Godrej 1.4 Ton 5 Star AC: ನಿಮ್ಮ ಮನೆ ಅಥವಾ ಆಫೀಸ್‌ಗೊಂದು ಹೊಸ ಏರ್ ಕಂಡಿಷನರ್ ಖರೀದಿಸಲು ಯೋಚಿಸುತ್ತಿದ್ದರೆ ಅಮೆಜಾನ್ ಸೇಲ್ನಲ್ಲಿ (Amazon GIF Sale 2025) ಜನಪ್ರಿಯ ಮತ್ತು ಹೆಚ್ಚು ಭರವಸೆಗೆ ಹೆಸರಾಗಿರುವ ಗೋದ್ರಾಜ್ ಕಂಪನಿಯ ಈ 1.4 Ton 5 Star AC (EI 17LINV5R32 WYR) ಜಬರ್ದಸ್ತ್ ಡೀಲ್ ಪಡೆಯಲು ಸೂಕ್ತ ಸಮಯವಾಗಿದ್ದು ಇಂದೇ ಖರೀದಿಸಿಕೊಳ್ಳುವುದು ಉತ್ತಮ. ನೀವು ಮೊದಲ ಬಾರಿಗೆ ಹೊಸ ಏರ್ ಕಂಡಿಷನರ್ ಖರೀದಿಸಲು ಯೋಚಿಸುತ್ತಿದ್ದರೆ ಮಾರುಕಟ್ಟೆಯಲ್ಲಿ ಹತ್ತಾರು ಆಯ್ಕೆಗಳು ನಿಮಗೆ ಗೊಂದಲಕ್ಕೆ ದೂಡುತ್ತವೆ. ಪ್ರಸ್ತುತ ನಿಮ್ಮ ಕೈಗೆಟಕುವ ಈ ಹೊಸ ಗೋದ್ರಾಜ್ ಏರ್ ಕಂಡಿಷನರ್ ಯಾಕೆ ಖರೀದಿಸಬೇಕು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಯಾವುದೇ ಒಂದು ಹೊಸ ಏರ್ ಕಂಡಿಷನರ್ ಖರೀದಿಸುವ ಮುಂಚೆ ಅದರ ಯಾವ ಅಂಶಗಳನ್ನು ಗಮನಿಸಬೇಕು ಮತ್ತು ಯಾವ ವಿಷಯ ಗೊತ್ತಿರಬೇಕು ತಿಳಿಯಿರಿ.
ಈ ಗೋದ್ರೇಜ್ 1.4 ಟನ್ 5 ಸ್ಟಾರ್ ಇನ್ವರ್ಟರ್ ಸ್ಪ್ಲಿಟ್ ಎಸಿ ಭಾರತದ ಬೇಸಿಗೆಯ ಉತ್ತುಂಗಕ್ಕೆ ಅಗತ್ಯವಾಗಿರುತ್ತದೆ. ಇದರ ಅತ್ಯುತ್ತಮ ಫೀಚರ್ ಮತ್ತು ದೃಢವಾದ ವಾರಂಟಿ ನಿಮ್ಮನ್ನು ಮೊದಲು ಸೆಳೆಯುತ್ತದೆ. ಕಂಪನಿ 1 ವರ್ಷದ ಪ್ರಾಡಕ್ಟ್ ವಾರಂಟಿಯೊಂದಿಗೆ 5 ವರ್ಷಗಳ ಸಮಗ್ರ ಖಾತರಿಯನ್ನು ಒದಗಿಸುತ್ತದೆ. ಇದರ ಕಂಪ್ರೆಸರ್ ಮೇಲೆ ಪೂರ್ತಿ 10 ವರ್ಷಗಳ ವಾರಂಟಿ ನೀಡುತ್ತದೆ. ಹೆವಿ-ಡ್ಯೂಟಿ ಕೂಲಿಂಗ್ ಸಾಮರ್ಥ್ಯವು ನಿಜವಾದ ವಿಭಿನ್ನತೆಯಾಗಿದ್ದು ಸುತ್ತುವರಿದ ತಾಪಮಾನವು ಸುಮಾರು 52°C ವರೆಗೆ ಏರಿದಾಗಲೂ ನಿಮ್ಮನ್ನು ತಂಪಾಗಿಸುತ್ತದೆ.
ಹೆಚ್ಚುವರಿಯಾಗಿ AI ಟೆಕ್ ಮತ್ತು I-ಸೆನ್ಸ್ ಟೆಕ್ನಾಲಜಿ ಸ್ಮಾರ್ಟ್ ಕೂಲಿಂಗ್ ಅನುಭವವನ್ನು ನೀಡುತ್ತವೆ. ಈ AC ರಿಮೋಟ್‌ನಲ್ಲಿ ಅಂತರ್ನಿರ್ಮಿತ ಸೆನ್ಸರ್ ನೀಡಿದ್ದು ಅದು ಕೋಣೆಯ ಉಷ್ಣತೆಯನ್ನು ನಿಮ್ಮ ನಿಖರವಾದ ಸ್ಥಳಕ್ಕೆ ಹೊಂದಿಸುತ್ತದೆ. ಇದು ವೈಯಕ್ತಿಕಗೊಳಿಸಿದ ಮತ್ತು ನಿಖರವಾದ ಸೌಕರ್ಯವನ್ನು ಖಾತ್ರಿಗೊಳಿಸುತ್ತದೆ. ಈ ಫೀಚರ್ ಪ್ರೀಮಿಯಂ ಅಲ್ಲದ ಮಾದರಿಗಳಲ್ಲಿ ಹೆಚ್ಚಾಗಿ ಕಾಣೆಯಾಗಿದೆ. ಕೊನೆಯದಾಗಿ 5-in-1 ಕನ್ವರ್ಟಿಬಲ್ ಕೂಲಿಂಗ್ ಮೋಡ್ ಒಂದು ಪ್ರಮುಖ ಅಂಶವಾಗಿದ್ದು ಕೂಲಿಂಗ್ ಸಾಮರ್ಥ್ಯವನ್ನು 40% ರಿಂದ 110% ವರೆಗೆ ಹೊಂದಿಸಲು ಅನುವು ಮಾಡಿಕೊಡುತ್ತದೆ.
ಈ ಗೋದ್ರೇಜ್ ಇನ್ವರ್ಟರ್ ಸ್ಪ್ಲಿಟ್ ಪವರ್ಫುಲ್ ಉಪಕರಣವಾಗಿದ್ದು ಸುಧಾರಿತ ತಂಪಾಗಿಸುವಿಕೆ ಮತ್ತು ಬಾಳಿಕೆ ಫೀಚರ್ ಹೊಂದಿದೆ. ಪ್ರಸ್ತುತ ಇದು ಸಣ್ಣ ಅಥವಾ ಸುಮಾರು 170 ಚದರ ಅಡಿವರೆಗಿನ ಕೊಠಡಿಗೆ ಸೂಕ್ತವಾಗಿದೆ. ಇದರ ISEER ಮೌಲ್ಯದೊಂದಿಗೆ ಹೆಚ್ಚಿನ 5 ಸ್ಟಾರ್ ಎನರ್ಜಿ ರೇಟಿಂಗ್ ಅನ್ನು ಹೊಂದಿದೆ. ಇದು ಕಡಿಮೆ ವಾರ್ಷಿಕ ಪವರ್ ಬಳಕೆಯನ್ನು ಖಚಿತಪಡಿಸುತ್ತದೆ.
Also Read: ಅಮೆಜಾನ್‌ನಲ್ಲಿ iPhone 15 ಫೋನ್ ಇಂದು ಬರೋಬ್ಬರಿ ₹45,000 ರೂಗಳಿಗಿಂತ ಕಡಿಮೆ ಬೆಲೆಗೆ ಲಭ್ಯ!
ಇದರ ಮಧ್ಯಭಾಗದಲ್ಲಿ ವೇರಿಯಬಲ್ ಸ್ಪೀಡ್ ಇನ್ವರ್ಟರ್ ಕಂಪ್ರೆಸರ್ ಹೊಂದಿದ್ದು ಇದು ಹೆಚ್ಚಿನ ಶಾಖದ ಹೊರೆ ಆಧರಿಸಿ ಪವರ್ ಸರಿಹೊಂದಿಸುತ್ತದೆ. ಹೆಚ್ಚುವರಿಯಯಾಗಿ ಇದು ಬ್ಲೂ ಫಿನ್ ಆಂಟಿ-ಕೊರೊಷನ್ ಲೇಪನದೊಂದಿಗೆ 100% ತಾಮ್ರ ಕಂಡೆನ್ಸರ್ ಸುರುಳಿಗಳನ್ನು ಹೊಂದಿದೆ. ವೈಯಕ್ತಿಕಗೊಳಿಸಿದ ಕೂಲಿಂಗ್‌ಗಾಗಿ I-ಸೆನ್ಸ್ ಟೆಕ್ನಾಲಜಿ 5-in-1 ಕನ್ವರ್ಟಿಬಲ್ ಕೂಲಿಂಗ್ ಹೆವಿ ಡ್ಯೂಟಿ ಕೂಲಿಂಗ್‌ನಂತಹ ವಿಶೇಷ ಫೀಚರ್ ಹೊಂದಿದೆ.
ಅಮೆಜಾನ್ (GIF) ಮಾರಾಟದ ಸಮಯದಲ್ಲಿ ಈ AC ಬೆಲೆಯು ಗಣನೀಯವಾಗಿ ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ಇದರ ಬೆಲೆ ₹49,900 ರೂಗಳಾಗಿವೆ ಆದರೆ ಮಾರಾಟದಲ್ಲಿ ಸುಮಾರು ₹31,990 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಈ ಮಾರಾಟದಲ್ಲಿ ನಿರ್ದಿಷ್ಟ ಬ್ಯಾಂಕ್‌ನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳನ್ನು ಬಳಸಿ 1750 ರೂಗಳ ಹೆಚ್ಚುವರಿ ರಿಯಾಯಿತಿ ಪಡೆಯಬಹುದು. ಇದು ಸಾಮಾನ್ಯವಾಗಿ 10% ರಿಂದ 15% ವರೆಗೆ ಇರುತ್ತದೆ. ವಿನಿಮಯ ಬೋನಸ್ (Exchange Bonus) ಅಡಿಯಲ್ಲಿ ನಿಮ್ಮ ಹಳೆಯ AC ಅಥವಾ ಉಪಕರಣವನ್ನು ವಿನಿಮಯ (Exchange) ಮಾಡಿದರೆ ಅದರ ಮೌಲ್ಯದ ಜೊತೆಗೆ ಹೆಚ್ಚುವರಿಯಾಗಿ ₹5,100 ವರೆಗೆ ವಿನಿಮಯ ಬೋನಸ್ ಕೂಡ ಸಿಗುವ ಸಾಧ್ಯತೆ ಇರುತ್ತದೆ.