Happy Fathers Day 2026: ಫಾದರ್ಸ್‌ ಡೇ ದಿನ ನಿಮ್ಮ ಪ್ರೀತಿಯ ತಂದೆಗೆ ಕಳುಹಿಸಲು ಹೃದಯಸ್ಪರ್ಶಿ ಶುಭಾಶಯಗಳು ಇಲ್ಲಿವೆ

Happy Fathers Day 2026: ಫಾದರ್ಸ್‌ ಡೇ ದಿನ ನಿಮ್ಮ ಪ್ರೀತಿಯ ತಂದೆಗೆ ಕಳುಹಿಸಲು ಹೃದಯಸ್ಪರ್ಶಿ ಶುಭಾಶಯಗಳು ಇಲ್ಲಿವೆ

Happy Fathers Day 2026: ಪ್ರತಿ ಮಗುವಿನ ಜೀವನದಲ್ಲಿ ತಂದೆಯ ಸ್ಥಾನ ವಿಶೇಷ. ಅವರು ಕೇವಲ ಕುಟುಂಬದ ಯಜಮಾನನಲ್ಲ, ಬದಲಾಗಿ ಬದುಕಿನ ಮಾರ್ಗದರ್ಶಕರು, ಪ್ರೇರಣೆಯ ಮೂಲ ಮತ್ತು ಸಂಕಷ್ಟದ ಸಮಯದಲ್ಲಿ ಬೆನ್ನೆಲುಬಾಗಿ ನಿಲ್ಲುವ ಕುಟುಂಬದ ಶಕ್ತಿ. ಆದ್ದರಿಂದಲೇ ಪ್ರತಿವರ್ಷ ಜೂನ್ ತಿಂಗಳ ಮೂರನೇ ಭಾನುವಾರವನ್ನು ಫಾದರ್ಸ್ ಡೇ (Father’s Day) ಎಂದು ಆಚರಿಸಲಾಗುತ್ತದೆ. ಈ ವರ್ಷದಲ್ಲಿ (2026) ಫಾದರ್ಸ್ ಡೇ ಇದೇ ಜೂನ್ 21 ರಂದು ಆಚರಿಸಲಾಗುತ್ತಿದೆ.

Digit.in Survey
✅ Thank you for completing the survey!

Also Read : Amazon Prime Day sale ಘೋಷಣೆ; ಪ್ರೈಮ್‌ ಸದಸ್ಯರಿಗೆ ಭರ್ಜರಿ ಕೊಡುಗೆಗಳು

Happy Fathers Day: ತಂದೆ ತ್ಯಾಗಮಯಿ

ತಂದೆ ಎಂದರೆ ಕೇವಲ ಕುಟುಂಬವನ್ನು ಆರ್ಥಿಕವಾಗಿ ಬೆಂಬಲಿಸುವ ವ್ಯಕ್ತಿಯಲ್ಲ. ಮಕ್ಕಳ ಭವಿಷ್ಯವನ್ನು ಕಟ್ಟಿಕೊಡಲು ತಮ್ಮ ಕನಸುಗಳನ್ನು ತ್ಯಾಗ ಮಾಡುವ ಮಹಾನ್ ವ್ಯಕ್ತಿತ್ವ. ತಮ್ಮ ಮಕ್ಕಳ ಸಂತೋಷಕ್ಕಾಗಿ ಹಗಲು-ರಾತ್ರಿ ದುಡಿಯುವ ಅವರು ಅನೇಕ ಬಾರಿ ತಮ್ಮ ಭಾವನೆಗಳನ್ನು ಹೊರಹಾಕದೇ ಕುಟುಂಬದ ಒಳಿತನ್ನೇ ಮೊದಲ ಆದ್ಯತೆಯಾಗಿ ಇಡುತ್ತಾರೆ. ಫಾದರ್ಸ್ ಡೇ ಕೇವಲ ಆಚರಣೆಯ ದಿನವಲ್ಲ ನಮ್ಮ ಜೀವನದಲ್ಲಿ ತಂದೆಯ ಮಹತ್ವವನ್ನು ಅರಿತು ಅವರಿಗೆ ಗೌರವ ಸಲ್ಲಿಸುವ ದಿನವಾಗಿದೆ. ಅವರ ಪ್ರೀತಿ ಮತ್ತು ತ್ಯಾಗಕ್ಕೆ ಪ್ರತಿಫಲ ನೀಡಲು ಸಾಧ್ಯವಾಗದಿದ್ದರೂ ಕೃತಜ್ಞತೆಯ ಒಂದು ಮಾತು ಅವರ ಮನಸ್ಸಿಗೆ ಅಪಾರ ಸಂತೋಷ ನೀಡುತ್ತದೆ.

Happy Fathers Day 2026

ಇಂದಿನ ವೇಗದ ಜೀವನಶೈಲಿಯಲ್ಲಿ ನಾವು ನಮ್ಮ ತಂದೆಯೊಂದಿಗೆ ಸಮಯ ಕಳೆಯುವುದು ಕಡಿಮೆಯಾಗುತ್ತಿದೆ. ಆದರೆ ಅವರ ಪ್ರೀತಿ, ತ್ಯಾಗ ಮತ್ತು ಮಾರ್ಗದರ್ಶನವನ್ನು ನೆನಪಿಸಿಕೊಳ್ಳಲು ಫಾದರ್ಸ್ ಡೇ ಒಂದು ವಿಶೇಷ ಅವಕಾಶವಾಗಿದೆ. ಈ ದಿನ ತಂದೆಗೆ ಧನ್ಯವಾದ ಹೇಳುವುದು ಅವರೊಂದಿಗೆ ಸಮಯ ಕಳೆಯುವುದು ಅಥವಾ ಒಂದು ಸಣ್ಣ ಉಡುಗೊರೆ ನೀಡುವುದು ಕೂಡ ಅವರ ಮುಖದಲ್ಲಿ ಸಂತೋಷ ಮೂಡಿಸಬಹುದು.

ತಂದೆ ಮಕ್ಕಳಿಗೆ ಜೀವನದ ಮೌಲ್ಯಗಳನ್ನು ಕಲಿಸುತ್ತಾರೆ. ಪ್ರಾಮಾಣಿಕತೆ, ಪರಿಶ್ರಮ, ಜವಾಬ್ದಾರಿ ಮತ್ತು ಆತ್ಮವಿಶ್ವಾಸದಂತಹ ಗುಣಗಳನ್ನು ಬೆಳೆಸುವಲ್ಲಿ ತಂದೆಯ ಪಾತ್ರ ಮಹತ್ತರವಾಗಿದೆ. ಮಕ್ಕಳು ಜೀವನದಲ್ಲಿ ಯಶಸ್ಸು ಸಾಧಿಸಿದಾಗ ಅದರ ಹಿಂದೆ ತಂದೆಯ ಕಷ್ಟ ಮತ್ತು ಪ್ರೋತ್ಸಾಹದ ದೊಡ್ಡ ಪಾಲು ಇರುತ್ತದೆ. ತಂದೆಯ ದಿನದ ಪ್ರಯುಕ್ತ ಅವರಿಗೆ ಶುಭಾಶಯ ತಿಳಿಸಿಬಿಡೋಣ.

ಫಾದರ್ಸ್ ಡೇ ಶುಭಾಶಯಗಳು

– ತಂದೆ ಎಂದರೆ ಜೀವನದ ಮೊದಲ ಹೀರೋ, ಮೊದಲ ಗುರು ಮತ್ತು ಸದಾ ನಮ್ಮೊಂದಿಗೆ ನಿಲ್ಲುವ ಶಕ್ತಿ.

– ನನ್ನ ಜೀವನದ ಮೊದಲ ಹೀರೋ ಆಗಿರುವ ಅಪ್ಪನಿಗೆ ಫಾದರ್ಸ್ ಡೇ ಶುಭಾಶಯಗಳು.

– ನಿಮ್ಮ ಪ್ರೀತಿ, ತ್ಯಾಗ ಮತ್ತು ಮಾರ್ಗದರ್ಶನಕ್ಕೆ ಹೃತ್ಪೂರ್ವಕ ಧನ್ಯವಾದಗಳು ಅಪ್ಪ.

– ನನ್ನ ಪ್ರತಿಯೊಂದು ಯಶಸ್ಸಿನ ಹಿಂದೆ ನಿಮ್ಮ ಪ್ರೋತ್ಸಾಹವಿದೆ. ಹ್ಯಾಪಿ ಫಾದರ್ಸ್ ಡೇ

– ಜೀವನದ ಎಲ್ಲ ಹಂತಗಳಲ್ಲಿ ಬೆನ್ನೆಲುಬಾಗಿ ನಿಂತ ಅಪ್ಪನಿಗೆ ಪ್ರೀತಿಯ ಶುಭಾಶಯಗಳು.

– ಅಪ್ಪಾ, ನೀವು ನನ್ನ ಜೀವನದ ನಿಜವಾದ ಸ್ಫೂರ್ತಿ. ಫಾದರ್ಸ್ ಡೇ ಶುಭಾಶಯಗಳು

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile