BSNL VoWi-Fi Service
BSNL VoWi-Fi Service: ಭಾರತದ ಜನಪ್ರಿಯ ಸ್ವದೇಶಿ ಟೆಲಿಕಾಂ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ತಮ್ಮ ಗ್ರಾಹಕರಿಗೆ ಸಿಕ್ಕಾಪಟ್ಟೆ ಪ್ರಯೋಜನಗಳನ್ನು ನೀಡುವ ಅತ್ಯುತ್ತಮ ಯೋಜನಗಳನ್ನು ಹೊಂದಿವೆ. ಅಲ್ಲದೆ ಕಂಪನಿ ಇತ್ತೀಚೆಗೆ ವಾಯ್ಸ್ ಓವರ್ ವೈ-ಫೈ (VoWi-Fi) ಎಂಬ ಹೊಸ ಸೇವೆಯನ್ನು ಶುರು ಮಾಡಲಿದ್ದು ಗ್ರಾಹಕರಿಗೆ ಉತ್ತಮ ಅನುಭವ ನೀಡಲು ಮತ್ತು ಖಾಸಗಿ ಕಂಪನಿಗಳೊಂದಿಗೆ ಸ್ಪರ್ಧಿಸಲು ಇದು BSNL ತೆಗೆದುಕೊಂಡ ಒಂದು ದೊಡ್ಡ ಹೆಜ್ಜೆ. ಯಾಕೆಂದರೆ ಈ ಫೀಚರ್ ಅನ್ನು ನೆಟ್ವರ್ಕ್ ಇಲ್ಲದಿದ್ದರೂ ಈ ಫೀಚರ್ ಬಳಸಿಕೊಂಡು ಅತ್ಯುತ್ತಮ ಕರೆಗಳ ಅನುಭವನ್ನು ಪಡೆಯಬಹುದು. ಹಾಗಾದ್ರೆ ಈ ಫೀಚರ್ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು ಇದನ್ನು ಬಳಸುವುದು ಹೇಗೆ ಎನ್ನುವುದನ್ನು ತಿಳಿಯಿರಿ.
ಮೊದಲಿಗೆ ಈ VoWiFi ಅಂದರೆ ಏನು ಎನ್ನುವುದು ತಿಳಿಯುವುದು ಮುಖಯವಾಗಿದೆ. VoWiFi ಅಂದ್ರೆ ವಾಯ್ಸ್ ಓವರ್ ವೈ-ಫೈ ಎಂದು ಕರೆಯಲಾಗುತ್ತದೆ. ಇದೊಂದು ಉಚಿತ ವಾಯ್ಸ್ ಕರೆ ಬೆಂಬಲಿಸುವ ಫೀಚರ್ ಆಗಿದ್ದು ಇದನ್ನು ನೀವು ಕರೆ ಮಾಡುವ ಮೊದಲು ಮೊಬೈಲ್ ನೆಟ್‌ವರ್ಕ್ (2G, 3G, ಅಥವಾ 4G) ಬದಲಿಗೆ ಫೋನ್ ಮೂಲಕ VoWiFi ಬಳಸಬೇಕಾಗುತ್ತದೆ. ಇದರಿಂದ ಮೊಬೈಲ್ ನೆಟ್ವರ್ಕ್ ಇಲ್ಲದ ಸ್ಥಳಗಳಲ್ಲೂ ಉತ್ತಮ ಗುಣಮಟ್ಟದ ಕರೆಗಳು ಮಾಡಲು ಸಾಧ್ಯವಾಗುತ್ತವೆ. ಆದರೆ ಈ ಫೀಚರ್ ಬಳಸಲು ನಿಮ್ಮ ಫೋನ್ ಸಪೋರ್ಟ್ ಮಾಡಬೇಕು ಎನ್ನುವುದನ್ನು ಗಮನಿಸಬೇಕಾಗಿದೆ. ಈಗಾಗಲೇ ಬೇರೆ ಟೆಲಿಕಾಂ ಕಂಪನಿಗಳಾದ ಜಿಯೋ ಮತ್ತು ಏರ್ಟೆಲ್ ತಮ್ಮ ಬಳಕೆದಾರರಿಗೆ ನೀಡುತ್ತಿವೆ ಈಗ ಬಿಎಸ್ಎನ್ಎಲ್ ಬಾರಿಯಾಗಿದೆ.
ಮೊಬೈಲ್ ಸಿಗ್ನಲ್ ಇಲ್ಲದಿರುವುದು ಅಥವಾ ತುಂಬಾ ದುರ್ಬಲವಾಗಿರುವ ಪ್ರದೇಶಗಳಲ್ಲಿಯೂ ನಿರಂತರವಾಗಿ ಮಾತನಾಡುವ ಸಂಪರ್ಕವನ್ನು ಖಚಿತಪಡಿಸುವುದು. ಇದು ಕಟ್ಟಡಗಳ ಒಳಗೆ, ನೆಲಮಾಳಿಗೆಗಳಲ್ಲಿ ಅಥವಾ ದಪ್ಪ ಗೋಡೆಗಳಿರುವ ಜಾಗಗಳಲ್ಲಿ ಮೊಬೈಲ್ ಸಿಗ್ನಲ್ ಕಡಿಮೆಯಾದಾಗ ಕರೆಗಳು ಕಟ್ ಆಗುವುದನ್ನು ಅಥವಾ ಸ್ಪಷ್ಟತೆ ಇಲ್ಲದಿರುವುದನ್ನು ತಪ್ಪಿಸುತ್ತದೆ.
Also Read: 4K Google Smart TV: ಅಮೆಜಾನ್‌ನಲ್ಲಿ ಇಂದು 43 ಇಂಚಿನ ಗೂಗಲ್ ಸ್ಮಾರ್ಟ್ ಟಿವಿ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಲಭ್ಯ!
ವೈ-ಫೈ ಜಾಲದ ಹೆಚ್ಚು ಬ್ಯಾಂಡ್‌ವಿಡ್ತ್ ಸಾಮರ್ಥ್ಯವನ್ನು ಬಳಸುವುದರಿಂದ ಸಾಮಾನ್ಯ 2G/3G ಕರೆ ಉತ್ತಮವಾದ HD ಗುಣಮಟ್ಟದ ವಾಯ್ಸ್ ಕರೆಗಳನ್ನು ನೀಡಲಾಗುವುದು. ಈಗಾಗಲೇ ಹೇಳಿರುವಂತೆ ಮೊಬೈಲ್ ನೆಟ್ವರ್ಕ್ ಇಲ್ಲದ ಸ್ಥಳಗಳಲ್ಲೂ ಉತ್ತಮ ಗುಣಮಟ್ಟದ ಕರೆಗಳು ಮಾಡಲು ಸಾಧ್ಯವಾಗುತ್ತವೆ. ಆದರೆ ಈ ಫೀಚರ್ ಬಳಸಲು ನಿಮ್ಮ ಫೋನ್ ಸಪೋರ್ಟ್ ಮಾಡಬೇಕು ಎನ್ನುವುದನ್ನು ಗಮನಿಸಬೇಕಾಗಿದೆ.
ಈಗ ಅಲ್ಲಿ ವೈ-ಫೈ ಕಾಲಿಂಗ್ ಆನ್ ಡಿಸ್ ಐಫೋನ್ ಅನ್ನು ಆನ್ ಮಾಡಿ ಮಾಡಿ. ಕೆಲವೊಮ್ಮ ಸಪೋರ್ಟ್ ಮಾಡುವ ಫೋನ್ಗಳಲ್ಲಿ ಮೊದಲೇ ಆನ್ ಮಾಡಲಾಗಿರುತ್ತದೆ. ನಿಮ್ಮ ಫೋನ್ ಮೊಬೈಲ್ ಸಿಗ್ನಲ್ ದುರ್ಬಲವಾದಾಗ ತಾನಾಗಿಯೇ ವೈ-ಫೈ ಸಂಪರ್ಕಕ್ಕೆ ಬದಲಾಗುತ್ತದೆ. ಆ ಸಮಯದಲ್ಲಿ ನಿಮ್ಮ ಸ್ಕ್ರೀನ್ ಮೇಲೆ ನೆಟ್‌ವರ್ಕ್ ಹೆಸರಿನ ಪಕ್ಕದಲ್ಲಿ ಒಂದು ಸಣ್ಣ ವೈ-ಫೈ ಚಿಹ್ನೆ (Wi-Fi ಐಕಾನ್) ಕಾಣಿಸಿಕೊಳ್ಳುತ್ತದೆ.