WhatsApp ಮೆಸೆಜ್ ಮಾಡುವಾಗ ಈ ಸೀಕ್ರೆಟ್ ಫೀಚರ್ ಬಳಕೆ ಮಾಡಿದ್ದೀರಾ?
ಬಳಕೆದಾರರ ಖಾತೆ ಸುರಕ್ಷತೆಗೆ ವಾಟ್ಸಪ್ ಸೀಕ್ರೆಟ್ ಫೀಚರ್‌ಗಳು ಉಪಯುಕ್ತ
ವಾಟ್ಸಪ್‌ನಲ್ಲಿ ಬಳಕೆದಾರರು ಖಾಸಗಿ ಚಾಟ್ ಅನ್ನು ಲಾಕ್ ಮಾಡಬಹುದು
ಬಳಕೆದಾರರು ಮೀಡಿಯಾ ಫೈಲ್ ಕಳುಹಿಸುವಾಗ View Once ಆಯ್ಕೆ ಮಾಡಬಹುದು
ಇಂದಿನ ಡಿಜಿಟಲ್ ಜಮಾನಾದಲ್ಲಿ WhatsApp ಅಪ್ಲಿಕೇಶನ್ ಸ್ಮಾರ್ಟ್‌ಫೋನ್ ಬಳಸುವ ಪ್ರತಿಯೊಬ್ಬರ ದಿನನಿತ್ಯದ ಜೀವನದ ಅವಿಭಾಜ್ಯ ಭಾಗವಾಗಿದೆ. ಮೆಸೆಜ್, ಕಾಲ್, ಫೋಟೋ ಹಾಗೂ ವಿಡಿಯೋ ಶೇರ್ ಮಾಡಲು ವಾಟ್ಸಾಪ್ ಅನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಆದರೆ ಅನೇಕ ಬಳಕೆದಾರರು ವಾಟ್ಸಾಪ್‌ನಲ್ಲಿ ಇರುವ ಹಲವು ಉಪಯುಕ್ತ ಮತ್ತು ಸೀಕ್ರೆಟ್ ಫೀಚರ್‌ಗಳನ್ನು ಗಮನಿಸುವುದು ವಿರಳ. ಈ ಆಪ್‌ನಲ್ಲಿರುವ ಸೀಕ್ರೆಟ್ ಫೀಚರ್‌ಗಳು ಬಳಕೆದಾರರ ಪ್ರೈವಸಿ ಹೆಚ್ಚಿಸುವುದರ ಜೊತೆಗೆ ಆಪ್ ಬಳಕೆಯನ್ನು ಇನ್ನಷ್ಟು ಸುಲಭ ಹಾಗೂ ಸ್ಮಾರ್ಟ್ ಆಗಿ ಮಾಡುತ್ತವೆ. ವಾಟ್ಸಪ್ ಸೀಕ್ರೆಟ್ ಫೀಚರ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.
SurveyAlso Read : 7,200mAh ಬ್ಯಾಟರಿ ಇರುವ iQOO Z11x 5G ಮೊಬೈಲ್ ಈಗ ಆಫರ್‌ನಲ್ಲಿ ಲಭ್ಯ!
WhatsApp ಚಾಟ್ ಲಾಕ್ ಆಯ್ಕೆ
WhatsApp ನಲ್ಲಿ ಚಾಟ್ ಲಾಕ್ ಆಯ್ಕೆ ಇದೆ. ಇದು ಬಹಳ ಉಪಯುಕ್ತವಾದ ಫೀಚರ್ ಆಗಿದೆ. ಬಳಕೆದಾರರು ಯಾವುದಾದರೂ ಖಾಸಗಿ ಚಾಟ್ ಅನ್ನು ಲಾಕ್ ಮಾಡಬಹುದು. ಅದಕ್ಕಾಗಿ Settings > Privacy > Chat Lock ಮೂಲಕ ಈ ಆಯ್ಕೆಯನ್ನು ಆನ್ ಮಾಡಿದಾಗ ಆ ಚಾಟ್ ತೆರೆಯಲು fingerprint ಅಥವಾ password ಬೇಕಾಗುತ್ತದೆ. ಇದರಿಂದ ನಿಮ್ಮ ಪ್ರೈವಸಿ ಸುರಕ್ಷಿತವಾಗುತ್ತದೆ.

Disappearing ಮೆಸೆಜ್
ವಾಟ್ಸಪ್‌ನಲ್ಲಿರುವ Disappearing ಮೆಸೆಜ್ ಸಹ ಉಪಯುಕ್ತ ಆಯ್ಕೆ ಆಗಿದೆ. ಈ ಫೀಚರ್ ಆನ್ ಮಾಡಿದರೆ ನೀವು ಕಳುಹಿಸಿದ ಮೆಸೇಜ್‌ಗಳು ನಿಗದಿತ ಸಮಯದ ನಂತರ ಆಟೋಮ್ಯಾಟಿಕ್ ಆಗಿ ಡಿಲೀಟ್ ಆಗಿ ಹೋಗುತ್ತವೆ. ಆಟೋಮ್ಯಾಟಿಕ್ ಆಗಿ ಡಿಲೀಟ್ ಆಗಲು 24 ಗಂಟೆ, 7 ದಿನ ಅಥವಾ 90 ದಿನಗಳ ಆಯ್ಕೆ ಲಭ್ಯವಿದೆ.
View Once Media
ಬಳಕೆದಾರರು ಕಳುಹಿಸುವ ಫೋಟೋ ಅಥವಾ ವಿಡಿಯೋವನ್ನು ಮೆಸೆಜ್ ಸ್ವೀಕರಿಸಿದವರು ಅದನ್ನು ಒಮ್ಮೆ ಮಾತ್ರ ನೋಡಲು ಅವಕಾಶ ಕೊಡಬಹುದು. ಇದನ್ನು ಬಳಸಲು media ಕಳುಹಿಸುವಾಗ 1 ಐಕಾನ್ ಮೇಲೆ ಟ್ಯಾಪ್ ಮಾಡಬೇಕು. ಇದು ಸೆನ್ಸಿಟಿವ್ ಫೈಲ್‌ಗಳಿಗೆ ಬಹಳ ಉಪಯುಕ್ತ.
ಎಡಿಟ್ ಸೆಂಟ್ ಮೆಸೆಜ್
ಎಡಿಟ್ ಸೆಂಟ್ ಮೆಸೆಜ್ ಕೂಡ ಅನುಕೂಲಕರ ಫೀಚರ್ ಆಗಿದೆ. ಬಳಕೆದಾರರು ಕಳುಹಿಸಿದ ಮೆಸೇಜ್‌ನಲ್ಲಿ ತಪ್ಪು ಇದ್ದರೆ ಅದನ್ನು ಈ ಆಯ್ಕೆ ಮೂಲಕ ಮತ್ತೆ ಸರಿಪಡಿಸಬಹುದು. ಇದನ್ನು ಬಳಕೆ ಮಾಡಲು ಮೆಸೇಜ್ ಮೇಲೆ long press ಮಾಡಿ Edit ಆಯ್ಕೆ ಕ್ಲಿಕ್ ಮಾಡಬಹುದು. ಈ ಆಯ್ಕೆ ನಿಗದಿತ ನಿಮಿಷಗಳೊಳಗೆ ಮಾತ್ರ ಕೆಲಸ ಮಾಡುತ್ತದೆ.
Mute Unknown Calls
ಅನಾಮಿಕ ಅಥವಾ ಅಪರಿಚಿತ ಸಂಖ್ಯೆಯಿಂದ ಬರುವ ಕಾಲ್‌ಗಳನ್ನು ಮ್ಯೂಟ್ ಮಾಡಬಹುದು. ಇದಕ್ಕಾಗಿ Settings > Privacy > Calls ನಲ್ಲಿ ಈ ಆಯ್ಕೆಯನ್ನು ಆನ್ ಮಾಡಬಹುದು. ಇದು ಸ್ಪ್ಯಾಮ್ ಕಾಲ್‌ಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.
ಮಲ್ಟಿ ಡಿವೈಸ್ ಸಪೋರ್ಟ್
ಮಲ್ಟಿ ಡಿವೈಸ್ ಸಪೋರ್ಟ್ ಆಯ್ಕೆ ಸಹ ಬಳಕೆದಾರರಿಗೆ ಉಪಯುಕ್ತ ಎನಿಸುತ್ತದೆ. ಒಂದೇ ವಾಟ್ಸಪ್ ಖಾತೆ ಅನ್ನು ಒಂದಕ್ಕಿಂತ ಹೆಚ್ಚು devices ಗಳಲ್ಲಿ ಬಳಸಬಹುದು. ಇದರಿಂದ ಲ್ಯಾಪ್‌ಟಾಪ್ ಅಥವಾ ಟ್ಯಾಬ್‌ನಲ್ಲಿ ಕೂಡ ಸುಲಭವಾಗಿ ಚಾಟ್ ಮಾಡಬಹುದು.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile