WhatsApp ನಲ್ಲಿ ಹೊಸ Username ಫೀಚರ್: ನಿಮ್ಮ ಇಷ್ಟದ ಬಳಕೆದಾರ ಹೆಸರನ್ನು ಕಾಯ್ದಿರಿಸಬಹುದು!

WhatsApp ನಲ್ಲಿ ಹೊಸ Username ಫೀಚರ್: ನಿಮ್ಮ ಇಷ್ಟದ ಬಳಕೆದಾರ ಹೆಸರನ್ನು ಕಾಯ್ದಿರಿಸಬಹುದು!

ಇತ್ತೀಚಿನ ವರ್ಷಗಳಲ್ಲಿ WhatsApp ಪರಿಚಯಿಸುತ್ತಿರುವ ಪ್ರಮುಖ ಗೌಪ್ಯತೆ ಆಧಾರಿತ ಅಪ್‌ಡೇಟ್‌ಗಳ ಪೈಕಿ ಒಂದಾದ Username Reservation ಆಯ್ಕೆಯನ್ನು ಸಂಸ್ಥೆಯು ಜಾಗತಿಕವಾಗಿ ಹಂತ ಹಂತವಾಗಿ ಬಿಡುಗಡೆ ಮಾಡಲು ಪ್ರಾರಂಭಿಸಿದೆ. ಈ ವರ್ಷದ ಅಂತ್ಯದೊಳಗೆ ಎಲ್ಲ ಬಳಕೆದಾರರಿಗೂ Username ಸೌಲಭ್ಯ ಲಭ್ಯವಾಗಲಿದ್ದು, ಅದಕ್ಕೂ ಮುನ್ನವೇ ತಮ್ಮ ಇಷ್ಟದ ಅನನ್ಯ (Unique) ಬಳಕೆದಾರ ಹೆಸರನ್ನು ಕಾಯ್ದಿರಿಸಿಕೊಳ್ಳುವ ಅವಕಾಶವನ್ನು ವಾಟ್ಸಾಪ್‌ ನೀಡುತ್ತಿದೆ. ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ಶೇರ್ ಮಾಡದೇ ಹೊಸ ವ್ಯಕ್ತಿಗಳೊಂದಿಗೆ ಚಾಟ್ ಮಾಡಲು ಅನುಕೂಲವಾಗುವಂತೆ ವಾಟ್ಸಾಪ್‌ Username ವ್ಯವಸ್ಥೆಯನ್ನು ಪರಿಚಯಿಸಲು ಸಿದ್ಧವಾಗಿದೆ ಎಂದು ಇತ್ತೀಚಿಗೆ ವರದಿಯಾಗಿತ್ತು. ಇದೀಗ ಆ ಆಯ್ಕೆಯನ್ನು ಹಂತ ಹಂತವಾಗಿ ಬಳಕೆದಾರರಿಗೆ ತಲುಪಿಸಲಾಗುತ್ತಿದೆ. ಹಾಗಾದರೆ ವಾಟ್ಸಾಪ್‌ನ ಈ ಹೊಸ ಆಯ್ಕೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಬಜೆಟ್‌ ಬೆಲೆಯಲ್ಲಿ Samsung Galaxy M47 5G ಮೊಬೈಲ್‌ ಬಿಡುಗಡೆ; ಟ್ರಿಪಲ್ ಕ್ಯಾಮೆರಾ ಸೌಲಭ್ಯ

WhatsApp Username ಕಾಯ್ದಿರಿಸಬಹುದು

ವಾಟ್ಸಾಪ್‌ನ ಈ ಆಯ್ಕೆಯು ನಿಮ್ಮ ಖಾತೆಗೆ ಲಭ್ಯವಾದ ಕೂಡಲೇ ವಾಟ್ಸಾಪ್‌ ಅಪ್ಲಿಕೇಶನ್‌ನಲ್ಲೇ ಅಧಿಸೂಚನೆ ಕಳುಹಿಸುತ್ತದೆ. ನಂತರ ಆಂಡ್ರಾಯ್ಡ್‌ ಬಳಕೆದಾರರು Settings > Account > Username ವಿಭಾಗಕ್ಕೆ ತೆರಳಿ ತಮ್ಮ ಇಷ್ಟದ Username ಆಯ್ಕೆ ಮಾಡಬಹುದು. ಇನ್ನು iPhone ಬಳಕೆದಾರರಿಗೆ ಈ ಆಯ್ಕೆ ಲಭ್ಯವಾದ ಬಳಿಕ Profile Settings ಅಡಿಯಲ್ಲಿ ಕಾಣಿಸಿಕೊಳ್ಳುತ್ತದೆ. ವಾಟ್ಸಾಪ್‌ ಪ್ರಕಾರ, ವಿಶ್ವದಾದ್ಯಂತ 3 ಬಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರು ಇರುವುದರಿಂದ ಒಂದೇ ರೀತಿಯ Username‌ಗಳಿಗೆ ಹೆಚ್ಚಿನ ಬೇಡಿಕೆ ಇರಬಹುದು. ಇದೇ ಕಾರಣಕ್ಕೆ ಮುಂಚಿತವಾಗಿಯೇ Username ಕಾಯ್ದಿರಿಸುವ ಅವಕಾಶವನ್ನು ನೀಡಲಾಗುತ್ತಿದೆ.

WhatsApp

ಕಂಟೆಂಟ್ ಕ್ರಿಯೇಟರ್‌ಗಳು, ವ್ಯವಹಾರ ಸಂಸ್ಥೆಗಳು ಹಾಗೂ ವಿವಿಧ ಸಂಘಟನೆಗಳಿಗೆ ತಮ್ಮ ಈಗಿರುವ Instagram ಅಥವಾ Facebook ಹ್ಯಾಂಡಲ್‌ಗೆ ಹೊಂದುವ Username ಅನ್ನು ಪಡೆಯುವ ಅವಕಾಶವೂ ಇರಲಿದೆ. ಆದರೆ ಅದು ಲಭ್ಯವಿದ್ದರೆ ಮಾತ್ರ ಈ ಸೌಲಭ್ಯ ದೊರೆಯುತ್ತದೆ. ಅದರ ಜೊತೆಗೆ, ಸೆಲೆಬ್ರಿಟಿಗಳು, ಸಾರ್ವಜನಿಕ ವ್ಯಕ್ತಿಗಳು ಹಾಗೂ ಸರ್ಕಾರಿ ಸಂಸ್ಥೆಗಳ ಪ್ರಮುಖ Username‌ಗಳನ್ನು ವಾಟ್ಸಾಪ್‌ ಈಗಾಗಲೇ ಕಾಯ್ದಿರಿಸಿದ್ದು, ನಕಲಿ ಖಾತೆಗಳು ತಡೆಯಲು ಇದು ಸಹಾಯ ಮಾಡಲಿದೆ.

Username ಬಳಸಲು ಇರುವ ನಿಯಮಗಳು

ಸಾಂಪ್ರದಾಯಿಕ WhatsApp ಖಾತೆಗಳಲ್ಲಿ ಮೊಬೈಲ್ ಸಂಖ್ಯೆ ಪ್ರಮುಖ ಗುರುತಾಗಿದ್ದರೆ, ಹೊಸ Username ಆಯ್ಕೆಯ ಮೂಲಕ ಬಳಕೆದಾರರು ತಮ್ಮ ಫೋನ್ ಸಂಖ್ಯೆಯನ್ನು ಬಹಿರಂಗಪಡಿಸದೆ ಹೊಸ ವ್ಯಕ್ತಿಗಳು, ವ್ಯವಹಾರಗಳು ಹಾಗೂ ಗುಂಪುಗಳೊಂದಿಗೆ ಸಂಪರ್ಕ ಸಾಧಿಸಬಹುದು. ಈ ಆಯ್ಕೆಯ ಸಂಪೂರ್ಣವಾಗಿ ಐಚ್ಛಿಕ ಆಗಿದ್ದು, ತಮ್ಮ ಮೊಬೈಲ್ ಸಂಖ್ಯೆಯನ್ನು ಯಾರು ನೋಡಬೇಕು ಎಂಬುದರ ಮೇಲೆ ಬಳಕೆದಾರರಿಗೆ ಹೆಚ್ಚಿನ ನಿಯಂತ್ರಣ ನೀಡುವ ಉದ್ದೇಶವನ್ನು ಹೊಂದಿದೆ.

ಆದರೆ ವಾಟ್ಸಾಪ್‌ ಸ್ಪಷ್ಟಪಡಿಸಿರುವಂತೆ Username‌ಗಳು ಸಾಮಾಜಿಕ ಜಾಲತಾಣಗಳ ಹ್ಯಾಂಡಲ್‌ಗಳಂತೆ ಕಾರ್ಯನಿರ್ವಹಿಸುವುದಿಲ್ಲ. ಯಾವುದೇ ಸಾರ್ವಜನಿಕ ಡೈರೆಕ್ಟರಿ ಅಥವಾ ಸರ್ಚ್ ವ್ಯವಸ್ಥೆ ಇರುವುದಿಲ್ಲ. ಯಾರಾದರೂ ನಿಮ್ಮನ್ನು ಮೊದಲ ಬಾರಿಗೆ ಸಂಪರ್ಕಿಸಲು ನಿಮ್ಮ ನಿಖರವಾದ Username ತಿಳಿದಿರಬೇಕು.

ಹೆಚ್ಚುವರಿ ಭದ್ರತೆಗೆ Username ಕೀ

ಬಳಕೆದಾರರ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸಲು ವಾಟ್ಸಾಪ್‌ ಹೊಸ Username ಕೀ ಆಯ್ಕೆಯನ್ನೂ ಪರಿಚಯಿಸುತ್ತಿದೆ. ಈ ಆಯ್ಕೆಯನ್ನು ನೀವು ಸಕ್ರಿಯಗೊಳಿಸಿದರೆ, ಯಾರಿಗಾದರೂ ನಿಮ್ಮ Username ತಿಳಿದಿದ್ದರೂ ಸಹ, ನಿಮ್ಮೊಂದಿಗೆ ಸಂಭಾಷಣೆ ಆರಂಭಿಸಲು Username ಕೀ ಅಗತ್ಯವಾಗುತ್ತದೆ. ನಿಮ್ಮ ವಾಟ್ಸಾಪ್‌ Username, Instagram ಅಥವಾ Facebook ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳ Username‌ಗಿಂತ ಭಿನ್ನವಾಗಿರಬಹುದು. ಆದರೆ ಲಭ್ಯವಿದ್ದರೆ ಒಂದೇ ಹೆಸರನ್ನು ಬಳಸುವ ಅವಕಾಶವನ್ನು ವಾಟ್ಸಾಪ್‌ ನೀಡುತ್ತದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile