ಜಗತ್ತಿನಾದ್ಯಂತ ಜನಪ್ರಿಯವಾಗಿರುವ ಸಾಮಾಜಿಕ ಜಾಲತಾಣ Instagram ಅಪ್ಲಿಕೇಶನ್ ಡೌನ್ ಆಗಿರುವ ಕುರಿತು ವರದಿಗಳಾಗಿವೆ. ಅನೇಕ ಬಳಕೆದಾರರು ಇನ್‌ಸ್ಟಾಗ್ರಾಮ್ ವ್ಯತ್ಯಯ ಆಗಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೇ ದೂರು ಹಂಚಿಕೊಳ್ಳುತ್ತಿದ್ದಾರೆ. ಹಾಗೆಯೇ ಫೇಸ್‌ಬುಕ್ ಸಹ ಡೌನ್ ಆಗಿರುವ ಬಗ್ಗೆ ದೂರುಗಳು ಇವೆ. ಇನ್ನು ರಿಯಲ್ ಟೈಮ್ ಔಟೇಜ್ ಪತ್ತೆ ವೇದಿಕೆಯಾದ Downdetector.com ಪ್ರಕಾರ, ಯುಎಸ್‌ನಲ್ಲಿಅಧಿಕ ವರದಿಗಳು ವರದಿಯಾಗಿವೆ. ಅಲ್ಲದೇ ಭಾರತದಲ್ಲಿ ಸುಮಾರು 500 ಕ್ಕೂ ಅಧಿಕ ವರದಿಗಳು ದಾಖಲಾಗಿವೆ.
ಮೆಟಾ ಮಾಲೀಕತ್ವದ ಇನ್‌ಸ್ಟಾಗ್ರಾಮ್ ಮತ್ತೆ ಡೌನ್ ಆಗಿರುವ ವರದಿಗಳು ಇವೆ. ಕೆಲ ಬಳಕೆದಾರರಿಗೆ ಹಲವರು ತಮ್ಮ ಖಾತೆಗೆ ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಮತ್ತೆ ಕೆಲವರು ಫೀಡ್ ರಿಫ್ರೆಶ್ ಆಗುತ್ತಿಲ್ಲ, ರೀಲ್ಸ್ ಮತ್ತು ಸ್ಟೋರಿಗಳು ಲೋಡ್ ಆಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲೇ ದೂರು ಹಂಚಿಕೊಳ್ಳುತ್ತಿದ್ದಾರೆ.