Digit.in

iPhone ಬಳಕೆದಾರರಿಗೆ ಟೆಲಿಗ್ರಾಮ್ ಸಂಸ್ಥಾಪಕ ಪಾವೆಲ್ ಡುರೊವ್ ಎಚ್ಚರಿಕೆ!

iPhone ಬಳಕೆದಾರರಿಗೆ ಟೆಲಿಗ್ರಾಮ್ ಸಂಸ್ಥಾಪಕ ಪಾವೆಲ್ ಡುರೊವ್ ಎಚ್ಚರಿಕೆ!

iPhone ಬಳಕೆದಾರರಿಗೆ ಟೆಲಿಗ್ರಾಮ್ ಸಂಸ್ಥಾಪಕ ಪಾವೆಲ್ ಡುರೊವ್ ಭದ್ರತಾ ಎಚ್ಚರಿಕೆ ನೀಡಿದ್ದಾರೆ. ಆಪಲ್‌ನ iOS ಹಳೆಯ ಆವೃತ್ತಿಯನ್ನು ಬಳಸುತ್ತಿರುವ ಐಫೋನ್‌ಗಳನ್ನು ಹ್ಯಾಕರ್‌ಗಳು ಗುರಿಯಾಗಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಅಪಾಯಕಾರಿ ವೆಬ್‌ಸೈಟ್‌ಗೆಇದೆ ಎಂದು ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಹಳೆಯ iOS ಆವೃತ್ತಿಗಳನ್ನು ಬಳಸುತ್ತಿರುವ ಕೆಲವು ಬಳಕೆದಾರರಿಗೆ ಟೆಲಿಗ್ರಾಮ್ ತನ್ನ ಆಪ್‌ ಮೂಲಕ ಭದ್ರತಾ ಎಚ್ಚರಿಕೆಗಳನ್ನು ಕಳುಹಿಸಲು ಆರಂಭಿಸಿದೆ. ಐಫೋನ್‌ನ ಸಾಫ್ಟ್‌ವೇರ್ ಅನ್ನು ಲಭ್ಯವಿರುವ ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್ ಮಾಡಿಕೊಳ್ಳುವಂತೆ ಸೂಚಿಸುತ್ತಿದೆ.

ಹಳೆಯ iOS ಆವೃತ್ತಿ ಬಳಸುವ ಐಫೋನ್‌ಗಳಿಗೆ ಅಪಾಯ?

ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪಾವೆಲ್ ಡುರೊವ್, ಐಫೋನ್ ಬಳಕೆದಾರರು ದೊಡ್ಡ ಪ್ರಮಾಣದಲ್ಲಿ ಸೈಬರ್ ದಾಳಿಗೆ ತುತ್ತಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ಐಒಎಸ್‌ನ ಹಳೆಯ ಆವೃತ್ತಿಯನ್ನು ಬಳಸುತ್ತಿದ್ದರೆ, ಫೋನ್‌ನಲ್ಲಿರುವ ವೈಯಕ್ತಿಕ ಡೇಟಾ ಅಪಾಯಕ್ಕೆ ಸಿಲುಕಬಹುದು. ಕೆಲವು ಸಂದರ್ಭಗಳಲ್ಲಿ ಹಾನಿಕಾರಕ ವೆಬ್‌ಸೈಟ್ ಅನ್ನು ತೆರೆಯುವುದೇ ಸಾಧನವನ್ನು ಹ್ಯಾಕ್ ಮಾಡಲು ಸಾಕಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.

ಡುರೊವ್ ಅವರ ಪ್ರಕಾರ ಹಳೆಯ ಸಾಫ್ಟ್‌ವೇರ್‌ನಲ್ಲಿರುವ ಭದ್ರತಾ ದೋಷಗಳನ್ನು ಬಳಸಿಕೊಂಡು ಸೈಬರ್ ಅಪರಾಧಿಗಳು ಐಫೋನ್‌ಗಳಿಗೆ ಪ್ರವೇಶ ಪಡೆಯಲು ಪ್ರಯತ್ನಿಸಬಹುದು. ಹೀಗಾಗಿ ಬಳಕೆದಾರರು ತಮ್ಮ ಸಾಧನದ ಸಾಫ್ಟ್‌ವೇರ್ ಅಪ್‌ಡೇಟ್ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು.

iPhone ಬಳಕೆದಾರರಿಗೆ ಟೆಲಿಗ್ರಾಮ್‌ನಿಂದ ಎಚ್ಚರಿಕೆ

ಹಳೆಯ ಆಪರೇಟಿಂಗ್ ಸಿಸ್ಟಮ್ ಬಳಸುತ್ತಿರುವ ಬಳಕೆದಾರರಿಗೆ ಟೆಲಿಗ್ರಾಮ್ ತನ್ನ ಆ್ಯಪ್ ಮೂಲಕ ಎಚ್ಚರಿಕೆ ನೀಡುತ್ತಿದೆ. ಐಫೋನ್‌ನಲ್ಲಿ ಲಭ್ಯವಿರುವ ಇತ್ತೀಚಿನ iOS ಆವೃತ್ತಿಯನ್ನು ಇನ್‌ಸ್ಟಾಲ್ ಮಾಡಿಕೊಳ್ಳುವಂತೆ ಸೂಚಿಸುತ್ತಿದೆ. ಸಾಮಾನ್ಯವಾಗಿ ಸಾಫ್ಟ್‌ವೇರ್ ಅಪ್‌ಡೇಟ್‌ಗಳು ಹೊಸ ಫೀಚರ್‌ಗಳನ್ನು ಮಾತ್ರವಲ್ಲದೆ, ಭದ್ರತಾ ದೋಷಗಳನ್ನು ಸರಿಪಡಿಸುವ ಪ್ಯಾಚ್‌ಗಳನ್ನೂ ಒಳಗೊಂಡಿರುತ್ತವೆ. ಹೀಗಾಗಿ ಫೋನ್ ಅನ್ನು ಅಪ್‌ಡೇಟ್ ಮಾಡದೇ ಬಳಸುವುದರಿಂದ ಸೈಬರ್ ದಾಳಿಯ ಅಪಾಯ ಹೆಚ್ಚಾಗಬಹುದು.

ಐಫೋನ್ ಅನ್ನು ಹ್ಯಾಕರ್‌ಗಳಿಂದ ರಕ್ಷಿಸುವುದು ಹೇಗೆ?

- ಐಫೋನ್‌ನಲ್ಲಿ Settings ತೆರೆಯಿರಿ.

- General ಆಯ್ಕೆಯನ್ನು ಆರಿಸಿ.

- ನಂತರ Software Update ಮೇಲೆ ಟ್ಯಾಪ್ ಮಾಡಿ.

- ಹೊಸ ಅಪ್‌ಡೇಟ್ ಲಭ್ಯವಿದ್ದರೆ ಅದನ್ನು ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿ.

- ಇದೇ ವಿಭಾಗದಲ್ಲಿ Automatic Updates ಆಯ್ಕೆಯನ್ನು ಸಕ್ರಿಯಗೊಳಿಸಿ.

Manthesh B

Manthesh B

Manthesh B ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

View full profile