ಟ್‌ಫೋನ್ ತಯಾರಕ ರಿಯಲ್‌ಮಿ ಕೂಡ ಪ್ರೇಮಿಗಳ ದಿನದ (Valentine’s Day 2025) ಸಂದರ್ಭದಲ್ಲಿ ಪ್ರೇಮಿಗಳ ದಿನದ ಮಾರಾಟವನ್ನು ಪ್ರಾರಂಭಿಸಿದೆ. ಪ್ರೀಮಿಗಳ ದಿನದ ಆಚರಣೆಯ ಸಂದರ್ಭದಲ್ಲಿ ಅಮೆಜಾನ್ ಈ 32MP ಸೆಲ್ಫಿ ಕ್ಯಾಮೆರಾ ಹೊಂದಿರುವ Realme GT 6T 5G ದುಬಾರಿ ಸ್ಮಾರ್ಟ್‌ಫೋನ್ ಭಾರಿ ರಿಯಾಯಿತಿಯನ್ನು ನೀಡುತ್ತಿದೆ. ಪ್ರಸ್ತುತ ಅಮೆಜಾನ್ ಈ ಸ್ಮಾರ್ಟ್‌ಫೋನ್ ಮೇಲೆ ಬ್ಯಾಂಕ್ ಆಫರ್ ಜೊತೆಗೆ ಸುಮಾರು 5000 ರೂಗಳವರೆಗಿನ ರಿಯಾಯಿತಿಗಳೊಂದಿಗೆ ಮಾರಾಟ ಮಾಡುತ್ತಿದೆ.
ಈ Realme GT 6T 5G ಆಫರ್ ಬೆಲೆ ಮತ್ತು ಲಭ್ಯತೆಯ ಬಗ್ಗೆ ಮಾತನಾವುದಾದರೆ ಈ ಸ್ಮಾರ್ಟ್ಫೋನ್ ಒಟ್ಟು 4 ರೂಪಾಂತರಗಳಲ್ಲಿ ಲಭ್ಯವಿದೆ. ಆದರೆ ಪ್ರಸ್ತುತ ಇದರ 8GB RAM ಮತ್ತು 256GB ಸ್ಟೋರೇಜ್ ಮಾತ್ರ ಉತ್ತಮ ಡಿಸ್ಕೌಂಟ್ ಪಡೆಯುತ್ತಿದೆ. ಅಂದ್ರೆ ಈ ಕೆಳಗೆ ನೀವು ನೋಡುವಂತೆ 3000 ರೂಗಳ ಉಚಿತ ಕೂಪನ್ ಡಿಸ್ಕೌಂಟ್ ನೀಡುತ್ತಿರುವ ಅಮೆಜಾನ್ ಬ್ಯಾಂಕ್ ಆಫರ್ ಅಡಿಯಲ್ಲಿ ನಿಮಗೆ Federal Bank Credit Card* ಬಳಸಿ ಖರೀದಿಸಿದರೆ 2000 ರೂಗಳವರೆಗಿನ ಹೆಚ್ಚುವರಿಯ ಡಿಸ್ಕೌಂಟ್ ಪಡೆಯುವುದರೊಂದಿಗೆ ಕೇವಲ 23,998 ರೂಗಳಿಗೆ ಖರೀದಿಸಬಹುದು.
ಈ ಫೋನ್ 6.78 ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದ್ದು 2780×1264 (1.5K) ರೆಸಲ್ಯೂಶನ್ 1-120Hz ನಿಂದ ಅಡಾಪ್ಟಿವ್ ರಿಫ್ರೆಶ್ ದರಗಳು, 94.20% ಸ್ಕ್ರೀನ್-ಟು-ಬಾಡಿ ಅನುಪಾತ ಮತ್ತು 360Hz ಟಚ್ ಸ್ಯಾಂಪ್ಲಿಂಗ್ ದರವನ್ನು ಹೊಂದಿದೆ. Realme GT 6T 5G ಟರ್ಬೊ ಮೋಡ್‌ನಲ್ಲಿ 2500Hz ಹೆಚ್ಚಿಸಬಹುದು. ಡಿಸ್ಪ್ಲೇ 6000 ನಿಟ್‌ಗಳ ಗರಿಷ್ಠ ಹೊಳಪನ್ನು ಬೆಂಬಲಿಸುತ್ತದೆ ಮತ್ತು ಡಾಲ್ಬಿ ವಿಷನ್ ಬೆಂಬಲದೊಂದಿಗೆ DCI-P3 ಬಣ್ಣದ ಗ್ಯಾಮಟ್‌ನ 100% ಅನ್ನು ಒಳಗೊಂಡಿದೆ.
Also Read: ಅಬ್ಬಬ್ಬಾ! ಸ್ಯಾಮ್‌ಸಂಗ್‌ನಿಂದ ಹೊಸ Samsung Galaxy F06 5G ಬಿಡುಗಡೆ! ಫೀಚರ್ ಮತ್ತು ಬೆಲೆಯಂತೂ ಸೂಪರ್!
ಹಿಂಭಾಗದ ಕ್ಯಾಮೆರಾ ವ್ಯವಸ್ಥೆಯು OIS ಹೊಂದಿರುವ 50MP ಪ್ರೈಮರಿ ಕ್ಯಾಮೆರಾದೊಂದಿಗೆ ಸೋನಿ LYT-600 ಸೆನ್ಸರ್ ಅನ್ನು ಬಳಸಲಾಗುತ್ತದೆ. ಮತ್ತೊಂದು ಸಹ 8MP ಸೋನಿ IMX355 ವೈಡ್-ಆಂಗಲ್ ಲೆನ್ಸ್, 30FPS ನಲ್ಲಿ 2K ಸಾಮರ್ಥ್ಯವಿರುವ 1/4 ಇಂಚಿನ ಸೆನ್ಸರ್ ಇದೆ. ಕೊನೆಯದಾಗಿ ಮುಂಭಾಗದ ಕ್ಯಾಮೆರಾ 32MP ಸೋನಿ IMX615 ಸೆನ್ಸರ್ ಆಗಿದ್ದು 90-ಡಿಗ್ರಿ ವ್ಯೂ ಫೀಲ್ಡ್ ಮತ್ತು f/2.4 ಅಪರ್ಚರ್ ಹೊಂದಿದೆ.
Realme GT 6T 5G ಉನ್ನತ-ಕಾರ್ಯಕ್ಷಮತೆಯ ಸ್ಮಾರ್ಟ್‌ಫೋನ್ ಆಗಿ ಮಾಡಿದೆ ಇದು TSMC ಯ 4nm ಪ್ರಕ್ರಿಯೆಯಲ್ಲಿ ನಿರ್ಮಿಸಲಾದ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7+ Gen 3 ಪ್ರೊಸೆಸರ್ ಅನ್ನು ಹೊಂದಿದ್ದು ಆಕ್ಟಾ-ಕೋರ್ CPU ಕಾನ್ಫಿಗರೇಶನ್‌ನೊಂದಿಗೆ ರಿಯಲ್‌ಮಿ GT 6T ಸ್ಮಾರ್ಟ್‌ಫೋನ್ 5500mAh ಬ್ಯಾಟರಿಯನ್ನು ಹೊಂದಿದ್ದು 120W ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ.