Free YouTube Premium 2025: ಹೊಸ 2025 ವರ್ಷದಲ್ಲಿ Reliance Jio ತಮ್ಮ ಗ್ರಾಹಕರಿಗೆ ಜಬರ್ದಸ್ತ್ ಆಫರ್ಗಳನ್ನು ನೀಡಲು ಆರಂಭಿಸಿದೆ. ಈ ಮೂಲಕ ಪ್ರಸ್ತುತ ಆಯ್ದ ಜಿಯೋ ಫೈಬರ್ ಮತ್ತು ಏರ್ ಫೈಬರ್ (AirFiber/Fiber) ಪೋಸ್ಟ್‌ಪೇಯ್ಡ್ ಯೋಜನೆಗಳಲ್ಲಿ ಬರೋಬ್ಬರಿ 2 ವರ್ಷಗಳ ಉಚಿತ YouTube Premium ಚಂದಾದಾರಿಕೆಯನ್ನು ನೀಡುತ್ತಿದೆ. ಇದು ಮೊಟ್ಟ ಮೊದಲ ಬಾರಿಗೆ ಯೌಟ್ಯೂಬ್ ಭಾರತದ ಟೆಲಿಕಾಂ ಕಂಪನಿ Reliance Jio ಜೊತೆಗೆ ಕೈಜೋಡಿಸಿರುವ ಪಾಲುದಾರಿಕೆಯಾಗಿದೆ.
Survey
✅ Thank you for completing the survey!
ರಿಲಯನ್ಸ್ ಜಿಯೋದ Free YouTube Premium ಆಫರ್:
ಸಾಮಾನ್ಯವಾಗಿ ನೀವು YouTube Premium ಚಂದಾದಾರಿಕೆ ಪಡೆಯಲು ತಿಂಗಳಿಗೆ 159 ರೂಗಳು ಮತ್ತು ವರ್ಷಕ್ಕೆ 1490 ರೂಗಳಾಗಿವೆ. ಆದರೆ ಜಿಯೋ ಇದನ್ನು 2 ವರ್ಷಕ್ಕೆ ಉಚಿತವಾಗಿ ನೀಡಲು ಮುಂದಾಗಿದೆ. ಪ್ರಸ್ತುತ ರಿಲಯನ್ಸ್ ಜಿಯೋದ ಈ ಕೆಳಗಿನ ಯೋಜನೆಗಳಿಗೆ ಚಂದಾದಾರರಾಗಿರುವ JioFiber /AirFiber ಪೋಸ್ಟ್‌ಪೇಯ್ಡ್ ಗ್ರಾಹಕರು ಈ ಆಫರ್‌ಗೆ ಅರ್ಹರಾಗುತ್ತಾರೆ. ಇದರಲ್ಲಿ ನಿಮಗೆ ರೂ 888, ರೂ 1199, ರೂ 1499, ರೂ 2499, ಮತ್ತು ರೂ 3499 ಯೋಜನೆಗಳಿಗೆ ಜಿಯೋ ಈ ಹೊಸ ಆಫರ್ ಅನ್ವಯಿಸುತ್ತದೆ.
YouTube Premium ಚಂದಾದಾರಿಕೆಯೊಂದಿಗೆ ಬಳಕೆದಾರರು ಜಾಹೀರಾತು ಮುಕ್ತ ವೀಕ್ಷಣೆಯ ಅನುಭವ, ವೀಡಿಯೊಗಳನ್ನು ಡೌನ್‌ಲೋಡ್ ಮಾಡುವ ಸಾಮರ್ಥ್ಯದೊಂದಿಗೆ ಅಪ್ಲಿಕೇಶನ್ ಅನ್ನು ಹಿನ್ನೆಲೆಯಲ್ಲಿ ಪ್ಲೇ ಮಾಡುವ ಮತ್ತು ಯೌಟ್ಯೂಬ್ ಮ್ಯೂಸಿಕ್ ಪ್ರೀಮಿಯಂ ಅನ್ನು ಆನಂದಿಸ ಬಹುದು. ನೀವು ಅರ್ಹ ಗ್ರಾಹಕರಾಗಿದ್ದರೆ ನಿಮ್ಮ YouTube Premium ಚಂದಾದಾರಿಕೆಯನ್ನು ನೀವು ಹೇಗೆ ಸಕ್ರಿಯಗೊಳಿಸಬಹುದು ಎಂಬುದು ಈ ಕೆಳಗೆ ನೀಡಲಾಗಿದೆ.
ಈ YouTube Premium ಆಫರ್ ಆಕ್ಟಿವೇಟ್ ಮಾಡಿಕೊಳ್ಳುವುದು ಹೇಗೆ?
ಮೊದಲನೆಯದಾಗಿ ನೀವು JioFiber ಅಥವಾ AirFiber ನಿಂದ ಅರ್ಹವಾದ ಪೋಸ್ಟ್‌ಪೇಯ್ಡ್ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಖರೀದಿಸಬೇಕು ಅಥವಾ ಚಂದಾದಾರರಾಗಬೇಕು. ಅದರ ನಂತರ ನಿಮ್ಮ MyJio ಖಾತೆಗೆ ಲಾಗಿನ್ ಮಾಡಿ ಮತ್ತು ಅಪ್ಲಿಕೇಶನ್/ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾದ YouTube ಪ್ರೀಮಿಯಂ ಬ್ಯಾನರ್ ಅನ್ನು ಟ್ಯಾಪ್ ಮಾಡಿ. ನಂತರ ನಿಮ್ಮ ಯೌಟ್ಯೂಬ್ ಖಾತೆಗೆ ಸೈನ್-ಇನ್ ಮಾಡಿ ಮತ್ತು ನೀವು ಈಗಾಗಲೇ ಒಂದನ್ನು ಹೊಂದಿಲ್ಲದಿದ್ದರೆ ಹೊಸದನ್ನು ರಚಿಸಬೇಕಾಗುತ್ತದೆ.
ಇದರ ನಂತರ ನೀವು 2 ವರ್ಷಗಳ ಕಾಲ JioFiber/AirFiber ಸೇವೆಯೊಂದಿಗೆ YouTube Premium ಅನ್ನು ಆರಾಮವಾಗಿ ಆನಂದಿಸಲು ಸಾಧ್ಯವಾಗುತ್ತದೆ. ನೀವು ಜಿಯೋದ ಪೋಸ್ಟ್‌ಪೇಯ್ಡ್ ಬ್ರಾಡ್‌ಬ್ಯಾಂಡ್ ಚಂದಾದಾರರಾಗಿದ್ದರೆ ನಿಮಗೆ ಉಚಿತ ಜಿಯೋ ಸೆಟ್-ಟಾಪ್ ಬಾಕ್ಸ್ ಒದಗಿಸಲು ಕಂಪನಿಗೆ ನೀವು ವಿನಂತಿಸಬಹುದು ಮತ್ತು ಅದನ್ನು ಬಳಸಿಕೊಂಡು ನಿಮ್ಮ ಹಳೆಯ ಟಿವಿಯನ್ನು ಸ್ಮಾರ್ಟ್ ಟಿವಿಯಾಗಿ ಪರಿವರ್ತಿಸಿ ಒಟಿಟಿಯನ್ನು ವೀಕ್ಷಿಸಬಹುದು.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile