ವಾಟ್ಸ್​ಆ್ಯಪ್ ಆಡಿಯೋ / ವಿಡಿಯೋ ಕರೆಗಳನ್ನು ರೆಕಾರ್ಡ್ ಮಾಡುವುದು ಹೇಗೆ ನಿಮಗೊತ್ತಾ?

ವಾಟ್ಸ್​ಆ್ಯಪ್ ಆಡಿಯೋ / ವಿಡಿಯೋ ಕರೆಗಳನ್ನು ರೆಕಾರ್ಡ್ ಮಾಡುವುದು ಹೇಗೆ ನಿಮಗೊತ್ತಾ?
HIGHLIGHTS

ಪ್ರತಿದಿನ 100 ಕೋಟಿಗೂ ಅಧಿಕ ಮಂದಿ WhatsApp ಕರೆ ಮಾಡುತ್ತಿದ್ದಾರೆ.

ಸಾಮಾನ್ಯವಾಗಿ ವಾಟ್ಸ್​ಆ್ಯಪ್​ ಕರೆ ಬಂದಾಗ ಸ್ಪೀಕರ್ ಆನ್ ಮಾಡಿ ಇನ್ನೊಂದು ಮೊಬೈಲ್ ಮೂಲಕ ರೆಕಾರ್ಡ್ ಮಾಡಬಹುದು.

WhatsApp Call Recorder: ಇತ್ತೀಚೆಗೆ ಬಿಡುಗಡೆ ಆಗಿರುವ ಬಹುತೇಕ ಎಲ್ಲ ಸ್ಮಾರ್ಟ್​ಫೋನ್​ಗಳಲ್ಲಿ ಅಟೋಮ್ಯಾಟಿಕ್ ಕಾಲ್ ರೆಕಾರ್ಡ್ (Auto Call recorder) ಆಯ್ಕೆ ನೀಡಲಾಗುತ್ತಿದೆ. ಇದರಿಂದ ಬಳಕೆದಾರರಿಗೆ ತುಂಬಾ ಪ್ರಯೋಜನ ಪಡೆಯುತ್ತಿದ್ದಾರೆ. ಆದರೆ ವಾಟ್ಸ್​ಆ್ಯಪ್​ನಲ್ಲಿ (WhatsApp) ಕರೆ ಬಂದರೆ ಅದು ರೆಕಾರ್ಡ್ ಮಾಡುವುದಿಲ್ಲ. ಪ್ರತಿ ತಿಂಗಳು ವಾಟ್ಸ್ಆ್ಯಪ್​ನಲ್ಲಿ ಸುಮಾರು100 ಬಿಲಿಯನ್ ಮೆಸೇಜ್​ಗಳು ಹರಿದಾಡುತ್ತಿವೆ.

ಅಟೋಮ್ಯಾಟಿಕ್ ಕಾಲ್ ರೆಕಾರ್ಡ್ (Call recorder)

ವಾಟ್ಸ್ಆ್ಯಪ್ ಕರೆಗಳನ್ನು (WhatsApp Call) ರೆಕಾರ್ಡ್ ಮಾಡಲು ಇಲ್ಲಿವರೆಗೂ ಯಾವುದೇ ಫೀಚರ್​ಗಳು ಬರಲಿಲ್ಲ. ಇದರಿಂದ ಹಲವು ಬಳಕೆದಾರರು ನಿರಾಶೆಗೊಳಗಾಗಿದ್ದರು ಆದರೇ ಈ ಸಮಸ್ಯೆಗೆ ಪರಿಹಾರ ಇಲ್ಲಿದೆ. ಸಾಮಾನ್ಯವಾಗಿ ವಾಟ್ಸ್​ಆ್ಯಪ್​ ಕರೆ ಬಂದಾಗ ಸ್ಪೀಕರ್ ಆನ್ ಮಾಡಿ ಇನ್ನೊಂದು ಮೊಬೈಲ್ ಮೂಲಕ ರೆಕಾರ್ಡ್ ಮಾಡಬಹುದು. ಆದರೆ ಇದಕ್ಕಾಗಿ ಎರಡು ಸ್ಮಾರ್ಟ್​ಫೋನ್​ ಇರುವುದು ಅವಶ್ಯ. ಇದಿಲ್ಲದಿದ್ದರೇ ಥರ್ಡ್ ಪಾರ್ಟಿ ಆ್ಯಪ್​ಗಳಲ್ಲಿ ಒಂದಾದ “ವಾಯ್ಸ್ ರೆಕಾರ್ಡರ್” ಬಳಸಬಹುದು.

Otter.Ai app ಕೂಡ ವಾಯ್ಸ್ ರೆಕಾರ್ಡ್​ಗೆ ಪರಿಣಾಮಕಾರಿಯಾಗಿದ್ದು ರೆಕಾರ್ಡ್ ಬಟನ್ ಕ್ಲಿಕ್ ಮಾಡುವ ಮೂಲಕ ವಾಟ್ಸ್ಆ್ಯಪ್ ಕರೆಗಳನ್ನು ದಾಖಲಿಸಿಕೊಳ್ಳಬಹುದು. ಈ ಆ್ಯಪ್​ನ ವಿಶೇಷತೆಯೆಂದರೇ ವಾಯ್ಸ್ ಕರೆಗಳು Text ಮಾದರಿಯಲ್ಲಿ ರೂಪಾಂತರಗೊಳ್ಳುತ್ತದೆ. ಇದರ ಮೂಲಕ ಪ್ರತಿ ತಿಂಗಳು ಉಚಿತವಾಗಿ 600 ನಿಮಿಷ ಕರೆಗಳನ್ನು ರೆಕಾರ್ಡ್ ಮಾಡಬಹುದು. ಪ್ರತಿದಿನ 100 ಕೋಟಿಗೂ ಅಧಿಕ ಮಂದಿ WhatsApp ಕರೆ ಮಾಡುತ್ತಿದ್ದಾರೆ.

How to record WhatsApp calls

ಇದರ ಹೊರತಾಗಿ ಗೂಗಲ್ ಪ್ಲೇ ಸ್ಟೋರ್​​ನಲ್ಲಿ ಹಲವು ವಾಯ್ಸ್ ಕಾಲ್ ರೆಕಾರ್ಡ್ ಗಳು ಲಭ್ಯವಿದೆ. ಇದರಲ್ಲಿ “ರೆಕಾರ್ಡ್ ವಾಟ್ಸ್ಆ್ಯಪ್ ಕಾಲ್” ಅತ್ಯುತ್ತಮವಾಗಿ ಬಳಕೆ ಸ್ನೇಹಿಯಾಗಿದೆ. ಇದರಲ್ಲಿ ಅಟೋಮ್ಯಾಟಿಕ್ ಆಗಿ ವಾಟ್ಸ್ಆ್ಯಪ್ ಕರೆಗಳು ರೆಕಾರ್ಡ್ ಆಗುವುದು ಮಾತ್ರವಲ್ಲದೆ ಗೂಗಲ್ ಡ್ರೈವ್​ಗೂ ಅಪ್ಲೋಡ್ ಆಗುವುದು.

ವಾಟ್ಸ್ಆ್ಯಪ್​ನಲ್ಲಿ ವಾಯ್ಸ್ ಕಾಲ್ ನಂತೆಯೆ ವಿಡಿಯೋ ಕಾಲ್ ಕೂಡ ರೆಕಾರ್ಡ್ ಮಾಡಬಹುದು. ಇದಕ್ಕೆ ಕೂಡ ನೀವು ಥರ್ಡ್ ಪಾರ್ಟಿ ಆ್ಯಪ್ ಮೊರೆಹೋಗಬೇಕು. ಡಿಯು ರೆಕಾರ್ಡರ್‌ ಆ್ಯಪ್ ಸುಲಭವಾದ ಮತ್ತು ಉತ್ತಮ ಸ್ಕ್ರೀನ್‌ ರೆಕಾರ್ಡರ್ ಆಪ್‌ ಆಗಿದೆ. ಈ ಆ್ಯಪ್‌ ಹೆಚ್ಚು ಬಳಕೆದಾರ ಸ್ನೇಹಿಯಾಗಿದ್ದು ಸ್ಕ್ರೀನ್‌ ಮೇಲಿನ ಪ್ಲೋಟಿಂಗ್‌ ಐಕಾನ್‌ ಮೂಲಕ ಸ್ಕ್ರೀನ್‌ ರೆಕಾರ್ಡ್ ಮಾಡಬಹುದಾಗಿದೆ. 

ಪ್ಲೋಟಿಂಗ್‌ ಐಕಾನ್‌ ನಿಮಗೆ ವಿವಿಧ ಆಯ್ಕೆಗಳನ್ನು ನೀಡುತ್ತದೆ. ನೀವು ಸ್ಕ್ರೀನ್‌ ರೆಕಾರ್ಡ್‌ ಅನ್ನು ಇಲ್ಲಿ ಪ್ರಾರಂಭಿಸಬಹುದು ಅಥವಾ ನಿಲ್ಲಿಸಬಹುದಾಗಿದೆ. ಅದಲ್ಲದೇ ವಿಡಿಯೋದಲ್ಲಿ ಶಬ್ಧವಿದ್ದರೆ ಅದನ್ನು ಕೂಡ ಡಿಯು ರೆಕಾರ್ಡರ್ ರೆಕಾರ್ಡ್ ಮಾಡಿಕೊಳ್ಳುತ್ತದೆ. ಈ ಆ್ಯಪ್‌ ಮೂಲಕ ವಿಡಿಯೋ ಕಾಲಿಂಗ್‌ ರೆಕಾರ್ಡ್‌ ಮಾಡುವುದು ಉತ್ತಮವಾಗಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo