ಅಗ್ಗದ ದರದಲ್ಲಿ ಎಂಟ್ರಿ ಕೊಡಲಿದೆ Vivo T5e 4G ಸ್ಮಾರ್ಟ್‌ಫೋನ್‌! 5,500mAh ಬ್ಯಾಟರಿ ಸಾಧ್ಯತೆ

HIGHLIGHTS

ಭಾರತದ ಮಾರುಕಟ್ಟೆಗೆ ಬರಲಿದೆ ವಿವೋ T5e 4G ಮೊಬೈಲ್‌

ವಿವೋ T5e 4G ಮೊಬೈಲ್‌ ಬಜೆಟ್‌ ಪ್ರೈಸ್‌ಟ್ಯಾಗ್‌ನಲ್ಲಿ ಲಗ್ಗೆ ಇಡಲಿದೆ

ಈ ಸ್ಮಾರ್ಟ್‌ಫೋನ್‌ 5,500mAh ಸಾಮರ್ಥ್ಯದ ಬ್ಯಾಟರಿ ಪಡೆದಿರುವ ಸಾಧ್ಯತೆ

ಅಗ್ಗದ ದರದಲ್ಲಿ ಎಂಟ್ರಿ ಕೊಡಲಿದೆ Vivo T5e 4G ಸ್ಮಾರ್ಟ್‌ಫೋನ್‌! 5,500mAh ಬ್ಯಾಟರಿ ಸಾಧ್ಯತೆ

ವಿವೋ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಪರಿಚಯಿಸಲು ಸಿದ್ಧವಾಗಿದೆ. ವರದಿಗಳ ಪ್ರಕಾರ ಕಂಪನಿಯು Vivo T5e 4G ಅನ್ನು ಭಾರತದಲ್ಲಿ ತನ್ನ ಹೊಸ ಬಜೆಟ್ 4G ಸ್ಮಾರ್ಟ್‌ಫೋನ್ ಆಗಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಕಂಪನಿಯು ಇನ್ನೂ ವಿವೋ T5e 4G ಲಾಂಚ್‌ ಅನ್ನು ಅಧಿಕೃತವಾಗಿ ಘೋಷಿಸಿಲ್ಲ. ಆದಾಗ್ಯೂ ಈ ಮೊಬೈಲ್‌ನ ಡಿಸೈನ್ ಹಾಗೂ ಪ್ರಮುಖ ಫೀಚರ್ಸ್‌ ಈಗಾಗಲೇ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಬಿಡುಗಡೆಯ ಮುನ್ನವೇ ಸಾಕಷ್ಟು ಕುತೂಹಲವನ್ನು ಮೂಡಿಸಿವೆ. ಅಧಿಕೃತ ಅನಾವರಣದ ನಂತರ ಮೊಬೈಲ್‌ನ ಬೆಲೆ, ಲಭ್ಯತೆ ಮತ್ತು ಸಂಪೂರ್ಣ ಆಯ್ಕೆಗಳ ಬಗ್ಗೆ ಹೆಚ್ಚಿನ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ. ಹಾಗಾದರೇ ವಿವೋ T5e 4G ಮೊಬೈಲ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Google Pixel 9a ಮೊಬೈಲ್‌ ಖರೀದಿಸಲು ಇದುವೇ ಬೆಸ್ಟ್‌ ಟೈಮ್‌! ಭರ್ಜರಿ ಆಫರ್‌ ಲಭ್ಯ

ಸದ್ಯದಲ್ಲೇ Vivo T5e 4G ಬಿಡುಗಡೆ

ವಿವೋ ಸಂಸ್ಥೆಯ ಮುಂಬರುವ ನೂತನ ವಿವೋ T5e 4G ಸ್ಮಾರ್ಟ್‌ಫೋನ್‌ ಅಗ್ಗದ ರೇಂಜ್‌ನಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆಗಳು ಇವೆ. ಅಂದಹಾಗೆ ಈ ಮೊಬೈಲ್‌ ಸದ್ಯದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಲಾಂಚ್‌ ಆಗಲಿದೆ.ಭಾರತದಲ್ಲಿ ಈ ಫೋನ್‌ ಆಕರ್ಷಕ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗುವ ಸಾಧ್ಯತೆಗಳು ಇವೆ. ಈ ಫೋನ್‌ ಬಜೆಟ್‌ ದರದಲ್ಲಿ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಗಳು ಇವೆ ಎನ್ನಲಾಗಿದೆ.

Vivo T5e 4G

ವಿವೋ T5e 4G ಫೋನಿನ ನಿರೀಕ್ಷಿತ ಫೀಚರ್ಸ್‌

ವಿವೋ T5e 4G ಫೋನ್ 6.74 ಇಂಚಿನ HD+ ಡಿಸ್‌ಪ್ಲೇ ಅನ್ನು ಹೊಂದಿರಲಿದೆ ಎನ್ನಲಾಗಿದೆ. ಅಲ್ಲದೇ ಇದು 1600×720 ಪಿಕ್ಸೆಲ್ ರೆಸಲ್ಯೂಶನ್‌ ಸೌಲಭ್ಯ ಪಡೆದಿರಲಿದೆ. ಈ ಸ್ಮಾರ್ಟ್‌ಫೋನ್ ಯುನಿಸಾಕ್ T7225 SoC ಚಿಪ್‌ಸೆಟ್‌ ಪ್ರೊಸೆಸರ್‌ ನೊಂದಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದು ಬಜೆಟ್ ವಿಭಾಗದ ಚಿಪ್‌ಸೆಟ್ ಆಗಿದ್ದು

ಆಂಡ್ರಾಯ್ಡ್ 16 ಆಧಾರಿತ OriginOS 6.0 ಜೊತೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಸಾಮಾನ್ಯವಾಗಿ ಬಜೆಟ್ 4G ಫೋನ್‌ಗಳು ಹಳೆಯ ಆಂಡ್ರಾಯ್ಡ್ ಆವೃತ್ತಿಯೊಂದಿಗೆ ಬರುತ್ತವೆ. ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್, ಮೈಕ್ರೊ SD ಕಾರ್ಡ್ ಸ್ಲಾಟ್ ಹಾಗೂ USB 2.0 ಪೋರ್ಟ್ ಸೇರಿದಂತೆ ಹಲವು ಅಗತ್ಯ ಆಯ್ಕೆಗಳನ್ನು ಫೋನ್ ಒಳಗೊಂಡಿರಲಿದೆ ಎಂದು ಹೇಳಲಾಗಿದೆ.

ವಿವೋ T5e 4G ಮೊಬೈಲ್‌ ಹಿಂಭಾಗದಲ್ಲಿ 8 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹಾಗೂ ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ 5 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇರಲಿದೆ ಎಂದು ವರದಿಯಾಗಿದೆ. ಹಾಗೆಯೇ ಈ ಫೋನ್‌ 5,500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿರುವ ನಿರೀಕ್ಷೆಗಳು ಇವೆ. ಇದಕ್ಕೆ ಪೂರಕವಾಗಿ 15W ಫಾಸ್ಟ್ ಚಾರ್ಜಿಂಗ್ ಸಪೋರ್ಟ್‌ ಅನ್ನು ಹೊಂದಿರಲಿದೆ. ಸಾಮಾನ್ಯ ಬಳಕೆಯಲ್ಲಿ ಈ ಬ್ಯಾಟರಿ ಒಂದು ದಿನಕ್ಕಿಂತ ಹೆಚ್ಚು ಸಮಯ ಸುಲಭವಾಗಿ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile