7,200mAh ಬ್ಯಾಟರಿ ಇರುವ iQOO Z11x 5G ಮೊಬೈಲ್ ಈಗ ಆಫರ್‌ನಲ್ಲಿ ಲಭ್ಯ!
ಐಕ್ಯೂ Z11x 5G ಫೋನ್ ಅಮೆಜಾನ್ ಪ್ಲಾಟ್‌ಫಾರ್ಮ್‌ನಲ್ಲಿ ಖರೀದಿಗೆ ಲಭ್ಯ
ಐಕ್ಯೂ ಕಂಪನಿಯ ಈ ಫೋನ್ 7,200mAh ಬ್ಯಾಟರಿ ಪಡೆದುಕೊಂಡಿದೆ
ಈ ಮೊಬೈಲ್ ಪ್ರಿಸ್ಮ್ಯಾಟಿಕ್ ಗ್ರೀನ್ ಮತ್ತು ಟೈಟಾನ್ ಬ್ಲ್ಯಾಕ್ ಕಲರ್ ಆಯ್ಕೆ ಹೊಂದಿದೆ
ಇತ್ತೀಚಿಗೆ ಲಾಂಚ್ ಆಗಿರುವ ಬಜೆಟ್ ಬೆಲೆಯ ಹೊಸದೊಂದು ಸ್ಮಾರ್ಟ್‌ಫೋನ್ ಖರೀದಿಸಲು ನೀವು ಯೋಚಿಸುತ್ತಿದ್ದರೆ iQOO Z11x 5G ಮೊಬೈಲ್ ಸೂಕ್ತ ಎನಿಸಬಹುದು. ಏಕೆಂದರೆ ಪ್ರಸ್ತುತ ಐಕ್ಯೂ Z11x 5G ಮೊಬೈಲ್ ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಆಕರ್ಷಕ ಡಿಸ್ಕೌಂಟ್ ಪಡೆದಿದೆ. ಇನ್ನು ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್‌ಗಳ ಕೊಡುಗೆಗಳ ಮೂಲಕ ಖರೀದಿಸಿದರೆ ಹೆಚ್ಚುವರಿ ಡಿಸ್ಕೌಂಟ್ ಸಹ ಪಡೆಯಲು ಅವಕಾಶ ಇದೆ. ಐಕ್ಯೂ ಸಂಸ್ಥೆಯ ಈ ಮೊಬೈಲ್ ಆಕ್ಟಾ ಕೋರ್ MediaTek Dimensity 7400 Turbo ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ. ಹಾಗೆಯೇ 7,200mAh ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಅನ್ನು ಹೊಂದಿದೆ. ಹಾಗಾದರೆ ಅಮೆಜಾನ್ ಇ ಕಾಮರ್ಸ್ ವೆಬ್‌ಸೈಟ್‌ನಲ್ಲಿ ಐಕ್ಯೂ Z11x 5G ಮೊಬೈಲ್‌ಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : Xiaomi ಕಂಪನಿಯಿಂದ ಹೊಸ ಸ್ಮಾರ್ಟ್‌ಟಿವಿ ಸರಣಿ ಬಿಡುಗಡೆ; ಜಬರ್ದಸ್ತ್ ಸೌಂಡ್ ವ್ಯವಸ್ಥೆ
iQOO Z11x 5G ಫೋನ್ ಬೆಲೆಯಲ್ಲಿ ಇಳಿಕೆ
ಐಕ್ಯೂ Z11x 5G ಮೊಬೈಲ್ ಆಕರ್ಷಕ ಫೀಚರ್ಸ್ ಮೂಲಕ ಗಮನ ಸೆಳೆದಿದೆ. ಪ್ರಸ್ತುತ ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಭರ್ಜರಿ ಡಿಸ್ಕೌಂಟ್ ಪಡೆದಿದೆ. ಈ ಮೊಬೈಲ್ 8GB + 128GB ವೇರಿಯಂಟ್ ಬೆಲೆ 30,999 ರೂಗಳು ಆಗಿದ್ದು ಆದರೆ ಆಫರ್‌ನಲ್ಲಿ ಸದ್ಯ ಈ ಮೊಬೈಲ್ 20,998 ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಈ ಮೊಬೈಲ್ ಪ್ರಿಸ್ಮ್ಯಾಟಿಕ್ ಗ್ರೀನ್ ಮತ್ತು ಟೈಟಾನ್ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಇನ್ನು ಆಸಕ್ತ ಗ್ರಾಹಕರು ಅಮೆಜಾನ್ ಇ ಕಾಮರ್ಸ್ ತಾಣದ ಮೂಲಕ ಖರೀದಿಸಬಹುದಾಗಿದೆ.

ಐಕ್ಯೂ Z11x 5G ಮೊಬೈಲ್ ಫೀಚರ್ಸ್ ಮಾಹಿತಿ
ಐಕ್ಯೂ Z11x 5G ಮೊಬೈಲ್ 6.76 ಇಂಚಿನ LCD ಡಿಸ್‌ಪ್ಲೇ ಹೊಂದಿದ್ದು ಇದರ ಸ್ಕ್ರೀನ್ 1,080×2,344 ಪಿಕ್ಸಲ್ ರೆಸಲ್ಯೂಶನನ್ನು ಪಡೆದಿದೆ. ಹಾಗೆಯೇ 120Hz ವರೆಗೆ ರಿಫ್ರೆಶ್ ರೇಟ್ ಹೊಂದಿದ್ದು 1,200 nits ಬ್ರೈಟ್ನೆಸ್ ಸೌಲಭ್ಯ ಒದಗಿಸಲಾಗಿದೆ. ಈ ಮೊಬೈಲ್ ಆಕ್ಟಾ ಕೋರ್ MediaTek Dimensity 7400 Turbo ಚಿಪ್‌ಸೆಟ್ ಪ್ರೊಸೆಸರ್ ಪವರ್ ಪಡೆದಿದೆ. ಇದಕ್ಕೆ ಪೂರಕವಾಗಿ 6GB RAM + 128GB, 8GB RAM + 128GB ಹಾಗೂ 8GB RAM + 256GB ವೇರಿಯಂಟ್ ಆಯ್ಕೆಗಳನ್ನು ಪಡೆದುಕೊಂಡಿದೆ.
ಐಕ್ಯೂ Z11x 5G ಮೊಬೈಲ್ ಹಿಂಬದಿಯಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇನ್ನು ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್ ಸಾಮರ್ಥ್ಯದಲ್ಲಿ ಇದ್ದು ಸೆಕೆಂಡರಿ ಕ್ಯಾಮೆರಾ ಬೇಸಿಕ್ ಲೆನ್ಸ್ ಸೌಲಭ್ಯ ಪಡೆದುಕೊಂಡಿದೆ. ಅಲ್ಲದೇ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 32 ಮೆಗಾಪಿಕ್ಸಲ್ ಕ್ಯಾಮೆರಾ ಒದಗಿಸಲಾಗಿದೆ. ಇನ್ನು ಈ ಮೊಬೈಲ್ 7,200mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿರುವ ಜೊತೆಗೆ 44W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಸಹ ಹೊಂದಿದೆ. ಅಲ್ಲದೇ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಈ ಮೊಬೈಲ್ IP68 ಮತ್ತು IP69+ ರೇಟಿಂಗ್ ಪಡೆದಿದೆ.
Disclosure: This Article Contains Affiliate Links
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile