POCO M8 Launched in India
ಭಾರತದಲ್ಲಿ ಪೊಕೋ ಸ್ಮಾರ್ಟ್ಫೋನ್ ಬ್ರಾಂಡ್ ಇಂದು ತನ್ನ ಹೊಸ POCO M8 5G ಅಧಿಕೃತವಾಗಿ ಬಿಡುಗಡೆಯಾಗಿದೆ. ಈ ಸ್ಮಾರ್ಟ್ಫೋನ್ ಅದರ ಹಿಂದಿನದಕ್ಕೆ ಹೋಲಿಸಿದರೆ ಕೆಲವು ಗಮನಾರ್ಹವಾದ ನವೀಕರಣಗಳನ್ನು ಹೊಂದಿದೆ. ಆದರೆ ಕೈಗೆಟುಕುವ ಬೆಲೆಯನ್ನು ಉಳಿಸಿಕೊಂಡಿದ್ದು ಈ POCO M8 5G ನಯವಾದ ರೂಪದ ಅಂಶದಲ್ಲಿ ಬರುತ್ತದೆ. ಅಲ್ಲದೆ ಇದರಲ್ಲಿ ದೊಡ್ಡ 5520mAh ಬ್ಯಾಟರಿ ಮತ್ತು ಹೊಸ ಕರ್ವ್ ಡಿಸ್ಪ್ಲೇ, 20MP ಸೇಲ್ಫಿ ಕ್ಯಾಮೆರಾದೊಂದಿಗೆ ಪ್ಯಾಕ್ ಮಾಡಲಾಗಿದೆ. ಭಾರತದಲ್ಲಿ ಈ POCO M8 5G ಸ್ಮಾರ್ಟ್ಫೋನ್ 13ನೇ ಜನವರಿ 2026 ರಂದು ಮೊದಲ ಮಾರಾಟಕ್ಕೆ ಲಭ್ಯವಾಗಲಿದೆ.
Also Read: Amazon’s Republic Day Sale ಶುರುವಾಗಲಿದ್ದು ಉಚಿತ ಪ್ರೈಮ್ ಡೀಲ್ ಪಡೆಯಲು Jio ಅತ್ಯುತ್ತಮ ಯೋಜನೆ ಇಲ್ಲಿದೆ!
Poco M8 5G ಸ್ಮಾರ್ಟ್ಫೋನ್ ಬೆಲೆಯನ್ನು ನೋಡುವುದಾದರೆ ಇದರ ಮೂಲ 6GB RAM ಮತ್ತು 128GB ಮಾದರಿಯನ್ನು ಆರಂಭಿಕ 18,999 ರೂಗಳಿಗೆ ಮತ್ತೊಂದು 8GB RAM ಮತ್ತು 128GB ಮಾದರಿಯನ್ನು ಆರಂಭಿಕ 19,999 ರೂಗಳಿಗೆ ಮತ್ತೊಂದು 8GB RAM ಮತ್ತು 256GB ಮಾದರಿಯನ್ನು ಆರಂಭಿಕ 21,999 ರೂಗಳಿಗೆ ಪರಿಚಯಿಸಲಾಗಿದೆ. ಆದರೆ ಆಸಕ್ತ ಬಳಕೆದಾರರಿಗೆ 2000 ರೂಗಳ ಬ್ಯಾಂಕ್ ಡಿಸ್ಕೌಂಟ್ ಜೊತೆಗೆ ಹೆಚ್ಚುವರಿಯಾಗಿ 1000 ರೂಗಳ ಡಿಸ್ಕೌಂಟ್ ಪಡೆಯುವುದರೊಂದಿಗೆ ಆರಂಭಿಕ 15,999 ರೂಗಳಿಗೆ ಮೊದಲ ಮಾರಾಟವನ್ನು 13ನೇ ಜನವರಿ 2026 ರಂದು ಹಮ್ಮಿಕೊಳ್ಳಲಾಗಿದೆ. ಈ ಡೀಲ್ ಬೆಲೆ ಮೊದಲ ದಿನದ ಮಾರಾಟದಲ್ಲಿ ಮೊದಲ 12 ಗಂಟೆಗಳಿಗೆ ಮಾತ್ರ ಲಭ್ಯವಿರುತ್ತದೆ ಎನ್ನವುದನ್ನು ಗಮನಟ್ಟುಕೊಳ್ಳಬೇಕು.
POCO M8 5G ಫೋನ್ ತನ್ನ ವಿಭಾಗದಲ್ಲಿಯೇ ಅತ್ಯಂತ ಸುಂದರವಾದ 6.77 ಇಂಚಿನ 3D ಕರ್ವ್ಡ್ AMOLED ಡಿಸ್ಪ್ಲೇಯನ್ನು ಹೊಂದಿದೆ. ಈ ಪರದೆಯು 120Hz ರಿಫ್ರೆಶ್ ರೇಟ್ ಮತ್ತು ಬರೋಬ್ಬರಿ 3,200 ನಿಟ್ಸ್ ಪೀಕ್ ಬ್ರೈಟ್‌ನೆಸ್ ಅನ್ನು ಬೆಂಬಲಿಸುತ್ತದೆ. ಇದು ನೇರ ಸೂರ್ಯನ ಬೆಳಕಿನಲ್ಲೂ ಫೋನ್ ಪರದೆ ತುಂಬಾ ಸ್ಪಷ್ಟವಾಗಿ ಕಾಣುತ್ತದೆ. ಇನ್ನು ಕ್ಯಾಮೆರಾ ವಿಚಾರಕ್ಕೆ ಬಂದರೆ ಇದರ ಹಿಂಭಾಗದಲ್ಲಿ 50MP ಪ್ರೈಮರಿ ಕ್ಯಾಮೆರಾ ಮತ್ತು 2MP ಡೆಪ್ಟ್ ಸೆನ್ಸರ್ ನೀಡಲಾಗಿದೆ. ಇದು 4K ವಿಡಿಯೋ ರೆಕಾರ್ಡಿಂಗ್ ಮತ್ತು AI ಮ್ಯಾಜಿಕ್ ಎರೇಸರ್‌ನಂತಹ ಸುಧಾರಿತ ಫೀಚರ್‌ಗಳನ್ನು ಹೊಂದಿದೆ. ಸೆಲ್ಫಿಗಾಗಿ ಮುಂಭಾಗದಲ್ಲಿ 20MP ಕ್ಯಾಮೆರಾ ನೀಡಿದ್ದರೆ ಇದು ಸ್ಪಷ್ಟವಾದ ಫೋಟೋಗಳನ್ನು ಕ್ಲಿಕ್ ಮಾಡಲು ಸಹಾಯ ಮಾಡುತ್ತದೆ.
ಈ ಫೋನ್ ಅತ್ಯಂತ ಪವರ್ಫುಲ್ Qualcomm Snapdragon 6 Gen 3 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ ಇದು ಮಲ್ಟಿ-ಟಾಸ್ಕಿಂಗ್ ಮತ್ತು ಗೇಮಿಂಗ್‌ಗೆ ಅತ್ಯುತ್ತಮ ವೇಗವನ್ನು ನೀಡುತ್ತದೆ ನೀಡುತ್ತಿದೆ. ಇದರಲ್ಲಿ 8GB ವರೆಗೆ RAM ಮತ್ತು 256GB ವರೆಗೆ ಸ್ಟೋರೇಜ್ ಆಯ್ಕೆಗಳಿವೆ. ಬ್ಯಾಟರಿ ವಿಷಯದಲ್ಲಿ ಇದು 5,520mAh ದೊಡ್ಡ ಬ್ಯಾಟರಿಯನ್ನು ಹೊಂದಿದ್ದು 45W ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ.ಸುರಕ್ಷತೆಗಾಗಿ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಸಹಾಯಧನ. ಇಷ್ಟೇ ಅಲ್ಲದೆ ಆಕ್ಸಿಲೆರೋಮೀಟರ್, ಗೈರೋಸ್ಕೋಪ್, ಕಂಪಾಸ್ ಮತ್ತು ಪ್ರಾಕ್ಸಿಮಿಟಿ ಸೆನ್ಸರ್‌ಗಳಂತಹ ಎಲ್ಲಾ ಅಗತ್ಯ ಸೆನ್ಸರ್‌ಗಳನ್ನು ಒಳಗೊಂಡಿರುತ್ತದೆ. ಈ IP66 ರೇಟಿಂಗ್ ಹೊಂದಿದ್ದು ಧೂಳು ಮತ್ತು ಫೋನ್‌ನಿಂದ ರಕ್ಷಣೆ ನೀಡಲಾಗುತ್ತದೆ.