Anjani Putra kannada movie is re releasing: ಕನ್ನಡದ ಯುವರತ್ನ ಮತ್ತು ಪವರ್ ಸ್ಟಾರ್ ಡಾ. ಪುನೀತ್ ರಾಜ್ ಕುಮಾರ್ (Puneeth Rajkumar) ಅಭಿನಯದ ಬ್ಲಾಕ್ ಬಾಸ್ಟರ್ ಮತ್ತು ಸೂಪರ್ ಹಿಟ್ ಕನ್ನಡ ಸಿನಿಮಾ (Kannada Movie) ಅಂಜನಿ ಪುತ್ರ (Anjani Putra) ಈಗ ಜನರ ಬೇಡಿಕೆಯ ಮೇರೆಗೆ ಮತ್ತೆ ಬರೋಬ್ಬರಿ 6 ವರ್ಷಗಳ ನಂತರ ಮತ್ತೆ ಈ ಸಿನಿಮಾ ಮನೆಗಳಲ್ಲಿ ಅಬ್ಬರಿಸಲು ಸಜ್ಜಾಗಿದೆ. ಈ ಮೂವಿ ಮೊದಲ ಬಾರಿಗೆ 21ನೇ ಡಿಸೆಂಬರ್ 2017 ರಂದು ಅದ್ದೂರಿಯಾಗಿ ದೇಶದ್ಯಾಂತ ಬಿಡುಗಡೆಯಾಯಿತು.
Survey
✅ Thank you for completing the survey!
Puneeth Rajkumar ಅಭಿನಯದ ಅಂಜನಿ ಪುತ್ರ ಮರು ಬಿಡುಗಡೆ!
ತಮಿಳು ಸಿನಿಮಾದ ರಿಮೇಕ್ ಆಗಿ ಬಿಡುಗಡೆಯಾದ ಡಾ. ಪುನೀತ್ ರಾಜ್ ಕುಮಾರ್ (Puneeth Rajkumar) ಅಭಿನಯದ ಬ್ಲಾಕ್ ಬಾಸ್ಟರ್ ಮತ್ತು ಸೂಪರ್ ಹಿಟ್ ಕನ್ನಡ ಸಿನಿಮಾ ಅಂಜನಿ ಪುತ್ರ (Anjani Putra) ಈಗ ಮತ್ತೆ ಅಭಿಮಾನಿಗಳ ಬೇಡಿಕೆಯ ಮೇರೆಗೆ ಮತ್ತೆ ಥಿಯೇಟರ್‌ಗಳಲ್ಲಿ ಅಬ್ಬರಿಸಲು ಸಜ್ಜಾಗಿದೆ. ಇದನ್ನು ಕರ್ನಾಟಕದ ಜನಪ್ರಿಯ ಸಿನಿಮಾ ಮನೆಗಳಲ್ಲಿ ಮತ್ತೆ ಪ್ರದರ್ಶಿಸಲು ಮುಂದಾಗಿದೆ. ಇದರಲ್ಲಿ ಪುನೀತ್ ರಾಜ್ ಕುಮಾರ್, ರಶ್ಮಿಕ ಮಂದಣ್ಣ ಮತ್ತು ರಮ್ಯಾ ಕೃಷ್ಣ ಪ್ರಮುಖ ಪಾತ್ರಗಳಲ್ಲಿ ಕಾಣಬಹುದು.
Puneeth Rajkumar starrer Anjani Putra kannada movie is re releasing
ಈ ಅಂಜನಿ ಪುತ್ರ (Anjani Putra) ಸಿನಿಮಾ ಮುಂದಿನ ತಿಂಗಳಲ್ಲಿ ಮರು ಬಿಡುಗಡೆಗೆ ಸಿದ್ದವಾಗಿದೆ. ಈ ಅಂಜನಿ ಪುತ್ರ (Anjani Putra) ಸಿನಿಮಾವನ್ನು ಇದೆ 10ನೇ ಮೇ 2024 ರಂದು ಮರು ಬಿಡುಗಡೆ ಮಾಡುವುದಾಗಿ ಹೇಳಲಾಗಿದೆ. ನೀವಿನ್ನು ಈ ಕನ್ನಡ ಸಿನಿಮಾವನ್ನು ನೋಡಿಲ್ಲವಾದರೆ ನಿಮಗೆ ಮತ್ತೊಮ್ಮೆ ಸಿನಿಮಾ ಹಾಲ್ನಲ್ಲಿ ನಿಮ್ಮ ಕುಟುಂಭ ಮತ್ತು ಸ್ನೇಹತರ ಸಮೇತ ಅದ್ದೂರಿಯ ಅನುಭವವನ್ನು ಪಡೆಯಲು ಅವಕಾಶ ಬಂದಿದೆ.
ಅಂಜನಿ ಪುತ್ರ (Anjani Putra) ಸಿನಿಮಾವನ್ನು ಉಚಿತವಾಗಿ ಎಲ್ಲಿ ವೀಕ್ಷಿಸಬಹುದು!
ಈ ಕನ್ನಡ ಚನಲಚಿತ್ರವನ್ನು ನೇರವಾಗಿ ನೀವು ನಿಮ್ಮ ಹತ್ತಿರದ ಸಿನಿಮಾ ಥಿಯೇಟರ್‌ಗಳಿಗೆ 10ನೇ ಮೇ 2024 ರಂದು ಹೋಗಿ ನೋಡಲು ನಾವು ನೀಡುವ ಮೊದಲ ಸಲಹೆಯಾಗಿರುತ್ತದೆ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ನೀವು Disney+ Hotstar ಮೂಲಕ ಉಚಿತವಾಗಿ HD ಕ್ವಾಲಿಟಿಯಲ್ಲಿ ವೀಕ್ಷಿಸಬಹುದು. ಅಲ್ಲದೆ ನೀವು ಉತ್ತರ ಭಾರತದವರಾಗಿದ್ದರೆ ಕನ್ನಡ ಸಿನಿಮಾಗಳು ನಿಮಗೆ ಇಷ್ಟವಿದ್ದರೆ ಈ ಅಂಜನಿ ಪುತ್ರ (Anjani Putra) ಕನ್ನಡ ಸಿನಿಮಾವನ್ನು ಹಿಂದಿ ಭಾಷೆಯಲ್ಲಿ ಯೌಟ್ಯೂಬ್ ಅಥವಾ MX Player ಮೂಲಕ ಉಚಿತವಾಗಿ ವೀಕ್ಷಿಸಬಹುದು.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile