Digit.in
  • ಸುದ್ದಿಗಳು
  • ಫೀಚರ್‌ಗಳು
  • ಹೇಗೆ?
  • ವೆಬ್ ಸ್ಟೋರಿ
  • English
  • Hindi
  • Tamil
  • Kannada
  • Telugu
  • Malayalam
  • Bangla
  • Marathi
Login / Register is disabled Login
Home » News » Apps » ವಾಟ್ಸಾಪ್‌ನೊಂದಿಗೆ ಈಗಲೇ E-mail ಲಿಂಕ್ ಮಾಡ್ಕೊಳ್ಳಿ! ಫೋನ್ ಕಳೆದೋದ್ರು ಟೆಂಷನ್ ಇರೋಲ್ಲ!

ವಾಟ್ಸಾಪ್‌ನೊಂದಿಗೆ ಈಗಲೇ E-mail ಲಿಂಕ್ ಮಾಡ್ಕೊಳ್ಳಿ! ಫೋನ್ ಕಳೆದೋದ್ರು ಟೆಂಷನ್ ಇರೋಲ್ಲ!

By Ravi Rao | Updated on 24-Nov-2023
Add DIGIT as a preferred source
Follow Us on Google News Follow Us
HIGHLIGHTS

ಒಂದು ವೇಳೆ ನಿಮ್ಮ ಮೊಬೈಲ್ ಕಳೆದೋದರು ಅಷ್ಟಾಗಿ ಗಾಬರಿಯಾಗುವ ಅಗತ್ಯವಿಲ್ಲ.

WhatsApp ಕೆಲವು ಇಂಟ್ರೆಸ್ಟಿಂಗ್ ಕಾರಣಗಳ ಬಗ್ಗೆ ಒಂದಿಷ್ಟ್ರು ಮಾಹಿತಿಯನ್ನು ತಿಳಿಯೋಣ.

ವಾಟ್ಸಾಪ್‌ನೊಂದಿಗೆ ಈಗಲೇ E-mail ಲಿಂಕ್ ಮಾಡ್ಕೊಳ್ಳಿ! ಫೋನ್ ಕಳೆದೋದ್ರು ಟೆಂಷನ್ ಇರೋಲ್ಲ!
Ravi Rao Ravi Rao
24-Nov-2023

ವಾಟ್ಸಾಪ್ ಸದಾ ತಮ್ಮ ಬಳಕೆದಾರರಿಗೆ ಒಂದಲ್ಲ ಒಂದು ಲೇಟೆಸ್ಟ್ ಫೀಚರ್ಗಳೊಂದಿಗೆ ಹೊಸ ಅನುಭವಗಳನ್ನು ನೀಡಲು ಕಾಯುತ್ತಿರುತ್ತದೆ. ಇದರೊಂದಿಗೆ ಈಗ ವಾಟ್ಸಾಪ್ ಖಾತೆಯನ್ನು ಮತ್ತಷ್ಟು ಸುರಕ್ಷಿತವಾಗಿಡಲು ಇಮೇಲ್ ವೆರಿಫಿಕೇಷನ್ ಫೀಚರ್ ಅನ್ನು ಪರಿಚಯಿಸಿದೆ. ಇದರಿಂದ ಒಮ್ಮೆ ನೀವು ನಿಮ್ಮ E-mail ಐಡಿಯನ್ನು ವಾಟ್ಸಾಪ್ ಖಾತೆಯೊಂದಿಗೆ ಲಿಂಕ್ ಮಾಡುವುದರಿಂದ ಒಂದು ವೇಳೆ ನಿಮ್ಮ ಮೊಬೈಲ್ ಕಳೆದೋದರು ಅಷ್ಟಾಗಿ ಗಾಬರಿಯಾಗುವ ಅಗತ್ಯವಿಲ್ಲ. ಇಂತಹ ಕೆಲವು ಇಂಟ್ರೆಸ್ಟಿಂಗ್ ಕಾರಣಗಳ ಬಗ್ಗೆ ಒಂದಿಷ್ಟ್ರು ಮಾಹಿತಿಯನ್ನು ತಿಳಿಯೋಣ.

Digit.in Survey
✅ Thank you for completing the survey!

Also Read: ಏರ್ಟೆಲ್‌ನಿಂದ Unlimited ಕರೆ ಮತ್ತು 5G ಡೇಟಾದೊಂದಿಗೆ Netflix ಸೇವೆ ನೀಡುವ ಹೊಸ ಪ್ಲಾನ್ ಲಾಂಚ್!

ಫೋನ್ ಕಳೆದೋದ್ರು ಟೆಂಷನ್ ಇರೋಲ್ಲ!

ಸದ್ಯಕ್ಕೆ ನಿಮ್ಮ ಫೋನ್ ಕಳೆದುಹೋದರೆ ಅಥವಾ ಕದ್ದಿದ್ದರೆ ಮತ್ತೊಂದು ಡಿವೈಸ್‌ನಲ್ಲಿ WhatsApp ಖಾತೆಗೆ ಲಾಗಿನ್ ಮಾಡಲು ಅದಕ್ಕೆ ಬೇಕಿರುವ OTP ಕಾರಣದಿಂದಾಗಿ ಬೇರೆ ಯಾವುದೇ ಆಯ್ಕೆಗಳಿಲ್ಲ. ಆದರೆ ವಾಸ್ತವವಾಗಿ ಇದಕ್ಕಾಗಿ ನೀವು ವಾಟ್ಸಾಪ್ ಸಂಖ್ಯೆಯಲ್ಲಿ OTP ಸ್ವೀಕರಿಸಬೇಕು. ನಿಮ್ಮ ಖಾತೆಯಿಂದ ನೀವು ಲಾಕ್ ಔಟ್ ಆಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಪ್ಲ್ಯಾಟ್‌ಫಾರ್ಮ್‌ನಿಂದ ಹೊಸ E-mail ದೃಢೀಕರಣ ಆಯ್ಕೆಯನ್ನು ಒದಗಿಸಲಾಗುತ್ತಿದೆ.

ಇಮೇಲ್ ದೃಢೀಕರಣ ಆಯ್ಕೆಯೊಂದಿಗೆ ಬಳಕೆದಾರರು ತಮ್ಮ ಇಮೇಲ್ ಐಡಿಯನ್ನು ತಮ್ಮ WhatsApp ಖಾತೆಗೆ ಲಿಂಕ್ ಮಾಡಲು ಸಹ ಸಾಧ್ಯವಾಗುತ್ತದೆ. ಈ ರೀತಿಯಾಗಿ ಮೊಬೈಲ್ ಸಂಖ್ಯೆ ಮಾತ್ರ ಲಾಗಿನ್ ವಿಧಾನವಾಗಿರುವುದಿಲ್ಲ. ದೀರ್ಘಕಾಲದವರೆಗೆ ಈ ವೈಶಿಷ್ಟ್ಯವನ್ನು ಪರೀಕ್ಷಿಸಿದ ನಂತರ ಈಗ ಅದರ ವ್ಯಾಪಕ ರೋಲ್ಔಟ್ ಅನ್ನು iOS ಅಪ್ಲಿಕೇಶನ್ನಲ್ಲಿ ಪ್ರಾರಂಭಿಸಲಾಗಿದೆ. ಶೀಘ್ರದಲ್ಲೇ ಆಂಡ್ರಾಯ್ಡ್ ಬಳಕೆದಾರರಿಗೂ ಈ ಪ್ರಯೋಜನವನ್ನು ನೀಡಲಾಗುವುದು.

WhatsApp - E-mail

ವಾಟ್ಸಾಪ್ E-mail ವೆರಿಫಿಕೇಷನ್ ಫೀಚರ್ ಬಳಸುವುದು ಹೇಗೆ?

ಮೊದಲಿಗೆ ವಾಟ್ಸಾಪ್ ತೆರೆದು >> ನಂತರ ಸೆಟ್ಟಿಂಗ್‌ ತೆರೆಯಿರಿ >> ಅಕೌಂಟ್ ತೆರೆಯಿರಿ >> ಇಮೇಲ್ ವಿಳಾಸವನ್ನು ಟ್ಯಾಪ್ ಮಾಡಿ >> ನಿಮ್ಮ ಇಮೇಲ್ ಐಡಿ ಟೈಪ್ ಮಾಡಿ. ಇದರ ನಂತರ ನಿಮ್ಮ ಇಮೇಲ್ ಇನ್‌ಬಾಕ್ಸ್‌ಗೆ 6 ಅಂಕಿಯ ವೆರಿಫಿಕೇಷನ್ ಕೋಡ್ ಅನ್ನು ಸ್ವೀಕರಿಸುತ್ತೀರಿ. ಇದರೊಂದಿಗೆ ನಿಮ್ಮ ಸೆಕ್ಯೂರಿಟಿ ಪ್ರಕ್ರಿಯೆಯನ್ನು ಮುಕ್ತಾಯಗೊಳ್ಳುತ್ತದೆ. ಇದು ಹೆಚ್ಚು ಸರಳ ಮತ್ತು ಸುಲಭವಾಗಿದೆ.

ಪರೀಕ್ಷೆಯು ಬೀಟಾ ಆವೃತ್ತಿಯಲ್ಲಿ ನಡೆಯುತ್ತಿದೆ

ಹೊಸ WhatsApp ವೈಶಿಷ್ಟ್ಯದ ಪರೀಕ್ಷೆಯು ಇಲ್ಲಿಯವರೆಗೆ ಬೀಟಾ ಆವೃತ್ತಿಯಲ್ಲಿ ನಡೆಯುತ್ತಿದೆ. ಇದನ್ನು iOS ನಲ್ಲಿ 23.24.70 ಆವೃತ್ತಿಯ ಭಾಗವಾಗಿ ಮಾಡಲಾಗಿದೆ. ವಾಟ್ಸಾಪ್ ಅಪ್‌ಡೇಟ್‌ಗಳು ಮತ್ತು ಹೊಸ ವೈಶಿಷ್ಟ್ಯಗಳನ್ನು ಮೇಲ್ವಿಚಾರಣೆ ಮಾಡುವ ವೇದಿಕೆಯಾದ WABetaInfo ಈ ಮಾಹಿತಿಯನ್ನು ಬಳಕೆದಾರರಿಗೆ ನೀಡಿದೆ. ಮತ್ತು SMS ಪರಿಶೀಲನೆಯ ಬದಲಿಗೆ ಈಗ ಇಮೇಲ್ ಸಹಾಯದಿಂದ ಲಾಗಿನ್ ಮಾಡಲು ಮತ್ತು ಖಾತೆಯನ್ನು ಪ್ರವೇಶಿಸಲು ಆಯ್ಕೆ ಇರುತ್ತದೆ.

ಇದನ್ನು ಖಾತೆಯ ದೃಢೀಕರಣಕ್ಕಾಗಿ ಮಾತ್ರ ಬಳಸಲಾಗುತ್ತದೆ. WhatsApp ಖಾತೆಗೆ ಲಾಗ್ ಇನ್ ಮಾಡುವಾಗ ಬಳಕೆದಾರರಿಗೆ ಫೋನ್ ಸಂಖ್ಯೆ ಮತ್ತು ಇಮೇಲ್ ಐಡಿಯ ಎರಡು ಆಯ್ಕೆಗಳನ್ನು ನೀಡಲಾಗುತ್ತದೆ. ಈ ಇಮೇಲ್ ಐಡಿಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡರೆ ಇಮೇಲ್‌ಗೆ OTP ಕಳುಹಿಸಲಾಗುತ್ತದೆ. ಈ ರೀತಿಯಾಗಿ ನೀವು ಫೋನ್ ಸಂಖ್ಯೆಗೆ ಪ್ರವೇಶವನ್ನು ಹೊಂದಿಲ್ಲದಿದ್ದರೂ ಸಹ ನೀವು ಖಾತೆಗೆ ಲಾಗಿನ್ ಮಾಡಬಹುದು.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Latest Article
Samsung ಕಂಪನಿಯ 55 ಇಂಚಿನ ಸ್ಮಾರ್ಟ್‌ಟಿವಿ ಈಗ ಡಿಸ್ಕೌಂಟ್‌ ಬೆಲೆಗೆ ಲಭ್ಯ! Samsung ಕಂಪನಿಯ 55 ಇಂಚಿನ ಸ್ಮಾರ್ಟ್‌ಟಿವಿ ಈಗ ಡಿಸ್ಕೌಂಟ್‌ ಬೆಲೆಗೆ ಲಭ್ಯ!
ಭಾರೀ ಬೆಲೆ ಇಳಿಕೆ! OnePlus 13s ಮೊಬೈಲ್‌ ಖರೀದಿಸಲು ಇದುವೇ ಒಳ್ಳೆಯ ಚಾನ್ಸ್‌! ಭಾರೀ ಬೆಲೆ ಇಳಿಕೆ! OnePlus 13s ಮೊಬೈಲ್‌ ಖರೀದಿಸಲು ಇದುವೇ ಒಳ್ಳೆಯ ಚಾನ್ಸ್‌!
Airtel ಟೆಲಿಕಾಂನ ಈ ಅಗ್ಗದ ಪ್ಲಾನಿನಲ್ಲಿ 56 ದಿನಗಳ ವ್ಯಾಲಿಡಿಟಿ ಜೊತೆಗೆ ಭರ್ಜರಿ ಡೇಟಾ Airtel ಟೆಲಿಕಾಂನ ಈ ಅಗ್ಗದ ಪ್ಲಾನಿನಲ್ಲಿ 56 ದಿನಗಳ ವ್ಯಾಲಿಡಿಟಿ ಜೊತೆಗೆ ಭರ್ಜರಿ ಡೇಟಾ
Google Search Down: ಗೂಗಲ್ ಡೌನ್! ಸರ್ಚ್‌ ಇಂಜಿನ್ ಕೆಲಸ ಮಾಡುತ್ತಿಲ್ಲ Google Search Down: ಗೂಗಲ್ ಡೌನ್! ಸರ್ಚ್‌ ಇಂಜಿನ್ ಕೆಲಸ ಮಾಡುತ್ತಿಲ್ಲ
200MP ಕ್ಯಾಮೆರಾ ಇರುವ Redmi Note 15 Pro 5G ಮೊಬೈಲ್‌ ಬೆಲೆಯಲ್ಲಿ ಸಖತ್ ಇಳಿಕೆ! 200MP ಕ್ಯಾಮೆರಾ ಇರುವ Redmi Note 15 Pro 5G ಮೊಬೈಲ್‌ ಬೆಲೆಯಲ್ಲಿ ಸಖತ್ ಇಳಿಕೆ!
Most Searched Mobile Phones
  • Best Phones Under 10000
  • Best Phones Under 20000
  • Best Phones Under 30000
  • Upcoming Phones in 2026
  • Latest Mobile Phones
Latest Phones
  • Vivo X300 Ultra
  • Vivo X300 FE
  • motorola edge 70 fusion
  • Samsung Galaxy S26 Ultra
  • Iqoo 15R
Mobile Recharge Plans
  • Airtel Recharge Plans
  • BSNL Recharge Plans
  • Reliance JIO Recharge Plans
  • VI Recharge Plans
Kannada Tech News
  • Telecom: ಈ ರಿಚಾರ್ಜ್ ಮಾಡ್ಕೊಳ್ಳಿ JioHotstar, Netflix ಮತ್ತು ZEE5 ಎಲ್ಲ ಉಚಿತ!
  • How To: ನಿಮ್ಮ ಹೆಸರಿನಲ್ಲಿ ಎಷ್ಟು SIM Card ಬಳಕೆಯಲ್ಲಿವೆ ನಿಮಗೊತ್ತಾ?
  • icon
  • icon
  • icon
  • icon
SUBSCRIBE Subscribe for the industry's biggest tech news
Enter your email to get notified about our new solutions
By submitting your email, you agree to our
Terms and Privacy Notice.
CONNECT WITH US
  • icon Times Center, FC-6, 1st Floor, Sector 16A, Film City, Noida - 201301
  • icon (+91-120-6776999)
    (1800 121 0005)
  • icon Suggestion: editor@digit.in
    Business: business@digit.in
    Website: sales@digit.in
© 2026 Digit.in, All rights reserved
  • icon
  • icon
  • icon
  • icon
icon
  • About Us
  • Contact Us
  • Advertise with us
  • Regulatory
  • Terms & Conditions
  • Privacy Policy
  • Disclaimer
© 2026 Digit.in, All rights reserved
Digit.in
Logo
Digit.in
Logo