Digit.in

ಡಿಸೆಂಬರ್ 2 ರಂದು ಮಾರುಕಟ್ಟೆಗೆ ಬರಲಿದೆ ಹೊಸ HMD Rise ಮೊಬೈಲ್‌! ನಿರೀಕ್ಷಿತ ಫೀಚರ್ಸ್‌ ನೋಡಿ

Highlights

ಡಿ.2 ರಂದು ಭಾರತದಲ್ಲಿ ಎಚ್‌ಎಮ್‌ಡಿ ರೈಸ್ ಫೋನ್‌ ಲಾಂಚ್

ಎಚ್‌ಎಮ್‌ಡಿ ರೈಸ್ ಮೊಬೈಲ್‌ 5MP ಸೆಲ್ಫಿ ಕ್ಯಾಮೆರಾ ಹೊಂದಿರಲಿದೆ

ಎಚ್‌ಎಮ್‌ಡಿ ರೈಸ್ ಫೋನ್‌ Unisoc 9863A Octa-core ಪ್ರೊಸೆಸರ್‌ ಪಡೆದಿರಲಿದೆ

ಡಿಸೆಂಬರ್ 2 ರಂದು ಮಾರುಕಟ್ಟೆಗೆ ಬರಲಿದೆ ಹೊಸ HMD Rise ಮೊಬೈಲ್‌! ನಿರೀಕ್ಷಿತ ಫೀಚರ್ಸ್‌ ನೋಡಿ

HMD ಮೊಬೈಲ್‌ ಕಂಪನಿಯು ಹೊಸದಾಗಿ HMD Rise ಸ್ಮಾರ್ಟ್‌ಫೋನ್‌ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗುತ್ತಿದೆ. ಎಚ್‌ಎಮ್‌ಡಿ ಸಂಸ್ಥೆಯು ತನ್ನ ಈ ನೂತನ ಮೊಬೈಲ್‌ ಸರಣಿಯನ್ನು ಡಿಸೆಂಬರ್ 2 ರಂದು ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಈ ಮೊಬೈಲ್‌ ಲಾಂಚ್‌ ಕುರಿತಾಗಿ ಈಗಾಗಲೇ ಫ್ಲಿಪ್‌ಕಾರ್ಟ್‌ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಮೈಕ್ರೋಸೈಟ್ ಲೈವ್ ಮಾಡಲಾಗಿದೆ. ಇನ್ನು ಈ ಮೊಬೈಲ್‌ Unisoc 9863A Octa-core ಚಿಪ್‌ಸೆಟ್‌ ಜೊತೆಗೆ 5000mAh ಬ್ಯಾಟರಿ ಸೌಲಭ್ಯ ಪಡೆದಿದೆ. ಹಾಗೆಯೇ ಈ ಫೋನ್‌ 64GB ಮತ್ತು 128GB ಸ್ಟೋರೇಜ್‌ ಆಯ್ಕೆ ಪಡೆದಿರುವ ಸಾಧ್ಯತೆಗಳು ಇವೆ. ಹಾಗಾದರೆ ಈ ಮೊಬೈಲ್‌ನ ಮಾರಾಟದ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

ಡಿ.2 ರಂದು ಮಾರುಕಟ್ಟೆಗೆ ಬರಲಿದೆ HMD Rise

ದೇಶೀಯ ಮಾರುಕಟ್ಟೆಗೆ ಹೊಸದಾಗಿ ಎಂಟ್ರಿ ಕೊಡಲಿರುವ ಎಚ್‌ಎಮ್‌ಡಿ ರೈಸ್ ಸ್ಮಾರ್ಟ್‌ಫೋನ್ ನಿರೀಕ್ಷಿತ ಫೀಚರ್ಸ್‌ ಗ್ರಾಹಕರ ಕುತೂಹಲ ಹೆಚ್ಚಿಸಿವೆ. ಈ ಮೊಬೈಲ್‌ ಇದೇ ಡಿಸೆಂಬರ್ 2 ರಂದು ಮಧ್ಯಾಹ್ನ 12 ಗಂಟೆಗೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಇನ್ನು ಬಿಡುಗಡೆ ಕುರಿತು ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ಮೈಕ್ರೋಪೇಜ್‌ ಸಹ ತೆರೆದಿದೆ. ಈ ಫೋನ್‌ ಇಂಡಿಗೋ ಸಿಲ್ವರ್, ಮಿಡ್‌ನೈಟ್ ಗೋಲ್ಡ್, ಎಮರಾಲ್ಡ್ ಗೋಲ್ಡ್ ಬಣ್ಣಗಳ ಆಯ್ಕೆಯನ್ನು ಒಳಗೊಂಡಿರಲಿದೆ.

ಎಚ್‌ಎಮ್‌ಡಿ ರೈಸ್ ನಿರೀಕ್ಷಿತ ಫೀಚರ್ಸ್‌

ಎಚ್‌ಎಮ್‌ಡಿ ರೈಸ್ ಮಾದರಿಯು 6.5 ಇಂಚಿನ ಡಿಸ್‌ಪ್ಲೇ ಹೊಂದಿರಲಿದೆ. ಇದು ಉತ್ತಮ ರಿಫ್ರೆಶ್ ರೇಟ್ ಬೆಂಬಲಿಸಲಿದೆ. ಕಾರ್ಯಕ್ಷಮತೆಗಾಗಿ ಯುನಿಸಾಕ್ (Unisoc) 9863A ಆಕ್ಟಾ-ಕೋರ್ ಚಿಪ್‌ಸೆಟ್ ನೀಡಲಾಗಿದೆ ಎಂದು ವರದಿಯಾಗಿದೆ. ಅಲ್ಲದೇ ಆಂಡ್ರಾಯ್ಡ್ 16 ಗೋ ಎಡಿಷನ್ (Android 16 Go Edition) ಸಪೋರ್ಟ್‌ ಪಡೆದಿರಲಿದೆ. ಹಾಗೆಯೇ ಇದು 4GB + 64GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯಲ್ಲಿ ಲಗ್ಗೆ ಇಡಬಹುದು.

ಎಚ್‌ಎಮ್‌ಡಿ ರೈಸ್ ಮೊಬೈಲ್‌ ಡ್ಯುಯಲ್‌ ಕ್ಯಾಮೆರಾ ರಚನೆ ಪಡೆದಿರಲಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 13MP ಸೆನ್ಸಾರ್‌ ಸೌಲಭ್ಯ ಹೊಂದಿರಲಿದೆ. ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಮುಂಭಾಗದಲ್ಲಿ 5MP ಕ್ಯಾಮೆರಾ ವ್ಯವಸ್ಥೆ ಪಡೆದಿರಲಿದೆ. ಅಲ್ಲದೇ ಈ ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿರುವುದು ಬಹುತೇಕ ಪಕ್ಕಾ ಎನ್ನಲಾಗಿದೆ.

Manthesh B

Manthesh B

Manthesh B ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

View full profile