WhatsApp Web ಬಳಕೆದಾರರಿಗೆ ಗುಡ್ ನ್ಯೂಸ್: ವಿಡಿಯೋ-ಆಡಿಯೋ ಕರೆ ಈಗ ಇನ್ನಷ್ಟು ಸುಲಭ
ವಾಟ್ಸಾಪ್ ವೆಬ್‌ನಲ್ಲಿ ಈಗ ಆಡಿಯೋ ಹಾಗೂ ವಿಡಿಯೋ ಕರೆ ಸೌಲಭ್ಯ
ಇದಕ್ಕಾಗಿ ಯಾವುದೇ ಪ್ರತ್ಯೇಕ ಡೆಸ್ಕ್‌ಟಾಪ್ ಅಪ್ಲಿಕೇಶನ್ ಅಗತ್ಯ ಇರುವುದಿಲ್ಲ
ವಾಟ್ಸಾಪ್ ಡೆಸ್ಕ್‌ಟಾಪ್ ಆಪ್ ಅನ್ನು ಇನ್‌ಸ್ಟಾಲ್ ಮಾಡುವ ಅಗತ್ಯ ಇಲ್ಲ
ಜನಪ್ರಿಯ ಮೆಸೆಜಿಂಗ್ ಆಪ್ ವಾಟ್ಸಾಪ್ ಹಲವು ಅತ್ಯುತ್ತಮ ಆಯ್ಕೆಗಳನ್ನು ಒಳಗೊಂಡು ಗ್ರಾಹಕರನ್ನು ಆಕರ್ಷಿಸಿದೆ. WhatsApp Web ಬಳಸುವವರು ಕಂಪ್ಯೂಟರ್‌ನಲ್ಲಿ ಕೇವಲ ಮೆಸೆಜ್‌ಗಳನ್ನು ಕಳುಹಿಸುವುದು ಮತ್ತು ಸ್ವೀಕರಿಸುವುದಕ್ಕೆ ಮಾತ್ರ ಸೀಮಿತರಾಗಿದ್ದರು. ವಾಯ್ಸ್ ಅಥವಾ ವೀಡಿಯೊ ಕರೆ ಮಾಡಬೇಕಾದರೆ ವಿಂಡೋಸ್ ಅಥವಾ macOS ಗಾಗಿ ಪ್ರತ್ಯೇಕ ವಾಟ್ಸಾಪ್ ಡೆಸ್ಕ್‌ಟಾಪ್ ಆಪ್ ಅನ್ನು ಇನ್‌ಸ್ಟಾಲ್ ಮಾಡಬೇಕಾಗುತ್ತಿತ್ತು. ಆದರೆ ಇದೀಗ ಮೆಟಾ ಈ ಮಿತಿಯನ್ನು ತೆಗೆದುಹಾಕಿದ್ದು ವಾಟ್ಸಾಪ್ ವೆಬ್ ಮೂಲಕವೇ ನೇರವಾಗಿ ಬ್ರೌಸರ್‌ನಲ್ಲಿ ವಾಯ್ಸ್ ಹಾಗೂ ವೀಡಿಯೊ ಕರೆ ಮಾಡುವ ಅವಕಾಶವನ್ನು ನೀಡಿದೆ. ಹಾಗಾದರೆ ವಾಟ್ಸಾಪ್ ವೆಬ್ ಆಯ್ಕೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : Jio ಟೆಲಿಕಾಂನ 3 ಅತ್ಯುತ್ತಮ ಪೋಸ್ಟ್‌ಪೇಯ್ಡ್ ಯೋಜನೆಗಳ ಮಾಹಿತಿ ಇಲ್ಲಿದೆ ನೋಡಿ
WhatsApp Web Calling ಎಂದರೇನು?
ಸಾಮಾನ್ಯವಾಗಿ ಹೆಚ್ಚಿನವರು ವಾಟ್ಸಾಪ್ ಅನ್ನು ಸ್ಮಾರ್ಟ್‌ಫೋನ್‌ನಲ್ಲಿ ಬಳಸುತ್ತಾರೆ. ಆದರೆ ಕಚೇರಿ ಕೆಲಸ ಅಥವಾ ಅಧ್ಯಯನದ ವೇಳೆ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವವರು ವಾಟ್ಸಾಪ್ ವೆಬ್ ಅನ್ನು ಹೆಚ್ಚಾಗಿ ಬಳಸುತ್ತಾರೆ. ಇದುವರೆಗೆ ಇದು ಕೇವಲ ಚಾಟ್‌ಗಳಿಗೆ ಮಾತ್ರ ಸೀಮಿತವಾಗಿತ್ತು. ಈಗ ಹೊಸ ಅಪ್‌ಡೇಟ್‌ನೊಂದಿಗೆ ಯಾವುದೇ ಪ್ರತ್ಯೇಕ ಡೆಸ್ಕ್‌ಟಾಪ್ ಅಪ್ಲಿಕೇಶನ್ ಅಗತ್ಯವಿಲ್ಲದೆ, ಕ್ರೋಮಾ, ಮೈಕ್ರೋಸಾಫ್ಟ್ ಎಡ್ಜ್, ಸಫಾರಿ ಸೇರಿದಂತೆ ಬೆಂಬಲಿತ ಬ್ರೌಸರ್‌ಗಳಲ್ಲೇ ವಾಯ್ಸ್ ಮತ್ತು ವೀಡಿಯೊ ಕರೆಗಳನ್ನು ಮಾಡಬಹುದು. ಇದರ ವಿಶೇಷತೆ ಎಂದರೆ ವಾಟ್ಸಾಪ್ ವೆಬ್ ಮೂಲಕ ಮಾಡುವ ಎಲ್ಲಾ ಕರೆಗಳಿಗೂ End-to-End Encryption ರಕ್ಷಣೆ ದೊರೆಯುತ್ತದೆ.

ವಾಟ್ಸಾಪ್ ವೆಬ್ ಮೂಲಕ ಕರೆ ಮಾಡುವುದು ಹೇಗೆ?
ಹಂತ 1. ಮೊದಲು ನಿಮ್ಮ ಕಂಪ್ಯೂಟರ್‌ನಲ್ಲಿ web.whatsapp.com ತೆರೆಯಿರಿ.
ಹಂತ 2. ಮೊಬೈಲ್‌ನ ವಾಟ್ಸಾಪ್ ಮೂಲಕ QR ಕೋಡ್ ಸ್ಕ್ಯಾನ್ ಮಾಡಿ ಖಾತೆಯನ್ನು ಲಿಂಕ್ ಮಾಡಿ.
ಹಂತ 3. ಕರೆ ಮಾಡಬೇಕಾದ ವ್ಯಕ್ತಿಯ ಚಾಟ್ ತೆರೆಯಿರಿ.
ಹಂತ 4. ಮೇಲ್ಭಾಗದಲ್ಲಿರುವ ಫೋನ್ ಅಥವಾ ವಿಡಿಯೋ ಕಾಲ್ ಐಕಾನ್ ಮೇಲೆ ಕ್ಲಿಕ್ ಮಾಡಿ.
ಹಂತ 5. ಮೊದಲ ಬಾರಿ ಬಳಸುವಾಗ ಬ್ರೌಸರ್ ಕ್ಯಾಮೆರಾ ಮತ್ತು ಮೈಕ್ರೊಫೋನ್ ಅನುಮತಿ ಕೇಳಿದರೆ Allow (ಅನುಮತಿಸಿ) ಆಯ್ಕೆ ಮಾಡಿ.
ಹಂತ 6. ತಕ್ಷಣವೇ ವಾಯ್ಸ್ ಅಥವಾ ವೀಡಿಯೊ ಕರೆ ಪ್ರಾರಂಭ ಆಗುತ್ತವೆ.
ವಾಟ್ಸಾಪ್ ವೆಬ್ ಅನ್ನು ಅತ್ತುತ್ತಮವಾಗಿ ಬಳಕೆ ಮಾಡಲು ವೇಗವಾದ ಹಾಗೂ ಸ್ಥಿರವಾದ Wi-Fi ಅಥವಾ ಇಂಟರ್ನೆಟ್ ಸಂಪರ್ಕ ಬಳಸುವುದು ಉತ್ತಮ. ಅಲ್ಲದೇ ಉತ್ತಮ ಗುಣಮಟ್ಟದ ಹೆಡ್‌ಸೆಟ್ ಅಥವಾ ಮೈಕ್ರೊಫೋನ್ ಬಳಸಿದರೆ ವಾಯ್ಸ್ ಸ್ಪಷ್ಟವಾಗಿರುತ್ತದೆ. ಇನ್ನು ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ನ ವೆಬ್‌ಕ್ಯಾಮ್ ಸ್ವಚ್ಛವಾಗಿರುವುದನ್ನು ಖಚಿತಪಡಿಸಿಕೊಳ್ಳಿ. ಬ್ರೌಸರ್‌ನಲ್ಲಿ ಕ್ಯಾಮೆರಾ ಮತ್ತು ಮೈಕ್ರೊಫೋನ್ ಅನುಮತಿಗಳನ್ನು ಸಕ್ರಿಯಗೊಳಿಸಿರಬೇಕು.
ವಾಟ್ಸಾಪ್ ವೆಬ್‌ಗೆ ಧ್ವನಿ ಮತ್ತು ವೀಡಿಯೊ ಕರೆಗಳ ಸೌಲಭ್ಯ ಸೇರ್ಪಡೆಯಾಗಿರುವುದು ಬಳಕೆದಾರರಿಗೆ ದೊಡ್ಡ ಅನುಕೂಲವಾಗಿದೆ. ಇನ್ನು ಮುಂದೆ ಪ್ರತ್ಯೇಕ ಡೆಸ್ಕ್‌ಟಾಪ್ ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡುವ ಅಗತ್ಯವಿಲ್ಲದೆ, ಬ್ರೌಸರ್‌ನಲ್ಲೇ ಸುಲಭವಾಗಿ ಕರೆ ಮಾಡಬಹುದು. ಕಚೇರಿ ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಕಂಪ್ಯೂಟರ್‌ನಲ್ಲಿ ಹೆಚ್ಚು ಸಮಯ ಕಳೆಯುವವರಿಗೆ ಈ ಹೊಸ ವೈಶಿಷ್ಟ್ಯ ಹೆಚ್ಚು ಉಪಯುಕ್ತವಾಗಲಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
