ನಿಮಗೊಂದು ಹೊಸ Voter ID ಕಾರ್ಡ್ ಬೇಕಾ? ಹಾಗಾದ್ರೆ ಮನೆಯಲ್ಲೇ ಕುಳಿತು ಅರ್ಜಿ ಸಲ್ಲಿಸುವುದು ಹೇಗೆ ತಿಳಿಯಿರಿ

Updated on 02-Dec-2025
HIGHLIGHTS

ಮತದಾರರ ಗುರುತಿನ ಚೀಟಿಯನ್ನು (Voter ID Card) ಪಡೆಯಲು ಈ ಸರಳ ಹಂತಗಳನ್ನು ಅನುಸರಿಸಬಹುದು.

ನಿಮ್ಮ ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ ಈ ಸರಳ ಹಂತಗಳನ್ನು ಅನುಸರಿಸುವ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಮುಂಚೆ ನಿಮ್ಮ ಫೋನ್ ನಂಬರ್, ಜನ್ಮ ದಿನಾಂಕ ಮತ್ತು ವಿಳಾಸ ಪುರಾವೆಯ ದಾಖಲೆಗಳು ಅಗತ್ಯ.

ನೀವೊಬ್ಬ ಭಾರತೀಯರಾಗಿದ್ದು ನಿಮ್ಮ ವಯಸ್ಸು 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ನಾಗರಿಕರಾಗಿದ್ದಾರೆ ಈ ಮತದಾರರ ಗುರುತಿನ ಚೀಟಿಯನ್ನು (Voter ID Card) ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಭಾರತೀಯ ಚುನಾವಣಾ ಆಯೋಗ (ECI) ಈ ಸೌಲಭ್ಯವನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ ನೀವು ಫಾರ್ಮ್ 6 ಅನ್ನು ಭರ್ತಿ ಮಾಡಲು ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಮತ್ತು ಸಲ್ಲಿಸಲು ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ (NVSP) ಭೇಟಿ ನೀಡಿ ಇದರಲ್ಲಿ ನಿಮ್ಮ ಜನ್ಮ ದಿನಾಂಕ ಮತ್ತು ವಿಳಾಸ ಪುರಾವೆಗಾಗಿ ದಾಖಲೆಗಳು ಅಗತ್ಯವಿದೆ. ನಿಮ್ಮ ಅರ್ಜಿ ಉಲ್ಲೇಖ ಸಂಖ್ಯೆಯನ್ನು ಬಳಸಿಕೊಂಡು ನಿಮ್ಮ ಅರ್ಜಿಯ ಸ್ಥಿತಿಯನ್ನು ಸಹ ನೀವು ಪರಿಶೀಲಿಸಬಹುದು.

Also Read: Sanchar Saathi App: ಪ್ರತಿಯೊಂದು ಸ್ಮಾರ್ಟ್‌ಫೋನ್‌ನಲ್ಲಿ ಸಂಚಾರ್ ಸಾಥಿ ಅಪ್ಲಿಕೇಶನ್ ಯಾಕೆ ಕಡ್ಡಾಯ?

ಮನೆಯಲ್ಲೇ ಕುಳಿತು ಹೊಸ Voter ID ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲು ನೀವು ರಾಷ್ಟ್ರೀಯ ಮತದಾರರ ಸೇವಾ ಜಾಲತಾಣದ (NVSP) ಅಧಿಕೃತ ವೆಬ್‌ಸೈಟ್ https://voters.eci.gov.in ಅನ್ನು ತೆರೆಯಬೇಕು.
  • ಮುಂದೆ ನಿಮ್ಮ ಫೋನ್ ನಂಬರ್, ಇಮೇಲ್ ವಿಳಾಸ ಮತ್ತು ಸ್ಕ್ರೀನ್ ಮೇಲೆ ಕಾಣುವ ಕ್ಯಾಪ್ಚಾ ಕೋಡ್ ಅನ್ನು ಹಾಕಿ ಲಾಗಿನ್ ಆಗಿ. ನಿಮಗೆ ಈಗಾಗಲೇ ಖಾತೆ ಇಲ್ಲದಿದ್ದರೆ ನಿಮ್ಮ ಹೆಸರು ಮತ್ತು ಬೇಕಾದ ಇತರೆ ವಿಷಯಗಳನ್ನು ಕೊಟ್ಟು ಹೊಸ ಖಾತೆಯನ್ನು ಮಾಡಿ.
  • ನಿಮ್ಮ ನೊಂದಣಿ ಮಾಡಿದ ಫೋನ್ ನಂಬರ್‌ಗೆ ಒಂದು OTP (ಒಂದು-ಬಾರಿ ಪಾಸ್‌ವರ್ಡ್) ಬರುತ್ತದೆ. ಈಗ ನಿಮ್ಮ ಲಾಗಿನ್ ಮಾಹಿತಿಗಳನ್ನು (ಯೂಸರ್‌ನೇಮ್ ಮತ್ತು ಪಾಸ್‌ವರ್ಡ್) ಹಾಕಿ ಒಳಗೆ ಹೋಗಿ.
  • ಒಳಗೆ ಹೋದ ನಂತರ ಮುಖ್ಯ ಪುಟದಲ್ಲಿ “ಹೊಸ ವೋಟರ್‌ಗಳನ್ನು ನೊಂದಾಯಿಸುವ” ಆಯ್ಕೆ ನಿಮಗೆ ಸಿಗುತ್ತದೆ. ಅಲ್ಲಿ “ಫಾರ್ಮ್ 6 ಅನ್ನು ತುಂಬಿರಿ” (Form 6) ಎಂದು ಆರಿಸಿ.
  • ಹೊಸ ವೋಟರ್ ನೊಂದಣಿಗಾಗಿ ಫಾರ್ಮ್ 6 ಈಗ ತೆರೆದುಕೊಳ್ಳುತ್ತದೆ. ಇಲ್ಲಿ ನೀವು ನಿಮ್ಮ ರಾಜ್ಯ, ಜಿಲ್ಲೆ, ವಿಧಾನಸಭಾ ಕ್ಷೇತ್ರ, ಹಾಗೆಯೇ ನಿಮ್ಮ ಹೆಸರು, ಅಪ್ಪ/ಗಂಡ/ಹೆಂಡತಿಯ ಹೆಸರು, ಆಧಾರ್ ಸಂಖ್ಯೆ ಮತ್ತು ವಿಳಾಸದಂತಹ ಇತರೆ ಮುಖ್ಯ ಮಾಹಿತಿಗಳನ್ನು ಕೊಟ್ಟು ಈ ಅರ್ಜಿಯನ್ನು ಪೂರ್ತಿ ತುಂಬಬೇಕು.
  • ಎಲ್ಲ ವಿಷಯಗಳನ್ನು ಭರ್ತಿ ಮಾಡಿದ ಮೇಲೆ ನೀವು ನಿಮ್ಮ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.
  • ದಾಖಲೆಗಳನ್ನು ಅಪ್‌ಲೋಡ್ ಮಾಡಿದ ನಂತರ ಹೊಸ ವೋಟರ್ ಅರ್ಜಿಯ ಮುನ್ನೋಟವನ್ನು ನೋಡಲು ನಿಮಗೆ ಅವಕಾಶ ಸಿಗುತ್ತದೆ. ನೀವು ಕೊಟ್ಟ ಮಾಹಿತಿಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಎಲ್ಲವೂ ಸರಿಯಾಗಿದೆ ಎಂದು ಖಚಿತವಾದ ಮೇಲೆ ಸಲ್ಲಿಸು (Submit) ಗುಂಡಿಯನ್ನು ಒತ್ತಿ.
  • ಅರ್ಜಿಯನ್ನು ಕಳುಹಿಸಿದ ಮೇಲೆ ನಿಮಗೆ ಸಿಗುವ ಅರ್ಜಿ ಉಲ್ಲೇಖ ಸಂಖ್ಯೆಯನ್ನು (Reference Number) ಬರೆದಿಟ್ಟುಕೊಳ್ಳಿ ಅಥವಾ ಆ ಸ್ವೀಕೃತಿ ಪತ್ರವನ್ನು (Acknowledgement slip) ಉಳಿಸಿ ಇಟ್ಟುಕೊಳ್ಳಿ.

ಹೊಸ Voter ID ಕಾರ್ಡ್‌ಗಾಗಿ ಬೇಕಾಗುವ ದಾಖಲೆಗಳೇನು?

ನೀವು ಹೊಸ ವೋಟರ್ ಕಾರ್ಡ್ ಪಡೆಯುವ ಮುಂಚೆ ಈ ಕೆಳಗಿನ ಕೆಲವೊಂದು ಮುಖ್ಯ ದಾಖಲೆಗಳನ್ನು ಹೊಂದಿರಲೇಬೇಕು. ಮತದಾರರ ಗುರುತಿನ ಚೀಟಿ ಪಡೆಯಲು ನೀವು ಎರಡು ಮಾಹಿತಿಯನ್ನು ಪರಿಶೀಲಿಸಬೇಕಾಗುತ್ತದೆ. ಪ್ರಸ್ತುತ ಮೊಬೈಲ್ ನಂಬರ್, ಜನ್ಮ ದಿನಾಂಕ ಮತ್ತು ವಿಳಾಸ ಪುರಾವೆ. ಎರಡಕ್ಕೂ ನೀವು ಪೋಷಕ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. ಈ ದಾಖಲೆಗಳ ಪಟ್ಟಿಯನ್ನು ನಾವು ಕೆಳಗೆ ಹಂಚಿಕೊಳ್ಳುತ್ತಿದ್ದೇವೆ. ನಿಮ್ಮ ಬಳಿ ಯಾವುದಾದರೂ ಒಂದನ್ನು ಅಪ್‌ಲೋಡ್ ಮಾಡಿ.

ಜನ್ಮ ದಿನಾಂಕಕ್ಕೆ ಅಗತ್ಯವಿರುವ ದಾಖಲೆಗಳು ಪಟ್ಟಿಯಲ್ಲಿ ನೀವು ಜನನ ಪ್ರಮಾಣಪತ್ರ, ಪ್ಯಾನ್ ಕಾರ್ಡ್, 10ನೇ ತರಗತಿಯ ಪ್ರಮಾಣಪತ್ರ, ಭಾರತೀಯ ಪಾಸ್‌ಪೋರ್ಟ್ ಮತ್ತು ಚಾಲನಾ ಪರವಾನಗಿ ನೀಡಬಹುದು. ಮತ್ತೊಂದು ನಿಮ್ಮ ವಿಳಾಸ ಪುರಾವೆಗೆ ಅಗತ್ಯವಿರುವ ದಾಖಲೆಗಳಲ್ಲಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಉಪಯುಕ್ತತಾ ಬಿಲ್‌ಗಳು, ಭಾರತೀಯ ಪಾಸ್‌ಪೋರ್ಟ್, ಮಾರಾಟ ಪತ್ರ ಅಥವಾ ಗುತ್ತಿಗೆ ಪತ್ರ ನೀಡಬಹುದು.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :