ಬಜೆಟ್‌ ಬೆಲೆಯಲ್ಲಿ Samsung Galaxy M47 5G ಮೊಬೈಲ್‌ ಬಿಡುಗಡೆ; ಟ್ರಿಪಲ್ ಕ್ಯಾಮೆರಾ ಸೌಲಭ್ಯ

HIGHLIGHTS

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M47 5G ಮೊಬೈಲ್‌ 6,000mAh ಬ್ಯಾಟರಿ ಹೊಂದಿದೆ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M47 5G ಮೊಬೈಲ್‌ ಟ್ರಿಪಲ್‌ ಕ್ಯಾಮೆರಾ ರಚನೆ ಪಡೆದುಕೊಂಡಿದೆ

ಸ್ಯಾಮ್‌ಸಂಗ್‌ನ ಈ ಮೊಬೈಲ್‌ 45W ವೈರ್ಡ್ ಫಾಸ್ಟ್ ಚಾರ್ಜಿಂಗ್‌ ಸಪೋರ್ಟ್‌ ಒಳಗೊಂಡಿದೆ

ಬಜೆಟ್‌ ಬೆಲೆಯಲ್ಲಿ Samsung Galaxy M47 5G ಮೊಬೈಲ್‌ ಬಿಡುಗಡೆ; ಟ್ರಿಪಲ್ ಕ್ಯಾಮೆರಾ ಸೌಲಭ್ಯ

ಸ್ಯಾಮ್‌ಸಂಗ್‌ ಕಂಪನಿಯ ಬಹುನಿರೀಕ್ಷಿತ Samsung Galaxy M47 5G ಮೊಬೈಲ್‌ ಭಾರತದಲ್ಲಿ ಇಂದು (ಜೂನ್‌ 29 ರಂದು) ಬಿಡುಗಡೆ ಆಗಿದೆ. ಈ ಹೊಸ ಮೊಬೈಲ್‌ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 6 Gen 3 ಚಿಪ್‌ಸೆಟ್‌ ಪ್ರೊಸೆಸರ್‌ ಸಪೋರ್ಟ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ 120Hz ರಿಫ್ರೆಶ್ ರೇಟ್‌ ಪಡೆದಿರುವುದು ಹೈಲೈಟ್‌ಗಳಲ್ಲಿ ಒಂದಾಗಿದೆ. ಹಾಗೆಯೇ ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸರ್ ರಚನೆಯನ್ನು ಪಡೆದುಕೊಂಡಿದೆ. ಈ ಮೊಬೈಲ್‌ ರೋಗ್ ರೆಡ್ ಬಣ್ಣದಲ್ಲಿ ಲಭ್ಯವಿದೆ. ಇದು ಮ್ಯಾಟ್-ಟೆಕ್ಸ್ಚರ್ಡ್ ಫಿನಿಶ್ ಮತ್ತು ಬ್ಲೇಜ್ ಬ್ಲೂ ಕಲರ್‌ ಆಯ್ಕೆಯನ್ನು ಹೊಂದಿದೆ. ಹಾಗಾದರೇ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M47 5G ಸ್ಮಾರ್ಟ್‌ಫೋನ್‌ ಬೆಲೆ ಹಾಗೂ ಫೀಚರ್ಸ್‌ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Vi ಟೆಲಿಕಾಂನ ಈ ಕಡಿಮೆ ಬೆಲೆಯ ಪೋಸ್ಟ್‌ಪೇಯ್ಡ್‌ ಪ್ಲಾನ್‌ನಲ್ಲಿ ಆಕರ್ಷಕ ಪ್ರಯೋಜನ!

Samsung Galaxy M47 5G ಮೊಬೈಲ್‌ ಬೆಲೆ ಹಾಗೂ ಲಭ್ಯತೆ

ಭಾರತದಲ್ಲಿ ಸ್ಯಾಮ್‌ಸಂಗ್‌ನ ನೂತನ ಸ್ಯಾಮ್‌ಸಂಗ್ ಗ್ಯಾಲಕ್ಸಿ M47 5G ಮೊಬೈಲ್‌ನ ಆರಂಭಿಕ ಬೆಲೆ 22,999 ರೂ.ಗಳು ಆಗಿದೆ. ಆದಾಗ್ಯೂ, ಈ ಬೆಲೆಯು ಕೂಪನ್ ಕೊಡುಗೆ ಮತ್ತು ಬ್ಯಾಂಕ್ ರಿಯಾಯಿತಿಯನ್ನು ಒಳಗೊಂಡಿದೆ. ಅಂದಹಾಗೆ ಈ ಮೊಬೈಲ್‌ ರೋಗ್ ರೆಡ್ ಬಣ್ಣದಲ್ಲಿ ಲಭ್ಯವಿದೆ. ಇದು ಮ್ಯಾಟ್-ಟೆಕ್ಸ್ಚರ್ಡ್ ಫಿನಿಶ್ ಮತ್ತು ಬ್ಲೇಜ್ ಬ್ಲೂ ಕಲರ್‌ ಆಯ್ಕೆಯನ್ನು ಹೊಂದಿದೆ. ಇನ್ನು ಈ ಫೋನ್‌ ಜುಲೈ 4 ರಿಂದ ಅಮೆಜಾನ್ ಇ ಕಾಮರ್ಸ್‌ ಮೂಲಕ ಮಾರಾಟಕ್ಕೆ ಬರಲಿದೆ.

Samsung Galaxy M47 5G Launched
Samsung Galaxy M47 5G Launched

ಸ್ಯಾಮ್‌ಸಂಗ್ ಗ್ಯಾಲಕ್ಸಿ M47 5G ಮೊಬೈಲ್‌ ಫೀಚರ್ಸ್‌

ಸ್ಯಾಮ್‌ಸಂಗ್ ಗ್ಯಾಲಕ್ಸಿ M47 5G ಮೊಬೈಲ್‌ 6.7 ಇಂಚಿನ FHD+ ಸೂಪರ್ AMOLED ಡಿಸ್‌ಪ್ಲೇ ಅನ್ನು ಹೊಂದಿದ್ದು, ಇದು 120Hz ರಿಫ್ರೆಶ್ ರೇಟ್‌ ಮತ್ತು 1,400 nits ವರೆಗಿನ ಗರಿಷ್ಠ ಬ್ರೈಟ್ನೆಸ್‌ ಸಪೋರ್ಟ್‌ ಹೊಂದಿದೆ. ಅಲ್ಲದೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್+ ನಿಂದ ರಕ್ಷಿಸಲಾಗಿದೆ. ಹಾಗೆಯೇ ಇದು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 6 Gen 3 ಚಿಪ್‌ಸೆಟ್‌ ಪ್ರೊಸೆಸರ್‌ ಸಪೋರ್ಟ್‌ ಸಹ ಪಡೆದುಕೊಂಡಿದೆ.

ಹಾಗೆಯೇ ಸ್ಯಾಮ್‌ಸಂಗ್ ಗ್ಯಾಲಕ್ಸಿ M47 5G ಮೊಬೈಲ್‌ ಟ್ರಿಪಲ್‌ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್‌ ಆಗಿದೆ. ಹಾಗೆಯೇ ಸೆಕೆಂಡರಿ ಹಾಗೂ ತೃತೀಯ ಕ್ಯಾಮೆರಾಗಳು ಕ್ರಮವಾಗಿ 5MP ಮತ್ತು 2MP ಸೆನ್ಸಾರ್‌ ಸಾಮರ್ಥ್ಯ ಒಳಗೊಂಡಿವೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 12MP ಕ್ಯಾಮೆರಾ ಪಡೆದುಕೊಂಡಿದೆ. ಈ ಮೊಬೈಲ್‌ ಎಲ್ಲಾ ಕ್ಯಾಮೆರಾಗಳಲ್ಲಿ 4K ವೀಡಿಯೊ ರೆಕಾರ್ಡಿಂಗ್ ಅನ್ನು ಹೊಂದಿದೆ. ಇದರೊಂದಿಗೆ ಈ ಫೋನ್ 6,000mAh ಬ್ಯಾಟರಿ ಒಳಗೊಂಡಿದ್ದು, ಅದಕ್ಕೆ ಪೂರಕವಾಗಿ 45W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile