Amazon Great Indian Festival 2025 sale announced great deals on smartphones Smart Tv electronic
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Amazon GIF Sale 2025) ಆರಂಭಕ್ಕೆ ಇನ್ನು ಕೆಳಗೆ ದಿನಗಳಿವೆ. ಮಾರಾಟದ ದಿನಾಂಕಗಳು ಇನ್ನೂ ಬಹಿರಂಗಗೊಳ್ಳದಿದ್ದರೂ ಈಗಾಗಲೇ ಉತ್ಸಾಹ ಮನೆಮಾಡಿದೆ. ವಿದ್ಯಾರ್ಥಿಗಳಿಗೆ ಪವರ್ಫುಲ್ ಲ್ಯಾಪ್‌ಟಾಪ್‌ಗಳಿಂದ ಹಿಡಿದು ಕೆಲಸ ಮತ್ತು ಮನರಂಜನೆಗೆ ಸೂಕ್ತವಾದ ಸ್ಮಾರ್ಟ್ ಟಿವಿ, ಫೋನ್ ಮತ್ತು ಸೌಂಡ್ ಬಾರ್ ಮೇಲೆ ಉತ್ತಮ ಡೀಲ್ ನಿರೀಕ್ಷಿಸಬಹುದು. ಸ್ಮಾರ್ಟ್ ಟಿವಿಗಳು ಮತ್ತು ಉತ್ತಮ ಗುಣಮಟ್ಟದ ಸ್ಪೀಕರ್‌ಗಳನ್ನು ಸಹ ಒಳಗೊಂಡಿದ್ದು ಪೂರ್ಣ ಮಾರಾಟ ಪ್ರಾರಂಭವಾಗುವ ಮೊದಲು ಗ್ರಾಹಕರು ತಮ್ಮ ಮನೆಗಳನ್ನು ಅಪ್‌ಗ್ರೇಡ್ ಮಾಡಲು ಅವಕಾಶವನ್ನು ನೀಡುತ್ತದೆ.
ಈ ಬಾರಿಯ ಮಾರಾಟದಲ್ಲಿ ನೀವು ಸ್ಮಾರ್ಟ್ ಟಿವಿಗಳ ಮೇಲೆ ದೊಡ್ಡ ರಿಯಾಯಿತಿಗಳನ್ನು ನಿರೀಕ್ಷಿಸಬಹುದು. ಸ್ಯಾಮ್‌ಸಂಗ್, ಸೋನಿ, ಎಲ್‌ಜಿ ಮತ್ತು ಶಿಯೋಮಿಯಂತಹ ದೊಡ್ಡ ಬ್ರಾಂಡ್‌ಗಳ ಟಿವಿಗಳ ಬೆಲೆಗಳು ತುಂಬಾ ಕಡಿಮೆ ಆಗುತ್ತವೆ. ಕೆಲವು ಟಿವಿಗಳ ಮೇಲೆ ಶೇಕಡಾ 65ರಷ್ಟು ರಿಯಾಯಿತಿ ಸಿಗಬಹುದು. ಇದರ ಜೊತೆಗೆ ನೀವು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಿಂದ ಪಾವತಿಸಿದರೆ ಬ್ಯಾಂಕ್ ಹೆಚ್ಚುವರಿ ರಿಯಾಯಿತಿ ಕೂಡ ಸಿಗಬಹುದು.
ನಿಮ್ಮ ಹಳೆಯ ಟಿವಿಯನ್ನು ವಿನಿಮಯ ಮಾಡಿಕೊಂಡು ಹೊಸ ಟಿವಿ ಖರೀದಿಸಿದರೆ ಅದರ ಮೇಲೆ ಕೂಡ ನಿಮಗೆ ಹಣ ಉಳಿತಾಯವಾಗುತ್ತದೆ. ಟಿವಿ ಜೊತೆಗೆ ಜೆಬಿಎಲ್, ಬೋಟ್, ಮತ್ತು ಸೋನಿಯಂತಹ ಕಂಪನಿಗಳ ಸೌಂಡ್‌ಬಾರ್‌ಗಳ ಮೇಲೆ ಶೇಕಡಾ 80ರಷ್ಟು ರಿಯಾಯಿತಿ ಸಿಗುವ ಸಾಧ್ಯತೆಯಿದೆ. ಇದು ನಿಮ್ಮ ಮನೆಗೆ ಉತ್ತಮ ಸಿನಿಮಾ ವಾತಾವರಣ ತರಲು ಸಹಾಯ ಮಾಡುತ್ತದೆ.
ಈ ಮಾರಾಟದ ಸಮಯದಲ್ಲಿ ನೀವು ಮೊಬೈಲ್ ಫೋನ್ ಮತ್ತು ಲ್ಯಾಪ್ಟಾಪ್ ಖರೀದಿಸಲು ಇದು ಸರಿಯಾದ ಸಮಯ. ಬಜೆಟ್‌ನಿಂದ ಹಿಡಿದು ಐಫೋನ್‌ನ ದುಬಾರಿ ಫೋನ್‌ಗಳ ಮೇಲೆ ಉತ್ತಮ ಬೆಲೆ ಕಡಿತ ಇರುತ್ತದೆ. ಆಪಲ್, ಸ್ಯಾಮ್‌ಸಂಗ್, ಒನ್‌ಪ್ಲಾಸ್, ಮತ್ತು ಶಿಯೋಮಿಯಂತಹ ಕಂಪನಿಗಳು ವಿಶೇಷ ರಿಯಾಯಿತಿಗಳನ್ನು ನೀಡುತ್ತವೆ. ನಿಮ್ಮ ಹಳೆಯ ಫೋನ್‌ಗಳನ್ನು ವಿನಿಮಯ ಮಾಡಿಕೊಂಡರೆ ₹25,000 ವರೆಗೆ ರಿಯಾಯಿತಿ ಸಿಗಬಹುದು.
Also Read: Upcoming Smartphones: ಈ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಗೆ ಸಜ್ಜಾಗಿರುವ ಸ್ಮಾರ್ಟ್ ಫೋನ್ಗಳ ಪಟ್ಟಿ ಇಲ್ಲಿದೆ!
ಲ್ಯಾಪ್ಟಾಪ್ಗಳ ಮೇಲೆ ಸಹ ಶೇಕಡಾ 40ರಷ್ಟು ರಿಯಾಯಿತಿ ನಿರೀಕ್ಷಿಸಲಾಗಿದೆ. ವಿದ್ಯಾರ್ಥಿಗಳು ಮತ್ತು ಗೇಮರ್‌ಗಳಿಗಾಗಿ ಕೆಲವು ವಿಶೇಷ ಲ್ಯಾಪ್‌ಟಾಪ್ ಮಾದರಿಗಳ ಮೇಲೆ ವಿಶೇಷ ಕೊಡುಗೆಗಳು ಇರಬಹುದು. ಒಟ್ಟಿನಲ್ಲಿ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟವು ನಿಮ್ಮ ತಂತ್ರಜ್ಞಾನದ ಸಾಧನಗಳನ್ನು ಅಪ್‌ಗ್ರೇಡ್ ಮಾಡಲು ಅತ್ಯುತ್ತಮ ಅವಕಾಶ ನೀಡುತ್ತಿದೆ.