Apple Event - Sep 2025
ಬಹು ನಿರೀಕ್ಷಿತ ಆಪಲ್ ಈವೆಂಟ್ ಬಿಡುಗಡೆಗೆ ಡೇಟ್ ಕಂಫಾರ್ಮ್ ಆಗಿದೆ. ಇದರ ಬಗ್ಗೆ ಸ್ವತಃ ಕಂಪನಿ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದ್ದೂ ಆಪಲ್ ತನ್ನ ಮುಂದಿನ ದೊಡ್ಡ ಈವೆಂಟ್ ಅನ್ನು “Awe-Dropping” ಎಂದು ಹೆಸರಿಸಿದೆ. ಈ ಕಾರ್ಯಕ್ರಮವನ್ನು ಆ್ಯಪಲ್ ಪಾರ್ಕ್, ಕ್ಯುಪರ್ಟಿನೋ, ಕ್ಯಾಲಿಫೋರ್ನಿಯಾದಲ್ಲಿ ಮುಂದಿನ ತಿಂಗಳು ಅಂದ್ರೆ 9ನೇ ಸೆಪ್ಟೆಂಬರ್ 2025 ರಂದು ಹಮ್ಮಿಕೊಂಡಿದೆ. ಈ ಈವೆಂಟ್‌ನಲ್ಲಿ ಕಂಪನಿ ಮುಂಬರಲಿರುವ iPhone 17 Series, iPhone 17 Air, Apple Watch 11 Series, Watch Ultra 3, AirPods Pro 3 ಮತ್ತು ಹೊಸ iOS 26 ಸಾಫ್ಟ್‌ವೇರ್ ಬಗ್ಗೆ ದೊಡ್ಡ ಅಪ್ಡೇಟ್ ನೀಡುವ ನಿರೀಕ್ಷೆಗಳಿವೆ.
ಆಪಲ್ ಈ ಬಾರಿ ತನ್ನ iPhone 17 ಸರಣಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚು. ಇದರಲ್ಲಿದೆ iPhone 17, 17 Pro, 17 Pro Max ಮತ್ತು ವಿಶೇಷವಾಗಿ ಅತಿ ತೆಳುವಾದ iPhone 17 Air (ಸುಮಾರು 5.5mm). ಹೊಸ 24MP ಫ್ರಂಟ್ ಕ್ಯಾಮೆರಾ, Pro ಮಾದರಿಗಳಲ್ಲಿ 48MP ಟೆಲಿಫೋಟೋ ಲೆನ್ಸ್, 8x ಆಪ್ಟಿಕಲ್ ಜೂಮ್, ಮತ್ತು ಹೊಸ iOS 26 ಪರಿಚಯವಾಗಲಿದೆ. ಜೊತೆಗೆ Apple Watch Series 11, Watch Ultra 3 (ಸಾಟಲೈಟ್ ಸಂಪರ್ಕ), ಹಾಗೂ AirPods Pro 3 (ಹೃದಯ ಬಡಿತ ಮಾಪನ) ಕೂಡ ಬರಬಹುದು. macOS Tahoe ಮತ್ತು ಹೊಸ Apple TV/ಹೋಮ್‌ಪಾಡ್ ಉತ್ಪನ್ನಗಳು ಘೋಷಣೆಗೊಳ್ಳುವ ಸಾಧ್ಯತೆ ಇದೆ. ಈವೆಂಟ್‌ನಲ್ಲಿ ಬಣ್ಣದ ಹೊಸ ಆಯ್ಕೆಗಳು ಮತ್ತು ವಿಶೇಷ AI ಫೀಚರ್‌ಗಳೂ ಇರಬಹುದು.
ಮುಂಬರಲಿರುವ ಆಪಲ್ (Apple) ತನ್ನ ಹೊಸ “Awe-Dropping” ಈವೆಂಟ್ ಅನ್ನು ಮಂಗಳವಾರ 9ನೇ ಸೆಪ್ಟೆಂಬರ್ 2025 ರಂದು ಬೆಳಿಗ್ಗೆ 10 ಗಂಟೆಗೆ (ಪೆಸಿಫಿಕ್ ಟೈಮ್) ನಡೆಸಲಿದೆ. ಭಾರತದ ಪ್ರಕಾರ ಇದು ರಾತ್ರಿ 10:30 (IST) ಕ್ಕೆ ಪ್ರಾರಂಭವಾಗುತ್ತದೆ. ಈ ಕಾರ್ಯಕ್ರಮವನ್ನು ಸ್ಟೀವ್ ಜಾಬ್ಸ್ ಥಿಯೇಟರ್ ಅಲ್ಲಿ ಇದು ಪಲ್ ಪಾರ್ಕ್, ಕ್ಯುಪರ್ಟಿನೋ, ಕ್ಯಾಲಿಫೋರ್ನಿಯಾ ಅಮೇರಿಕಾದಲ್ಲಿ ಆಯೋಜಿಸಲಾಗಿದೆ.
Also Read: Realme P4 Pro First Sale: ಇಂದು ಬರೋಬ್ಬರಿ ₹5,000 ಡಿಸ್ಕೌಂಟ್ಗಳೊಂದಿಗೆ ಮೊದಲ ಮಾರಾಟದಲ್ಲಿ ಲಭ್ಯ!
Apple ತನ್ನ “Awe-Dropping” ಈವೆಂಟ್ ಅನ್ನು ಸೆಪ್ಟೆಂಬರ್ 9, 2025 ರಂದು ನೇರ ಪ್ರಸಾರ ಮಾಡಲಿದೆ. ಈ ಕಾರ್ಯಕ್ರಮವನ್ನು ವೀಕ್ಷಿಸಲು ಇದರ ಲೈವ್ ಅನ್ನು ಆಸಕ್ತ ಬಳಕೆದಾರರು ಆಪಲ್ ಅಧಿಕೃತ ವೆಬ್‌ಸೈಟ್, ಆಪಲ್ ಟಿವಿ ಆಪ್, ಅಥವಾ ಯುಟ್ಯೂಬ್ ಲೈವ್ ಮೂಲಕ ಸುಲಭವಾಗಿ ನೋಡಬಹುದು. ಕಾರ್ಯಕ್ರಮವು ರಾತ್ರಿ 10:30 (IST) ಕ್ಕೆ ಪ್ರಾರಂಭವಾಗುತ್ತದೆ. ಆಸಕ್ತರು “Notify Me” ಆಯ್ಕೆಯನ್ನು ಸಕ್ರಿಯಗೊಳಿಸಿ ನೇರ ಪ್ರಸಾರದ ಕುರಿತು ತಿಳಿವಳಿಕೆ ಪಡೆಯಬಹುದು.