Cut Your AC Bill - Know Government Suggests
AC Bill: ಪ್ರಸ್ತುತ ಬೇಸಿಗೆ ಕಾಲ ಹೆಚ್ಚಾಗುತ್ತಿದ್ದು ಹಗಲಿನಲ್ಲಿ ತಾಪಮಾನ ಸುಮಾರು 40° ಡಿಗ್ರಿಗಳನ್ನು ತಲುಪುತ್ತಿರುವುದನ್ನು ನೀವು ಕಾಣಬಹುದು. ಇಂತಹ ಪರಿಸ್ಥಿತಿಯಲ್ಲಿ ಏರ್ ಕಂಡಿಷನರ್ಗಳನ್ನು (Air Conditioners – AC) ಹಗಲು ರಾತ್ರಿ ನಿರಂತರವಾಗಿ ಬಳಸುವುದು ಅನಿವಾರ್ಯವಾಗಿದೆ. ಇದರಿಂದಾಗಿ ಪ್ರತಿ ಮನೆ ಅಥವಾ ಆಫೀಸ್ ವಿದ್ಯುತ್ ಬಿಲ್ ಹಲವಾರು ಪಟ್ಟು ಹೆಚ್ಚಾಗುತ್ತದೆ. ಇಂತಹ ಸನ್ನಿವೇಶದಲ್ಲಿ ನಿಮ್ಮ ಎಸಿ ಬಿಲ್ ಅರ್ಧದಷ್ಟು ಕಡಿಮೆ ಮಾಡಲು ಸರ್ಕಾರವೇ ಇದಕ್ಕೆ ಉತ್ತಮ ಮತ್ತು ಸರಳ ಸಲಹೆಯನ್ನು ನೀಡುತ್ತಿರುವುದು ಆಶ್ಚರ್ಯ ಆದರೆ ಇದು ಪ್ರಯೋಜನಕಾರಿಯೂ ಹೌದು.
ಪ್ರಸ್ತುತ ಹೆಚ್ಚುತ್ತಿರುವ ಬಿಸಿಲಿಗೆ ನಿಮ್ಮ ಎಸಿ ಬಿಲ್ ಅರ್ಧದಷ್ಟು ಕಡಿಮೆ ಮಾಡಲು ಸರ್ಕಾರವೇ ಇದಕ್ಕೆ ಉತ್ತಮ ಮತ್ತು ಸರಳ ಸಲಹೆಯನ್ನು ನೀಡುತ್ತಿದೆ. ವಿದ್ಯುತ್ ಕ್ಷಮತೆ ಬ್ಯೂರೋ (BEE – Bureau of Energy Efficiency) ಪ್ರಕಾರ ನಿಮ್ಮ AC ಯ ತಾಪಮಾನವನ್ನು ಕೇವಲ 1°C ಹೆಚ್ಚಿಸಿದರೆ ನೀವು ಸುಮಾರು 6% ವಿದ್ಯುತ್ ಉಳಿಸಬಹುದು. ಸರ್ಕಾರವು ಈ ಕ್ರಮವನ್ನು ವೆಚ್ಚ-ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ಪರಿಹಾರವೆಂದು ಪರಿಗಣಿಸುತ್ತದೆ.
ಇದನ್ನೂ ಓದಿ: Motorola Edge 60 ಭಾರತದಲ್ಲಿ ಬಿಡುಗಡೆಯಾಗಿದೆ! ಬೆಲೆ ಮತ್ತು ಟಾಪ್ 5 ಫೀಚರ್ಗಳೇನು ತಿಳಿಯಿರಿ!
ಜನರು ಸಾಮಾನ್ಯವಾಗಿ ತಮ್ಮ ಎಸಿಗಳನ್ನು 20-21°C ಗೆ ಹೊಂದಿಸುತ್ತಾರೆ ಎಂದು (BEE – Bureau of Energy Efficiency) ಹೇಳುತ್ತದೆ. ಆದರೆ ಆರಾಮದಾಯಕ ತಾಪಮಾನದ ವ್ಯಾಪ್ತಿಯನ್ನು 24-25°C ಎಂದು ಪರಿಗಣಿಸಲಾಗುತ್ತದೆ. ಒಬ್ಬ ವ್ಯಕ್ತಿಯು 20°C ಬದಲಿಗೆ 24°C ನಲ್ಲಿ ಎಸಿ ಬಳಸಿದರೆ ವಿದ್ಯುತ್ ಬಳಕೆಯನ್ನು 24% ವರೆಗೆ ಕಡಿಮೆ ಮಾಡಬಹುದು. ಇದು ಮನೆಗಳ ಮಾಸಿಕ ವಿದ್ಯುತ್ ಬಿಲ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡಬಹುದು.
ತಾಂತ್ರಿಕವಾಗಿ ನೀವು AC ಯನ್ನು ಸ್ವಲ್ಪ ಹೆಚ್ಚಿನ ತಾಪಮಾನಕ್ಕೆ (26°C) ಹೊಂದಿಸಿದಾಗ ಆ ತಾಪಮಾನವು ತ್ವರಿತವಾಗಿ ತಲುಪುತ್ತದೆ ಮತ್ತು AC ಕಂಪ್ರೆಸರ್ ನಿಲ್ಲುತ್ತದೆ. ಇದು ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುತ್ತದೆ. ಉದಾಹರಣೆಗೆ ನೀವು AC ಯನ್ನು 8 ಗಂಟೆಗಳ ಕಾಲ ಚಲಾಯಿಸಿ 26°C ಗೆ ಹೊಂದಿಸಿದರೆ AC ಕಂಪ್ರೆಸರ್ ಕೇವಲ 5 ಗಂಟೆಗಳ ಕಾಲ ಅಥವಾ ಅದಕ್ಕಿಂತ ಕಡಿಮೆ ಕಾಲ ಮಾತ್ರ ಕಾರ್ಯನಿರ್ವಹಿಸುತ್ತದೆ. ಇದು ನಿಮ್ಮ ಮನೆ ಅಥವಾ ಕೋಣೆಯ ಬಾಗಿಲು ಮತ್ತು ಕಿಟಕಿಗಳು ಮುಚ್ಚಿದ್ದ ಸನ್ನಿವೇಶದ ಅದರದಲ್ಲಿ ವಿವರಿಸಲಾಗಿದೆ.