Friendship Day wishes in kannada: ಸ್ನೇಹಿತರ ದಿನದ ಶುಭಾಶಯ ತಿಳಿಸಲು ಇಲ್ಲಿವೆ 10+ ಅತ್ಯುತ್ತಮ ಸಂದೇಶಗಳು

Friendship Day wishes in kannada: ಸ್ನೇಹಿತರ ದಿನದ ಶುಭಾಶಯ ತಿಳಿಸಲು ಇಲ್ಲಿವೆ 10+ ಅತ್ಯುತ್ತಮ ಸಂದೇಶಗಳು

Friendship Day wishes in kannada: ಜೀವನದಲ್ಲಿ ಕುಟುಂಬದ ನಂತರ ನಮ್ಮ ಸಂತೋಷ, ದುಃಖ, ಯಶಸ್ಸು ಮತ್ತು ಸೋಲುಗಳನ್ನು ಹಂಚಿಕೊಳ್ಳುವ ಮೊದಲ ವ್ಯಕ್ತಿ ಎಂದರೆ ಅದು ಸ್ನೇಹಿತ. ಕಷ್ಟದ ಸಮಯದಲ್ಲಿ ಧೈರ್ಯ ತುಂಬುವವರು, ಸಂತೋಷದ ಕ್ಷಣಗಳಲ್ಲಿ ನಮ್ಮೊಂದಿಗೆ ನಗುವವರು, ತಪ್ಪು ಮಾಡಿದಾಗ ಸರಿಯಾದ ದಾರಿಯನ್ನು ತೋರಿಸುವವರು ನಿಜವಾದ ಸ್ನೇಹಿತರು. ಅಂತಹ ಅಮೂಲ್ಯ ಬಾಂಧವ್ಯವನ್ನು ಗೌರವಿಸುವ ದಿನವೇ ಸ್ನೇಹಿತರ ದಿನ. ಪ್ರತಿ ವರ್ಷ ಆಗಸ್ಟ್ ಮೊದಲ ಭಾನುವಾರ ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಸ್ನೇಹಿತರಿಗೆ ಶುಭಾಶಯ ಕೋರಲು, ಹಳೆಯ ನೆನಪುಗಳನ್ನು ಮೆಲುಕು ಹಾಕಲು ಮತ್ತು ಅವರ ಮೇಲಿನ ಪ್ರೀತಿ ಹಾಗೂ ಗೌರವವನ್ನು ವ್ಯಕ್ತಪಡಿಸಲು ವಿಶೇಷ ಸಮಯವಾಗಿದೆ.

Digit.in Survey
✅ Thank you for completing the survey!

Also Read : Jio ಕಂಪನಿಯ 1000 ರೂ.ಗಳ ಒಳಗೆ ಲಭ್ಯವಿರುವ ಅತ್ಯುತ್ತಮ ರೀಚಾರ್ಜ್‌ ಪ್ಲಾನ್‌ಗಳು ಇಲ್ಲಿವೆ ನೋಡಿ

Friendship Day: ಸ್ನೇಹದ ಸಂಬಂಧದ ಮಹತ್ವ

ಸ್ನೇಹ ಎನ್ನುವುದು ಕೇವಲ ಒಟ್ಟಿಗೆ ಸಮಯ ಕಳೆಯುವುದಲ್ಲ. ಅದು ಪರಸ್ಪರ ನಂಬಿಕೆ, ಗೌರವ, ಪ್ರೀತಿ ಮತ್ತು ಸಹಕಾರದ ಮೇಲೆ ನಿಂತಿರುವ ಬಾಂಧವ್ಯ. ಜೀವನದ ಏರಿಳಿತಗಳ ನಡುವೆ ನಮ್ಮನ್ನು ಅರ್ಥಮಾಡಿಕೊಳ್ಳುವ ಸ್ನೇಹಿತ ಇದ್ದರೆ ಯಾವುದೇ ಸವಾಲನ್ನೂ ಧೈರ್ಯವಾಗಿ ಎದುರಿಸಬಹುದು. ಆದ್ದರಿಂದ ಈ ಸ್ನೇಹಿತರ ದಿನದಂದು ನಿಮ್ಮ ಆತ್ಮೀಯ ಸ್ನೇಹಿತರಿಗೆ ಒಂದು ಪ್ರೀತಿಯ ಸಂದೇಶ ಕಳುಹಿಸಿ, ಅವರೊಂದಿಗೆ ನಿಮ್ಮ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಿ. ಶುಭಾಶಯ ಕೋರಲು ಈ ಲೇಖನದಲ್ಲಿವೆ ಅತ್ಯುತ್ತಮ ಸಂದೇಶಗಳು.

Happy Friendship Day in Kannada: Best WhatsApp Wishes Greetings and Quotes

ಸ್ನೇಹಿತರ ದಿನದ ಶುಭಾಶಯಗಳು

– ಸ್ನೇಹ ಎಂದರೆ ರಕ್ತ ಸಂಬಂಧವಲ್ಲ, ಹೃದಯಗಳ ಸಂಬಂಧ. ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಜೊತೆಯಾಗಿ ಇರುವ ನನ್ನ ಆತ್ಮೀಯ ಸ್ನೇಹಿತನಿಗೆ ಸ್ನೇಹಿತರ ದಿನದ ಹಾರ್ದಿಕ ಶುಭಾಶಯಗಳು.

– ನಗುವಿನಲ್ಲೂ, ಕಣ್ಣೀರಲ್ಲೂ ಜೊತೆಗಿರುವವನೇ ನಿಜವಾದ ಸ್ನೇಹಿತ. ನನ್ನ ಜೀವನದ ಅಮೂಲ್ಯ ಸ್ನೇಹಕ್ಕೆ ಹ್ಯಾಪಿ ಫ್ರೆಂಡ್‌ಶಿಪ್ ಡೇ!

– ಜೀವನದಲ್ಲಿ ಎಷ್ಟು ಜನ ಸಿಕ್ಕರೂ, ನಿಜವಾದ ಸ್ನೇಹಿತನ ಸ್ಥಾನವನ್ನು ಯಾರೂ ತುಂಬಲಾರರು. ಸದಾ ಹೀಗೆ ನನ್ನೊಂದಿಗೆ ಇರು. ಸ್ನೇಹಿತರ ದಿನದ ಶುಭಾಶಯಗಳು!

– ನಮ್ಮ ಸ್ನೇಹ ಕಾಲ ಕಳೆದಂತೆ ಇನ್ನಷ್ಟು ಗಟ್ಟಿಯಾಗಲಿ. ನಿನ್ನ ಜೀವನ ಸಂತೋಷ, ಆರೋಗ್ಯ ಮತ್ತು ಯಶಸ್ಸಿನಿಂದ ತುಂಬಿರಲಿ. ಹ್ಯಾಪಿ ಫ್ರೆಂಡ್‌ಶಿಪ್ ಡೇ!

– ನಗು, ನೆನಪು ಮತ್ತು ವಿಶ್ವಾಸವೇ ನಮ್ಮ ಸ್ನೇಹದ ಬಲ. ಹ್ಯಾಪಿ ಫ್ರೆಂಡ್‌ಶಿಪ್ ಡೇ!

– ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ನೀನು ಜೊತೆಯಾಗಿರು. ಸ್ನೇಹಿತರ ದಿನದ ಶುಭಾಶಯಗಳು!

– ನಮ್ಮ ಸ್ನೇಹ ಹೀಗೆ ಸದಾ ಚಿರಸ್ಥಾಯಿಯಾಗಿರಲಿ. ಸ್ನೇಹಿತರ ದಿನದ ಹಾರ್ದಿಕ ಶುಭಾಶಯಗಳು!

– ಒಳ್ಳೆಯ ಸ್ನೇಹಿತ ದೇವರು ಕೊಟ್ಟ ಅತ್ಯುತ್ತಮ ಉಡುಗೊರೆ. ಅಂತಹ ಉಡುಗೊರೆಯಾಗಿ ನನ್ನ ಜೀವನಕ್ಕೆ ಬಂದ ನಿನಗೆ ಹೃದಯಪೂರ್ವಕ ಶುಭಾಶಯಗಳು.

– ಸಾವಿರ ಜನರ ಪರಿಚಯಕ್ಕಿಂತ ಒಬ್ಬ ನಿಜವಾದ ಸ್ನೇಹಿತ ಸಾಕು. ನನ್ನ ಬದುಕನ್ನು ಸುಂದರಗೊಳಿಸಿದ ನಿನಗೆ ಸ್ನೇಹಿತರ ದಿನದ ಶುಭಾಶಯಗಳು.

– ನಮ್ಮ ಸ್ನೇಹ ಎಂದಿಗೂ ಹೀಗೆಯೇ ನಗುವಿನಿಂದ, ನೆನಪುಗಳಿಂದ ಮತ್ತು ವಿಶ್ವಾಸದಿಂದ ತುಂಬಿರಲಿ. ಹ್ಯಾಪಿ ಫ್ರೆಂಡ್‌ಶಿಪ್ ಡೇ!

– ಸುಖದಲ್ಲೂ ದುಃಖದಲ್ಲೂ ಜೊತೆಯಾಗಿರುವ ನಿನಗೆ ಧನ್ಯವಾದಗಳು. ಹ್ಯಾಪಿ ಫ್ರೆಂಡ್‌ಶಿಪ್ ಡೇ!

– ಸ್ನೇಹಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನನ್ನ ಆತ್ಮೀಯ ಸ್ನೇಹಿತನಿಗೆ ಶುಭಾಶಯಗಳು!

– ಒಳ್ಳೆಯ ಸ್ನೇಹಿತ ಜೀವನದ ನಿಜವಾದ ಸಂಪತ್ತು. ಎಲ್ಲಾ ಸ್ನೇಹಿತರಿಗೆ ಹ್ಯಾಪಿ ಫ್ರೆಂಡ್‌ಶಿಪ್ ಡೇ!

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile