ಸೂಪರ್ ಸ್ಟಾರ್ ರಜನಿಕಾಂತ್ ಅವರ 169ನೇ ಚಿತ್ರ ‘ಜೈಲರ್​’ (Jailer) ಪೋಸ್ಟರ್ ರಿಲೀಸ್!

Updated on 17-Jun-2022
HIGHLIGHTS

ಸೂಪರ್ ಸ್ಟಾರ್ ರಜನಿಕಾಂತ್ ಅವರ 169ನೇ ಚಿತ್ರಕ್ಕೆ ‘ಜೈಲರ್​’ (Jailer) ಎಂದು ಹೆಸರಿಡಲಾಗಿದೆ.

ಈ ಚಿತ್ರಕ್ಕೆ ನೆಲ್ಸನ್​ ದಿಲೀಪ್​​ ಕುಮಾರ್ ನಿರ್ದೇಶನ ಮಾಡಲಿದ್ದು ‘ಜೈಲರ್​’ (Jailer) ಎಂದು ಟೈಟಲ್​ ಇಡಲಾಗಿದೆ.

ಈ ‘ಜೈಲರ್​’ (Jailer) ಚಿತ್ರದಲ್ಲಿ ಅವರ ಜತೆ ತೆರೆ ಹಂಚಿಕೊಳ್ಳುತ್ತಿರುವುದು ಖುಷಿ ನೀಡಿದೆ ಎಂದು ಶಿವರಾಜ್​ಕುಮಾರ್​ ಹೇಳಿದ್ದರು.

ಸೂಪರ್ ಸ್ಟಾರ್ ರಜನಿಕಾಂತ್ ಅವರ 169ನೇ ಚಿತ್ರಕ್ಕೆ ‘ಜೈಲರ್​’ (Jailer) ಎಂದು ಹೆಸರಿಡಲಾಗಿದೆ. ಈ ಬಹು ನಿರೀಕ್ಷಿತ ಯೋಜನೆಯನ್ನು ಆರ್ಥಿಕವಾಗಿ ನಿರ್ವಹಿಸುತ್ತಿರುವ ಸನ್ ಪಿಕ್ಚರ್ಸ್ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ಪರಿಕಲ್ಪನೆಯ ಪೋಸ್ಟರ್‌ನೊಂದಿಗೆ ತನ್ನ ಶೀರ್ಷಿಕೆಯನ್ನು ಪ್ರಕಟಿಸಿದೆ. ಈ ಚಿತ್ರಕ್ಕೆ ನೆಲ್ಸನ್​ ದಿಲೀಪ್​​ ಕುಮಾರ್ ನಿರ್ದೇಶನ ಮಾಡಲಿದ್ದು ‘ಜೈಲರ್​’ (Jailer) ಎಂದು ಟೈಟಲ್​ ಇಡಲಾಗಿದೆ. ನಿರ್ಮಾಣ ಸಂಸ್ಥೆ ‘ಸನ್​ ಪಿಕ್ಚರ್ಸ್​’ ಮೂಲಕ ಈ ಸುದ್ದಿ ಅಧಿಕೃತವಾಗಿ ಹೊರಬಿದ್ದಿದೆ.

‘ಜೈಲರ್​’ (Jailer) ಸಿನಿಮಾದ ಟೈಟಲ್​ ಪೋಸ್ಟರ್

‘ಜೈಲರ್​’ (Jailer) ಸಿನಿಮಾದ ಟೈಟಲ್​ ಪೋಸ್ಟರ್​ ಕೌತುಕ ಮೂಡಿಸುವಂತಿದೆ.​ ಘಟಾನುಘಟಿ ಕಲಾವಿದರು ಮತ್ತು ತಂತ್ರಜ್ಞರು ಈ ಸಿನಿಮಾಗಾಗಿ ಒಂದಾಗುತ್ತಿರುವುದರಿಂದ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ದೊಡ್ಡ ಬಜೆಟ್​ನಲ್ಲಿ ಈ ಚಿತ್ರ ಮೂಡಿಬರಲಿದೆ. ಈಗ ಟೈಟಲ್​ ಪೋಸ್ಟರ್​ ಕಂಡು ರಜನಿಕಾಂತ್​ ಫ್ಯಾನ್ಸ್​ ವಾವ್​ ಎನ್ನುತ್ತಿದ್ದಾರೆ. ರಜನಿಕಾಂತ್​ ಜೊತೆ ಶಿವರಾಜ್​ಕುಮಾರ್​ ನಟಿಸುವ ಬಗ್ಗೆ ಹಲವು ದಿನಗಳ ಹಿಂದೆಯೇ ಸುದ್ದಿ ಕೇಳಿಬಂದಿತ್ತು. 

https://twitter.com/sunpictures/status/1537668933205229568?ref_src=twsrc%5Etfw

ಶಿವಣ್ಣ ಕೂಡ ಖಚಿತ ಪಡಿಸಿ ‘ರಜನಿಕಾಂತ್ ಜತೆ ನಟಿಸುವುದು ನಿಜಕ್ಕೂ ಉತ್ತಮ ಅವಕಾಶ. ಈ ‘ಜೈಲರ್​’ (Jailer) ಚಿತ್ರದಲ್ಲಿ ಅವರ ಜತೆ ತೆರೆ ಹಂಚಿಕೊಳ್ಳುತ್ತಿರುವುದು ಖುಷಿ ನೀಡಿದೆ. ಅವರು ನನ್ನನ್ನು ಬಾಲ್ಯದಿಂದಲೂ ನೋಡಿದ್ದಾರೆ. ಅವರ ಜತೆ ನನಗೆ ವಿಶೇಷ ಬಾಂಧವ್ಯ ಇದೆ. ಸಿನಿಮಾದಲ್ಲಿ ಪಾತ್ರ ಹೇಗೇ ಇರಲಿ ಈ ಪ್ರಾಜೆಕ್ಟ್​ನ ಭಾಗವಾಗಲು ನನಗೆ ಖುಷಿ ಇದೆ. ಬೆಳ್ಳಿ ಪರದೆಮೇಲೆ ರಜನಿಕಾಂತ್ ಮತ್ತು ನನ್ನನ್ನು ಒಟ್ಟಿಗೆ ನೋಡಿ ಫ್ಯಾನ್ಸ್ ಖುಷಿಪಡುತ್ತಾರೆ ಎಂಬ ಬಗ್ಗೆ ನನಗೆ ಖಾತ್ರಿ ಇದೆ’ ಎಂದು ಶಿವರಾಜ್​ಕುಮಾರ್​ ಹೇಳಿದ್ದರು. 

‘ಜೈಲರ್​’ (Jailer)​ ಸಿನಿಮಾ ಸಖತ್​ ಮಾಸ್​ ಆಗಿ ಮೂಡಿಬರಲಿದೆ ಎಂಬುದಕ್ಕೆ ಈ ಪೋಸ್ಟರ್​ ಸುಳಿವು ನೀಡುತ್ತಿದೆ. ರಕ್ತಸಿಕ್ತವಾಗಿರುವ ಮಚ್ಚನ್ನು ನೇತು ಹಾಕಲಾಗಿರುವ ಡೆಡ್ಲಿ ಪೋಸ್ಟರ್​ ಇದಾಗಿದ್ದು ಅಭಿಮಾನಿಗಳ ವಲಯದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಶೀಘ್ರದಲ್ಲೇ ಈ ‘ಜೈಲರ್​’ (Jailer) ಸಿನಿಮಾಗೆ ಶೂಟಿಂಗ್​ ಆರಂಭ ಆಗಲಿದೆ. ನಾಯಕಿಯಾಗಿ ಯಾರು ನಟಿಸಲಿದ್ದಾರೆ? ಬೇರೆ ಕಲಾವಿದರು ಯಾರೆಲ್ಲ ಇರಲಿದ್ದಾರೆ ಎಂಬ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಸಿಗಬೇಕಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :