Jio Independence Day Offer: ಈಗ Jio 4G WiFi Hotspot ಖರೀದಿದಾರರಿಗೆ 5 ತಿಂಗಳವರೆಗೆ ಉಚಿತ ಡೇಟಾ ಮತ್ತು ಕರೆಗಳು

Updated on 14-Aug-2020
HIGHLIGHTS

ಈ ಭಾರಿಯ ಸ್ವಾತಂತ್ರ್ಯ ದಿನಾಚರಣೆಯ ಭಾಗವಾಗಿ Jio Independence Day Offer ವೈರ್‌ಲೆಸ್ ಹಾಟ್‌ಸ್ಪಾಟ್ ನೀಡುತ್ತಿದೆ.

ಜಿಯೋಫೈ 4G ವೈರ್‌ಲೆಸ್ ಹಾಟ್‌ಸ್ಪಾಟ್ ಖರೀದಿಯೊಂದಿಗೆ Jio Recharge Plan ಅಲ್ಲಿ 5 ತಿಂಗಳ ಉಚಿತ ಡೇಟಾ ಮತ್ತು ಕರೆಗಳನ್ನು ನೀಡುತ್ತಿದೆ.

ಜಿಯೋ ಇದಕ್ಕಾಗಿಯೇ ಹೊಸದಾಗಿ JioFi Data Plan ಅನ್ನು 199, 249 ಮತ್ತು 349 ರೂಗಳ ಪ್ಲಾನ್ ಬಿಡುಗಡೆಗೊಳಿಸಿದೆ.

ಭಾರತೀಯ ಜಿಯೋ ಕಂಪನಿಯ ಸ್ವಾತಂತ್ರ್ಯ ದಿನಾಚರಣೆಯ ಭಾಗವಾಗಿ ರಿಲಯನ್ಸ್ ಜಿಯೋ ತನ್ನ ಜಿಯೋಫೈ 4G ವೈರ್‌ಲೆಸ್ ಹಾಟ್‌ಸ್ಪಾಟ್ ಖರೀದಿಯೊಂದಿಗೆ ಐದು ತಿಂಗಳ ಉಚಿತ ಡೇಟಾ ಮತ್ತು ಜಿಯೋ-ಟು-ಜಿಯೋ ಕರೆಗಳನ್ನು ನೀಡುತ್ತಿದೆ. ಜಿಯೋಫೈ ಬೆಲೆ 1,999 ರೂಗಳಾಗಿವೆ . ಈ ಕೊಡುಗೆಯನ್ನು ಪಡೆಯಲು ಗ್ರಾಹಕರು ಮೊದಲು ಜಿಯೋಫೈಗಾಗಿ ಅಸ್ತಿತ್ವದಲ್ಲಿರುವ ಯೋಜನೆಗಳಲ್ಲಿ ಒಂದನ್ನು ಖರೀದಿಸಬೇಕಾಗುತ್ತದೆ.

ಜಿಯೋಫೈ ಹಾಟ್‌ಸ್ಪಾಟ್ ಅನ್ನು ರಿಲಯನ್ಸ್ ಡಿಜಿಟಲ್ ಸ್ಟೋರಿಂದ ಖರೀದಿಸಿ ನಂತರ ಜಿಯೋ ಸಿಮ್ ಅನ್ನು ಸಕ್ರಿಯಗೊಳಿಸಿದ ನಂತರ ಗ್ರಾಹಕರು ಸಾಧನದಲ್ಲಿ ಸಕ್ರಿಯಗೊಳ್ಳಲು ಲಭ್ಯವಿರುವ ಮೂರು ಹೊಸ ಜಿಯೋಫೈ ಯೋಜನೆಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಬಹುದು. ಜಿಯೋಫೈ ಸಾಧನದಲ್ಲಿ ಸಕ್ರಿಯ ಸಿಮ್ ಅನ್ನು ಸೇರಿಸಿದ ನಂತರ ಆಯ್ಕೆ ಮಾಡಿದ ಯೋಜನೆ ಮುಂದಿನ ಕೆಲವೇ ಗಂಟೆಯಲ್ಲಿ ಪ್ರಾರಂಭವಾಗುತ್ತದೆ. ಯೋಜನೆಯ ಸಕ್ರಿಯಗೊಳಿಸುವ ಸ್ಥಿತಿಯನ್ನು ಮೈಜಿಯೊ ಆ್ಯಪ್ ಮೂಲಕ ಪರಿಶೀಲಿಸಬಹುದು. ಜಿಯೋಫೈ ಸಾಧನವನ್ನು ಕಂಪನಿಯ ಸೈಟ್ ಮೂಲಕ ಆನ್‌ಲೈನ್ ಮೂಲಕವೂ ಖರೀದಿಸಬಹುದು.

ಈ ವರ್ಷದ ಅತ್ಯಂತ ಒಳ್ಳೆ ಕೊಡುಗೆ ಇದಾಗಿದ್ದು 199 ರೂಗಳ ಈ ಪ್ಲಾನ್ ಇದು ಪ್ರತಿದಿನ 1.5GB ಡೇಟಾವನ್ನು ನೀಡುತ್ತದೆ. ಮತ್ತು ಇದು 28 ದಿನಗಳವರೆಗೆ ಮಾನ್ಯವಾಗಿರುತ್ತದೆ. ನೀವು ಹೆಚ್ಚುವರಿ ಜಿಯೋ ಪ್ರೈಮ್ ಸದಸ್ಯತ್ವವನ್ನು 99 ನೀಡಿ ಸೇರಬವುದಾಗಿದೆ. ಇದರಲ್ಲಿ ಪ್ರತಿದಿನ 1.5GB  ಅನಿಯಮಿತ ಜಿಯೋ ಟು ಜಿಯೋ ಕರೆಗಳು ಮತ್ತು 28 ದಿನಗಳಿಗೆ 1000 ಜಿಯೋ ಇತರ ಮೊಬೈಲ್ ನೆಟ್‌ವರ್ಕ್ ನಿಮಿಷಗಳು ಮತ್ತು 140 ದಿನಗಳವರೆಗೆ ದಿನಕ್ಕೆ 100 ರಾಷ್ಟ್ರೀಯ ಎಸ್‌ಎಂಎಸ್ ಸಹ ಲಭ್ಯವಿದೆ.

ಎರಡನೇ ಕೊಡುಗೆಯಾಗಿ 249 ರೂಗಳ ಪ್ಲಾನ್ ಇದು ಪ್ರತಿದಿನ 2GB ಡೇಟಾವನ್ನು 28 ದಿನಗಳವರೆಗೆ ಒದಗಿಸುತ್ತದೆ. ಇಲ್ಲಿಯೂ ನೀವು ಹೆಚ್ಚುವರಿ ಜಿಯೋ ಪ್ರೈಮ್ ಸದಸ್ಯತ್ವವನ್ನು 99 ನೀಡಿ ಸೇರಬವುದಾಗಿದೆ. ಮತ್ತು ದಿನಕ್ಕೆ 2GB ಅನಿಯಮಿತ ಜಿಯೋ ಟು ಜಿಯೋ ಕರೆಗಳು, 1000 ಜಿಯೋ ಇತರ ಮೊಬೈಲ್ ನೆಟ್‌ವರ್ಕ್ ನಿಮಿಷಗಳಿಗೆ 28 ದಿನಗಳವರೆಗೆ ಮತ್ತು ದಿನಕ್ಕೆ 100 ರಾಷ್ಟ್ರೀಯ ಎಸ್‌ಎಂಎಸ್ 112 ದಿನಗಳವರೆಗೆ ಪಡೆಯಬವುದು.

ಮೂರನೇ ಆಫರ್ ಆಗಿ 349 ರೂಗಳ ಪ್ಲಾನ್ ಇದು 28 ದಿನಗಳವರೆಗೆ ಪ್ರತಿದಿನ 3GB ನೀಡುತ್ತದೆ. ಇಲ್ಲಿಯೂ ನೀವು ಹೆಚ್ಚುವರಿ ಜಿಯೋ ಪ್ರೈಮ್ ಸದಸ್ಯತ್ವವನ್ನು 99 ನೀಡಿ ಸೇರಬವುದಾಗಿದೆ. ಮತ್ತು ದಿನಕ್ಕೆ 3 GB ಡೇಟಾ, ಅನಿಯಮಿತ ಜಿಯೋ ಟು ಜಿಯೋ ಕರೆಗಳು, 1,000 ನಿಮಿಷಗಳ ಜಿಯೋ ಇತರ ಮೊಬೈಲ್ ನೆಟ್‌ವರ್ಕ್ ಕರೆಗಳಿಗೆ 28 ದಿನಗಳವರೆಗೆ ಮತ್ತು 84 ದಿನಗಳವರೆಗೆ ದಿನಕ್ಕೆ 100 ರಾಷ್ಟ್ರೀಯ ಎಸ್‌ಎಂಎಸ್ ಪಡೆಯುತ್ತೀರಿ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :