ಸದ್ಯದಲ್ಲೇ Amazon Great Freedom Sale ಪ್ರಾರಂಭ; ಭರ್ಜರಿ ಡಿಸ್ಕೌಂಟ್ ಖಚಿತ!
ಆನ್‌ಲೈನ್ ಶಾಪಿಂಗ್ ಪ್ರಿಯರು ಕಾತರದಿಂದ ಕಾಯುತ್ತಿರುವ Amazon Great Freedom Sale 2026 ಆರಂಭಕ್ಕೆ ದಿನಗಣನೆ ಶುರುವಾಗಿದೆ. ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಅಮೆಜಾನ್ ತಾಣವು ಈ ವಿಶೇಷ ಸೇಲ್ ಆಯೋಜಿಸುತ್ತಾ ಸಾಗಿ ಬಂದಿದೆ. ಈ ಬಾರಿ ಕೂಡ ಗ್ರಾಹಕರಿಗೆ ಹಲವು ಆಕರ್ಷಕ ಕೊಡುಗೆಗಳನ್ನು ನೀಡಲು ಅಮೆಜಾನ್ ಸಜ್ಜಾಗಿದೆ. ಪ್ರಮುಖವಾಗಿ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಸ್ಮಾರ್ಟ್ ಟಿವಿ, ಗೃಹೋಪಯೋಗಿ ಉಪಕರಣಗಳು, ಫ್ಯಾಷನ್ ಉತ್ಪನ್ನಗಳು ಹಾಗೂ ಇತರೆ ಎಲೆಕ್ಟ್ರಾನಿಕ್ ಸಾಧನಗಳ ಮೇಲೆ ಗಮನಾರ್ಹ ರಿಯಾಯಿತಿಗಳು ದೊರೆಯಲಿವೆ. ಹಾಗಾದರೆ ಅಮೆಜಾನ್ ಗ್ರೇಟ್ ಫ್ರೀಡಂ ಸೇಲ್ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.
SurveyAlso Read : ಅಗ್ಗದ ದರದಲ್ಲಿ ಎಂಟ್ರಿ ಕೊಡಲಿದೆ Vivo T5e 4G ಸ್ಮಾರ್ಟ್‌ಫೋನ್! 5,500mAh ಬ್ಯಾಟರಿ ಸಾಧ್ಯತೆ
Amazon Great Freedom Sale ಡೇಟ್ ಫಿಕ್ಸ್
ಬಹುನಿರೀಕ್ಷಿತ ಅಮೆಜಾನ್ ಗ್ರೇಟ್ ಫ್ರೀಡಂ ಸೇಲ್ 2026 ಇದೇ ಆಗಸ್ಟ್ 7 ರಿಂದ ಆರಂಭವಾಗಲಿದೆ ಎಂದು ವರದಿಗಳಾಗಿವೆ. ಈ ಮಾರಾಟವು ಹೊಸ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಅಥವಾ ಇತರೆ ಗ್ಯಾಜೆಟ್ ಖರೀದಿಸಲು ಯೋಜಿಸುತ್ತಿರುವವರಿಗೆ ಈ ಸೇಲ್ ಉತ್ತಮ ಅವಕಾಶವಾಗಲಿದೆ. ವಿಶೇಷವಾಗಿ ಹಲವು ಹೊಸ ಡಿವೈಸ್‌ಗಳ ಬಿಡುಗಡೆ ಕೂಡ ಇದೇ ಸೇಲ್ ಅವಧಿಯಲ್ಲಿ ನಡೆಯುವ ನಿರೀಕ್ಷೆಯಿದೆ.

ಭರ್ಜರಿ ಡಿಸ್ಕೌಂಟ್ ಕೊಡುಗೆ
ಈ ಬಾರಿ ಅಮೆಜಾನ್ ಗ್ರಾಹಕರಿಗೆ ಬ್ಯಾಂಕ್ ರಿಯಾಯಿತಿ, ಎಕ್ಸ್‌ಚೇಂಜ್ ಬೋನಸ್ ಹಾಗೂ ನೋ ಕಾಸ್ಟ್ EMI ಸೇರಿದಂತೆ ಹಲವು ವಿಶೇಷ ಆಫರ್‌ಗಳನ್ನು ನೀಡಲಿದೆ. HDFC ಬ್ಯಾಂಕ್ ಕಾರ್ಡ್ ಬಳಸಿ ಖರೀದಿ ಮಾಡುವವರಿಗೆ 10% ತ್ವರಿತ ರಿಯಾಯಿತಿ ದೊರೆಯುವ ಸಾಧ್ಯತೆ ಇದೆ. ಇದರೊಂದಿಗೆ ಗ್ರಾಹಕರು ಹಳೆಯ ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್ ಅನ್ನು ಎಕ್ಸ್‌ಚೇಂಜ್ ಮಾಡಿಕೊಂಡು ಹೆಚ್ಚುವರಿ ರಿಯಾಯಿತಿ ಸಹ ಪಡೆಯಬಹುದು.
ಸಾಮಾನ್ಯವಾಗಿ ಅಮೆಜಾನ್ ಸೇಲ್ ವೇಳೆ ಸ್ಯಾಮ್‌ಸಂಗ್, ಐಫೋನ್, ವಿವೋ, ಐಕ್ಯೂ, ಒನ್‌ಪ್ಲಸ್ ಹಾಗೂ ರಿಯಲ್‌ಮಿ ಸೇರಿದಂತೆ ಹಲವು ಪ್ರಮುಖ ಬ್ರ್ಯಾಂಡ್‌ಗಳ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡಬಹುದು. ಇದರ ಜೊತೆಗೆ ಸ್ಮಾರ್ಟ್ ಟಿವಿ, ಫ್ರಿಜ್, ವಾಷಿಂಗ್ ಮಷಿನ್, ಏರ್ ಕಂಡೀಷನರ್ ಸೇರಿದಂತೆ ಗೃಹೋಪಯೋಗಿ ಉಪಕರಣಗಳ ಮೇಲೂ ವಿಶೇಷ ಆಫರ್‌ಗಳು ಲಭ್ಯವಾಗುವ ನಿರೀಕ್ಷೆಯಿದೆ. ಒಟ್ಟಾರೆ ಈ ಸೇಲ್ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಟಿವಿ ಮತ್ತು ಗೃಹೋಪಯೋಗಿ ಉಪಕರಣಗಳನ್ನು ಕಡಿಮೆ ಬೆಲೆಗೆ ಖರೀದಿಸಲು ವರ್ಷದ ಪ್ರಮುಖ ಆನ್‌ಲೈನ್ ಸೇಲ್‌ಗಳಲ್ಲಿ ಒಂದಾಗಲಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile