Airtel ಪ್ರಿಪೇಯ್ಡ್ ಬಳಕೆದಾರರಿಗೆ ಆಲ್-ಇನ್-ಒನ್ ಪ್ಯಾಕ್‌ ಪರಿಚಯ! ಬೆಲೆ ಮತ್ತು ಪ್ರಯೋಜನಗಳೇನು ತಿಳಿಯಿರಿ!

HIGHLIGHTS

ಪ್ರಸ್ತುತ Airtel ತಮ್ಮ ಗ್ರಾಹಕರಿಗೆ 3 ಹೊಸ ಆಲ್-ಇನ್-ಒನ್ ರಿಚಾರ್ಜ್ ಪ್ಯಾಕ್‌ಗಳನ್ನು ಪರಿಚಯಿಸಿದೆ.

ಏರ್ಟೆಲ್ ಈ ಪ್ಯಾಕ್ಗಳಲ್ಲಿ ಅನ್ಲಿಮಿಟೆಡ್ ವಾಯ್ಸ್ ಕರೆ ಮತ್ತು 5G ಡೇಟಾದೊಂದಿಗೆ ಉಚಿತ OTT ಅನ್ನು ನೀಡುತ್ತಿದೆ.

ಪ್ರಸ್ತುತ ಏರ್ಟೆಲ್ ಆರಂಭಿಕ 297 ರೂಗಳು, 598 ರೂಗಳು ಮತ್ತು 1,729 ರೂಗಳ ರಿಚಾರ್ಜ್ ಪ್ಲಾನ್ ಹೊಸದಾಗಿ ಪರಿಚಯಿಸಿದೆ.

Airtel ಪ್ರಿಪೇಯ್ಡ್ ಬಳಕೆದಾರರಿಗೆ ಆಲ್-ಇನ್-ಒನ್ ಪ್ಯಾಕ್‌ ಪರಿಚಯ! ಬೆಲೆ ಮತ್ತು ಪ್ರಯೋಜನಗಳೇನು ತಿಳಿಯಿರಿ!

Airtel All-in-One OTT Plans: ಭಾರ್ತಿ ಏರ್ಟೆಲ್ ಪ್ರಸ್ತುತ ಒಂದೇ ಯೋಜನೆಯಲ್ಲಿ ಅನ್ಲಿಮಿಟೆಡ್ ಕರೆ ಮತ್ತು 5G ಡೇಟಾದೊಂದಿಗೆ ಉಚಿತ OTT ನೀಡುವ ಮೂರು ಅತ್ಯುತ್ತಮ ಕಾಂಬೋ ರಿಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. ನೀವು ಸಾಮಾನ್ಯ ರಿಚಾರ್ಜ್ ಜೊತೆಗೆ OTT ಸೇವೆಗಳಿಗೆ ಬೇರೆ ರಿಚಾರ್ಜ್ ಮಾಡುವವರಾಗಿದ್ದರೆ ಒಮ್ಮೆ ಈ ಏರ್‌ಟೆಲ್ (Airtel) ಹೊಸ ಕಾಂಬೋ ಪ್ಲಾನ್ ಬಗ್ಗೆ ತಿಳಿಯಿರಿ. ಏರ್ಟೆಲ್ ಪ್ರಿಪೇಯ್ಡ್ ಬಳಕೆದಾರರಿಗಾಗಿ ಹೊಸ ಆಲ್-ಇನ್-ಒನ್ OTT ಮನರಂಜನಾ ಪ್ಯಾಕ್‌ಗಳನ್ನು ತಂದಿದೆ.

Digit.in Survey
✅ Thank you for completing the survey!

ಪ್ರಸ್ತುತ ಏರ್ಟೆಲ್ ಆರಂಭಿಕ 297 ರೂಗಳು, 598 ರೂಗಳು ಮತ್ತು 1,729 ರೂಗಳ ರಿಚಾರ್ಜ್ ಪ್ಲಾನ್ ಹೊಸದಾಗಿ ಪರಿಚಯಿಸಿದೆ. ಏರ್ಟೆಲ್ ಪ್ರತಿಸ್ಪರ್ಧಿ ಟೆಲ್ಕೊ ಆಪರೇಟರ್ ಜಿಯೋದಿಂದ ಹೆಚ್ಚುತ್ತಿರುವ ಸ್ಪರ್ಧೆಯ ನಡುವೆಯೂ ತನ್ನ ಚಂದಾದಾರರಿಗೆ ಉತ್ತಮ ಮೌಲ್ಯವನ್ನು ನೀಡುತ್ತದೆ. ಆಲ್-ಇನ್-ಒನ್ ಪ್ಯಾಕ್‌ಗಳು ನೆಟ್‌ಫ್ಲಿಕ್ಸ್, ಜಿಯೋಹಾಟ್‌ಸ್ಟಾರ್, ಜೀ5 ಮತ್ತು ಎಕ್ಸ್‌ಸ್ಟ್ರೀಮ್ ಪ್ಲೇ ಪ್ರೀಮಿಯಂನಂತಹ ವಿವಿಧ OTT ಗಳಿಗೆ ಚಂದಾದಾರಿಕೆಯನ್ನು ಒಳಗೊಂಡಿವೆ.

ಇದನ್ನೂ ಓದಿ: ನಿಮ್ಮ ದಿನ ಬಳಕೆಗೆ ಸುಮಾರು 15,000 ರೂಗಳಿಗಿಂತ ಕಡಿಮೆ ಬೆಲೆಗೆ ಬರುವ ಜಬರ್ದಸ್ತ್ 5G Smartphones ಪಟ್ಟಿ ಇಲ್ಲಿದೆ

Airtel ಆಲ್-ಇನ್-ಒನ್ ಪ್ಯಾಕ್‌ ಪರಿಚಯ!

ಏರ್ಟೆಲ್ ಆಲ್-ಇನ್-ಒನ್ ಪ್ಯಾಕ್‌ಗಳಲ್ಲಿ ನೆಟ್‌ಫ್ಲಿಕ್ಸ್, ಜಿಯೋಹಾಟ್‌ಸ್ಟಾರ್, ಜೀ5 ಮತ್ತು ಸೋನಿಲಿವ್‌ನಂತಹ ವಿವಿಧ ಒಟಿಟಿ ಸೇವೆಗಳು ಸೇರಿವೆ. ಈ ಆಲ್-ಇನ್-ಒನ್ ಪ್ಯಾಕ್‌ಗಳ ಬೆಲೆಗಳು ಒಂದು ತಿಂಗಳ ಮಾನ್ಯತೆಗೆ 279 ರೂ.ಗಳಿಂದ ಪ್ರಾರಂಭವಾಗುತ್ತವೆ. ಇದು ಗ್ರಾಹಕರಿಗೆ 750 ರೂ. ಮೌಲ್ಯದ ಜನಪ್ರಿಯ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳ ವ್ಯಾಪಕ ಶ್ರೇಣಿಯನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ ಎಂದು ಏರ್‌ಟೆಲ್ ಹೇಳಿದೆ.

Airtel 279 Data Pack - Kannada News

ಏರ್‌ಟೆಲ್ 598 ರೂ.ಗೆ ಅನಿಯಮಿತ 5G ಡೇಟಾ ಮತ್ತು ಅನಿಯಮಿತ ಕರೆಗಳೊಂದಿಗೆ ಮನರಂಜನಾ ಪ್ಯಾಕ್‌ಗಳನ್ನು ಸಹ ನೀಡುತ್ತಿದೆ. ಹೀಗಾಗಿ ಹಣಕ್ಕೆ ಮೌಲ್ಯವನ್ನು ಹೆಚ್ಚಿಸುತ್ತದೆ. ಏರ್‌ಟೆಲ್ ಆಲ್-ಇನ್-ಒನ್ OTT ಚಂದಾದಾರಿಕೆ ಪ್ಯಾಕ್‌ಗಳೊಂದಿಗೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇ ಅಪ್ಲಿಕೇಶನ್ ಮೂಲಕ ನೇರ ಚಂದಾದಾರಿಕೆಯನ್ನು ನೀವು 1 ತಿಂಗಳ ಕಾಲ Netflix Basic, Zee5, JioHotstar, Airtel Xstream Play Premium ಮತ್ತು ಇತರ ಕೆಲವು OTT ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ಪಡೆಯುತ್ತೀರಿ. ಚಂದಾದಾರಿಕೆ ಯೋಜನೆಯ ಬೆಲೆ 279 ರೂಗಳಾಗಿವೆ.

ಏರ್ಟೆಲ್ ಆಲ್-ಇನ್-ಒನ್ ಪ್ಯಾಕ್‌ ರಿಚಾರ್ಜ್ ಪ್ಲಾನ್ಗಳು

ಮೊದಲಿಗೆ ನೀವು 279 ರೂ.ಗಳ ಬೆಲೆಯಲ್ಲಿ ನೆಟ್‌ಫ್ಲಿಕ್ಸ್ ಬೇಸಿಕ್, Zee5, ಜಿಯೋಹಾಟ್‌ಸ್ಟಾರ್, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇ ಪ್ರೀಮಿಯಂ ಮತ್ತು ಹೆಚ್ಚಿನದನ್ನು ಬಳಸುವುದರ ಜೊತೆಗೆ 1 ತಿಂಗಳವರೆಗೆ ಹೆಚ್ಚುವರಿ 1GB ಡೇಟಾವನ್ನು ಪಡೆಯುತ್ತೀರಿ.

ಎರಡನೇಯದಾಗಿ ಏರ್‌ಟೆಲ್‌ನ ರೂ 598 ಯೋಜನೆಯು 28 ದಿನಗಳ ಮಾನ್ಯತೆಯನ್ನು ನೀಡುತ್ತದೆ ಮತ್ತು ನಿಮಗೆ ನೆಟ್‌ಫ್ಲಿಕ್ಸ್ ಬೇಸಿಕ್, Zee5, ಜಿಯೋಹಾಟ್‌ಸ್ಟಾರ್ ಮತ್ತು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇ ಪ್ರೀಮಿಯಂಗಳಿಗೆ ಪ್ರವೇಶವನ್ನು ನೀಡುತ್ತದೆ.

ಕೊನೆಯದಾಗಿ ಇದರ ಏರ್‌ಟೆಲ್‌ನ 1,729 ರೂ. ಯೋಜನೆಯು ನೆಟ್‌ಫ್ಲಿಕ್ಸ್ ಬೇಸಿಕ್, Zee5, ಜಿಯೋಹಾಟ್‌ಸ್ಟಾರ್ ಮತ್ತು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇ ಪ್ರೀಮಿಯಂ ಅನ್ನು 84 ದಿನಗಳ ಅವಧಿಗೆ ನೀಡುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo