Digital Discount Days: ರಿಲಯನ್ಸ್ ಡಿಜಿಟಲ್‌ನಲ್ಲಿ ಈ ಪ್ರಾಡಕ್ಟ್‌ಗಳಿಗೆ ಭರ್ಜರಿ ಡಿಸ್ಕೌಂಟ್‌ಗಳು!

Digital Discount Days: ರಿಲಯನ್ಸ್ ಡಿಜಿಟಲ್‌ನಲ್ಲಿ ಈ ಪ್ರಾಡಕ್ಟ್‌ಗಳಿಗೆ ಭರ್ಜರಿ ಡಿಸ್ಕೌಂಟ್‌ಗಳು!
HIGHLIGHTS

ರಿಲಯನ್ಸ್ ಡಿಜಿಟಲ್ ಕಂಪನಿಯು ತನ್ನ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಮಾರಾಟ ‘ಡಿಜಿಟಲ್ ಡಿಸ್ಕೌಂಟ್ ಡೇಸ್ (Reliance Digital Discount Days) ಆರಂಭಿಸಿದೆ. ಈ ಮಾರಾಟವನ್ನು 6ನೇ ಏಪ್ರಿಲ್‌ನಿಂದ 15ನೇ ಏಪ್ರಿಲ್‌ವರೆಗೆ ನಡೆಸಲಿದೆ. ಈ ಮೂಲಕ ವ್ಯಾಪಕ ಶ್ರೇಣಿಯ ಎಲೆಕ್ಟ್ರಾನಿಕ್ಸ್ ಉಪಕರಣಗಳ ಮೇಲೆ ಭಾರಿ ರಿಯಾಯಿತಿಯ ಭರವಸೆಗಳನ್ನು (Reliance Digital Discount Days) ನೀಡುತ್ತಿದೆ. ರಿಲಯನ್ಸ್ ಡಿಜಿಟಲ್ ಅಥವಾ ಮೈ ಜಿಯೋ ಸ್ಟೋರ್‌ಗಳಲ್ಲಿ ಗ್ರಾಹಕರು ಈ ಕೊಡುಗೆಗಳ ಪ್ರಯೋಜನ ಪಡೆದುಕೊಳ್ಳಬಹುದು.

ಡಿಜಿಟಲ್ ಡಿಸ್ಕೌಂಟ್ ಡೇಸ್ (Reliance Digital Discount Days)

ರಿಲಯನ್ಸ್ ಡಿಜಿಟಲ್ ಭಾರತದಲ್ಲಿನ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ರಿಟೇಲರ್ ಆಗಿದ್ದು 800 ಕ್ಕೂ ಹೆಚ್ಚು ನಗರಗಳಲ್ಲಿ ಅಸ್ತಿತ್ವದಲ್ಲಿದೆ. ಅಲ್ಲದೆ 620 ಕ್ಕೂಹೆಚ್ಚು ದೊಡ್ಡ ಸ್ವರೂಪದ ರಿಲಯನ್ಸ್ ಡಿಜಿಟಲ್ ಸ್ಟೋರ್‌ಗಳು ಮತ್ತು 1800 ಕ್ಕೂಹೆಚ್ಚು ಮೈಜಿಯೋ ಸ್ಟೋರ್‌ಗಳು ದೇಶದ ಮೂಲೆಮೂಲೆಗಳಲ್ಲಿದೆ. ಗ್ರಾಹಕರಿಗೆ ಉತ್ತಮ ಸೇವೆಯನ್ನು ಒದಗಿಸುತ್ತದೆ. 300 ಕ್ಕೂ ಹೆಚ್ಚು ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಬ್ರ್ಯಾಂಡ್‌ಗಳು ಮತ್ತು 5000ಕ್ಕೂ ಹೆಚ್ಚು ಉತ್ಪನ್ನಗಳೊಂದಿಗೆ ಉತ್ತಮ ಬೆಲೆಯಲ್ಲಿ ಇತ್ತೀಚಿನ ತಂತ್ರಜ್ಞಾನವನ್ನುಎಲ್ಲರಿಗೂ ಸಿಗುವಂತೆ ಮಾಡುತ್ತದೆ.

Also Read: Oneplus Nord CE4 ಮಾರಾಟದಲ್ಲಿ ಖರೀದಿದಾರರಿಗೆ ಭರ್ಜರಿ ಆಫರ್‌ಗಳನ್ನು ನೀಡುತ್ತಿರುವ ಒನ್​ಪ್ಲಸ್!

Reliance Digital Discount Days
Reliance Digital Discount Days 2024

ಹೊಸ Digital Discount Days ಡಿಸ್ಕೌಂಟ್‌ಗಳು

ಈ ರಿಯಾಯಿತಿ ಮಾರಾಟದಲ್ಲಿ ಗ್ರಾಹಕರು ಪ್ರಮುಖ ಬ್ಯಾಂಕ್ ಕಾರ್ಡ್‌ಗಳ ಮೇಲೆ ಶೇಕಡ 10 ತ್ವರಿತ ರಿಯಾಯಿತಿ ಪಡೆಯಬಹುದು ಅಥವಾ ಸಾಲಗಳ ಮೇಲೆ ರೂ. 15,000 ಕ್ಯಾಷ್ ಬ್ಯಾಕ್ ಪಡೆಯಬಹುದು. ಇದಲ್ಲದೆ 15ನೇ ಏಪ್ರಿಲ್ 2024ರವರೆಗೆ ತಮ್ಮ ನೆಚ್ಚಿನ ಎಲೆಕ್ಟ್ರಾನಿಕ್ಸ್ ಉಪಕರಣಗಳ ಮೇಲೆ ಆಕರ್ಷಕ ರಿಯಾಯಿತಿ ಸಹ ಪಡೆಯಬಹುದು. ರಿಲಯನ್ಸ್ ಡಿಜಿಟಲ್ ನೊಂದಿಗೆ ಹೊಂದಿಕೊಳ್ಳುವ EMI ಆಯ್ಕೆಗಳೊಂದಿಗೆ ಸುಲಭವಾದ ಹಣಕಾಸಿನ ಸೌಲಭ್ಯವನ್ನೂ ಪಡೆಯಬಹುದಾಗಿದೆ.

Digital Discount Days on Smart TV:

ಪ್ರಮುಖ ಕಂಪನಿಗಳ ಟಿ.ವಿಗಳ ಮೇಲೆ ಉತ್ತಮ ರಿಯಾಯಿತಿ ಇದೆ. LG OLED ಮತ್ತು Samsung Neo QLED TV ಗಳಮೇಲೆ ಶೇಕಡ 45 ರಿಯಾಯಿತಿಯನ್ನುಪಡೆಯಿರಿ. ಈ ಟಿವಿಗಳ ಬೆಲೆ ರೂ.79,990 ರಿಂದ ಪ್ರಾರಂಭವಾಗುತ್ತದೆ. 43 ಇಂಚಿನ FullHD ಟಿ.ವಿಗಳ ಮೇಲೆ ಶೇಕಡ 40 ರಿಯಾಯಿತಿ ಆನಂದಿಸಿ. ಬೆಲೆಯು ರೂ.16,990 ರಿಂದ ಪ್ರಾರಂಭವಾಗುತ್ತದೆ. ಇದರೊಂದಿಗೆ ನಿಮಗೆ ಎಲ್ಲ Apple iPhone ಗಳಲ್ಲಿ ರೂ.12,000 ವರೆಗಿನ ಡಬಲ್ ಎಕ್ಸ್‌ಚೇಂಜ್ ಬೋನಸ್ ಪಡೆಯಿರಿ.

Reliance Digital Discount Days 2024
Reliance Digital Discount Days 2024

ಡಿಜಿಟಲ್ ಡಿಸ್ಕೌಂಟ್ ಡೇಸ್ ಲ್ಯಾಪ್ಟಾಪ್ ಅಥವಾ ಐಪ್ಯಾಡ್:

ನೀವೊಂದು ಲೇಟೆಸ್ಟ್ ಲ್ಯಾಪ್ಟಾಪ್ ಅಥವಾ ಐಪ್ಯಾಡ್ ಅಲ್ಲದೆ Apple MacBook Supercharged, M1 ಜೊತೆಗೆ ಶೇಕಡ 3 ರಿಯಾಯಿತಿ ಪಡೆಯಬುದು. ನೋಕಾಸ್ಟ್ EMI ದಿನಕ್ಕೆ ಕೇವಲ ರೂ.54 ರಿಂದ ಪ್ರಾರಂಭವಾಗುತ್ತದೆ. ಗೇಮರ್ಗಳಿಗಾಗಿ ಗೇಮಿಂಗ್ ಲ್ಯಾಪ್‌ಟಾಪ್‌ಗಳ ಶ್ರೇಣಿಯು ರೂ 49,999 ರಿಂದ ಪ್ರಾರಂಭವಾಗುತ್ತದೆ. ಐಪ್ಯಾಡ್ 9th Gen Wi-Fi 64GB ಯೊಂದಿಗೆ ಅಂತ್ಯವಿಲ್ಲದ ಸಾಧ್ಯತೆಗಳನ್ನುಅನ್‌ಲಾಕ್ ಮಾಡಿ ಕೇವಲ ರೂ.23,900ನ ಉತ್ತಮ ಬೆಲೆಯಲ್ಲಿ. Dolby Atmos ಸೌಂಡ್ ಬಾರ್‌ ಮೇಲೆ ಶೇಕಡ 65 ರಷ್ಟುಅಧಿಕ ರಿಯಾಯಿತಿ ಆನಂದಿಸಿ, 17,990/- ರೂ.ಗಳ ವಿಶೇಷ ಬೆಲೆಯಿಂದ ಪ್ರಾರಂಭವಾಗುತ್ತದೆ.

Reliance Digital Discount Days ಬೋಸ್ ಸೌಂಡ್‌ಬಾರ್ 900 ಮೇಲೆ ಶೇಕಡ 30 ರಿಯಾಯಿತಿಯ ಆಫರ್, ಇದರ ಬೆಲೆ ರೂ. 72,990 ರೂಗಳಾಗಿವೆ. ದೈನಂದಿನ ಕಾರ್ಯಗಳನ್ನು ಸುಲಭಗೊಳಿಸಲು 1 ಟನ್ 3-ಸ್ಟಾರ್ ಇನ್ವರ್ಟರ್ AC ಕೇವಲ ರೂ.20,990ನಲ್ಲಿ ಲಭ್ಯ. ಹೈ-ಎಂಡ್ 11KG ಕೆಜಿ / 7KG ವಾಷರ್ ಡ್ರೈಯರ್ ಬೆಲೆ ಕೇವಲ ರೂ. 61,990. ಸೈಡ್ -ಬೈ – ಸೈಡ್ ರೆಫ್ರಿಜರೇಟರ್‌ನೊಂದಿಗೆ ನಿಮ್ಮ ದಿನಸಿಗಳನ್ನು ತಾಜಾ ಮತ್ತು ವ್ಯವಸ್ಥಿತವಾಗಿರಿಸಿ, ಕೇವಲ ರೂ.49,990 ರಿಂದ ಪ್ರಾರಂಭವಾಗುತ್ತದೆ. ಎಲ್ಲಾ ಆಫರ್‌ಗಳು ಮತ್ತು ಬೆಲೆಗಳ ಮೇಲೆ ನಿಯಮಗಳು ಮತ್ತು ಷರತ್ತುಗಳುಅನ್ವಯಿಸುತ್ತವೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo