ಇಂದಿನ ವೇಗದ ಡಿಜಿಟಲ್ ಯುಗದಲ್ಲಿ UPI ಪಾವತಿ ವ್ಯವಸ್ಥೆ ನಮ್ಮ ದಿನನಿತ್ಯದ ಜೀವನದ ಅವಿಭಾಜ್ಯ ಭಾಗವಾಗಿದೆ. ಚಿಕ್ಕ ಅಂಗಡಿಯಿಂದ ದೊಡ್ಡ ಮಾಲ್‌ವರೆಗೆ ಎಲ್ಲೆಡೆ ಫೋನ್‌ಪೇ, ಗೂಗಲ್ ಪೇ, ಪೇಟಿಎಮ್, ಬೀಮ್ ಮುಂತಾದ ಆಪ್‌ಗಳ ಮೂಲಕ ಕ್ಷಣಗಳಲ್ಲಿ ಹಣ ಪಾವತಿ ಮಾಡಲಾಗುತ್ತಿದೆ. ನಗದು ಹಣ ತೆಗೆದುಕೊಂಡು ಹೋಗುವ ಅವಶ್ಯಕತೆ ಕಡಿಮೆಯಾಗಿ, ಮೊಬೈಲ್‌ನಲ್ಲೇ ಎಲ್ಲಾ ವ್ಯವಹಾರಗಳು ಸುಲಭವಾಗಿವೆ. ಆದರೆ ಈ ಸುಲಭತೆಯ ಜೊತೆಗೆ ಯುಪಿಐವಂಚನೆಗಳು ವೇಗವಾಗಿ ಹೆಚ್ಚುತ್ತಿವೆ. ಹಲವರು ತಿಳಿಯದೆ OTP, ಯುಪಿಐ PIN ಅಥವಾ ನಕಲಿ ಲಿಂಕ್‌ಗಳ ಮೂಲಕ ಹಣ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಯುಪಿಐ ಬಳಕೆ ಮಾಡುವ ಪ್ರತಿಯೊಬ್ಬರೂ ಸುರಕ್ಷತಾ ಕ್ರಮಗಳನ್ನು ತಿಳಿದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ.
Also Read : ನಾಳೆ ಹೊಸ ಲುಕ್‌ನಲ್ಲಿ ಎಂಟ್ರಿ ಕೊಡಲಿದೆ iQOO Neo 10 ಸ್ಮಾರ್ಟ್‌ಫೋನ್! ಇಲ್ಲಿದೆ ಮಾಹಿತಿ
ಯಾರಿಗೂ ನಿಮ್ಮ ಯುಪಿಐ PIN ಅನ್ನು ಹೇಳಬೇಡಿ. ಬ್ಯಾಂಕ್ ಅಥವಾ ಯುಪಿಐ ಕಂಪನಿಗಳು ಯಾವತ್ತೂ ನಿಮ್ಮ PIN ಕೇಳುವುದಿಲ್ಲ. ಯಾರಾದರೂ ಕರೆ ಮಾಡಿ KYC update, reward points, account verification ಎಂಬ ಹೆಸರಿನಲ್ಲಿ PIN ಕೇಳಿದರೆ ಅದು ಖಂಡಿತ ಮೋಸ.
Collect Request ಬಂದಾಗ ಜಾಗರೂಕರಾಗಿರಿ. ಹಲವರು ಹಣ ಕಳುಹಿಸುವ ಬದಲು collect request ಕಳುಹಿಸಿ ನಿಮ್ಮಿಂದ PIN ಹಾಕಿಸಿ ಹಣ ತೆಗೆದುಕೊಳ್ಳುತ್ತಾರೆ. ನೆನಪಿರಲಿ ಹಣ ಸ್ವೀಕರಿಸಲು PIN ಬೇಕಾಗುವುದಿಲ್ಲ. PIN ಹಾಕುವುದು ಎಂದರೆ ಹಣ ಹೋಗುತ್ತಿದೆ ಎಂಬ ಅರ್ಥ.
ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. SMS, WhatsApp ಅಥವಾ Email ಮೂಲಕ ಬಂದ ಲಿಂಕ್‌ಗಳಲ್ಲಿ Prize Won, Cashback Offer, Bank Alert ಎಂಬ ಮೆಸೆಜ್‌ಗಳು ಬರುತ್ತವೆ. ಇವುಗಳಲ್ಲಿ ಬಹಳಷ್ಟು ನಕಲಿ ಆಗಿರುತ್ತವೆ. ಇಂತಹ ಲಿಂಕ್‌ಗಳನ್ನು ತೆರೆಯುವುದರಿಂದ ನಿಮ್ಮ ಮೊಬೈಲ್ ಮತ್ತು ಬ್ಯಾಂಕ್ ಮಾಹಿತಿ ಸೈಬರ್ ವಂಚಕರ ಕೈಗೆ ಹೋಗಬಹುದು.
Screen Sharing Apps ಬಗ್ಗೆ ಎಚ್ಚರಿಕೆ ಇರಲಿ. AnyDesk, TeamViewer, QuickSupport ಮುಂತಾದ ಆಪ್‌ಗಳನ್ನು ಡೌನ್‌ಲೋಡ್ ಮಾಡಲು ಹೇಳಿದರೆ ಒಪ್ಪಬೇಡಿ. ಇವುಗಳ ಮೂಲಕ ಸೈಬರ್ ವಂಚಕರು ನಿಮ್ಮ ಮೊಬೈಲ್‌ನ್ನು ನೋಡಬಹುದು ಮತ್ತು ಹಣ ಕಳಿಸಬಹುದು.
ಯುಪಿಐ ಆಪ್‌ಗಳನ್ನು ಸದಾ ಅಧಿಕೃತ Play Store ಅಥವಾ App Store ನಿಂದ ಮಾತ್ರ ಡೌನ್‌ಲೋಡ್ ಮಾಡಿ. ನಕಲಿ ಆಪ್‌ಗಳನ್ನು ಬಹಳ ಅಪಾಯಕಾರಿ ಆಗಿರುತ್ತವೆ.
ಪ್ರತಿಯೊಂದು transaction ನಂತರ SMS ಅಲರ್ಟ್ ಚೆಕ್ ಮಾಡಿ. ಯಾವುದೇ ಅನುಮಾನಾಸ್ಪದ ವ್ಯವಹಾರ ಕಂಡರೆ ತಕ್ಷಣ ಬ್ಯಾಂಕ್‌ಗೆ ಮಾಹಿತಿ ನೀಡಿ ಮತ್ತು ಯುಪಿಐ ಸೇವೆಯನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಿಸಿ.
ಹಾಗೆಯೇ ಸಾರ್ವಜನಿಕ / ಉಚಿತ Wi-Fi ಬಳಸುವಾಗ ಹಣ ವರ್ಗಾವಣೆ ಮಾಡದಿರುವುದು ಉತ್ತಮ. ಉಚಿತ Wi-Fi ಬಳಸಿ transaction ಮಾಡಿದರೆ ಡೇಟಾ ಕಳುವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಒಟ್ಟಾರೇ ಯುಪಿಐ ಬಳಕೆ ಸುರಕ್ಷಿತವೇ ಸರಿ, ಆದರೆ ಎಚ್ಚರ ವಹಿಸದಿದ್ದರೆ ಅದು ದೊಡ್ಡ ನಷ್ಟಕ್ಕೆ ಕಾರಣವಾಗಬಹುದು.