ಬೋಟ್ ಈಗ ತಮ್ಮ ಹೊಚ್ಚ ಹೊಸ ನೆಕ್‌ಬ್ಯಾಂಡ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ನೆಕ್‌ಬ್ಯಾಂಡ್ ಮುಖ್ಯವಾಗಿ Dolby ಸಹಭಾಗಿತ್ವದಲ್ಲಿ ಅಧಿಕೃತವಾಗಿ ನಿರ್ವಾಣವಾಗಿದ್ದು ಇದನ್ನು boAt Nirvana 525 ANC ಎಂದು ಹೆಸರಿಸಲಾಗಿದೆ. ಇದು ವೈರ್‌ಲೆಸ್ ನೆಕ್‌ಬ್ಯಾಂಡ್ ಇಯರ್‌ಬಡ್‌ಗಳು ವಿಶೇಷ ಬೆಲೆಯಲ್ಲಿ ಬಿಡುಗಡೆಯಾಗಿ ಬಳಕೆದಾರರ ಖರೀದಿಗೆ ಈಗಾಗಲೇ ಲಭ್ಯವಿದೆ. ಬೋಟ್ ಮೂಲಕ ಬಿಡುಗಡೆಯಾಗಿರುವ ಈ ನೆಕ್‌ಬ್ಯಾಂಡ್ ಪ್ರಪಂಚದ ಮೊದಲ ವೈರ್‌ಲೆಸ್ ನೆಕ್‌ಬ್ಯಾಂಡ್ ಇಯರ್‌ಬಡ್‌ಗಳಾಗಿವೆ. boAt Nirvana 525 ANC ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಮೆಚ್ಚುಗೆ ಪಡೆಡಿರುವ ಬ್ರಾಂಡ್ ಡಾಲ್ಬಿ ಆಡಿಯೊದಿಂದ ನಡೆಸಲ್ಪಡುತ್ತದೆ.
Survey
✅ Thank you for completing the survey!
ಭಾರತದಲ್ಲಿ boAt Nirvana 525 ANC ಬೆಲೆ ಮತ್ತು ಲಭ್ಯತೆ
ಹೊಸ boAt Nirvana 525 ANCಅನ್ನು 2,499 ರೂಪಾಯಿಗಳ ವಿಶೇಷ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಮತ್ತು ಮೂರು ಬಣ್ಣಗಳಲ್ಲಿ ಲಭ್ಯವಿದೆ- ಸ್ಪೇಸ್ ಬ್ಲಾಕ್, ಸೆಲೆಸ್ಟಿಯಲ್ ಬ್ಲೂ ಮತ್ತು ಕಾಸ್ಮಿಕ್ ಗ್ರೇ. ಉತ್ಪನ್ನವು ಒಂದು ವರ್ಷದ ವಾರಂಟಿಯೊಂದಿಗೆ ಬರುತ್ತದೆ. ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಆನ್‌ಲೈನ್ ಔಟ್‌ಲೆಟ್‌ಗಳಲ್ಲಿ ಇಯರ್‌ಬಡ್‌ಗಳು ಪಡೆದುಕೊಳ್ಳುತ್ತವೆ. boAt ನ ಅಧಿಕೃತ ವೆಬ್‌ಸೈಟ್‌ನಲ್ಲಿ ಖರೀದಿದಾರರು ಬ್ಲೂಟೂತ್ ಇಯರ್‌ಬಡ್‌ಗಳ ಮೇಲೆ ತಮ್ಮ ಕೈಗಳನ್ನು ಪಡೆಯಬಹುದು. ಆಫ್‌ಲೈನ್ ಆಯ್ಕೆಗಳಿಗೆ ಬಂದರೆ ನೀವು ರಿಲಯನ್ಸ್ ಡಿಜಿಟಲ್, ಕ್ರೋಮಾ ಮತ್ತು ವಿಜಯ್ ಸೇಲ್ಸ್‌ನಂತಹ ವಿವಿಧ ಮಳಿಗೆಗಳಲ್ಲಿ ನೆಕ್‌ಬ್ಯಾಂಡ್ ಅನ್ನು ಖರೀದಿಸಬಹುದು.
ಈ ಹೊಸ boAt Nirvana 525 ANC ಮೆಟಾಲಿಕ್ ಲುಕ್ ಮತ್ತು ನಯವಾದ ಒಟ್ಟಾರೆ ವಿನ್ಯಾಸವನ್ನು ಹೊಂದಿದೆ. ಇದು 11mm ಡ್ರೈವರ್‌ಗಳೊಂದಿಗೆ ಬರುತ್ತದೆ ಅದು ಕೇಳುಗರ ಆಡಿಯೊದ ಡೆಪ್ತ್ ಮತ್ತು ಸ್ಪಷ್ಟತೆಯನ್ನು ನೀಡುತ್ತದೆ. ಈ boAt Nirvana 525 ANC ಹೈಬ್ರಿಡ್ ಸಕ್ರಿಯ ನೋಯಿಸ್ ಕ್ಯಾನ್ಸಲ್ ಜೊತೆಗೆ ಬರುತ್ತದೆ. ಅದು 42dB+ ವರೆಗೆ ನೋಯಿಸ್ ಕಡಿತಗೊಳಿಸುತ್ತದೆ. ಇದರಲ್ಲಿ 4 ಮೈಕ್ರೊಫೋನ್‌ಗಳು 2 ರೆಸ್ಪೋನ್ಸ್ ಮತ್ತು 2 ಫೀಡ್‌ಫಾರ್ವರ್ಡ್ ಮೈಕ್‌ಗಳನ್ನು ಇದರಲ್ಲಿ ನೀಡಲಾಗಿದೆ.
ಇಯರ್‌ಫೋನ್‌ಗಳು IPX5 ವಾಟರ್ ಮತ್ತು ಬೆವರು ನಿರೋಧಕ ರೇಟಿಂಗ್ ಅನ್ನು ಸಹ ಹೊಂದಿವೆ. ಡ್ಯುಯಲ್ ಪೇರಿಂಗ್ ಅನ್ನು ಬೆಂಬಲಿಸುವ ಈ boAt Nirvana 525 ANC ನೆಕ್‌ಬ್ಯಾಂಡ್ ಕನೆಕ್ಷನ್ಗಾಗಿ ಬ್ಲೂಟೂತ್ v5.2 ಅನ್ನು ಹೊಂದಿದ್ದು ASAP ಚಾರ್ಜ್ ವಿಧಾನವನ್ನು ಹೊಡನಿದೆ ಈ ಮೂಲಕ ಕೇವಲ 10 ನಿಮಿಷಗಳ ಚಾರ್ಜ್‌ನೊಂದಿಗೆ 10 ಗಂಟೆಗಳ ಪ್ಲೇಬ್ಯಾಕ್ ಅನ್ನು ಒದಗಿಸುತ್ತದೆ. ಬೋಟ್ ಪ್ರಕಾರ ಡಿವೈಸ್ ಸಂಪೂರ್ಣ ಚಾರ್ಜ್ ಮಾಡಲು ಸುಮಾರು 40 ನಿಮಿಷಗಳನ್ನು ತೆಗೆದುಕೊಂಡು ನಿಮಗೆ ಒಟ್ಟು 30 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile