Beware of Mobile Tower Scam - Digit Kannada
Mobile Tower Scam: ಪ್ರಸ್ತುತ ನಿಮಗೆ ಅಥವಾ ನಿಮಗೆ ತಿಳಿದವರೊಂದಿಗೆ ‘ಮನೆ ಮೇಲೆ ಅಥವಾ ಹೋಲದಲ್ಲಿ ಮೊಬೈಲ್ ಟವರ್ ಹಾಕಿಸಿ ಹಣ ಪಡೆಯಿರಿ’ ಎನ್ನುವಂತಹ ಕರೆಗಳು ಬಂದಿರುವ ಬಗ್ಗೆ ನೀವು ಕಂಡು ಕೇಳಿರಬಹುದು. ಅಪರಿಚಿತ ವಂಚಕರು ಇದರಲ್ಲಿ ಮುಖ್ಯವಾಗಿ ನಿಮ್ಮ ಹತ್ತಿರ ಸ್ಥಳವಿದ್ದರೆ ಟೆಲಿಕಾಂ ಕಂಪನಿಗಳ ಮೊಬೈಲ್ ಟವೆರ್ (Mobile Tower Scam) ಅನ್ನು ಸ್ಥಾಪಿಸಲು ಜಾಗ ನೀಡಿ ಹಣ ಪಡೆಯಬಹುದು ಎಂದು ಕರೆಯಲ್ಲಿ ತಿಳಿಸಲಾಗುತ್ತದೆ. ಅಲ್ಲದೆ ಅಪ್ಪಿತಪ್ಪಿ ನೀವು ಹೌದು ಜಾಗ ಇದೆ ಅಂಥ ಕಂಫಾರ್ಮ್ ಮಾಡಿದ್ರೆ ಸಾಕು ನಸ್ತಕ್ಕೆ ನೀವೇ ದಾರಿ ಮಾಡಿಕೊಟ್ಟಂತಗುತ್ತದೆ
ನಿಮ್ಮ ಉತ್ತರದ ಆಧಾರದ ಮೇರೆಗೆ ನಿಮ್ಮ ಆ ಜಾಗದ ಪತ್ರಗಳನ್ನು ವಾಟ್ಸಾಪ್ ಅಥವಾ ಇಮೇಲ್ ಮೂಲಕ ಕಳುಹಿಸಲು ಕೇಳಲಾಗುತ್ತದೆ. ಇದರ ನಂತರ ನಿಮ್ಮ ಜಾಗವನ್ನು ನೊಂದಾಯಿಸಲು ಈ ವಂಚಕರು ಸಾಮಾನ್ಯವಾಗಿ ಭದ್ರತಾ ಠೇವಣಿ, ಅರ್ಜಿ ಶುಲ್ಕ ಅಥವಾ ನೋಂದಣಿ ಶುಲ್ಕಗಳಂತಹ ವಿವಿಧ ನೆಪಗಳ ಅಡಿಯಲ್ಲಿ ಹಣವನ್ನು ವಿನಂತಿಸುತ್ತಾರೆ. ನೋಂದಣಿ ಶುಲ್ಕ (Rregistration Fee) ಭಾಗವಾಗಿ ಸುಮಾರು ರೂ.2500-10000 ಅಥವಾ ಅದಕ್ಕಿಂತ ಹೆಚ್ಚು ಮೊತ್ತವನ್ನು ಪಾವತಿಸುವಂತೆ ಮನ ಹೋಲಿಸಲಾಗುತ್ತದೆ.
ನಿಮಗೆ ಭರವಸೆ ನೀಡಲು ಇದಕ್ಕೆ ಸಾಕ್ಷಿಯಾಗಿ ನಕಲಿ ಆಕ್ಷೇಪಣೆಯಿಲ್ಲದ ಪ್ರಮಾಣಪತ್ರಗಳನ್ನು (NOC) ಸಹ ನೀಡಲಾಗುತ್ತದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ರೀತಿಯ ವಂಚನೆಗಳಿಗೆ ಕಡಿವಾಣ ಹಾಕಲು ಹಲವಾರು ದಿನಗಳಿಂದ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಎಚ್ಚರದ ಮಾಹಿತಿಯನ್ನು ನೀಡುತ್ತಾ ಬರುತ್ತಿದೆ.
ಇದನ್ನೂ ಓದಿ – Vivo T4 Ultra ಸ್ಮಾರ್ಟ್ಫೋನ್ ಟೆಲಿಫೋಟೋ ಸೆನ್ಸರ್ ಮತ್ತು 100X ಜೂಮ್‌ನೊಂದಿಗೆ ಬರುವ ನಿರೀಕ್ಷೆ!
ಇದೊಂದಿಗೆ ಪ್ರಸ್ತುತ TRAI ಹೇಳೋದೇನು ಎನ್ನುವುದರ ಬಗ್ಗೆ ಮಾಹಿತಿಯನ್ನು ನೋಡುವುದಾದರೆ ‘ಇದೆಲ್ಲ ಕೇವಲ ವಂಚನೆ ಮಾಡುವ ಉದ್ದೇಶದಿಂದ ಮಾತ್ರ ಇಂತಹ ಕರೆಗಳನ್ನು ಪ್ರೇರೇಪಿಸುತ್ತದೆ. ಸರ್ಕಾರ ಯಾವುದೇ ವ್ಯಯಕ್ತಿಕ ಜಾಗವನ್ನು ಕರೆಗಳಲ್ಲಿ ಕೇಳಿ ಪಡೆಯೋಲ್ಲ. ಯಾಕೆಂದರೆ ಅಂಥಹ ಯಾವುದೇ ಸನ್ನಿವೇಶಗಳು ಸರ್ಕಾರಕ್ಕೆ ಅಗತ್ಯೆವೇ ಇರೋಲ್ಲ. ಆದರೆ ಮುಗ್ದ ಜನರು ವಂಚನೆಯನ್ನು ಅರಿಯದೆ ಇದಕ್ಕೆ ಮಣಿದು ನಷ್ಟವನ್ನು ಅನುಭಾವಿಸುತ್ತಿದ್ದರೆ ಎನ್ನಲಾಗಿದೆ.
ಸಾಮಾನ್ಯವಾಗಿ ಇಂತಹ ದೊಡ್ಡ ಮೊತ್ತದ ಕಾರ್ಯಗಳಿಗೆ ಸಾರ್ವಜನಿಕ ಭಾಗವಹಿಸುವಿಕೆಗೆ ಯಾವುದೇ ಕಾನೂನುಬದ್ಧ ಅವಶ್ಯಕತೆ ಇಲ್ಲ ಅನ್ನೋದು ಸ್ಪಷ್ಟವಾಗಿದೆ. ಮೊಬೈಲ್ ಟವರ್ ಅಳವಡಿಕೆಗಾಗಿ ಆವರಣವನ್ನು ಗುತ್ತಿಗೆ ಅಥವಾ ಬಾಡಿಗೆಗೆ ಪಡೆಯುವಲ್ಲಿ DoT ಮತ್ತು TRAI ಭಾಗಿಯಾಗೊಲ್ಲ. ಈ ಕಂಪನಿಗಳು ಸಾಮಾನ್ಯವಾಗಿ ಹಣ ಸಂಗ್ರಹಿಸಿದ ನಂತರ ಮಾಯವಾಗುತ್ತವೆ ಇದರಿಂದಾಗಿ ಬಲಿಪಶುಗಳು ತಮ್ಮ ನಷ್ಟವನ್ನು ಮರುಪಡೆಯಲು ಸಾಧ್ಯವಾಗುವುದಿಲ್ಲ.
ಮುಗ್ದ ಜನ ಮನ ಹೋಲಿಸಲು DoT, TRAI ಅಥವಾ ಇತರ ಸರ್ಕಾರಿ ಇಲಾಖೆಗಳಿಂದ ಬಂದಿವೆ ಎಂದು ಹೇಳಲಾದ ನಕಲಿ ಆಕ್ಷೇಪಣೆ ಇಲ್ಲ ಪ್ರಮಾಣಪತ್ರಗಳನ್ನು (NOC) ನೀಡಬಹುದು. ಅಲ್ಲದೆ ಕೆಲವು ವಂಚಕರು ಗ್ರಾಹಕರು ತಮ್ಮ ಬೇಡಿಕೆಗಳನ್ನು ಪಾಲಿಸದಿದ್ದರೆ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕ ಕಡಿತಗೊಳಿಸುವುದಾಗಿ ಬೆದರಿಕೆ ಸಹ ಹಾಕಬಹುದು. ಈ ಸಂದರ್ಭದಲ್ಲಿ ತಕ್ಷಣ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ನೀಡಬಹುದು. ಅಥವಾ ಕರೆಯಲ್ಲೇ ಈ ಎಲ್ಲ ಸನ್ನಿವೇಶ ನಡೆದರೆ ಸರ್ಕಾರಿ ಸೈಬರ್ ಕ್ರೈಂ ವಿಭಾಗ Sancharsaathi ವೆಬ್‌ಸೈಟ್‌ನಲ್ಲಿ ಇದರ ದೂರನ್ನು ನೋಂದಾಯಿಸಬಹುದು.
ಕಾನೂನುಬದ್ಧತೆಯನ್ನು ಪರಿಶೀಲಿಸಿ: DoT ಯ ವೆಬ್‌ಸೈಟ್‌ನಿಂದ ಕಂಪನಿಯ ರುಜುವಾತುಗಳನ್ನು ಪರಿಶೀಲಿಸದೆ ಈ ಕರೆಗಳನ್ನು ನಂಬಬೇಡಿ.
ಯಾವುದೇ ಹಣವನ್ನು ಪಾವತಿಸಬೇಡಿ: ಟವರ್ ಸ್ಥಾಪನೆಗೆ ಯಾವುದೇ ಶುಲ್ಕಗಳು, ಠೇವಣಿಗಳು ಅಥವಾ ತೆರಿಗೆಗಳನ್ನು ಪಾವತಿಸುವುದನ್ನು ತಪ್ಪಿಸಿ. ನೀವು ವಿಷಾದಿಸುವ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಭಯಪಡಬೇಡಿ ಅಥವಾ ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗಬೇಡಿ.
ವಂಚನೆಯನ್ನು ವರದಿ ಮಾಡಿ: ನೀವು ಅಂತಹ ವಂಚನೆಯ ಚಟುವಟಿಕೆಯನ್ನು ಎದುರಿಸಿದರೆ, ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ವರದಿ ಮಾಡಿ. ಅನುಮಾನಾಸ್ಪದ ಸಂವಹನಗಳನ್ನು ವರದಿ ಮಾಡಿ: ದೂರಸಂಪರ್ಕ ಇಲಾಖೆಯ ಸಂಚಾರ್ ಸಾಥಿ (Sancharsaathi) ವೇದಿಕೆಯಲ್ಲಿರುವ ಚಕ್ಷು ಸೌಲಭ್ಯದ ಮೂಲಕ ಅಥವಾ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಮಾಡುವ ಪೋರ್ಟಲ್ ಮೂಲಕವೂ ನೀವು ಶಂಕಿತ ವಂಚನೆಯ ಸಂವಹನಗಳನ್ನು ವರದಿ ಮಾಡಬಹುದು.