WhatsApp Voice Notes: ಬಳಕೆದಾರರು ಈ ಫೀಚರ್‌ನ ಮೂಲಕ ತಮ್ಮ ಜೀವನದಲ್ಲಿನ ಘಟನೆಗಳ ಬಗ್ಗೆ ಕುರಿತು ಪ್ರತಿಕ್ಷಣದ ಅಪ್ಡೇಟ್ಗಳನ್ನು ಹಂಚಿಕೊಳ್ಳಬಹುದು. ಸ್ಟೇಟಸ್ ಅನ್ನು ಪೋಸ್ಟ್ ಮಾಡುವ ಮೊದಲು ನೀವು WhatsApp ಒದಗಿಸುವ ಕೆಲವು ಕಸ್ಟಮೈಸೇಶನ್‌ಗಳನ್ನು ಸಹ ಬಳಸಬಹುದು. ಈ ಸ್ಟೇಟಸ್ 24 ಗಂಟೆಗಳವರೆಗೆ ಮಾತ್ರ ಮಾನ್ಯವಾಗಿರುತ್ತವೆ. Instagram ನಲ್ಲಿನ ಸ್ಟೋರಿಗಳಂತೆಯೇ WhatsApp ಸ್ಟೇಟಸ್ ಫೀಚರ್‌ನೊಂದಿಗೆ ಬಳಕೆದಾರರು ತಮ್ಮ ಜೀವನದಲ್ಲಿನ ಘಟನೆಗಳ ಬಗ್ಗೆ ಕುರಿತು ಪ್ರತಿಕ್ಷಣದ ಅಪ್ಡೇಟ್ಗಳನ್ನು ಹಂಚಿಕೊಳ್ಳಬಹುದು.
Survey
✅ Thank you for completing the survey!
WhatsApp ವಾಯ್ಸ್ ನೋಟ್ ಫೀಚರ್
ಈ ಸ್ಟೇಟಸ್ 24 ಗಂಟೆಗಳವರೆಗೆ ಮಾತ್ರ ಮಾನ್ಯವಾಗಿರುತ್ತವೆ. ಪ್ರತ್ಯುತ್ತರ ನೀಡುವ ಸಾಮರ್ಥ್ಯ ಮತ್ತು ಪ್ರೈವೇಟ್ ಆಡಿಯನ್ಸ್ ಆಯ್ಕೆ ಸೇರಿದಂತೆ ಕಳೆದ ತಿಂಗಳು ಹಲವಾರು ಹೊಸ ಆಯ್ಕೆಗಳು ಈ ಫೀಚರ್‌ಗೆ ಸೇರಿದ್ದು ನಂತರ ಸ್ಟೇಟಸ್ ಅಪ್ಡೇಟ್ಗಾಗಿ ಆಡಿಯೊ ಮೆಸೇಜ್ ಗಳನ್ನ ಅಪ್‌ಲೋಡ್ ಮಾಡಲು WhatsApp ಬಳಕೆದಾರರಿಗೆ ಅವಕಾಶ ನೀಡಿದೆ. ಇದನ್ನು ಹೇಗೆ ಬಳಸಬಹುದು ಎಂಬುದರ ಮಾಹಿತಿ ಇಲ್ಲಿದೆ.
2. ನಂತರ ಪೆನ್ಸಿಲ್ ಐಕಾನ್ ಅನ್ನು ಕ್ಲಿಕ್ ಮಾಡಿ. Android ಬಳಕೆದಾರರಿಗೆ ಇದು ಕೆಳಗಿನ ಬಲ ಮೂಲೆಯಲ್ಲಿ ಕಾಣುತ್ತದೆ. ಆದರೆ iPhone ಬಳಕೆದಾರರು ಇದನ್ನು ಮೇಲ್ಭಾಗದಲ್ಲಿ ಕಾಣುತ್ತಾರೆ.
3. ಮುಂದಿನ ವಿಂಡೋದಲ್ಲಿ ರೆಕಾರ್ಡಿಂಗ್ ಪ್ರಾರಂಭಿಸಲು ಕೆಳಗಿನ ಬಲ ಮೂಲೆಯಲ್ಲಿರುವ ಮೈಕ್ ಐಕಾನ್ ಅನ್ನು ಟ್ಯಾಪ್ ಮಾಡುವುದರ ಮೂಲಕ ಹೋಲ್ಡ್ ಮಾಡಿ.
4. ಮೈಕ್ ಐಕಾನ್ ಅನ್ನು ಎಡಕ್ಕೆ ಸ್ಲೈಡ್ ಮಾಡುವ ಮೂಲಕ ನೀವು ರೆಕಾರ್ಡಿಂಗ್ ಅನ್ನು cancel ಸಹ ಮಾಡಬಹುದು.
5. ರೆಕಾರ್ಡಿಂಗ್ ನಂತರ ಪ್ಲೇ ಬಟನ್ ಅನ್ನು ಒತ್ತುವ ಮೂಲಕ ನೀವು ಮಾಡಿದ ರೆಕಾರ್ಡಿಂಗ್ ಅನ್ನು ಪ್ರಿವ್ಯೂ ಮಾಡಬಹುದು.
6. ನಿಮಗೆ ರೆಕಾರ್ಡಿಂಗ್ ಇಷ್ಟವಾಗದಿದ್ದರೆ ಅದನ್ನು ಡಿಲೀಟ್ ಕೂಡ ಮಾಡಬಹುದು. ನಂತರ ನೀವು ಹೊಸ ರೆಕಾರ್ಡಿಂಗ್ ಅನ್ನು ಪ್ರಾರಂಭಿಸಬಹುದು.
7. ವಾಯ್ಸ್ ಮೆಸೇಜ್ ಗಳನ್ನು ಸ್ಟೇಟಸ್ ನಲ್ಲಿ ಪೋಸ್ಟ್ ಮಾಡಲು ಕೆಳಗಿನ ಬಲ ಮೂಲೆಯಲ್ಲಿರುವ Send ಬಟನ್ ಒತ್ತಿರಿ.
WhatsApp ವಾಯ್ಸ್ ಮೆಸೇಜ್ಗಳ ಬಳಕೆ:
ಸ್ಟೇಟಸ್ ಅನ್ನು ಪೋಸ್ಟ್ ಮಾಡುವ ಮೊದಲು ನೀವು WhatsApp ಒದಗಿಸುವ ಕೆಲವು ಕಸ್ಟಮೈಸೇಶನ್‌ಗಳನ್ನು ಸಹ ಬಳಸಬಹುದು. ಮೇಲಿನ ಬಲ ಮೂಲೆಯಲ್ಲಿರುವ ಕಲರ್ ಪ್ಯಾಲೆಟ್ ಐಕಾನ್ ಅನ್ನು ಟ್ಯಾಪ್ ಮಾಡುವುದರಿಂದ ಹಲವಾರು ಬ್ಯಾಗ್ರೌಂಡ್ ಕಲರ್ ಬದಲಾವಣೆಯ ಆಯ್ಕೆಗಳಿರುತ್ತವೆ. ಅಲ್ಲದೆ ಕೆಳಗಿನ ಎಡಭಾಗದಲ್ಲಿರುವ ಪ್ರೈವೇಟ್ ಆಡಿಯನ್ಸ್ ಆಯ್ಕೆಯನ್ನು ಬಳಸಿಕೊಂಡು ಬಳಕೆದಾರರು ಸ್ಟೇಟಸ್ ಅನ್ನು ಯಾರು ನೋಡಬಹುದು ಎಂಬುದನ್ನು ಸಹ ಆಯ್ಕೆ ಮಾಡಬಹುದು.
ಚಾಟ್‌ನಲ್ಲಿ ಕಳುಹಿಸಲಾದ ರೆಗ್ಯುಲರ್ ವಾಯ್ಸ್ ಮೆಸೇಜ್ ಗಳು 30 ಸೆಕೆಂಡುಗಳ ಅವಧಿಗೆ ಮಾತ್ರ ಸೀಮಿತವಾಗಿರುತ್ತದೆ. ನಿಮಗೆ ಹೆಚ್ಚಿನ ಸಮಯ ಬೇಕಾದರೆ ನೀವು ಮೊದಲ ಸ್ಟೇಟಸ್ ಅನ್ನು ಪೋಸ್ಟ್ ಮಾಡಿ ಮತ್ತು ನಂತರ ಹೊಸದನ್ನು ರೆಕಾರ್ಡ್ ಮಾಡಬಹುದು. ನೀವು ನಿಮ್ಮ Android ಅಥವಾ iPhone ನಲ್ಲಿ ಇನ್ನು WhatsApp ವಾಯ್ಸ್ ಮೆಸೇಜ್ ಗಳನ್ನ ನೋಡದಿದ್ದರೆ Play Store/App Store ಗೆ ಹೋಗಿ ಇತ್ತೀಚಿನ ಆವೃತ್ತಿಯನ್ನು ಅಪ್ಡೇಟ್ ಮಾಡಬೇಕಾಗುತ್ತದೆ.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile