ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ ಹೊಸ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿ ಪಡೆಯಬಹುದು.
ಕೇವಲ 24 ರಿಂದ 72 ಗಂಟೆಗಳೊಳಗೆ ಪೂರ್ಣಗೊಳ್ಳುವುದು ನಿಜಕ್ಕೂ ಸಂತಸದ ವಿಷಯ ಅಂದ್ರೆ ತಪ್ಪಿಲ್ಲ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಪಾಸ್‌ಪೋರ್ಟ್ ಸೇವಾ ಪೋರ್ಟಲ್ ಮೂಲಕ ಅನುಸರಿಸಬೇಕಾದ ಹಂತಗಳನ್ನು ಈ ಕೆಳಗೆ ನೀಡಲಾಗಿದೆ.
New Passport: ನಿಮಗೊಂದು ಹೊಸ ಪಾಸ್‌ಪೋರ್ಟ್ (Passport) ಬೇಕಿದ್ದರೆ ಸರಳವಾಗಿ ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಪಡೆಯಬಹುದು. ಯಾಕೆಂದರೆ ದಿನ ಕಳೆದಂತೆ ಟೆಕ್ನಾಲಜಿ ಹೆಚ್ಚು ಜನಪ್ರಿಯವಾಗುತ್ತಿದ್ದು ವಾರ, ತಿಂಗಳುಗಟ್ಟಲೇ ನಡೆಯುತ್ತಿದ್ದ ಪ್ರಕ್ರಿಯೆ ಈಗ ಕೇವಲ 24 ರಿಂದ 72 ಗಂಟೆಗಳೊಳಗೆ ಪೂರ್ಣಗೊಳ್ಳುವುದು ನಿಜಕ್ಕೂ ಸಂತಸದ ವಿಷಯ ಅಂದ್ರೆ ತಪ್ಪಿಲ್ಲ. ಕೇವಲ ಅರ್ಜಿ ಸಲ್ಲಿಸಲು ಸಾಲುಗಳಲ್ಲಿ ಗಂಟೆಗಟ್ಟಲೆ ನಿಲ್ಲುವ ತಲೆನೋವು ಈಗ ಇಲ್ಲವಾಗಿದೆ. ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಪಾಸ್‌ಪೋರ್ಟ್ ಸೇವಾ ಪೋರ್ಟಲ್ ಮೂಲಕ ಅನುಸರಿಸಬೇಕಾದ ಹಂತಗಳನ್ನು ಈ ಕೆಳಗೆ ನೀಡಲಾಗಿದೆ.
ಹೊಸ ಪಾಸ್ಪೋರ್ಟ್ ಪಡೆಯಲು ಬೇಕಾಗುವ ದಾಖಲೆಗಳೇನು?
ನೀವು ಮೊದಲ ಬಾರಿಗೆ ಹೊಸ ಪಾಸ್ಪೋರ್ಟ್ ಪಡೆಯಲು ಬಯಸಿದರೆ ಅದಕ್ಕಾಗಿ ಒಂದಿಷ್ಟು ನಿಯಮಿತ ಮತ್ತು ಕಡ್ಡಾಯ ದಾಖಲೆಗಳನ್ನು ಹೊಂದಿರಬೇಕುತ್ತದೆ. ಅವುಗಳ ಸಂಪೂರ್ಣ ಪಟ್ಟಿಯನ್ನು ಈ ಕೆಳಗೆ ಚಾಟ್ ಮೂಲಕ ನೀಡಲಾಗಿದೆ. ಆದ್ದರಿಂದ ನಿಮಗೊಂದು ಹೊಸ ಪಾಸ್ಪೋರ್ಟ್ ಪಡೆಯಲು ಬೇಕಾಗುವ ದಾಖಲೆಗಳೇನು ಎಂದು ನೋಡುವುದಾದರೆ ನಿಮ್ಮ ಹಳೆಯ ಪಾಸ್‌ಪೋರ್ಟ್, ಆಧಾರ್ ಕಾರ್ಡ್, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಗ್ಯಾಸ್ ಸಂಪರ್ಕ ಬಿಲ್ ಸೇರಿ ಹತ್ತಾರು ದಾಖಲೆಗಳಿವೆ ಆದರೆ ಇವುಗಳಲ್ಲಿ ಒಂದೆರಡು ಅಡ್ರೆಸ್ ಪ್ರೂಫ್ ಮತ್ತು ಐಡಿ ಪ್ರೂಫ್ ಜೊತೆಗೆ ಜನನ ಪ್ರಮಾಣ ಪತ್ರಗಳನ್ನು ನೀಡಬಹುದು.
How to apply for an Indian passport online
ಹೊಸ ಪಾಸ್ಪೋರ್ಟ್ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
ಮೊದಲಿಗೆ ನೀವು ಪಾಸ್‌ಪೋರ್ಟ್ ಸೇವಾ ಆನ್‌ಲೈನ್ ಪೋರ್ಟಲ್ ಭೇಟಿ ನೀಡಿ ನಿಮ್ಮನ್ನು ನೀವು ನೋಂದಾಯಿಸಿಕೊಳ್ಳಬೇಕು
ನೋಂದಾಯಿಸಿದ ನಂತರ ನಿಮ್ಮ ಖಾತೆಯನ್ನು ಪ್ರವೇಶಿಸಲು ನಿಮ್ಮ ರುಜುವಾತುಗಳನ್ನು (ಲಾಗಿನ್ ಐಡಿ) ಬಳಸಿಕೊಂಡು ಲಾಗಿನ್ ಮಾಡಿ.
ಇಲ್ಲಿ ಹೊಸ ಪಾಸ್‌ಪೋರ್ಟ್‌ಗಾಗಿ/ಪಾಸ್‌ಪೋರ್ಟ್ ಮರು-ನೀಡುವಿಕೆಗಾಗಿ ಅರ್ಜಿ ಸಲ್ಲಿಸಿ” ಆಯ್ಕೆಮಾಡಿ.
ಹೊಸ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿ/ಪಾಸ್‌ಪೋರ್ಟ್‌ನ ಮರು-ನೀಡಿಕೆ” ಲಿಂಕ್ ಅನ್ನು ಕ್ಲಿಕ್ ಮಾಡಿ. ನೆನಪಿಡಿ ನೀವು ಮೊದಲ ಬಾರಿಗೆ ಪಾಸ್‌ಪೋರ್ಟ್‌ಗಾಗಿ ಅಥವಾ ಹೊಸ ವರ್ಗದ ಅಡಿಯಲ್ಲಿ (ರಾಜತಾಂತ್ರಿಕ ಅಥವಾ ಅಧಿಕೃತ) ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸುತ್ತಿದ್ದರೆ ಹೊಸ ಪಾಸ್‌ಪೋರ್ಟ್ ಆಯ್ಕೆಯನ್ನು ಆರಿಸಿ. ನೀವು ಈ ಹಿಂದೆ ಅದೇ ವರ್ಗದ ಪಾಸ್‌ಪೋರ್ಟ್ ಹೊಂದಿದ್ದರೆ ನೀವು ಮರು-ನೀಡಿಕೆ ಆಯ್ಕೆಯನ್ನು ಆರಿಸಬೇಕು.
ನಂತರ ಅಗತ್ಯವಿರುವ ವಿವರಗಳೊಂದಿಗೆ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಸಲ್ಲಿಸಿ ಪಾವತಿಸಿ ಮತ್ತು ಅಪಾಯಿಂಟ್‌ಮೆಂಟ್ ನಿಗದಿಪಡಿಸಿಕೊಳ್ಳಿ.
ಫಾರ್ಮ್ ಅನ್ನು ಸಲ್ಲಿಸಿದ ನಂತರ ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ (PSK) ನಿಮ್ಮ ಅಪಾಯಿಂಟ್‌ಮೆಂಟ್ ಅನ್ನು ಬುಕ್ ಮಾಡಲು “ಪಾವತಿಸಿ ಮತ್ತು ಅಪಾಯಿಂಟ್‌ಮೆಂಟ್ ನಿಗದಿಪಡಿಸಿ” ಮೇಲೆ ಕ್ಲಿಕ್ ಮಾಡಿ.
ನಂತರ ಅಪಾಯಿಂಟ್‌ಮೆಂಟ್‌ಗಳನ್ನು ನಿಗದಿಪಡಿಸಲು ಆನ್‌ಲೈನ್ ಪಾವತಿ ಕಡ್ಡಾಯವಾಗಿದೆ. ನೀವು ಈ ಕೆಳಗಿನ ಯಾವುದೇ ವಿಧಾನಗಳನ್ನು ಬಳಸಿಕೊಂಡು ಪಾವತಿಯನ್ನು ಮಾಡಬಹುದು:
ಪಾವತಿ ಪೂರ್ಣಗೊಂಡ ನಂತರ “ಅರ್ಜಿ ರಶೀದಿಯನ್ನು ಮುದ್ರಿಸಿ” ಲಿಂಕ್ ಅನ್ನು ಕ್ಲಿಕ್ ಮಾಡಿ. ಅರ್ಜಿ ರಶೀದಿಯಲ್ಲಿ ನಿಮ್ಮ ಅರ್ಜಿ ಉಲ್ಲೇಖ ಸಂಖ್ಯೆ (ARN) ಮತ್ತು ಅಪಾಯಿಂಟ್‌ಮೆಂಟ್ ಸಂಖ್ಯೆ ಇರುತ್ತದೆ.
ಗಮನಿಸಿ: ನೀವು ಇನ್ನು ಮುಂದೆ ಮುದ್ರಿತ ಅರ್ಜಿ ರಶೀದಿಯನ್ನು ಕೊಂಡೊಯ್ಯಬೇಕಾಗಿಲ್ಲ; ಪಾಸ್‌ಪೋರ್ಟ್ ಕಚೇರಿಗೆ ನಿಮ್ಮ ಭೇಟಿಯ ಸಮಯದಲ್ಲಿ ಅಪಾಯಿಂಟ್‌ಮೆಂಟ್ ವಿವರಗಳೊಂದಿಗೆ SMS ಸಾಕು.
ಇದರ ನಂತರ ನಿಮ್ಮ ಅಪಾಯಿಂಟ್‌ಮೆಂಟ್ ದಿನದಂದು ಅಗತ್ಯವಿರುವ ಎಲ್ಲಾ ಮೂಲ ದಾಖಲೆಗಳೊಂದಿಗೆ ಪಿಎಸ್‌ಕೆ ಅಥವಾ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ (ಆರ್‌ಪಿಒ) ಭೇಟಿ ನೀಡಬೇಕು ಅಷ್ಟೇ ಮುಂದಿನ ಕಾರ್ಯ ವಿಧಾನ ದಾಖಲೆ ಮತ್ತು ಎಲ್ಲ ಪರಿಶೀಲನಾ ಮಾಹಿತಿ ಸರಿಯಾಗಿದ್ದರೆ ನಿಮ್ಮ ಮನೆಗೆ ಇಂಡಿಯನ್ ಪೋಸ್ಟ್ ಮೂಲಕ ಪಾಸ್ಪೋರ್ಟ್ ಬರುತ್ತದೆ.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.