ನೂತನ Motorola Edge 70 Fusion ಮೊಬೈಲ್‌ ಬೆಲೆಯಲ್ಲಿ ಸಖತ್ ಇಳಿಕೆ!

HIGHLIGHTS

ಫ್ಲಿಪ್‌ಕಾರ್ಟ್‌ನಲ್ಲಿ ಮೊಟೊ ಎಡ್ಜ್ 70 ಫ್ಯೂಷನ್ ಬೆಲೆಯಲ್ಲಿ ಭರ್ಜರಿ ಇಳಿಕೆ

ಮೊಟೊ ಸಂಸ್ಥೆಯ ಈ ಫೋನ್‌ 7,000mAh ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿದೆ

ಮೊಟೊ ಎಡ್ಜ್ 70 ಫ್ಯೂಷನ್ ಮೊಬೈಲ್‌ ಮೂರು ಆಕರ್ಷಕ ಕಲರ್‌ ಆಯ್ಕೆಗಳನ್ನು ಹೊಂದಿದೆ

ನೂತನ Motorola Edge 70 Fusion ಮೊಬೈಲ್‌ ಬೆಲೆಯಲ್ಲಿ ಸಖತ್ ಇಳಿಕೆ!

ಹೊಸದಾಗಿ Motorola ಸ್ಮಾರ್ಟ್‌ಫೋನ್‌ ಖರೀದಿಸಲು ಪ್ಲಾನ್ ಮಡಿರುವ ಗ್ರಾಹಕರಿಗೆ ಇದೀಗ ಫ್ಲಿಪ್‌ಕಾರ್ಟ್‌ ವೆಬ್‌ಸೈಟ್‌ನತ್ತ ಗಮನ ನೀಡಬೇಕು. ಅರೇ ಏಕೆ ಅಂತೀರಾ? ಪ್ರಸ್ತುತ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣವು ಇದೀಗ Motorola Edge 70 Fusion ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ ಘೋಷಿಸಿದೆ. ಇನ್ನು ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್‌ಗಳ ಕೊಡುಗೆಗಳ ಮೂಲಕ ಖರೀದಿಸಿದರೆ ಹೆಚ್ಚುವರಿ ಡಿಸ್ಕೌಂಟ್‌ ಸಹ ಪಡೆಯಲು ಅವಕಾಶ ಇದೆ. ಮೊಟೊರೊಲಾ ಸಂಸ್ಥೆಯ ಈ ಮೊಬೈಲ್‌ Snapdragon 7s Gen 4 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯ ಪಡೆದಿದೆ. ಹಾಗೆಯೇ 7,000mAh ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಅನ್ನು ಹೊಂದಿದೆ. ಹಾಗಾದರೆ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ವೆಬ್‌ಸೈಟ್‌ನಲ್ಲಿ ಮೊಟೊರೊಲಾ ಎಡ್ಜ್ 70 ಫ್ಯೂಷನ್ ಮೊಬೈಲ್‌ಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಇಂದಿನಿಂದ Redmi Note 15 SE 5G ಮೊಬೈಲ್‌ ಸೇಲ್‌ ಶುರು! ಆಕರ್ಷಕ ಫೀಚರ್ಸ್‌

Motorola Edge 70 Fusion ಬೆಲೆಯಲ್ಲಿ ಕಡಿತ

Motorola ಸಂಸ್ಥೆಯ ಮೊಟೊರೊಲಾ ಎಡ್ಜ್ 70 ಫ್ಯೂಷನ್ ಫೋನ್‌ ಪ್ರಸ್ತುತ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಆಕರ್ಷಕ ಡಿಸ್ಕೌಂಟ್‌ ಪಡೆದಿದೆ. ಈ ಮೊಬೈಲ್‌ 8GB RAM + 128GB ವೇರಿಯಂಟ್‌ ಬೆಲೆ 42,999 ರೂಗಳು ಆಗಿದ್ದು ಆದರೆ ಆಫರ್‌ನಲ್ಲಿ ಸದ್ಯ ಈ ಫೋನ್‌ 26,999 ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇನ್ನು ಆಸಕ್ತ ಗ್ರಾಹಕರು ಆಯ್ದ ಬ್ಯಾಂಕ್‌ಗಳ ಕ್ರೆಡಿಟ್‌ ಕಾರ್ಡ್‌ ಮೂಲಕ ಖರೀದಿಸಿದರೆ ಹೆಚ್ಚುವರಿ ರಿಯಾಯಿತಿ ಪಡೆಯಬಹುದಾಗಿದೆ. ಅಂದಹಾಗೆ ಇನ್ನು ಈ ಮೊಬೈಲ್‌ ಮೂರು ಬಣ್ಣಗಳ ಆಯ್ಕೆ ಪಡೆದಿದ್ದು ಅವುಗಳು ಕ್ರಮವಾಗಿ ಬ್ಲೂ ಸರ್ಫ್, ಕಂಟ್ರಿ ಏರ್ ಮತ್ತು ಸಿಲೂಯೆಟ್ ಆಗಿವೆ.

Motorola Edge 70 Fusion

ಮೊಟೊರೊಲಾ ಎಡ್ಜ್ 70 ಫ್ಯೂಷನ್ ಮೊಬೈಲ್‌ ಫೀಚರ್ಸ್‌

ಮೊಟೊರೊಲಾ ಎಡ್ಜ್ 70 ಫ್ಯೂಷನ್ ಮೊಬೈಲ್‌ 6.78 ಇಂಚಿನ 1.5K ಕ್ವಾಡ್ ಕರ್ವ್ಡ AMOLED ಡಿಸ್‌ಪ್ಲೇ ಅನ್ನು ಹೊಂದಿದೆ. ಇದರ ಸ್ಕ್ರೀನ್‌ 44Hz ರಿಫ್ರೆಶ್ ರೇಟ್‌ ಜೊತೆಗೆ 5,200 nits ವರೆಗಿನ ಗರಿಷ್ಠ ಬ್ರೈಟ್ನೆಸ್‌ ಅನ್ನು ಪಡೆದಿದೆ. ಹಾಗೆಯೇ ಈ ಫೋನ್‌ ಸ್ನಾಪ್‌ಡ್ರಾಗನ್ 7s ಜೆನ್ 4 ಚಿಪ್‌ಸೆಟ್ ಪ್ರೊಸೆಸರ್‌ ಸಾಮರ್ಥ್ಯ ಪಡೆದಿದೆ. ಇದಕ್ಕೆ ಪೂರಕವಾಗಿ 8GB + 256GB ಹಾಗೂ 12GB + 256GB ವೇರಿಯಂಟ್‌ಗಳ ಆಯ್ಕೆಗಳನ್ನು ಒಳಗೊಂಡಿದೆ. ಪ್ರಮುಖ ಹೈಲೈಟ್‌ಯೆಂದರೆ ಇದು 7,000mAh ಸಿಲಿಕಾನ್ ಕಾರ್ಬನ್ ಬ್ಯಾಟರಿ ಸಪೋರ್ಟ್‌ ಜೊತೆಗೆ 68W ಟರ್ಬೊಪವರ್ ಚಾರ್ಜಿಂಗ್‌ ವ್ಯವಸ್ಥೆ ಒಳಗೊಂಡಿದೆ.

ಹಾಗೆಯೇ ಮೊಟೊರೊಲಾ ಎಡ್ಜ್ 70 ಫ್ಯೂಷನ್ ಮೊಬೈಲ್‌ ಇದರ ಪ್ರಾಥಮಿಕ ಕ್ಯಾಮೆರಾವು 50MP ಸೋನಿ LYT-710 ಸೆನ್ಸಾರ್‌ ಆಗಿದೆ. ಹಾಗೆಯೇ ಸೆಕೆಂಡರಿ ಕ್ಯಾಮೆರಾವು 13MP ಅಲ್ಟ್ರಾ ವೈಡ್ ಕ್ಯಾಮೆರಾ ಅನ್ನು ಒಳಗೊಂಡಿದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 32MP ಕ್ಯಾಮೆರಾ ಪಡೆದುಕೊಂಡಿದೆ. ಈ ಮೊಬೈಲ್‌ ಎಲ್ಲಾ ಕ್ಯಾಮೆರಾಗಳಲ್ಲಿ 4K ವೀಡಿಯೊ ರೆಕಾರ್ಡಿಂಗ್ ಅನ್ನು ಹೊಂದಿದೆ. ಇದರೊಂದಿಗೆ ಫೋನ್ ಡಾಲ್ಬಿ ಅಟ್ಮೋಸ್ ಮತ್ತು ಹೈ-ರೆಸ್ ಆಡಿಯೋ ಸಪೋರ್ಟ್‌ ಜೊತೆಗೆ ಡ್ಯುಯಲ್ ಸ್ಟೀರಿಯೊ ಸ್ಪೀಕರ್‌ಗಳನ್ನು ಒಳಗೊಂಡಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo