Lenovo ಕಂಪನಿಯಿಂದ ಹೊಸ ಲ್ಯಾಪ್‌ಟಾಪ್‌ಗಳ ಬಿಡುಗಡೆ! ಬೆಲೆ ನೋಡಿ

Lenovo ಕಂಪನಿಯಿಂದ ಹೊಸ ಲ್ಯಾಪ್‌ಟಾಪ್‌ಗಳ ಬಿಡುಗಡೆ! ಬೆಲೆ ನೋಡಿ

ಲೆನೆವೊ ಕಂಪನಿಯು ಹೊಸದಾಗಿ Lenovo IdeaPad 5 2-ಇನ್-1 ಸರಣಿಯನ್ನು ಇಂದು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ನೂತನ ಲೆನೊವೊ ಯೋಗ ಸ್ಲಿಮ್ 7 ಮತ್ತು ಯೋಗ 7 2-ಇನ್-1 ಸರಣಿಯ ಲ್ಯಾಪ್‌ಟಾಪ್‌ ಜೊತೆಗೆ ಖರೀದಿಸಲು ಲಭ್ಯವಿರುತ್ತದೆ. ಇತ್ತೀಚಿನ ಯೋಗ ಶ್ರೇಣಿಯು ಯೋಗ 7a 2-ಇನ್-1, ಯೋಗ ಸ್ಲಿಮ್ 7x, ಯೋಗ 7i 2-ಇನ್-1 ಔರಾ ವೇರಿಯಂಟ್‌ ಮತ್ತು ಯೋಗ ಸ್ಲಿಮ್ 7i ಅಲ್ಟ್ರಾ ಔರಾ ಮಾಡೆಲ್‌ಗಳನ್ನು ಒಳಗೊಂಡಿದೆ. ನೂತನ ಮಾಡೆಲ್‌ಗಳು ಇತ್ತೀಚಿನ ಇಂಟೆಲ್ ಕೋರ್ ಅಲ್ಟ್ರಾ ಸರಣಿ 3, AMD ಯ ರೈಜೆನ್ AI 400 ಸರಣಿ ಮತ್ತು ಸ್ನಾಪ್‌ಡ್ರಾಗನ್ X2 ಪ್ರೊಸೆಸರ್‌ ಸೌಲಭ್ಯ ಒಳಗೊಂಡಿವೆ. ಐಡಿಯಾಪ್ಯಾಡ್ 5 2-ಇನ್-1 ಶ್ರೇಣಿಯ ಡಿವೈಸ್‌ಗಳು 60Wh ಬ್ಯಾಟರಿ ಪವರ್‌ ಪಡೆದಿವೆ. ಹಾಗೆಯೇ ಲೆನೊವೊ ಯೋಗ 7 2-ಇನ್-1 ಸರಣಿಯು 70Wh ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ನೂತನ Motorola Edge 70 Fusion ಮೊಬೈಲ್‌ ಬೆಲೆಯಲ್ಲಿ ಸಖತ್ ಇಳಿಕೆ!

Lenovo IdeaPad 5 ಲ್ಯಾಪ್‌ಟಾಪ್‌ಗಳ ಬೆಲೆ ಮಾಹಿತಿ

ಭಾರತದಲ್ಲಿ ಲೆನೊವೊ ಐಡಿಯಾಪ್ಯಾಡ್ 5 2-ಇನ್-1 ಬೆಲೆ 1,19,990 ರೂ.ಗಳಿಂದ ಪ್ರಾರಂಭ ಆಗುತ್ತದೆ. ಯೋಗ 7a 2-in-1 ಆರಂಭಿಕ ಬೆಲೆ 1,32,990 ರೂ.ಗಳು ಆಗಿದೆ. ಹಾಗೆಯೇ ಯೋಗ ಸ್ಲಿಮ್ 7x ಮೂಲ ವೇರಿಯಂಟ್‌ ಬೆಲೆ 1,32,990 ರೂ.ಗಳು ಆಗಿದೆ. ಅದೇ ರೀತಿ ಲೆನೊವೊ ಯೋಗ 7i 2-in-1 ಔರಾ ವೇರಿಯಂಟ್‌ ಬೆಲೆ 1,36,990 ರೂ.ಗಳಿಂದ ಪ್ರಾರಂಭ ಆಗಿದ್ದರು, ಯೋಗ ಸ್ಲಿಮ್ 7i ಅಲ್ಟ್ರಾ ಔರಾ ವೇರಿಯಂಟ್‌ 1,99,990 ರೂ.ಗಳಿಂದ ಪ್ರಾರಂಭ. ಇನ್ನು ಲೆನೊವೊ ಯೋಗ ಮತ್ತು ಐಡಿಯಾಪ್ಯಾಡ್ ಲ್ಯಾಪ್‌ಟಾಪ್‌ಗಳು ಲೆನೊವೊ.ಕಾಮ್, ಲೆನೊವೊ ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳು, ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಖರೀದಿಗೆ ಲಭ್ಯವಿರುತ್ತವೆ. ಅಂದಹಾಗೆ ಈ ಲ್ಯಾಪ್‌ಟಾಪ್‌ಗಳು ಈಗ ಖರೀದಿಗೆ ಲಭ್ಯ ಇವೆ. ಆದರೆ ಲೆನೊವೊ ಯೋಗ ಸ್ಲಿಮ್ 7x ಇದೇ ಏಪ್ರಿಲ್ 21 ರಿಂದ ಮಾರಾಟ ಪ್ರಾರಂಭಿಸಲಿದೆ.

Lenovo

ಲೆನೊವೊ ಯೋಗ 7 2-ಇನ್-1 ಫೀಚರ್ಸ್‌

ಲೆನೊವೊ ಕಂಪನಿಯ ನೂತನ ಯೋಗ 7 2-ಇನ್-1 ಸರಣಿಯು ಇಂಟೆಲ್ ಮತ್ತು AMD ರೈಜೆನ್ CPU ಆಯ್ಕೆಗಳಲ್ಲಿ ಲಭ್ಯವಿದೆ. ಈ ಶ್ರೇಣಿಯು 360-ಡಿಗ್ರಿ ಕನ್ವರ್ಟಿಬಲ್ ವಿನ್ಯಾಸವನ್ನು ಪಡೆದುಕೊಂಡಿದೆ. ಬಳಕೆದಾರರು ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಟೆಂಟ್, ಸ್ಟ್ಯಾಂಡ್ ಮತ್ತು ಕ್ಯಾನ್ವಾಸ್ ಮೋಡ್‌ಗಳಲ್ಲಿ ಇದನ್ನು ಬಳಸಲು ಅನುಕೂಲ ಮಾಡಿಕೊಡುತ್ತದೆ. ಇದು ಯೋಗ ಪೆನ್ ಜನ್ 2 ಮೂಲಕ ಇನ್‌ಪುಟ್‌ಗಳನ್ನು ಸಪೋರ್ಟ್‌ ಮಾಡುತ್ತದೆ.

ಹಾಗೆಯೇ ಇಂಟೆಲ್-ಚಾಲಿತ ಲೆನೊವೊ ಯೋಗ 7 2-ಇನ್-1 ವೇರಿಯಂಟ್‌ಗಳು ಸ್ಮಾರ್ಟ್ ಶೇರ್, ಸ್ಮಾರ್ಟ್ ಮೋಡ್‌ಗಳು ಮತ್ತು ಸ್ಮಾರ್ಟ್ ಕೇರ್ ಆಯ್ಕೆಗಳನ್ನು ಸಹ ಪಡೆದಿವೆ. ಈ ಶ್ರೇಣಿಯು 120Hz ರಿಫ್ರೆಶ್ ರೇಟ್‌ ಮತ್ತು ಡಾಲ್ಬಿ ವಿಷನ್ ಸಪೋರ್ಟ್‌ದೊಂದಿಗೆ ಪ್ಯೂರ್‌ಸೈಟ್ ಪ್ರೊ OLED ಡಿಸ್ಪ್ಲೇಗಳನ್ನು ಹೊಂದಿದೆ. ಈ ಸರಣಿಯು ಡಾಲ್ಬಿ ಅಟ್ಮಾಸ್ ಸಪೋರ್ಟ್‌ ಜೊತೆಗೆ ಕ್ವಾಡ್ ಸ್ಪೀಕರ್‌ಗಳನ್ನು ಒಳಗೊಂಡಿದೆ. ಇನ್ನು 5 ಮೆಗಾಪಿಕ್ಸೆಲ್ IR ಕ್ಯಾಮೆರಾ ಮತ್ತು 70Wh ಬ್ಯಾಟರಿ ಈ ಸರಣಿಯ ಇತರ ಪ್ರಮುಖ ಹೈಲೈಟ್ಸ್‌ ಆಗಿವೆ.

ಲೆನೊವೊ ಯೋಗ ಸ್ಲಿಮ್ 7 ಫೀಚರ್ಸ್‌

ಈ ನೂತನ ಯೋಗ ಸ್ಲಿಮ್ 7 ಸರಣಿಯು ಯೋಗ ಸ್ಲಿಮ್ 7x ಮತ್ತು ಯೋಗ ಸ್ಲಿಮ್ 7i ಅಲ್ಟ್ರಾ ಔರಾ ವೇರಿಯಂಟ್‌ಗಳನ್ನು ಒಳಗೊಂಡಿದೆ. ಇದು ಇಂಟೆಲ್ ಕೋರ್ ಅಲ್ಟ್ರಾ X9 ಪ್ರೊಸೆಸರ್‌ ಜೊತೆಗೆ ಹೊಂದಿಕೊಳ್ಳುತ್ತದೆ ಮತ್ತು ಪ್ಯೂರ್‌ಸೈಟ್ ಪ್ರೊ POLED ಡಿಸ್ಪ್ಲೇಯನ್ನು ನೀಡುತ್ತದೆ. ಸಂಸ್ಥೆಯ ಯೋಗ ಸ್ಲಿಮ್ 7x ಸ್ನಾಪ್‌ಡ್ರಾಗನ್ X2 ಎಲೈಟ್ ಪ್ರೊಸೆಸರ್ ವರೆಗೆ ಸಪೋರ್ಟ್‌ ಮಾಡುತ್ತದೆ. ಹಾಗೆಯೇ ವೀಡಿಯೊ ಕರೆಗಳಿಗಾಗಿ 9 ಮೆಗಾಪಿಕ್ಸೆಲ್ IR ಕ್ಯಾಮೆರಾವನ್ನು ಒಳಗೊಂಡಿದೆ. ಈ ಲ್ಯಾಪ್‌ಟಾಪ್ ಒಂದೇ ಚಾರ್ಜ್‌ನಲ್ಲಿ 31 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಒದಗಿಸುತ್ತದೆ ಎಂದು ಹೇಳಲಾಗಿದೆ. ಇದರೊಂದಿಗೆ ಡಾಲ್ಬಿ ಅಟ್ಮಾಸ್-ಬೆಂಬಲಿತ ಸ್ಪೀಕರ್‌ಗಳು ಮತ್ತು ನಾಲ್ಕು-ಮೈಕ್ರೊಫೋನ್ ಶ್ರೇಣಿಯನ್ನು ಹೊಂದಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo