ಹೊಸ Driving License ಬೇಕಾ? ಮೊದಲು ಮನೆಯಿಂದಲೇ ಲರ್ನಿಂಗ್ ಲೈಸೆನ್ಸ್ ಪಡೆಯುವುದು ಹೇಗೆ ತಿಳಿಯಿರಿ!

Updated on 13-Oct-2025
HIGHLIGHTS

ನಿಮಗೊಂದು ಹೊಸ ಡ್ರೈವಿಂಗ್ ಲೈಸೆನ್ಸ್ (Driving License) ಬೇಕಿದೆಯೇ?

ಆನ್ಲೈನ್ ಮೂಲಕ ಮನೆಯಿಂದಲೇ ಲರ್ನಿಂಗ್ ಲೈಸೆನ್ಸ್ ಪಡೆಯುವುದು ಹೇಗೆ ತಿಳಿಯಿರಿ.

ಲರ್ನಿಂಗ್ ಲೈಸೆನ್ಸ್ (Learning License) ಪಡೆದ ನಂತರವಷ್ಟೇ ಶಾಶ್ವತ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಸಾಧ್ಯ.

ಭಾರತದಲ್ಲಿ ನಿಮಗೊಂದು ಯಾವುದೇ ವಾಹನವನ್ನು ಕಾರ್ ಅಥವಾ ಬೈಕ್ ಇತ್ಯಾದಿಗಳನ್ನು ರಸ್ತೆಯಲ್ಲಿ ಚಲಾಯಿಸಲು ಮುಖ್ಯವಾಗಿ ಕಾನೂನುಬದ್ಧವಾಗಿ ಸಾರ್ವಜನಿಕ ರಸ್ತೆಗಳಲ್ಲಿ ಓಡಿಸಲು ನಿಮಗೆ ಮೊದಲು ಚಾಲನಾ ಪರವಾನಿಗೆ ಇರಬೇಕು. ಇದನ್ನು ಪಡೆಯಲು ಎರಡು ಮುಖ್ಯ ಹಂತಗಳಿವೆ ಅವೆಂದರೆ ಮೊದಲಿಗೆ ಲರ್ನಿಂಗ್ ಲೈಸೆನ್ಸ್ (Learning License) ಇದರ ನಂತರ ಖಾಯಂ ಅಥವಾ ಶಾಶ್ವತ ಡ್ರೈವಿಂಗ್ ಲೈಸೆನ್ಸ್ (Driving License) ಪಡೆಯಬಹುದು. ಈ ಪ್ರಕ್ರಿಯೆಯು ಸಾಮಾನ್ಯವಾಗಿ ರಾಜ್ಯದ ಸಾರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ ಸಾರಥಿ ಪೋರ್ಟಲ್ ಮೂಲಕ ನಡೆಯುತ್ತಿದೆ. ಹಾಗಾದರೆ ಮೊದಲು ಮನೆಯಿಂದಲೇ ಲರ್ನಿಂಗ್ ಲೈಸೆನ್ಸ್ ಪಡೆಯುವುದು ಹೇಗೆ ತಿಳಿಯಿರಿ.

Also Read: ಫ್ಲಿಪ್ಕಾರ್ಟ್ Big Bang Diwali ಸೇಲ್‌ನಲ್ಲಿ ಕೈಗೆಟಕುವ ಬೆಲೆಗೆ ಪ್ರೀಮಿಯಂ ಸ್ಮಾರ್ಟ್ಫೋನ್ಗಳು ಲಭ್ಯ!

ಲರ್ನಿಂಗ್ ಲೈಸೆನ್ಸ್ ಪಡೆಯಲು ಅಗತ್ಯವಿರುವ ದಾಖಲೆಗಳೇನು?

ವಯಸ್ಸಿನ ಪುರಾವೆಯಾದಿಯಲ್ಲಿ ಜನನ ಪ್ರಮಾಣಪತ್ರ, ಪಾಸ್‌ಪೋರ್ಟ್, ಶಾಲೆ ಬಿಡುವ ಪ್ರಮಾಣಪತ್ರ, ಪ್ಯಾನ್ ಕಾರ್ಡ್ ಅಥವಾ 10ನೇ ತರಗತಿಯ ಅಂಕಪಟ್ಟಿ ಬೇಕಾಗುತ್ತದೆ. ಕ್ರಮವಾಗಿ ವಿಳಾಸ ಪುರಾವೆಯಡಿಯಲ್ಲಿ ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿ, ಯುಟಿಲಿಟಿ ಬಿಲ್ (ವಿದ್ಯುತ್/ದೂರವಾಣಿ), ಅಥವಾ ಬಾಡಿಗೆ ಅಗ್ರಿಮೆಂಟ್ ಬೇಕಾಗುತ್ತದೆ ಮತ್ತು ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋಗಳು ಬೇಕುತ್ತದೆ ಕೊನೆಯದಾಗಿ ಇದಕ್ಕೆ ತಗುಲುವ ಶುಲ್ಕ.

ಆನ್ಲೈನ್ ಮೂಲಕ ಲರ್ನಿಂಗ್ ಲೈಸೆನ್ಸ್ ಪಡೆಯುವುದು ಹೇಗೆ?

  • ಮೊದಲಿಗೆ https://parivahan.gov.in ವೆಬ್ಸೈಟ್ ಗೆ ಭೇಟಿ ನೀಡಿ “Online Services” ಆಯ್ಕೆ ಮಾಡಿ. ಅದರಲ್ಲಿ “Driving License Related Services” ಅನ್ನು ಆಯ್ಕೆ ಮಾಡಿ.
  • ನಂತರ ಮುಂದಿನ ಪುಟದಲ್ಲಿ “Karnataka” ರಾಜ್ಯವನ್ನು ಆಯ್ಕೆ ಮಾಡಿ.
  • ನಂತರ “Apply Online” ಅನ್ನು ಆಯ್ಕೆ ಮಾಡಿ ಅದರಲ್ಲಿ ”online Learner’s Licence” ಆಯ್ಕೆ ಮಾಡಿ.
  • ಇದರ ನಂತರ LL ಅರ್ಜಿಯ ವಿವರಗಳನ್ನು ಭರ್ತಿ ಮಾಡಿ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿ
  • ಈಗ ನೀವು ನಿಮ್ಮ LL ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
  • ಫೋಟೋ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ (ಆಧಾರ್ ಮೂಲಕ eKYC ಸಂದರ್ಭದಲ್ಲಿ ಸಹಿಯನ್ನು ಮಾತ್ರ ಅಪ್‌ಲೋಡ್ ಮಾಡಬೇಕಾಗುತ್ತದೆ)
  • ಕೊನೆಯದಾಗಿ 200 ರೂಗಳು ಅಪ್ಲಿಕೇಷನ್ ಮತ್ತು 50 ರೂ. ಟೆಸ್ಟ್ ನೀಡಲು ಶುಲ್ಕ ಪಾವತಿಸಬೇಕಾಗುತ್ತದೆ. ಪಾವತಿ ಸ್ಥಿತಿಯನ್ನು ಪರಿಶೀಲಿಸಿ ರಶೀದಿ ಅನ್ನು ಮುದ್ರಿಸಿಕೊಳ್ಳಿ ಮುಂದೆ ಬೇಕಾಗುತ್ತದೆ.
  • ಇದರ ನಂತರ ಮನೆಯಿಂದಲೇ ‘ಆನ್‌ಲೈನ್ LL ಪರೀಕ್ಷೆ (STALL)’ ತೆಗೆದುಕೊಳ್ಳಲು ನಿರ್ದೇಶಿಸಲಾಗುವುದು
  • ಪ್ರೊಕ್ಟರ್ಡ್ ಪರೀಕ್ಷೆಯನ್ನು ತೆಗೆದುಕೊಳ್ಳಲು ನಿಗದಿತ ಸಮಯದಲ್ಲಿ ಲಾಗಿನ್ ಮಾಡಿ. ಪರೀಕ್ಷೆಯು ಸಾಮಾನ್ಯವಾಗಿ ಸಂಚಾರ ನಿಯಮಗಳು ಮತ್ತು ರಸ್ತೆ ಚಿಹ್ನೆಗಳ ಕುರಿತು 10-20 ಬಹು ಆಯ್ಕೆಯ ಪ್ರಶ್ನೆಗಳನ್ನು ಹೊಂದಿರುತ್ತದೆ.
  • ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಕಲಿಕಾ ಪರವಾನಗಿಯನ್ನು ಸಾಮಾನ್ಯವಾಗಿ ತಕ್ಷಣವೇ ನಿಮಗೆ ನೀಡಲಾಗುತ್ತದೆ.

ಲರ್ನಿಂಗ್ ಲೈಸೆನ್ಸ್ ಪಡೆಯುವಾಗ ಗಮನಿಸಬೇಕಾದ ಮುಖ್ಯಾಂಶಳು:

ಕಲಿಕಾ ಪರವಾನಗಿ (LL) ನೀಡಿದ ದಿನಾಂಕದಿಂದ 6 ತಿಂಗಳವರೆಗೆ ಮಾನ್ಯವಾಗಿರುತ್ತದೆ. ಚಾಲನಾ ಅಭ್ಯಾಸ: ನೀವು ಮುಂಭಾಗ ಮತ್ತು ಹಿಂಭಾಗದಲ್ಲಿ ‘L’ ಚಿಹ್ನೆಯನ್ನು ಹೊಂದಿರುವ ನಿರ್ದಿಷ್ಟ ವಾಹನ ವರ್ಗವನ್ನು ಮಾತ್ರ ಓಡಿಸಬಹುದು ಮತ್ತು ಮಾನ್ಯವಾದ ಶಾಶ್ವತ ಚಾಲನಾ ಪರವಾನಗಿಯನ್ನು ಹೊಂದಿರುವ ವ್ಯಕ್ತಿಯೊಂದಿಗೆ ನಿಮ್ಮೊಂದಿಗೆ ಇರಬೇಕು. ನೀವು LL ಪಡೆದ 30 ದಿನಗಳ ನಂತರ ಮತ್ತು LL ಅವಧಿ ಮುಗಿಯುವ ಮೊದಲು (6 ತಿಂಗಳೊಳಗೆ) ಮಾತ್ರ ಶಾಶ್ವತ ಚಾಲನಾ ಪರವಾನಗಿ (DL) ಅರ್ಜಿ ಸಲ್ಲಿಸಬಹುದು.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :