WhatsApp Update: ಶೀಘ್ರದಲ್ಲೇ ಹೊಸ ಫೀಚರ್ ಪರಿಚಯಿಸಲಿರುವ ವಾಟ್ಸಾಪ್! ಇಲ್ಲಿದೆ ನೋಡಿ ಮಾಹಿತಿ

Updated on 11-Feb-2022
HIGHLIGHTS

WhatsApp Update: ಶೀಘ್ರದಲ್ಲೇ ಹೊಸ ಫೀಚರ್ ಪರಿಚಯಿಸಲಿರುವ ವಾಟ್ಸಾಪ್

ಶೀಘ್ರದಲ್ಲೇ ಧ್ವನಿ ವಿನಿಮಯ ಧ್ವನಿ ಸಂದೇಶ ಮುಂತಾದವುಗಳು ವಾಟ್ಸಾಪ್‌ನ ಡೆಸ್ಕ್‌ಟಾಪ್‌ ವಿಭಾಗದಲ್ಲಿ ದೊರೆಯಲಿವೆ

ಅಲ್ಲದೆ ಬಿಸಿನೆಸ್ ಡೈರೆಕ್ಟರಿಗಳನ್ನು ಒಂದೆಡೆ ಸ್ಟ್ರೀಮ್ ಲೈನ್ ಮಾಡಲು ವಾಟ್ಸಾಪ್‌ ಕೆಲಸ ಮಾಡುತ್ತಿದೆ.

ವಾಟ್ಸಾಪ್ ನಮ್ಮ ನಿಮ್ಮೇಲ್ಲರ ಜೀವನ ಎಂಬಂತೆಯೇ ಆಗಿದೆ. ಏಕೆಂದರೆ ವಾಟ್ಸಾಪ್‌ನಲ್ಲಿ ಕೇವಲ ಸಂಭಾಷಣೆ ಅಂದರೆ ಚಾಟ್ ಅಷ್ಟೆ ಅಲ್ಲದೆ ಚಿತ್ರ/ವಿಡಿಯೋಗಳ ವಿನಿಮಯ, ಧ್ವನಿ ಸಂವಹನ, ವಿಡಿಯೋ/ಆಡಿಯೋ ಕರೆ ಮುಂತಾದವುಗಳೆಲ್ಲವನ್ನು ಮಾಡಬಹುದಾಗಿದೆ. ಆದರೆ ವಾಟ್ಸಾಪ್ ಚಾಟ್ ಭಾಗ ತೆರೆದೇ ಇದನ್ನು ಮಾಡಬೇಕಾಗಿದ್ದುದು ಅವಶ್ಯಕ. ಆದರೆ ಇನ್ನು ಮುಂದೆ ಇದೂ ಸಹ ಅಗತ್ಯ ಎಂದು ಹೇಳುವ ಸಮಯ ತೊಲಗಲಿದೆ.

ಏಕೆಂದರೆ ವಾಟ್ಸಾಪ್‌ ಇನ್ನೊಂದು ವೈಶಿಷ್ಟ್ಯ ಒದಗಿಸಲು ಮುಂದಾಗಿದ್ದು ಈ ಮೂಲಕ ಅದು ಡೆಸ್ಕ್‌ಟಾಪ್ ವರ್ಷನ್ ಮೇಲೆ ಕೆಲಸ ಮಾಡುತ್ತಿದೆ. ಶೀಘ್ರದಲ್ಲೇ ಧ್ವನಿ ವಿನಿಮಯ ಧ್ವನಿ ಸಂದೇಶ ಮುಂತಾದವುಗಳು ವಾಟ್ಸಾಪ್‌ನ ಡೆಸ್ಕ್‌ಟಾಪ್‌ ವಿಭಾಗದಲ್ಲಿ ದೊರೆಯಲಿವೆ ಎಂದು ಹೇಳಲಾಗಿದೆ. ಇದು ಒಂದು ವೈಶಿಷ್ಟ್ಯವಾದರೆ ಇನ್ನೊಂದು ವೈಶಿಷ್ಟ್ಯವೆಂದರೆ ಶೀಘ್ರದಲ್ಲೇ ನಿಮ್ಮ ಮೊಬೈಲ್‌ನಲ್ಲಿರುವ ವಾಟ್ಸಾಪ್‌ ತನ್ನ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ಪ್ರತ್ಯೇಕವಾಗಿ ನೀವು ನಿರಂತರವಾಗಿ ಚಾಟ್ ಮಾಡುವವರ ವಿವರ ಹಾಗೂ ಇತ್ತೀಚೆಗೆ ಚಾಟ್ ಮಾಡಿದ ಬಗ್ಗೆ ವಿವರವನ್ನು ಪ್ರತ್ಯೇಕವಾಗಿ ತೋರಿಸಲಿದೆ.

ಅಲ್ಲದೆ ಬಿಸಿನೆಸ್ ಡೈರೆಕ್ಟರಿಗಳನ್ನು ಒಂದೆಡೆ ಸ್ಟ್ರೀಮ್ ಲೈನ್ ಮಾಡಲು ವಾಟ್ಸಾಪ್‌ ಕೆಲಸ ಮಾಡುತ್ತಿದೆ. ಅಂದರೆ ಇದರ ಪರಿಣಾಮವಾಗಿ ಬಿಸಿನೆಸ್ ಸಂಸ್ಥೆಯು ತನ್ನ ಬಳಕೆದಾರನನ್ನು ಸಂಪರ್ಕಿಸಲು ಬಯಸಿದಾಗ ವಿಶೇಷವಾದ ಸಂದೇಶ ನಿಮಗೆ ವಾಟ್ಸಾಪ್‌ನಲ್ಲಿ ಬರಲಿದೆ. ಇವೆಲ್ಲ ವೈಶಿಷ್ಟ್ಯಗಳ ಪರೀಕ್ಷೆ ಈಗ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.

ಬಳಕೆದಾರರ ತಂತ್ರಾಂಶ ಅಥವಾ ಆ್ಯಪ್‌ಗಳಲ್ಲಿ ಸೇರಿಸಲಾಗುವ ವೈಶಿಷ್ಟ್ಯಗಳನ್ನು ಶೋಧಿಸುವ ಸಂಸ್ಥೆ ವಾಟ್ಸಾಪ್‌ನ ಈ ವೈಶಿಷ್ಟ್ಯವನ್ನು ಶೋಧಿಸಿದ್ದು ಈ ಬಗ್ಗೆ ಸ್ಕ್ರೀನ್ ಶಾಟ್ ಒಂದನ್ನು ಹಂಚಿಕೊಂಡಿದೆ. ಅದರ ಬಗ್ಗೆ ಪೋಸ್ಟ್ ಮಾಡಿರುವ ಸಂಸ್ಥೆ ಈ ರೀತಿ ಹೇಳುತ್ತದೆ ವಾಟ್ಸಾಪ್‌ನ ನಿಮ್ಮ ಕಾಂಟ್ಯಾಕ್ಟ್‌ ಲಿಸ್ಟ್ ಅದರಲ್ಲೂ ನಿರ್ದಿಷ್ಟವಾಗಿ 'ನಿರಂತರ ಚಾಟ್ ಮಾಡಿರುವ' ಹಾಗೂ 'ಇತ್ತೀಚೆಗೆ ಚಾಟ್ ಮಾಡಿರುವ' ಅಂಶಗಳಿಗೆ ಸಂಬಂಧಿಸಿದಂತೆ ಕೆಲವು ಮಾರ್ಪಾಡುಗಳನ್ನು ಅನುಷ್ಠಾನಗೊಳಿಸಿದೆ. "

ಇನ್ನು ಮುಂದೆ ನೀವು ಆಡಿಯೋ ಸಂದೇಶ ಕೇಳುತ್ತಿರುವ ಸಂದರ್ಭದಲ್ಲಿ ಬೇರೆ ಯಾವುದಾದರೂ ಸಂದೇಶ ನೋಡಬಯಸಿದರೆ ಆಡಿಯೋ ಸಂದೇಶ ನಿಲ್ಲುವುದಿಲ್ಲ ಬದಲಾಗಿ ನೀವು ಬೇರೆ ಸಂದೇಶ ನೋಡುವಾಗಲೂ ಆಡಿಯೋ ಸಂದೇಶ ಮುಂದುವರೆಯುತ್ತಿರುತ್ತದೆ ಹಾಗೂ ಅದಕ್ಕೆ ಸಂಬಂಧಿಸಿದಂತೆ ಅದರ ವಾಲ್ಯೂಮ್ ಹಾಗೂ ಇತರೆ ನಿಯಂತ್ರಣಗಳನ್ನು ನೀವು ಮಾಡಲು ಶಕ್ತರಾಗುವಂತೆ ಅದರ ನಿಯಂತ್ರಣ ಪ್ಯಾನೆಲ್ ಕೆಳ ಭಾಗದಲ್ಲಿ ಕಾಣುತ್ತದೆ.

Disclaimer: Digit, like all other media houses, gives you links to online stores which contain embedded affiliate information, which allows us to get a tiny percentage of your purchase back from the online store. We urge all our readers to use our Buy button links to make their purchases as a way of supporting our work. If you are a user who already does this, thank you for supporting and keeping unbiased technology journalism alive in India.
Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :