Digital Ration Card Update
Digital Ration Card: ಇಂದಿನ ದಿನಗಳಲ್ಲಿ ಡಿಜಿಟಲ್ ರೇಷನ್ ಕಾರ್ಡ್ ಬಗ್ಗೆ ಹೆಚ್ಚು ಹುಡುಕಾಟ ನಡೆಯುತ್ತಿದೆ. ಇದು ಹಳೆಯ ಕಾಗದದ ರೇಷನ್ ಕಾರ್ಡ್‌ನ್ನು ಆನ್‌ಲೈನ್ ರೂಪಕ್ಕೆ ತರುತ್ತದೆ. ಮೊಬೈಲ್ ಮೂಲಕವೇ ಅಕ್ಕಿ, ಗೋಧಿ, ಸಕ್ಕರೆ ಹಾಗು ಇತರ ಸಬ್ಸಿಡಿ ಆಹಾರ ವಸ್ತುಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಇದರ ಬಳಕೆ ಸುಲಭ, ಪಾರದರ್ಶಕ ಹಾಗೂ ಸಮಯ ಉಳಿತಾಯವಾಗುತ್ತದೆ. ಈ ಡಿಜಿಟಲ್ ರೇಷನ್ ಕಾರ್ಡ್ (Digital Ration Card) ವ್ಯವಸ್ಥೆಯಿಂದ ಸಾಮಾನ್ಯ ಜನರಿಗೆ ಹೆಚ್ಚಿನ ಅನುಕೂಲ, ಸರಕಾರಕ್ಕೆ ಕಡಿಮೆ ಭ್ರಷ್ಟಾಚಾರ ಹಾಗೂ ಆಹಾರ ವಿತರಣೆ ವ್ಯವಸ್ಥೆಯಲ್ಲಿ ನವೀನತೆ ಬರುತ್ತಿದೆ. ಹಾಗಾದ್ರೆ ಇದರಿಂದ ನಿಮಗೆಷ್ಟು ಲಾಭ ಸಂಪೂರ್ಣ ಮಾಹಿತಿ ತಿಳಿಯಿರಿ.
ಡಿಜಿಟಲ್ ಅಥವಾ ಇ-ರೇಷನ್ ಕಾರ್ಡ್ ಎಂದರೆ ನಮ್ಮ ಹಳೆಯ ಪೇಪರ್ ರೇಷನ್ ಕಾರ್ಡ್‌ನ ಆನ್‌ಲೈನ್ ರೂಪ. ಇದು ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಗೆ ಲಿಂಕ್ ಆಗಿರುತ್ತದೆ. ಇದರ ಮೂಲಕ ಸರಕಾರದ ಪಬ್ಲಿಕ್ ಡಿಸ್ಟ್ರಿಬ್ಯೂಷನ್ ಸಿಸ್ಟಂ (PDS) ಅಡಿ ದೊರೆಯುವ ಅಕ್ಕಿ, ಗೋಧಿ, ಸಕ್ಕರೆ ಹೀಗೆ ಸಬ್ಸಿಡಿ ಆಹಾರ ವಸ್ತುಗಳನ್ನು ಸುಲಭವಾಗಿ ಪಡೆಯಬಹುದು. ಕಾಗದದ ಕಾರ್ಡ್ ತೆಗೆದುಕೊಂಡು ಹೋಗುವ ಅವಶ್ಯಕತೆ ಇಲ್ಲದೆ, ಮೊಬೈಲ್‌ನಲ್ಲಿ ಪಿಡಿಎಫ್ ಅಥವಾ ಕ್ಯೂಆರ್ ಕೋಡ್ ಮೂಲಕವೇ ಬಳಸಬಹುದು.
ಡಿಜಿಟಲ್ ರೇಷನ್ ಕಾರ್ಡ್‌ನಿಂದ ಹಲವು ಪ್ರಯೋಜನಗಳಿವೆ. ಇದು ನಕಲಿ ಕಾರ್ಡ್‌ಗಳನ್ನು ತಡೆಗಟ್ಟುತ್ತದೆ. ಅಲ್ಲದೆ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ ಮತ್ತು ಎಲ್ಲ ರಾಜ್ಯಗಳಲ್ಲಿಯೂ “ಒನ್ ನೇಶನ್, ಒನ್ ರೇಷನ್ ಕಾರ್ಡ್” ಯೋಜನೆಯಡಿ ಬಳಸಬಹುದು. SMS ಮೂಲಕ ವ್ಯವಹಾರ ಮಾಹಿತಿ ಸಿಗುತ್ತದೆ ಹಾಗೂ ಪೂರಕ ದಾಖಲೆಗಳ ಪರಿಶೀಲನೆ ಸುಲಭವಾಗುತ್ತದೆ.
ಒಮ್ಮೆ ಡಿಜಿಟಲ್ ಕಾರ್ಡ್ ಸಿಗುತ್ತಿದ್ದಂತೆ ನೀವು ಯಾವುದೇ ರಾಜ್ಯದ ಫೇರ್ ಪ್ರೈಸ್ ಶಾಪ್‌ನಿಂದಲೂ ಧಾನ್ಯಗಳನ್ನು ಪಡೆಯಬಹುದು. ವಲಸೆ ಕಾರ್ಮಿಕರು ಹಾಗೂ ಉದ್ಯೋಗಕ್ಕಾಗಿ ಬೇರೆ ರಾಜ್ಯದಲ್ಲಿ ಇರುವವರಿಗೆ ಇದು ತುಂಬಾ ಸಹಾಯಕವಾಗಿದೆ. ಇದರಿಂದ ಸಮಯ ಉಳಿತಾಯ, ಪಾರದರ್ಶಕತೆ ಹಾಗೂ ಸುಲಭ ಸೌಲಭ್ಯ ದೊರೆಯುತ್ತದೆ.
Also Read: BSNL ₹1 Offer: ಫ್ರೀಡಂ ಪ್ಲಾನ್ ಆಫರ್ ಇಂದು ಮುಗಿಯಲಿದೆ, ಜಬರ್ದಸ್ತ್ ಡೀಲ್ ಮಿಸ್ ಮಾಡ್ಕೊಳ್ಬೇಡಿ!
ಪ್ರತಿ ರಾಜ್ಯಕ್ಕೂ ತಮ್ಮದೇ ವೆಬ್‌ಸೈಟ್ ಅಥವಾ ಆಪ್ ಇದೆ. ಮೆರಾ ರೇಷನ್ 2.0, ಯುಮಾಂಗ್ ಆಪ್ ಅಥವಾ ನಿಮ್ಮ ರಾಜ್ಯದ ಪಿಡಿಎಸ್ ಪೋರ್ಟಲ್ ಮೂಲಕ ಅರ್ಜಿ ಹಾಕಬಹುದು. ಬೇಕಾಗುವ ದಾಖಲೆಗಳೇನು ನೋಡುವುದಾದರೆ ನಿಮ್ಮ ಆಧಾರ್ ಕಾರ್ಡ್, ವಿಳಾಸ ಪುರಾವೆ, ಹಳೆಯ ರೇಷನ್ ಕಾರ್ಡ್ (ಇದ್ದರೆ) ಆದಾಯ ಪ್ರಮಾಣ ಪತ್ರ ಮತ್ತು ಫೋಟೋ ನೀಡಬಹುದು. ನೀವು ಅರ್ಜಿ ಹಾಕಿದ 15–30 ದಿನಗಳಲ್ಲಿ ಕಾರ್ಡ್ ಪಡೆಯಬಹುದು ಅಲ್ಲದೆ ಡೌನ್‌ಲೋಡ್ ಮಾಡಬಹುದು.
ರಾಜ್ಯದ ಅಧಿಕೃತ ಪೋರ್ಟಲ್: ನಿಮ್ಮ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಹೋಗಿ. ಅಲ್ಲಿ ‘ಡೌನ್ಲೋಡ್ ಇ-ರೇಷನ್ ಕಾರ್ಡ್’ ಅಥವಾ ‘Print Ration Card’ ಎಂಬ ಆಯ್ಕೆ ಇರುತ್ತದೆ. ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಅಥವಾ ಆಧಾರ್ ಸಂಖ್ಯೆಯನ್ನು ನಮೂದಿಸಿ.
ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ OTP ಯನ್ನು ನಮೂದಿಸಿ ಕಾರ್ಡನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.‘ಮೇರಾ ರೇಷನ್’ ಮೊಬೈಲ್ ಅಪ್ಲಿಕೇಶನ್: ಕೇಂದ್ರ ಸರ್ಕಾರದ ‘ಮೇರಾ ರೇಷನ್’ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ. ಈ ಅಪ್ಲಿಕೇಶನ್ಲ್ಲಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ, ನಿಮ್ಮ ಕಾರ್ಡ್ ಡಿಜಿಟಲ್ ಪ್ರತಿಯನ್ನು ನೀವು ನೋಡಬಹುದು ಮತ್ತು ಉಳಿಸಿಕೊಳ್ಳಬಹುದು.
Also Read: Best Air Fryers: ಕೆಲವೇ ಹನಿಗಳ ಎಣ್ಣೆಯಲ್ಲಿ ರುಚಿಕರ ಮತ್ತು ಆರೋಗ್ಯಕರ ಆಹಾರ ತಯಾರಿಸುವ ಬೆಸ್ಟ್ ಏರ್ ಫ್ರೈಗಳು!