Duplicate PAN Card: ನೀವು ನಿಮ್ಮ ಪ್ಯಾನ್ ಕಾರ್ಡ್ ಅನ್ನು ಕಳೆದುಕೊಂಡಿದ್ದರೆ ಅಥವಾ ಡ್ಯಾಮೇಜ್ ಆಗಿದ್ದರೆ ಹೊಸದಾಗಿ ಪಡೆಯುವುದು ತುಂಬ ಸರಳ ಮಾರ್ಗವಾಗಿದೆ. ಅಲ್ಲದೆ ನಮ್ಮಲ್ಲಿ ಅನೇಕರು ತಮ್ಮ ದಾಖಲೆಗಳನ್ನು ಎಲ್ಲೋ ಇರಿಸಿ ಮರೆಯುವುದು ಅನಿವಾರ್ಯವಾಗಿದೆ. ಆದರೆ ಇದರಿಂದ ನೀವು ಅನೇಕ ಕೆಲಸ ಕಾರ್ಯಗಳಲ್ಲಿ ಭಾರಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆದರೆ ಈಗ ಇದಕ್ಕೊಂದು ಪರಿಹಾರ ಇರುವುದರಿಂದ ಚಿಂತಿಸುವ ಯಾವುದೇ ಅಗತ್ಯವಿಲ್ಲ. ನೀವು ಮನೆಯಲ್ಲೇ ಕುಳಿತು ಆರಾಮಾಗಿ ತುಂಬ ಸರಳವಾಗಿ ಆನ್‌ಲೈನ್‌ನಲ್ಲಿ ನಕಲಿ ಪ್ಯಾನ್ ಕಾರ್ಡ್ (Duplicate PAN Card) ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ ತಿಳಿಯಿರಿ.
ಭಾರತದಲ್ಲಿ ಸಾಮಾನ್ಯವಾಗಿ ಪ್ಯಾನ್ ಕಾರ್ಡ್ (PAN Card) ನಿಮ್ಮ ಗುರುತಾಗಿ ಕಾರ್ಯನಿರ್ವಹಿಸುವ ದಾಖಲೆಯಾಗಿದೆ. ಗ್ಯಾಸ್ ಸಂಪರ್ಕ ಪಡೆಯಲು ಅಥವಾ ಹೊಸ ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಸಣ್ಣಪುಟ್ಟ ಕಾಗದದ ಎಲ್ಲ ಕೆಲಸ ಕಾರ್ಯಗಳಿಗೆ ಈ ಪ್ಯಾನ್ ಕಾರ್ಡ್ ಬಹು ಮುಖ್ಯವಾದ ದಾಖಲೆಗಳಲ್ಲಿ ಒಂದಾಗಿದೆ. ಆದ್ದರಿಂದ ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಪ್ಯಾನ್ ಕಾರ್ಡ್ ಕಳೆದುಕೊಂಡಿದ್ದರೆ ಮತ್ತು ಈಗ ನಕಲಿ ಪ್ಯಾನ್ ಕಾರ್ಡ್ಗೆ ಮತ್ತೆ ಅರ್ಜಿ ಸಲ್ಲಿಸಲು ಬಯಸಿದರೆ ಅದರ ಸಂಪೂರ್ಣ ಪ್ರಕ್ರಿಯೆಯನ್ನು ಹಂತ ಹಂತವಾಗಿ ತಿಳಿಯಬಹುದು.
Also Read: 6500mAh ಬ್ಯಾಟರಿಯ Vivo T4x 5G ಇಂದು ಮೊದಲ ಮಾರಾಟ! ಆಫರ್ ಬೆಲೆ ಮತ್ತು ಫೀಚರ್ಗಳಿಗೆ ಜನ ಫಿದಾ!
ಮೊದಲಿಗೆ ಅಧಿಕೃತ TIN-NSDL ವೆಬ್ಸೈಟ್ಗೆ ಭೇಟಿ ನೀಡಿ ಸರ್ವಿಸ್ ಟ್ಯಾಬ್ ಅಡಿಯಲ್ಲಿ ಪ್ಯಾನ್ ಮೇಲೆ ಕ್ಲಿಕ್ ಮಾಡಬೇಕು. ಇದರ ಕೆಳಗೆ ‘Reprint of PAN Card’ ಆಯ್ಕೆ ಮಾಡಿ ಸಲ್ಲಿಸಬೇಕು.
ಇದರ ನಂತರ ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆ 10 ಅಂಕಿಯ ಆಧಾರ್ ಸಂಖ್ಯೆ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಬೇಕು. ಇದರ ನಂತರ ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಂಡು ಕ್ಯಾಪ್ಚಾವನ್ನು ಪೂರ್ಣಗೊಳಿಸಿ ಮತ್ತು ಸಲ್ಲಿಸಬೇಕು.
ನಿಮ್ಮ ಪ್ಯಾನ್ ಕಾರ್ಡ್ ಮಾಹಿತಿ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ. ಮುಂದುವರಿಯಲು ನೀವು ಹೊಸ ಪ್ಯಾನ್ ಕಾರ್ಡ್ ಅನ್ನು ಆದೇಶಿಸಬೇಕು ಮತ್ತು ನಿಮ್ಮ ಪಿನ್ ಅನ್ನು ನಮೂದಿಸಬೇಕು.
ನಿಮ್ಮ ವಿಳಾಸವನ್ನು ಪರಿಶೀಲಿಸಿ ಮತ್ತು ಪಾವತಿ ಮಾಡಿ. ಇದಕ್ಕಾಗಿ ನೀವು 50 ರೂಗಳ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಹಂತಗಳನ್ನು ಪೂರ್ಣಗೊಳಿಸಿದ ನಂತರ ನಿಮ್ಮ ನಕಲಿ ಪ್ಯಾನ್ ಕಾರ್ಡ್ ಅನ್ನು ಕೆಲವೇ ದಿನಗಳಲ್ಲಿ ನಿಮ್ಮ ನೋಂದಾಯಿತ ವಿಳಾಸಕ್ಕೆ ತಲುಪಿಸಲಾಗುತ್ತದೆ.
ಪ್ಯಾನ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ ಮತ್ತು ನೀವು ಪ್ಯಾನ್ ಸಂಖ್ಯೆಯನ್ನು ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡದಿದ್ದರೆ ಮತ್ತು ನಿಮ್ಮ ಉಳಿತಾಯ ಖಾತೆಯು ಒಂದು ವರ್ಷದಲ್ಲಿ 10,000 ರೂ ಅಥವಾ ಅದಕ್ಕಿಂತ ಹೆಚ್ಚಿನ ಬಡ್ಡಿಯನ್ನು ಗಳಿಸುತ್ತಿದ್ದರೆ ಬ್ಯಾಂಕ್ 10% ಬದಲಿಗೆ 30% ಟಿಡಿಎಸ್ ಅನ್ನು ಕಡಿತಗೊಳಿಸುತ್ತದೆ. ನಿಮ್ಮ ಟಿಡಿಎಸ್ ಅನ್ನು ಹೆಚ್ಚುವರಿಯಾಗಿ ಕಡಿತಗೊಳಿಸಿದರೂ ನೀವು ಅದನ್ನು ಕ್ಲೈಮ್ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಿಮ್ಮ ಪ್ಯಾನ್ ಕಾರ್ಡ್ ಕಳೆದುಹೋದರೆ ತಕ್ಷಣ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.