Ration Card eKYC 2026
Ration Card eKYC: ಕರ್ನಾಟಕ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಎಲ್ಲಾ ಪಡಿತರ ಚೀಟಿದಾರರಿಗೆ ಒಂದು ಮಹತ್ವದ ನವೀಕರಣವನ್ನು ಹೊರಡಿಸಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯ (PDS) ಸಮಗ್ರತೆಯನ್ನು ಕಾಪಾಡಿಕೊಳ್ಳಲು ಮತ್ತು ಪ್ರಯೋಜನಗಳು ನಿಜವಾದ ಫಲಾನುಭವಿಗಳಿಗೆ ಮಾತ್ರ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಆಧಾರ್ ಆಧಾರಿತ ಇ-ಕೆವೈಸಿಯನ್ನು ಪೂರ್ಣಗೊಳಿಸುವುದು ಈಗ ಕಡ್ಡಾಯವಾಗಿದೆ. 31ನೇ ಜನವರಿ 2026 ಗಡುವಿನೊಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ವಿಫಲವಾದರೆ ನಿಮ್ಮ ಪಡಿತರ ಚೀಟಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಬಹುದು ಅಥವಾ ಶಾಶ್ವತವಾಗಿ ರದ್ದುಗೊಳಿಸಬಹುದು.
ಪಡಿತರ ವ್ಯವಸ್ಥೆಯಲ್ಲಿ ಲೋಪದೋಷಗಳನ್ನು ಸರಿಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಅನೇಕ ಕಡೆ ಮರಣ ಹೊಂದಿದವರ ಹೆಸರಿನಲ್ಲಿ ಅಥವಾ ಬೇರೆ ಕಡೆ ವಲಸೆ ಹೋದವರ ಹೆಸರಿನಲ್ಲಿ ಪಡಿತರ ಪಡೆಯಲಾಗುತ್ತಿದೆ. ಇದನ್ನು ಘೋಸ್ಟ್ ಬೆನಿಫಿಶಿಯರಿಸ್ ಎನ್ನಲಾಗುತ್ತದೆ. ಇದನ್ನು ತಡೆಗಟ್ಟಲು ಪ್ರತಿಯೊಬ್ಬಬೆರಳಚ್ಚು ಸದಸ್ಯರ ಬಯೋಮೆಟ್ರಿಕ್ ಪರಿಶೀಲನೆ ಅಗತ್ಯ. ನೀವು ಇ-ಕೆವೈಸಿ ಪೂರ್ಣಗೊಳಿಸಿದರೆ ಮಾತ್ರ ಸರ್ಕಾರದ ಅನ್ನಭಾಗ್ಯ ಯೋಜನೆ ಅಕ್ಕಿ ಮತ್ತು ಇತರ ರಿಯಾಯಿತಿ ದರದ ಪದಾರ್ಥಗಳು ನಿಮಗೆ ಸುಗಮವಾಗಿ ಸಿಗುತ್ತವೆ. ಇಲ್ಲದಿದ್ದರೆ ನಿಮ್ಮ ಕಾರ್ಡ್ ನಿಷ್ಕ್ರಿಯ ಎಂದು ಪರಿಗಣಿಸಿ ಪಡಿತರ ನಿಂತುಹೋಗಬಹುದು.
ಮೊದಲಿಗೆ ನೀವು ಅಧಿಕೃತ ahara.kar.nic.in ವೆಬ್‌ಸೈಟ್‌ಗೆ ಭೇಟಿ ನೀಡಿ ಅಲ್ಲಿರುವ ಇ-ಸೇವೆಗಳು ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಇದರ ನಂತರ ಇ-ಸ್ಥಿತಿ ಪಡಿತರ ಚೀಟಿ ವಿವರ ಆಯ್ಕೆ ಮಾಡಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಪಡಿತರ ಚೀಟಿ ಸಂಖ್ಯೆ (RC ಸಂಖ್ಯೆ) ನಮೂದಿಸಿ. ಅಲ್ಲಿ ಪ್ರತಿಯೊಬ್ಬ ಸದಸ್ಯರ ಹೆಸರಿನ ಮುಂದೆ e-KYC ಸ್ಟೇಟಸ್ ಕಾಣಿಸುತ್ತದೆ. ಒಂದು ವೇಳೆ ‘ಪೆಂಡಿಂಗ್’ ಎಂದು ತೋರಿಸಿದರೆ ಅಂತಹ ಸದಸ್ಯರು ತಕ್ಷಣ ಪಡಿತರ ಅಂಗಡಿಗೆ ಹೋಗಬೇಕು.
ನೀವು ಈ ಕೆಲಸವನ್ನು 31ನೇ ಜನವರಿ 2026 ಒಳಗೆ ನೀವು ಈ ಕೆಲಸ ಮಾಡದಿದ್ದರೆ ಫೆಬ್ರವರಿ 2026 ರಿಂದ ನಿಮ್ಮ ಪಡಿತರ ಚೀಟಿಗೆ ಬರುವ ಆಹಾರ ಪದಾರ್ಥಗಳ ಹಂಚಿಕೆ ಸರ್ಕಾರ ನಿಲ್ಲಿಸಬಹುದು. ನಿಮ್ಮ ಕಾರ್ಡ್ ‘ಬ್ಲಾಕ್’ ಆದರೆ ಅದನ್ನು ಮತ್ತೆ ಸರಿಪಡಿಸಲು ಆಹಾರ ನಿರೀಕ್ಷಕರು ಕಚೇರಿಗೆ ಅಲೆಯಬಹುದು. ಆದ್ದರಿಂದ ಕೊನೆಯ ದಿನದವರೆಗೆ ಕಾಯದೆ ನಿಮ್ಮ ಕೆವೈಸಿ ಪೂರ್ಣಗೊಳಿಸಿಕೊಳ್ಳಿ.