ಗೂಗಲ್ನಿಂದ ಹೊಸ App ಲಾಂಚ್: ನಿಮ್ಮ ದೈನಂದಿನ ಡಿಜಿಟಲ್ ಜೀವನಕ್ಕೆ ಕಥೆಯ ರೂಪ ನೀಡಲಿದೆ Dreambeans
ಗೂಗಲ್ ತನ್ನ ಹೊಸ AI ಆಧಾರಿತ ಮೊಬೈಲ್ ಅಪ್ಲಿಕೇಶನ್ ಡ್ರೀಮ್ಬೀನ್ಸ್ (Dreambeans) ಅನ್ನು ಪರಿಚಯಿಸಿದೆ. ಗೂಗಲ್ ಲ್ಯಾಬ್ಸ್ ಅಭಿವೃದ್ಧಿಪಡಿಸಿರುವ ಈ ಆಪ್ ಬಳಕೆದಾರರ ದೈನಂದಿನ ಚಟುವಟಿಕೆಗಳು ಮತ್ತು ಆಸಕ್ತಿಗಳನ್ನು ಆಧರಿಸಿ ವೈಯಕ್ತಿಕ ಸ್ಟೋರಿಗಳನ್ನು ರಚಿಸುವ ವಿಶೇಷ ಸಾಮರ್ಥ್ಯ ಹೊಂದಿದೆ. ಸಾಮಾನ್ಯ ಮಾಹಿತಿಯನ್ನು ನೀಡುವುದರ ಬದಲು, ನಿಮ್ಮ ಜೀವನದ ವಿವಿಧ ಘಟನೆಗಳನ್ನು ಆಕರ್ಷಕ ಫೋಟೋಗಳು ಮತ್ತು ಕಾಮಿಕ್ ಶೈಲಿಯ ಕಥೆಗಳ ರೂಪದಲ್ಲಿ ತೋರಿಸುವುದು ಇದರ ಉದ್ದೇಶವಾಗಿದೆ. ಗೂಗಲ್ ಕಂಪನಿಯ ಈ ಹೊಸ ಡ್ರೀಮ್ಬೀನ್ಸ್ ಆಪ್ ಇಂಗ್ಲಿಷ್, ಹಿಂದಿ ಮತ್ತು ಕನ್ನಡ ಸೇರಿದಂತೆ ಒಟ್ಟು 14 ಭಾಷೆಗಳಿಗೆ ಇದು ಬೆಂಬಲ ನೀಡುತ್ತದೆ. ಬಳಕೆದಾರರು ಆಪ್ನ ಸೆಟ್ಟಿಂಗ್ಗಳಲ್ಲಿ ತಮಗೆ ಬೇಕಾದ ಭಾಷೆಯನ್ನು ಆಯ್ಕೆ ಮಾಡಿಕೊಂಡು ಸ್ಟೋರಿಗಳನ್ನು ಅದೇ ಭಾಷೆಯಲ್ಲಿ ಓದಬಹುದು.
Google Dreambeans ಆಪ್ ಹೇಗೆ ಕಾರ್ಯನಿರ್ವಹಿಸುತ್ತದೆ?
ಗೂಗಲ್ ಡ್ರೀಮ್ಬೀನ್ಸ್ ಬಳಕೆದಾರರ ಅನುಮತಿಯೊಂದಿಗೆ ಜಿ-ಮೇಲ್, ಗೂಗಲ್ ಫೋಟೋಸ್, ಯೂಟ್ಯೂಬ್, ಗೂಗಲ್ ಕ್ಯಾಲೆಂಡರ್ ಮತ್ತು ಸರ್ಚ್ ಹಿಸ್ಟರಿಯಂತಹ ಸೇವೆಗಳಿಂದ ಮಾಹಿತಿ ಪಡೆದು, ಅವರ ದೈನಂದಿನ ಚಟುವಟಿಕೆಗಳು ಹಾಗೂ ಆಸಕ್ತಿಗಳಿಗೆ ಅನುಗುಣವಾಗಿ ಫೋಟೋಗಳು ಮತ್ತು ಕಾಮಿಕ್ ಶೈಲಿಯ ವೈಯಕ್ತಿಕ ಕಥೆಗಳನ್ನು ರಚಿಸುತ್ತದೆ. ಬಳಕೆದಾರರು ನಿದ್ರಿಸುತ್ತಿರುವಾಗ AI ಈ ಮಾಹಿತಿಯನ್ನು ವಿಶ್ಲೇಷಿಸಿ ಸ್ಟೋರಿಗಳನ್ನು ಸಿದ್ಧಪಡಿಸುತ್ತದೆ. ಇದಕ್ಕಾಗಿ Googleನ Nano Banana 2 ಮತ್ತು Veo AI ಮಾದರಿಗಳನ್ನು ಬಳಸಲಾಗುತ್ತದೆ. ಸಿದ್ಧವಾದ ಕಥೆಗಳನ್ನು ಬುಕ್ಮಾರ್ಕ್ ಮಾಡಿಕೊಳ್ಳುವ ಮತ್ತು ಇತರರೊಂದಿಗೆ ಹಂಚಿಕೊಳ್ಳುವ ಆಯ್ಕೆಯೂ ಇದೆ.
Google ಡ್ರೀಮ್ಬೀನ್ಸ್ ಆಪ್ ಡೌನ್ಲೋಡ್ ಮಾಡುವುದು ಹೇಗೆ?
ಗೂಗಲ್ ಡ್ರೀಮ್ಬೀನ್ಸ್ ಆಪ್ ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ಪ್ಲಾಟ್ಫಾರ್ಮ್ಗಳಲ್ಲಿ ಲಭ್ಯವಿದೆ. ಬಳಕೆದಾರರು ತಮ್ಮ ಸ್ಮಾರ್ಟ್ಫೋನ್ನಲ್ಲಿರುವ Google Play Store ಅಥವಾ Apple App Store ಮೂಲಕ ಆಪ್ ಡೌನ್ಲೋಡ್ ಮಾಡಿಕೊಳ್ಳಬಹುದು. ಈ ಆಪ್ 18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಬಳಕೆದಾರರಿಗಾಗಿ ವಿನ್ಯಾಸಗೊಳಿಸಲಾಗಿದೆ. ಇಂಗ್ಲಿಷ್, ಹಿಂದಿ ಮತ್ತು ಬಂಗಾಳಿ ಸೇರಿದಂತೆ ಒಟ್ಟು 14 ಭಾಷೆಗಳನ್ನು ಇದು ಬೆಂಬಲಿಸುತ್ತದೆ. ಆದರೆ, ಒಂದು ಸಮಯದಲ್ಲಿ ಒಂದು ಭಾಷೆಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.