Devil Kannada Movie
Devil Kannada Movie: ಪ್ರಸ್ತುತ ಅತಿ ಶೀಘ್ರದಲ್ಲೇ ಕನ್ನಡದ ಮತ್ತೊಂದು ಗ್ರೇಟ್ ಸಿನಿಮಾ ಡೆವಿಲ್ (Devil) ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದ್ದು ಈ Devil Kannada Movie ಇದೆ 23ನೇ ಏಪ್ರಿಲ್ 2025 ರಂದು ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಅಲ್ಲದೆ ಡೆವಿಲ್ (Devil) ಕನ್ನಡ ಸಿನಿಮಾದ ಮೊದಲ ಟೀಸರ್ ಚಾಲೆಂಜಿಂಗ್ ಸ್ಟಾರ್ (Challenging Star) ದರ್ಶನ್ ಹುಟ್ಟು ಹಬ್ಬ 16ನೇ ಫೆಬ್ರವರಿ 2025 ರಂದು ಕಂಫಾರ್ಮ್ ಆಗಿದೆ. ಈ ಕನ್ನಡದ ಡೆವಿಲ್ ಸಿನಿಮಾವನ್ನು ಮಿಲನ ಪ್ರಕಾಶ್ ನಿರ್ದೇಶನದ ಕನ್ನಡ ಆಕ್ಷನ್ ಎಂಟರ್ಟೈನರ್ ಚಲನಚಿತ್ರವಾಗಿದೆ.
ದರ್ಶನ್ ಹುಟ್ಟುಹಬ್ಬವಾದ ಫೆ.16ರಂದು ಸಿನಿಮಾದ ಟೀಸರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಪೋಸ್ಟರ್‌ವೊಂದನ್ನು ಹಂಚಿಕೊಂಡಿದ್ದಾರೆ. ಈ ಡೆವಿಲ್ (Devil) ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಸುಧಾಕರ್ ಎಸ್ ರಾಜ್ ಅವರ ಛಾಯಾಗ್ರಹಣ ಮತ್ತು ಹರೀಶ್ ಕೊಮ್ಮೆ ಸಂಕಲನವಿದೆ.
Also Read: Kannada Horror Movies: ಬಿಡುಗಡೆಯಾಗಿ ವರ್ಷಗಳಾದರೂ ಇನ್ನೂ ಭಯಪಡಿಸುವ ಟಾಪ್ 5 ಕನ್ನಡ ಹಾರರ್ ಸಿನಿಮಾಗಳು!
ಎಲ್ಲ ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನಮಸ್ಕಾರ. ನಿಮಗೆ ಎಷ್ಟೇ ಧನ್ಯವಾದ ಹೇಳಿದರೂ ಕಡಿಮೆ. ಈಗ ನಾನು ಯಾಕೆ ನಾನು ಕ್ಯಾಮೆರಾ ಮುಂದೆ ಬಂದೆ ಎಂದರೆ ಅದು ನನ್ನ ನನ್ನ ಬರ್ತ್‌ಡೇ ವಿಚಾರವಾಗಿ.. ನಿಮ್ಮನ್ನು ಭೇಟಿಯಾಗಬೇಕೆಂದು ನನಗೂ ಆಸೆ ಇತ್ತು. ನೀವೂ ಆಸೆ ಪಟ್ಟಿದ್ರಿ. ಈ ಬಾರಿ ಸಮಸ್ಯೆಯೇನೆಂದರೆ ದೊಡ್ಡ ಸಮಸ್ಯೆ ಅಂತ ಹೇಳ್ತಿಲ್ಲ. ಒಂದೇ ಒಂದು ಸಮಸ್ಯೆ ಅಂದರೆ ಅದು ನನ್ನ ಆರೋಗ್ಯ ವಿಚಾರ. ನನಗೆ ಬೆನ್ನು ನೋವು ಇದೆ. ತುಂಬಾ ಹೊತ್ತು ನಿಂತುಕೊಳ್ಳಲು ಆಗಲ್ಲ. ಹಾಗಾಗಿ ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನನ್ನ ಪ್ರೀತಿಯ ಮನವಿ. ಈ ವರ್ಷ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಕ್ಷಮೆ ಇರಲಿ’ ಎಂದು ಹೇಳಿದ್ದಾರೆ.