Exciting: Amazon ಸೇಲ್‌ಗಾಗಿ ರೆಡಿನಾ? Laptop, ಫೋನ್, TV ಮತ್ತು ವಾಚ್‌ಗಳ ಮೇಲೆ ಭಾರಿ ಡೀಲ್‌ಗಳು| Tech News

Exciting: Amazon ಸೇಲ್‌ಗಾಗಿ ರೆಡಿನಾ? Laptop, ಫೋನ್, TV ಮತ್ತು ವಾಚ್‌ಗಳ ಮೇಲೆ ಭಾರಿ ಡೀಲ್‌ಗಳು| Tech News
HIGHLIGHTS

ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2023 (Amazon Sale 2023) ಅಕ್ಟೋಬರ್ 8 ರಂದು ಪ್ರಾರಂಭ

ಈ ಅಮೆಜಾನ್‌ ಸೇಲ್ 2023 ಮಾರಾಟ ಅಮೆಜಾನ್ ಪ್ರೈಮ್ ಸದಸ್ಯರಿಗೆ ಅಕ್ಟೋಬರ್ 7 ರಿಂದಲೇ ಲೈವ್ ಆಗಲಿದೆ.

SBI ಕಾರ್ಡ್ ಹೊಂದಿರುವವರು ಹೆಚ್ಚುವರಿ 10% ಲಾಭವನ್ನು ಪಡೆಯಲು ಸಾಧ್ಯ

ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2023 (Amazon Sale 2023) ಅಕ್ಟೋಬರ್ 8 ರಂದು ಪ್ರಾರಂಭವಾಗುತ್ತದೆ. ಆದರೆ ಈ ಮಾರಾಟ ಅಮೆಜಾನ್ ಪ್ರೈಮ್ ಸದಸ್ಯರಿಗೆ ಅಕ್ಟೋಬರ್ 7 ರಿಂದಲೇ ಲೈವ್ ಆಗಲಿದೆ. ಗ್ರಾಹಕರು ಈ ಮಾರಾಟದಲ್ಲಿ ಲೇಟೆಸ್ಟ್ ಮೊಬೈಲ್ ಫೋನ್‌ಗಳು, ಟಿವಿ, ಲ್ಯಾಪ್‌ಟಾಪ್‌ಗಳನ್ನು ಮಾರಾಟದಿಂದ ಅತಿ ಕಡಿಮೆ ಬೆಲೆಗೆ ಖರೀದಿಸುವ ಅವಕಾಶವನ್ನು ಪಡೆಯಬಹುದು. ಈ ಮಾರಾಟದಲ್ಲಿ Samsung Galaxy S23 Ultra ಮತ್ತು Motorola Razr 40 ಸ್ಮಾರ್ಟ್‌ಫೋನ್‌ ಸೇರಿದಂತೆ ಲ್ಯಾಪ್‌ಟಾಪ್‌, ಸ್ಮಾರ್ಟ್‌ವಾಚ್‌ಗಳ ಮೇಲೆ 89% ವರೆಗೆ ರಿಯಾಯಿತಿ ಪಡೆಯಬಹುದು. ಅಲ್ಲದೆ SBI ಕಾರ್ಡ್ ಹೊಂದಿರುವವರು ಹೆಚ್ಚುವರಿ 10% ಲಾಭವನ್ನು ಪಡೆಯಲು ಸಾಧ್ಯ.

Amazon ಸೇಲ್‌ನಲ್ಲಿ Samsung Galaxy S23 5G

ಈಗಾಗಲೇ ಭಾರತದಲ್ಲಿ ಅಮೆಜಾನ್ ಪ್ಲಾಟ್‌ಫಾರ್ಮ್‌ನಲ್ಲಿ Amazon ಗ್ರೇಟ್ ಇಂಡಿಯನ್ ಫೆಸ್ಟಿವಲ್ 2023 ಗಾಗಿ ಕಿಕ್‌ಸ್ಟಾರ್ಟರ್ ಡೀಲ್ ಘೋಷಿಸಿದೆ. ಇದರೊಂದಿಗೆ ಸ್ಯಾಮ್ಸಂಗ್ ತನ್ನ Galaxy S23 5G ಬೆಲೆ 95,999 ರೂಗಳಾಗಿದ್ದು ಅಮೆಜಾನ್ ಡೀಲ್ ಅಡಿಯಲ್ಲಿ ಫೋನ್ ಅನ್ನು ರೂ 79,999 ರೂಗಳಿಗೆ ಖರೀದಿಸಬಹುದು. SBI ಕ್ರೆಡಿಟ್ ಕಾರ್ಡ್‌ನಲ್ಲಿ ಗ್ರಾಹಕರು ಹೆಚ್ಚುವರಿ ಫ್ಲಾಟ್ ₹5000 ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಇದಲ್ಲದೇ ಖರೀದಿದಾರರು ನಿಮ್ಮ ಹಳೆಯ ಸ್ಮಾರ್ಟ್ಫೋನ್ ಮೇಲೆ ವಿನಿಮಯ ಕೊಡುಗೆಯ ಅಡಿಯಲ್ಲಿ ₹ 37,500 ರಿಯಾಯಿತಿಯನ್ನು ಪಡೆಯಬಹುದು.

Amazon Sale 2023
Amazon Sale 2023 – Kickstarter Deal

ಅಮೆಜಾನ್ ಸೇಲ್‌ನಲ್ಲಿ ಲ್ಯಾಪ್‌ಟಾಪ್‌ಗಳ ಡೀಲ್

ಅಮೆಜಾನ್ Asus Vivobook S 15 2022 ಮತ್ತು Intel Core i5-12500H 12th Gen ಲ್ಯಾಪ್‌ಟಾಪ್‌ 15.6 ಇಂಚಿನ FHD ಡಿಸ್ಪ್ಲೇ ಲ್ಯಾಪ್‌ಟಾಪ್ ಪ್ರಸ್ತುತ ₹ 58,990 ಬೆಲೆಯಲ್ಲಿ ಲಭ್ಯವಿದೆ. SBI ಕ್ರೆಡಿಟ್ ಕಾರ್ಡ್ EMI ವಹಿವಾಟುಗಳಲ್ಲಿ ಗ್ರಾಹಕರು ₹1750 ವರೆಗೆ 10% ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಇದಲ್ಲದೆ ಗ್ರಾಹಕರು ತಮ್ಮ ಹಳೆಯ ಸ್ಮಾರ್ಟ್ಫೋನ್ ವಿನಿಮಯ ಕೊಡುಗೆಯ ಅಡಿಯಲ್ಲಿ ವಿನಿಮಯ ಮಾಡಿಕೊಳ್ಳುವ ಮೂಲಕ ₹ 11,250 ವರೆಗೆ ರಿಯಾಯಿತಿಯನ್ನು ಪಡೆಯಬಹುದು.

Amazon ಸೇಲ್‌ನಲ್ಲಿ ಸ್ಮಾರ್ಟ್ ವಾಚ್‌ ಡೀಲ್

Fire-Boltt Asteroid ಗ್ರಾಹಕರು ಈ ಸ್ಮಾರ್ಟ್ ವಾಚ್ ಅನ್ನು ಫೈರ್-ಬೋಲ್ಟ್‌ನಿಂದ ₹ 1,999 ಗೆ ಖರೀದಿಸಬಹುದು. ಈ ವಾಚ್ 1.43-ಇಂಚಿನ AMOLED ಡಿಸ್ಪ್ಲೇ, 500 ನಿಟ್ಸ್ ಬ್ರೈಟ್ನೆಸ್ ಮತ್ತು 120 ಕ್ಕೂ ಹೆಚ್ಚು ಕ್ರೀಡಾ ವಿಧಾನಗಳನ್ನು ಹೊಂದಿದೆ. ಈ ಸ್ಮಾರ್ಟ್ ವಾಚ್ ಹೃದಯ ಬಡಿತ ಮಾನಿಟರ್, ನಿದ್ರೆ ಟ್ರ್ಯಾಕಿಂಗ್ ಮತ್ತು ಅನೇಕ ಆರೋಗ್ಯ ವೈಶಿಷ್ಟ್ಯಗಳನ್ನು ನೀಡುತ್ತದೆ.

ಅಮೆಜಾನ್ ಸೇಲ್‌ ಟಿವಿ ಮೇಲೆ ಡೀಲ್:

OnePlus Y ಸರಣಿ 4K ಅಲ್ಟ್ರಾ HD TV (50Y1S Pro): OnePlus ನಿಂದ ಈ ಸ್ಮಾರ್ಟ್ ಟಿವಿ ಪ್ರಸ್ತುತ ₹ 31,990 ನಲ್ಲಿ ಲಭ್ಯವಿದೆ. ಆದರೆ ಮಾರಾಟದಲ್ಲಿ ಗ್ರಾಹಕರು SBI ಕ್ರೆಡಿಟ್ ಕಾರ್ಡ್ ನೋ-ಕಾಸ್ಟ್ EMI ನಲ್ಲಿ ₹ 1500 ವರೆಗೆ 10% ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಇದಲ್ಲದೇ ನೀವು ಬಯಸಿದರೆ ನಿಮ್ಮ ಹಳೆಯ ಸ್ಮಾರ್ಟ್ಫೋನ್ ವಿನಿಮಯ ಕೊಡುಗೆಯ ಅಡಿಯಲ್ಲಿ ನೀವು ₹2,540 ವರೆಗೆ ಪ್ರಯೋಜನವನ್ನು ಪಡೆಯಬಹುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo