ಏರ್ಟೆಲ್ ಈಗ ಪ್ರಿಪೇಯ್ಡ್ ಬಳಕೆದಾರರಿಗೂ ಹೊಸ ಅಂತಾರಾಷ್ಟ್ರೀಯ ರೋಮಿಂಗ್ ಪ್ಯಾಕ್ ನೀಡುತ್ತಿದೆ

Updated on 27-Feb-2020
HIGHLIGHTS

ನೀವು ನಿಮ್ಮ ಅಂತಾರಾಷ್ಟ್ರೀಯ ರೋಮಿಂಗ್ ಪ್ಯಾಕ್ ಬಳಕೆಯನ್ನು ರಿಯಲ್ ಟೈಮ್ ಅಲ್ಲಿ ಟ್ರ್ಯಾಕ್ ಮಾಡಬವುದು

ಒಂದು ವೇಳೆ ನೀವು ಭಾರ್ತಿ ಏರ್ಟೆಲ್ ಬಳಕೆದಾರರಾಗಿದ್ದು ನೀವು ಆಗಾಗ್ಗೆ ವಿದೇಶ ಪ್ರವಾಸ ಮಾಡುತ್ತೀದ್ದರೆ ನಿಮಗೊಂದು ಸಿಹಿಸುದ್ದಿ ನೀಡಿದ್ದು  ಭಾರ್ತಿ ಏರ್ಟೆಲ್ ಹೊಸ ಅಂತಾರಾಷ್ಟ್ರೀಯ ರೋಮಿಂಗ್ ಪ್ಯಾಕ್‌ಗಳನ್ನು ಸಕ್ರಿಯಗೊಳಿಸಲು ನೀವು ಆಗಾಗ್ಗೆ ಮರೆತೋಯ್ತಾ ಇದ್ರೆ ಭಾರ್ತಿ ಏರ್ಟೆಲ್ ತನ್ನ ಪೋಸ್ಟ್‌ಪೇಯ್ಡ್ ಮತ್ತು ಪ್ರಿಪೇಯ್ಡ್ ಬಳಕೆದಾರರಿಗಾಗಿ ಹೊಸ ಬಳಕೆದಾರರಿಗೆ ಲಭ್ಯವಿರುವ ಅಂತಾರಾಷ್ಟ್ರೀಯ ರೋಮಿಂಗ್ ಪ್ಯಾಕ್ಗಳುನ್ನು ಹೊರ ತಂದಿದೆ. ಇದು ಬಳಕೆದಾರರು ವಿದೇಶಗಳಿಗೆ ಪ್ರಯಾಣಿಸುವಾಗ ಅವರ ಒಟ್ಟಾರೆ ಅನುಭವವನ್ನು ಸರಳಗೊಳಿಸುವ ಗುರಿಯನ್ನು ಹೊಂದಿದೆ. ಈ ಹೊಸ ಫೀಚರ್ ಬಳಕೆದಾರರು ತಮ್ಮ ಅಂತಾರಾಷ್ಟ್ರೀಯ ರೋಮಿಂಗ್ ಪ್ಯಾಕ್ ಬಳಕೆಯನ್ನು ರಿಯಲ್ ಟೈಮ್ ಅಲ್ಲಿ ಟ್ರ್ಯಾಕ್ ಮಾಡಲು ಅನುವು ಮಾಡಿಕೊಡುತ್ತದೆ. 

ಅಲ್ಲದೆ ಇದು ನಿಜವಾದ ಪ್ರಯಾಣದ ದಿನಾಂಕಕ್ಕಿಂತ 30 ದಿನಗಳ ಮೊದಲೇ ಅಂತಾರಾಷ್ಟ್ರೀಯ ರೋಮಿಂಗ್ ಪ್ಯಾಕ್ ಅನ್ನು ಬುಕ್ ಮಾಡಲು ಸಹ ಅವರಿಗೆ ಅವಕಾಶ ಮಾಡಿಕೊಡುತ್ತದೆ. ಇದಲ್ಲದೆ ಬಳಕೆದಾರರು ಅಂತರಾಷ್ಟ್ರೀಯ ಮೊಬೈಲ್ ನೆಟ್‌ವರ್ಕ್‌ಗೆ ಸಂಪರ್ಕಗೊಂಡಾಗ ಮಾತ್ರವೇ ಈ ಅಂತಾರಾಷ್ಟ್ರೀಯ ರೋಮಿಂಗ್ ಪ್ಯಾಕ್ ಪ್ರಾರಂಭವಾಗುತ್ತದೆ. ಈ ಮೂಲಕ ನಿಮ್ಮ ಈ ಅಂತಾರಾಷ್ಟ್ರೀಯ ರೋಮಿಂಗ್ ಪ್ಯಾಕ್ ಸಕ್ರಿಯಗೊಳಿಸಿದ ಕೂಡಲೇ ಯಾವುದೇ ಹೆಚ್ಚುವರಿ ವೆಚ್ಚವನ್ನು ತೆರಬೇಕಿಲ್ಲ ಎಂಬುದನ್ನು ಖಚಿತಪಡಿಸುತ್ತದೆ. ಇದರ  ಗಮನಾರ್ಹವಾಗಿ ಈ ಫೀಚರ್ ಈಗಾಗಲೇ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಲಭ್ಯವಿತ್ತು ಆದರೆ ಈಗ ಇದನ್ನು ಪ್ರಿಪೇಯ್ಡ್ ಬಳಕೆದಾರರಿಗೆ ತಲುಪಿಸುತ್ತಿದೆ

ಮೊದಲನೇಯದಾಗಿ 1,199 ರೂಗಳ ಅಂತಾರಾಷ್ಟ್ರೀಯ ರೋಮಿಂಗ್ ಪ್ಯಾಕ್ ಈ ಪ್ಯಾಕ್ ಭಾರತ ಮತ್ತು ನೀವು ಹೋಗುವ ದೇಶಕ್ಕೆ 100 ನಿಮಿಷಗಳ ಇನ್ಕಮಿಂಗ್ ಮತ್ತು ಔಟ್ಗೋಯಿಂಗ್ ಕರೆಗಳ ಜೊತೆಗೆ 1GB ಡೇಟಾವನ್ನು ನೀಡುತ್ತದೆ. ಇದರ ಹೆಚ್ಚುವರಿಯಾಗಿ ಬಳಕೆದಾರರು 30 ದಿನಗಳವರೆಗೆ ಅನಿಯಮಿತ ಒಳಬರುವ SMS ಗಳನ್ನು ಸಹ ಪಡೆಯುತ್ತಾರೆ.

ಎರಡನೇಯದಾಗಿ 799 ರೂಗಳ ಅಂತಾರಾಷ್ಟ್ರೀಯ ರೋಮಿಂಗ್ ಪ್ಯಾಕ್ ಈ ಪ್ಯಾಕ್ ಭಾರತ ಮತ್ತು ಆತಿಥೇಯ ದೇಶಕ್ಕೆ 100 ನಿಮಿಷಗಳ ಇನ್ಕಮಿಂಗ್ ಮತ್ತು ಔಟ್ಗೋಯಿಂಗ್ ಕರೆಗಳನ್ನು ನೀಡುತ್ತದೆ. ಬಳಕೆದಾರರು 30 ದಿನಗಳವರೆಗೆ ಅನಿಯಮಿತ ಒಳಬರುವ SMS ಗಳನ್ನು ಸಹ ಪಡೆಯುತ್ತಾರೆ.ಇದರಲ್ಲಿ ಯಾವುದೇ ಡೇಟಾ ಲಭ್ಯವಿಲ್ಲ.  

ಮೂರನೇಯದಾಗಿ 4,999 ರೂಗಳ ಅಂತಾರಾಷ್ಟ್ರೀಯ ರೋಮಿಂಗ್ ಪ್ಯಾಕ್ ಈ ಪ್ಯಾಕ್ ಗ್ರಾಹಕರಿಗೆ ದಿನಕ್ಕೆ 1GB ಡೇಟಾದೊಂದಿಗೆ ಅನ್ಲಿಮಿಟೆಡ್  ಇನ್ಕಮಿಂಗ್ ಕರೆಗಳನ್ನು ಭಾರತ ಮತ್ತು ಆತಿಥೇಯ ದೇಶಕ್ಕೆ 500 ನಿಮಿಷಗಳ ಔಟ್ಗೋಯಿಂಗ್ ಕರೆಗಳು ಮತ್ತು ಇದು 10 ದಿನಗಳವರೆಗೆ ಅನಿಯಮಿತ ಒಳಬರುವ ಎಸ್‌ಎಂಎಸ್‌ಗಳನ್ನು ನೀಡುತ್ತದೆ.

ಈ ವೈಶಿಷ್ಟ್ಯಗಳ ಜೊತೆಗೆ ಏರ್‌ಟೆಲ್ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದು ಏರ್‌ಟೆಲ್ ಬಳಕೆದಾರರು ತಮ್ಮ IR ಪ್ಯಾಕ್ ಖಾಲಿಯಾದಾಗ ಅತಿಯಾದ ಬಳಕೆಯಿಂದಾಗಿ ಯಾವುದೇ ಅನಗತ್ಯ ಶುಲ್ಕಗಳಿಂದ ರಕ್ಷಿಸಲ್ಪಡುತ್ತದೆ ಎಂದು ಖಚಿತಪಡಿಸುತ್ತದೆ. ಏರ್ಟೆಲ್ ಥ್ಯಾಂಕ್ಸ್ ಆ್ಯಪ್ ಮೂಲಕ ಪ್ರಯಾಣದಲ್ಲಿರುವಾಗ ಗ್ರಾಹಕರು ಮತ್ತೊಂದು ಪ್ಯಾಕ್ ಅಥವಾ ಟಾಪ್ ಅಪ್ ತೆಗೆದುಕೊಳ್ಳಬಹುದೆಂದು ಏರ್ಟೆಲ್ ಪ್ರೆಸ್ ಪ್ರಕಟಣೆಯಲ್ಲಿ ಬರೆದಿದೆ.

Disclaimer: Digit, like all other media houses, gives you links to online stores which contain embedded affiliate information, which allows us to get a tiny percentage of your purchase back from the online store. We urge all our readers to use our Buy button links to make their purchases as a way of supporting our work. If you are a user who already does this, thank you for supporting and keeping unbiased technology journalism alive in India.
Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :