Ai image
ಇಂದಿನ ಡಿಜಿಟಲ್ ಯುಗದಲ್ಲಿ ಆಧಾರ್ ಕಾರ್ಡ್ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಅಗತ್ಯ ದಾಖಲೆ ಆಗಿದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಸರ್ಕಾರಿ ಯೋಜನೆಗಳ ಲಾಭ ಪಡೆಯುವವರೆಗೆ ಎಲ್ಲೆಡೆ ಆಧಾರ್ ಅವಶ್ಯಕವಾಗಿದೆ. ಆದರೆ ಪ್ರಿಂಟ್ ಮಾದರಿಯ ಆಧಾರ್ ಕಾರ್ಡ್ ಬೇಗ ಹರಿದುಹೋಗುವ ಅಥವಾ ಹಾಳಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ UIDAI ಪರಿಚಯಿಸಿರುವ PVC Aadhaar Card ಹೆಚ್ಚು ಅನುಕೂಲಕರ ಎನಿಸಿದೆ. ಇದು ATM ಕಾರ್ಡ್‌ನಂತೆಯೇ ಇದ್ದು ದೀರ್ಘಕಾಲ ಬಾಳಿಕೆ ಬರುವ ಕಾರ್ಡ್ ಆಗಿದೆ. ಆಧಾರ್ ಕಾರ್ಡ್ ಹೊಂದಿರುವವರು ಕೇವಲ 50 ರೂ.ಗಳನ್ನು ಪಾವತಿಸುವ ಮೂಲಕ ಈ ಕಾರ್ಡ್ ಅನ್ನು ನೇರವಾಗಿ ನಿಮ್ಮ ಮನೆ ಬಾಗಿಲಿಗೆ ತಲುಪಿಸಿಕೊಳ್ಳಬಹುದು.
Also Read : BSNL ಸಂಸ್ಥೆಯಿಂದ ಹೊಸ ಸ್ಯಾಟಲೈಟ್ ಫೋನ್ ಬಿಡುಗಡೆ! ಇದು ಐಫೋನ್‌ಗಿಂತ ದುಬಾರಿ
ಪಿವಿಸಿ ಆಧಾರ್ ಕಾರ್ಡ್ ಎನ್ನುವುದು ಪಾಲಿವಿನೈಲ್ ಕ್ಲೋರೈಡ್ ವಸ್ತುವಿನಿಂದ ತಯಾರಿಸಲಾದ ಆಧಾರ್ ಕಾರ್ಡ್ ಆಗಿದೆ. ಇದು ಪ್ಯಾನ್ ಕಾರ್ಡ್ ಗಾತ್ರದ ರಚನೆ ಹೊಂದಿದೆ. ದೀರ್ಘ ಬಾಳಿಕೆ ಬರುವ ಮತ್ತು ಪರ್ಸ್‌ನಲ್ಲಿ ಸುಲಭವಾಗಿ ಇಟ್ಟುಕೊಳ್ಳಬಹುದಾದ ಮಾದರಿಯ ಕಾರ್ಡ್ ಆಗಿದೆ. ಇದರಲ್ಲಿ ಸೆಕ್ಯುರ್ QR ಕೋಡ್, Hologram ಹಾಗೂ ಇಶ್ಶೂ ಡೇಟ್ ಮತ್ತು ಪ್ರಿಂಟ್ ಡೇಟ್ ಸೇರಿದಂತೆ ಹಲವು ಭದ್ರತಾ ಆಯ್ಕೆಗಳನ್ನು UIDAI ನೀಡಿದೆ.
ಹಂತ 1. UIDAI ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ 2. ಆರ್ಡರ್ ಪಿವಿಸಿ ಆಧಾರ್ ಕಾರ್ಡ್ ಆಯ್ಕೆಯನ್ನು ತೆರೆಯಿರಿ.
ಹಂತ 3. ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆ ಅಥವಾ ವರ್ಚುವಲ್ ID (VID) ಅಥವಾ Enrollment ID (EID) ನಮೂದಿಸಿ.
ಹಂತ 4. ಕ್ಯಾಪ್ಚಾ ಕೋಡ್ ನಮೂದಿಸಿ, ನಿಮ್ಮ ಮೊಬೈಲ್ ಸಂಖ್ಯೆ ಆಧಾರ್‌ಗೆ ಲಿಂಕ್ ಆಗಿದ್ದರೆ OTP ಪಡೆಯಿರಿ. ಲಿಂಕ್ ಆಗಿರದಿದ್ದರೆ ‘My Mobile Number is not Registered’ ಆಯ್ಕೆಯ ಮೂಲಕ ಬೇರೆ ಮೊಬೈಲ್ ಸಂಖ್ಯೆಯನ್ನು ಬಳಸಬಹುದು.
ಹಂತ 5. OTP ಪರಿಶೀಲನೆಯ ನಂತರ ನಿಮ್ಮ ವಿವರಗಳನ್ನು ದೃಢೀಕರಿಸಿ.
ಹಂತ 6. 50 ರೂ.ಗಳನ್ನು UPI, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಿ.
ಹಂತ 7. ಪಾವತಿ ಯಶಸ್ವಿಯಾದ ಬಳಿಕ ನಿಮಗೆ Service Request Number (SRN) ದೊರೆಯುತ್ತದೆ. ಇದರ ಮೂಲಕ ನಿಮ್ಮ ಆರ್ಡರ್ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.
ಪಿವಿಸಿ ಆಧಾರ್ ಕಾರ್ಡ್ ಕಾಗದದ ಆಧಾರ್‌ಗಿಂತ ಹೆಚ್ಚು ಬಾಳಿಕೆ ಬೆಉತ್ತದೆ. ಅಲ್ಲದೇ ನೀರು ಮತ್ತು ಧೂಳಿನಿಂದ ಸುಲಭವಾಗಿ ಹಾಳಾಗುವುದಿಲ್ಲ. ಪರ್ಸ್‌ನಲ್ಲಿ ಸುಲಭವಾಗಿ ಇಟ್ಟುಕೊಳ್ಳಬಹುದು. ಭದ್ರತಾ ಆಯ್ಕೆಗಳು ಹೆಚ್ಚಿರುವುದರಿಂದ ನಕಲಿ ಕಾರ್ಡ್ ತಯಾರಿಸುವುದು ಕೂಡ ಕಷ್ಟ. ಆದ್ದರಿಂದ ಪ್ರತಿದಿನ ಆಧಾರ್ ಬಳಸುವವರಿಗೆ ಪಿವಿಸಿ ಆಧಾರ್ ಕಾರ್ಡ್ ಉತ್ತಮ ಆಯ್ಕೆಯಾಗಿದೆ.