BSNL Freedom Offer
BSNL 40 Days Plan: ಭಾರತೀಯ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ (Bharat Sanchar Nigam Limited) ತಮ್ಮ ಗ್ರಾಹಕರಿಗೆ ಹತ್ತಾರು ಕೈಗೆಟಕುವ ಬೆಲೆಯ ರಿಚಾರ್ಜ್ ಪ್ಲಾನ್ ಸಿಕ್ಕಾಪಟ್ಟೆ ಪ್ರಯೋಜನಗಳನ್ನು ನೀಡಲು ಹೆಸರುವಾಸಿಯಾಗಿದೆ. ಅಲ್ಲದೆ ಇನ್ನೂ ಕೆಲವರಿಗೆ BSNL ಎಷ್ಟೇ ಅನುಕೂಲಗಳನ್ನು ಕೊಟ್ರು ಏನು ಪ್ರಯೋಜನ ಅದರ ನೆಟ್ವರ್ಕ್ ಸರಿಗಿಲ್ಲ ಅನ್ನೋ ಮಾತಲ್ಲೇ ಮುಳುಗಿದ್ದಾರೆ. ಆದರೆ ನಿಮ್ಮ ಗಮನಕ್ಕೆ ಹೊಸ ಅಪ್ಡೇಟ್ ನೀಡುವ ಮೂಲಕ ಕಳೆದ 3 ವರ್ಷದ ಅಂಕಿ ಅಂಶಗಳನ್ನು ನೋಡಿದರೆ BSNL ಸುಮಾರು 73% ಕ್ಕೂ ಅಧಿಕ ತಮ್ಮ ನೆಟ್ವರ್ಕ್ ಕಾರ್ಯಕ್ಷಮತೆಯಲ್ಲಿ ಉತ್ತಮವಾಗಿದೆ.
ಇದಕ್ಕೆ ಕಾರಣ ಕೋಟ್ಯಂತರ ರೂಪಾಯಿಗಳ ಹಣ ಖರ್ಚು ಮಾಡಿ ಗ್ರಾಮೀಣದಿಂದ ಮೆಟ್ರೊ ನಗರಗಳವರೆಗೆ 4G ನೆಟ್ವರ್ಕ್ ಅನ್ನು ಅಭಿವೃದ್ಧಿಪಡಿಸಿದೆ. ಅಷ್ಟೇಯಲ್ಲದೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಕಳೆದ ಹಲವು ವರ್ಷಗಳಿಂದ ತಮ್ಮ ನೆಟ್ವರ್ಕ್ ಸುಧಾರಣೆಯ ಕಾರ್ಯ ಕೆಲಸವನ್ನು ಜನಪ್ರಿಯ ಮತ್ತು ಹೆಚ್ಚು ಭರವಸೆಯ ಭಾರತೀಯ ಟೆಕ್ನಾಲಜಿ ಬ್ರಾಂಡ್ TCS (Tata Consultancy Services) ಕಂಪನಿಗೆ ಸೋಪಿದೆ.
Also Read: Vivo T4 Lite 5G: ಮುಂಬರಲಿರುವ ವಿವೋ 5G ಸ್ಮಾರ್ಟ್ಫೋನ್ ಪವರ್ಫುಲ್ ಫೀಚರ್ಗಳೊಂದಿಗೆ ತಿಂಗಳ ಕೊನೆಯಲ್ಲಿ ಬಿಡುಗಡೆ!
ಮೊದಲಿಗೆ ನಿಮಗೆ ಇದರ ಬಗ್ಗೆ ಮಾಹಿತಿ ನೀಡಲು ಕಾರಣವೆಂದರೆ ಪ್ರತಿ ತಿಂಗಳು ಹೆಚ್ಚುತ್ತಿರುವ ರಿಚಾರ್ಜ್ ಅಥವಾ ನಿಮ್ಮ ಮಾಸಿಕ ಯೋಜನಗಳ ಬೆಲೆಯನ್ನು ಗಮನದಟ್ಟುಕೊಂಡು ಅಪ್ಡೇಟ್ ಮಾಡಲಾಗಿದೆ. ಹೆಚ್ಚು ಹಣ ಕಡಿಮೆ ಪ್ರಯೋಜನ ನೀಡುತ್ತಿರುವ ಭಾರತೀಯ ಪ್ರೈವೇಟ್ ಟೆಲಿಕಾಂ ಕಂಪನಿಗೆ ಹೋಲಿಸಿದರೆ BSNL ತುಂಬ ಉತ್ತಮವಾಗಿದೆ. ಇದನ್ನು ಸಣ್ಣ ಉದಾಹರಣೆಯ ಮೂಲಕ ತಿಳಿಯುವುದಾದರೆ ಪ್ರಸ್ತುತ 40 ದಿನಗಳ ವ್ಯಾಲಿಡಿಟಿ ಹೊಂದಿರುವ ಯೋಜನೆಯನ್ನು Jio, Airtel ಅಥವಾ Vi ಹೊಂದಿಲ್ಲ. ಅವರಲ್ಲಿ ನಿಮಗೆ ಹೆಚ್ಚು ಅಂದ್ರೆ 30 ದಿನಗಳ ಮಾಸಿಕ ಪ್ಲಾನ್ ಕಾಣಬಹುದು.
ಅದರ ಬೆಲೆ ಸುಮಾರು 350 ರೂಗಳವರೆಗೆ ಇದೆ. ಆದರೆ BSNL ಕೇವಲ 198 ರೂಗಳಿಗೆ ಬರೋಬ್ಬರಿ 40 ದಿನಗ ವ್ಯಾಲಿಡಿಟಿಯೊಂದಿಗೆ ಪ್ರತಿದಿನ 2GB ಡೇಟಾವನ್ನು ಕಂಪನಿ ನೀಡುತ್ತಿದೆ. ಇದರೊಂದಿಗೆ ಉಚಿತ SMS ಸಹ ಕಂಪನಿ ನೀಡುವುದನ್ನು ಗಮನಿಸಬಹುದು. BSNL ಇಂತಹ ಹತ್ತಾರು ರಿಚಾರ್ಜ್ ಯೋಜನಗಳನ್ನು ಹೊಂದಿದೆ. ಆದ್ದರಿಂದ ಪ್ರಸ್ತುತ ನೆಟ್ವರ್ಕ್ ಸಹ ಸರಿಯಾಗಿದ್ದು ಕಡಿಮೆ ಬೆಳೆಗೆ ಹೆಚ್ಚು ಪ್ರಯೋಜನಗಳ ನೀಡುವ ಯೋಜನಗಳನೊಮ್ಮೆ ಪರಿಶೀಲಿಸಬಹುದು.
ಈ ಬಿಎಸ್ಎನ್ಎಲ್ ಯೋಜನೆಯ ಬೆಲೆ 198 ರೂ. ಮತ್ತು ಇದು 40 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಈ ಬಿಎಸ್ಎನ್ಎಲ್ ಯೋಜನೆಯಲ್ಲಿ ನೀವು ಪ್ರತಿದಿನ 2GB ಹೈ-ಸ್ಪೀಡ್ ಡೇಟಾವನ್ನು ಪಡೆಯುತ್ತೀರಿ ಅಂದರೆ ನೀವು ಸಂಪೂರ್ಣ 40 ದಿನಗಳವರೆಗೆ ಈ ಡೇಟಾವನ್ನು ಪಡೆಯುತ್ತಲೇ ಇರುತ್ತೀರಿ. ಅಲ್ಲದೆ ಈ 2GB ಡೇಟಾ ಖಾಲಿಯಾದ ನಂತರ ನೀವು 40kbps ವೇಗದಲ್ಲಿ ಅನಿಯಮಿತ ಡೇಟಾವನ್ನು ಪಡೆಯುತ್ತೀರಿ. ಬಿಎಸ್ಎನ್ಎಲ್ ಈ ಯೋಜನೆಯ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿಯನ್ನು ನೀಡಿದೆ. ಈ ಯೋಜನೆಯಲ್ಲಿ ಕರೆ ಮಾಡುವ ಸೌಲಭ್ಯ ಲಭ್ಯವಿಲ್ಲ ಏಕೆಂದರೆ ಇದು ಕೇವಲ ಡೇಟಾ ಯೋಜನೆಯಾಗಿದೆ.