ಬೇರೆ ಫೋನ್‌ನಲ್ಲಿ Gmail ತೆರೆದಿದ್ದರೆ ಚಿಂತೆ ಬೇಡ! ಈ ಕ್ರಮ ಅನುಸರಿಸಿ Sign Out ಮಾಡಿ

ಕೆಲವೊಮ್ಮೆ ಬಳಕೆದಾರರು ತಮ್ಮ Gmail ಖಾತೆಯನ್ನು ಕೆಲವೊಮ್ಮೆ ಮೊಬೈಲ್, ಲ್ಯಾಪ್‌ಟಾಪ್, ಆಫೀಸ್ ಕಂಪ್ಯೂಟರ್ ಅಥವಾ ಇತರ ಡಿವೈಸ್‌ಗಳಲ್ಲಿ ಲಾಗಿನ್ ಮಾಡಿರುತ್ತಾರೆ. ಆದರೆ ಬೇರೆ ಡಿವೈಸ್‌ನಲ್ಲಿ Gmail ಖಾತೆ ತೆರೆದಿರುವುದನ್ನು ಮರೆತರೆ ಅಥವಾ ಸೈನ್‌ ಔಟ್‌ ಮಾಡಲು ಆ ಡಿವೈಸ್‌ ಈಗ ನಮ್ಮ ಬಳಿ ಇಲ್ಲದಿದ್ದರೆ ಏನು ಮಾಡಬೇಕು? ಇಂತಹ ಸಂದರ್ಭಗಳಲ್ಲಿ ಆ ಡಿವೈಸ್‌ ಅನ್ನು ಕೈಯಲ್ಲಿ ಹೊಂದಿರಬೇಕೆಂದಿಲ್ಲ. ನಿಮ್ಮ ಸ್ವಂತ ಮೊಬೈಲ್ ಅಥವಾ ಕಂಪ್ಯೂಟರ್‌ನಿಂದಲೇ ಜಿ-ಮೇಲ್‌ ಖಾತೆಯನ್ನು ಬೇರೆ ಡಿವೈಸ್‌ನಿಂದ Sign Out ಮಾಡಬಹುದು. ಸಾರ್ವಜನಿಕ ಅಥವಾ ಆಫೀಸ್ ಕಂಪ್ಯೂಟರ್‌ನಲ್ಲಿ ಜಿ-ಮೇಲ್‌ ಬಳಸಿದ ನಂತರ ಲಾಗ್‌ಔಟ್ ಮಾಡಲು ಮರೆತಿದ್ದರೆ, ಖಾತೆಯ ಸುರಕ್ಷತೆಗಾಗಿ ಸೈನ್‌ ಔಟ್‌ ಮಾಡುವುದು ಉತ್ತಮ. ಹಾಗಾದರೆ ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : ಮೊಬೈಲ್‌ನಲ್ಲಿ Airplane Mode ಆನ್ ಮಾಡುವ ಮುನ್ನ ಈ ವಿಷಯಗಳನ್ನು ತಿಳಿದುಕೊಳ್ಳಿ

ಇತರೆ ಡಿವೈಸ್‌ಗಳಲ್ಲಿ Gmail Sign Out ಮಾಡುವುದು ಹೇಗೆ?

ಹಂತ 1: ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಜಿ-ಮೇಲ್‌ ತೆರೆಯಿರಿ ಮತ್ತು ನಿಮ್ಮ ಗೂಗಲ್‌ ಖಾತೆಗೆ ಲಾಗಿನ್ ಆಗಿ.

ಹಂತ 2: ಮೇಲ್ಭಾಗದಲ್ಲಿರುವ ನಿಮ್ಮ ಪ್ರೊಫೈಲ್ ಫೋಟೋ ಮೇಲೆ ಟ್ಯಾಪ್ ಮಾಡಿ.

ಹಂತ 3: Manage your ಜಿ-ಮೇಲ್‌ ಅಕೌಂಟ್‌ ಆಯ್ಕೆಯನ್ನು ತೆರೆಯಿರಿ.

ಹಂತ 4: ಬಳಿಕ Security ವಿಭಾಗಕ್ಕೆ ಹೋಗಿ.

Sign Out of Gmail

ಹಂತ 5: ಕೆಳಗೆ ಸ್ಕ್ರಾಲ್ ಮಾಡಿದಾಗ Your devices ಎಂಬ ವಿಭಾಗ ಕಾಣಿಸುತ್ತದೆ. ಇಲ್ಲಿ ನಿಮ್ಮ ಗೂಗಲ್‌ ಖಾತೆ ಯಾವೆಲ್ಲಾ ಸಾಧನಗಳಲ್ಲಿ ಸೈನ್ ಇನ್ ಆಗಿದೆ ಎಂಬುದನ್ನು ನೋಡಬಹುದು.

ಹಂತ 6: ಪಟ್ಟಿಯಲ್ಲಿ ನಿಮಗೆ ಪರಿಚಯವಿಲ್ಲದ ಅಥವಾ ಇನ್ನು ಮುಂದೆ ಬಳಸದೇ ಇರುವ ಡಿವೈಸ್‌ ಅನ್ನು ಆಯ್ಕೆ ಮಾಡಿ.

ಹಂತ 7: ಸೈನ್‌ ಔಟ್‌ ಆಯ್ಕೆಯನ್ನು ಟ್ಯಾಪ್ ಮಾಡಿ. ದೃಢೀಕರಣ ಕೇಳಿದರೆ ಮತ್ತೆ ಸೈನ್‌ ಔಟ್‌ ಆಯ್ಕೆಮಾಡಿ.

ಇಷ್ಟೇ. ಆ ಡಿವೈಸ್‌ನಲ್ಲಿ ನಿಮ್ಮ ಗೂಗಲ್‌ ಖಾತೆಯ ಸೆಷನ್‌ ಅನ್ನು ಸೈನ್ ಔಟ್ ಮಾಡಬಹುದು.

Gmail ಪಾಸ್‌ವರ್ಡ್ ಬದಲಾಯಿಸಬೇಕೇ?

ನಿಮಗೆ ಪರಿಚಯವಿಲ್ಲದ ಸಾಧನದಲ್ಲಿ ನಿಮ್ಮ Gmail ಖಾತೆ ಲಾಗಿನ್ ಆಗಿರುವುದು ಕಂಡುಬಂದರೆ, ಕೇವಲ Sign out ಮಾಡುವುದರ ಜೊತೆಗೆ Google ಖಾತೆಯ ಪಾಸ್‌ವರ್ಡ್ ಬದಲಾಯಿಸುವುದು ಕೂಡ ಸೂಕ್ತ. ವಿಶೇಷವಾಗಿ ಯಾರಾದರೂ ನಿಮ್ಮ ಪಾಸ್‌ವರ್ಡ್ ತಿಳಿದಿರಬಹುದು ಎಂಬ ಅನುಮಾನವಿದ್ದರೆ ತಕ್ಷಣ ಪಾಸ್‌ವರ್ಡ್ ಬದಲಾಯಿಸಿ. ಹಾಗೆಯೇ ಗೂಗಲ್‌ ಖಾತೆಯಲ್ಲಿ 2-Step Verification ಸಕ್ರಿಯಗೊಳಿಸುವುದರಿಂದ ಖಾತೆಗೆ ಹೆಚ್ಚುವರಿ ಭದ್ರತೆ ಸಿಗುತ್ತದೆ.

ಒಟ್ಟಿನಲ್ಲಿ ಜಿ-ಮೇಲ್ ಖಾತೆ ಬೇರೆ ಡಿವೈಸ್‌ನಲ್ಲಿ ತೆರೆದಿರುವುದನ್ನು ಮರೆತಿದ್ದರೆ ಗಾಬರಿಯಾಗಬೇಕಿಲ್ಲ. ಗೂಗಲ್‌ ಅಕೌಂಟ್‌ನ ಸೆಕ್ಯುರಿಟಿ > Your devices ವಿಭಾಗದ ಮೂಲಕ ಆ ಡಿವೈಸ್‌ ಅನ್ನು ಪರಿಶೀಲಿಸಿ, ಅಗತ್ಯವಿದ್ದರೆ ದೂರದಿಂದಲೇ ಸೈನ್‌ ಔಟ್‌ ಮಾಡಬಹುದು.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :