5500mAh ಬ್ಯಾಟರಿ ಮತ್ತು 32MP ಸೆಲ್ಫಿ ಕ್ಯಾಮೆರಾದ Motorola ಫೋನ್ ಬೆಲೆ ಕಡಿತ! ಹೊಸ ಬೆಲೆ ಮತ್ತು ಫೀಚರ್ಗಳೇನು?

Updated on 25-Aug-2025
HIGHLIGHTS

Motorola G96 5G ಫ್ಲಿಪ್ಕಾರ್ಟ್ನಲ್ಲಿ ಅತಿ ಕಡಿಮೆ ಬೆಲೆಗೆ ಲೇಟೆಸ್ಟ್ ಮೋಟೊರೋಲ ಸ್ಮಾರ್ಟ್ಫೋನ್ ಲಭ್ಯವಿದೆ.

Motorola G96 5G ಬರೋಬ್ಬರಿ 5500mAh ಬ್ಯಾಟರಿ ಮತ್ತು 32MP ಸೆಲ್ಫಿ ಕ್ಯಾಮೆರಾದ Motorola ಫೋನ್.

Motorola G96 5G ಫೋನ್ 8GB RAM + 128GB ಸ್ಟೋರೇಜ್ ಪ್ರಸ್ತುತ 17,999 ರೂಗಳಿಗೆ ಲಭ್ಯ.

ಮೊಟೊರೊಲಾ ಇತ್ತೀಚೆಗೆ ಬಿಡುಗಡೆ ಮಾಡಿದ ತನ್ನ ಹೊಸ Motorola G96 5G ಸ್ಮಾರ್ಟ್‌ಫೋನ್‌ನ ಬೆಲೆಯನ್ನು ಕಡಿಮೆ ಮಾಡಿದೆ. ಈ ಫೋನ್ ಅನ್ನು ಕಳೆದ ತಿಂಗಳು 8GB RAM ಮತ್ತು 256GB ಸ್ಟೋರೇಜ್‌ನೊಂದಿಗೆ ಬಿಡುಗಡೆ ಮಾಡಲಾಯಿತು. ಈ ಫೋನ್ ಶಕ್ತಿಯುತ 5,500mAh ಬ್ಯಾಟರಿ ಮತ್ತು 32MP ಸೆಲ್ಫಿ ಕ್ಯಾಮೆರಾದಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಮೊಟೊರೊಲಾ ಈ ಫೋನ್ ಅನ್ನು G ಸರಣಿಯಲ್ಲಿ ಪರಿಚಯಿಸಿದೆ. ಫೋನ್‌ನ ಹಾರ್ಡ್‌ವೇರ್ ಮತ್ತು ಕ್ಯಾಮೆರಾವನ್ನು ಅಪ್‌ಗ್ರೇಡ್ ಮಾಡಲಾಗಿದೆ. ಈ ಫೋನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ರೂ 3,000 ಕಡಿಮೆ ಬೆಲೆಯೊಂದಿಗೆ ಪಟ್ಟಿ ಮಾಡಲಾಗಿದೆ. ಅದೇ ಸಮಯದಲ್ಲಿ ಫೋನ್ ಖರೀದಿಯ ಮೇಲೆ ಬ್ಯಾಂಕ್ ಕೊಡುಗೆಗಳನ್ನು ಸಹ ನೀಡಲಾಗುತ್ತಿದೆ.

Also Read: 65 Inch Smart TV: ಅಮೆಜಾನ್ ಸೇಲ್‌ನಲ್ಲಿ 65 ಇಂಚಿನ ONIDA ಸ್ಮಾರ್ಟ್ ಟಿವಿಯ ಮೇಲೆ ಭರ್ಜರಿ ಡಿಸ್ಕೌಂಟ್!

Motorola G96 5G ಸ್ಮಾರ್ಟ್‌ ಫೋನ್‌ನ ಆಫರ್ ಬೆಲೆ:

ಪ್ರಸ್ತುತ ಈ ಮೊಟೊರೊಲಾ ಫೋನ್ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬರುತ್ತದೆ. ಆರಂಭಿಕ 8GB RAM + 128GB ಮತ್ತೊಂದು 8GB RAM + 256GB ಸ್ಟೋರೇಜ್ ಇದರ ಆರಂಭಿಕ ಬೆಲೆ ರೂ. 20,999 ಆಗಿದ್ದು ಅದೇ ಸಮಯದಲ್ಲಿ ಮತ್ತೊಂದು ಇದರ ಟಾಪ್ ರೂಪಾಂತರ ರೂ. 22,999 ರೂಗಳಿಗೆ ನಿಗದಿಯಾಗಿದೆ. ಇದನ್ನು ಆಶ್ಲೀ ಬ್ಲೂ, ಡ್ರೆಸ್ಡೆನ್ ಬ್ಲೂ, ಆರ್ಕಿಡ್ ಮತ್ತು ಗ್ರೀನ್ ಬಣ್ಣಗಳ ಆಯ್ಕೆಗಳಲ್ಲಿ ಪರಿಚಯಿಸಲಾಗಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್ ಅನ್ನು ರೂ. 3000 ಕಡಿತದೊಂದಿಗೆ ಅಂದರೆ ರೂ. 17,999 ಆರಂಭಿಕ ಬೆಲೆಯಲ್ಲಿ ಪಟ್ಟಿ ಮಾಡಲಾಗಿದೆ. ಇದಲ್ಲದೆ ಫೋನ್ ಖರೀದಿಗೆ 5% ಕ್ಯಾಶ್‌ಬ್ಯಾಕ್ ನೀಡಲಾಗುತ್ತಿದೆ. ಅಲ್ಲದೆ ಆಸಕ್ತ ಬಳಕೆದಾರರು ಇದನ್ನು ಆಯ್ದ ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸುಮಾರು 1500 ರೂಗಳ ಡಿಸ್ಕೌಂಟ್ ಪಡೆಯಬಹುದು.

ಮೊಟೊರೊಲಾ G96 5G ಸ್ಮಾರ್ಟ್‌ ಫೋನ್‌ನ ಫೀಚರ್ಗಳೇನು?

ಈ ಫೋನ್ 6.67 ಇಂಚಿನ FHD+ 10-ಬಿಟ್ 3D ಕರ್ವ್ಡ್ ಡಿಸ್ಪ್ಲೇಯೊಂದಿಗೆ ಬರುತ್ತದೆ. ಫೋನ್‌ನ ಡಿಸ್ಪ್ಲೇ 144Hz ರಿಫ್ರೆಶ್ ವೈಶಿಷ್ಟ್ಯ ಮತ್ತು 1600 ನಿಟ್‌ಗಳ ಗರಿಷ್ಠ ಹೊಳಪನ್ನು ಬೆಂಬಲಿಸುತ್ತದೆ. ಇದರ ಹೊರತಾಗಿ ಇದು ವಾಟರ್ ಟಚ್ ಸಪೋರ್ಟ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆಯನ್ನು ಹೊಂದಿದೆ. ಈ ಫೋನ್ 50MP ಸೋನಿ ಲಿಟಿಯಾ 700C ಪ್ರೈಮರಿ ಕ್ಯಾಮೆರಾವನ್ನು ಹೊಂದಿದ್ದು ಇದು OIS ಅಂದರೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಅನ್ನು ಬೆಂಬಲಿಸುತ್ತದೆ. ಇದರೊಂದಿಗೆ 8MP ಸೆಕೆಂಡರಿ ಕ್ಯಾಮೆರಾ ಲಭ್ಯವಿರುತ್ತದೆ. ಇದು ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 32MP ಕ್ಯಾಮೆರಾವನ್ನು ಹೊಂದಿದೆ.

Moto G96 5G ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7s Gen 2 ಪ್ರೊಸೆಸರ್ ಅನ್ನು ಹೊಂದಿದ್ದು 8GB RAM ಮತ್ತು 256GB ವರೆಗಿನ ಆಂತರಿಕ ಸಂಗ್ರಹಣೆಗೆ ಬೆಂಬಲವನ್ನು ನೀಡಲಾಗಿದೆ. ಇದು ಆಂಡ್ರಾಯ್ಡ್ 15 ಆಧಾರಿತ ಹಲೋ UI ನಲ್ಲಿ ಕಾರ್ಯನಿರ್ವಹಿಸುತ್ತದೆ. ಕಂಪನಿಯು ಈ ಫೋನ್‌ನೊಂದಿಗೆ 3 ವರ್ಷಗಳವರೆಗೆ ಭದ್ರತಾ ನವೀಕರಣಗಳನ್ನು ನೀಡುತ್ತಿದೆ. ಈ ಫೋನ್ ಪವರ್ಫುಲ್ 5,500mAh ಬ್ಯಾಟರಿ, 33W ವೇಗದ ಚಾರ್ಜಿಂಗ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದಲ್ಲದೆ ಇದಕ್ಕೆ IP68 ರೇಟಿಂಗ್ ನೀಡಲಾಗಿದೆ.

Also Read: TikTok India ಮತ್ತೇ ಶುರುವಾಗಲಿದೆಯೇ? 5 ವರ್ಷದ ನಂತರ ಟಿಕ್‌ ಟಾಕ್‌ ವೆಬ್‌ಸೈಟ್ ತೆರೆಯುತ್ತಿದೆ!

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :