ಇಂದಿನ ಡಿಜಿಟಲ್ ಯುಗದಲ್ಲಿ ಬ್ಯಾಂಕಿಂಗ್, UPI ಪಾವತಿ, ಆನ್ಲೈನ್ ಶಾಪಿಂಗ್, ಸಾಮಾಜಿಕ ಜಾಲತಾಣಗಳ ಲಾಗಿನ್ ಸೇರಿದಂತೆ ಹಲವು ಕೆಲಸಗಳಿಗೆ OTP ಅಗತ್ಯವಾಗಿದೆ. ಸಾಮಾನ್ಯವಾಗಿ OTP ಮೆಸೆಜ್ಗಳು ಮೊಬೈಲ್ಗೆ ಬಂದ ತಕ್ಷಣ ಲಾಕ್ ಸ್ಕ್ರೀನ್ನಲ್ಲೇ ಕಾಣಿಸಿಕೊಳ್ಳುತ್ತವೆ. ಇದರಿಂದ ಫೋನ್ ಅನ್ಲಾಕ್ ಮಾಡದೆಯೇ ಸಂದೇಶವನ್ನು ಓದಲು ಅನುಕೂಲವಾಗುತ್ತದೆ. ಆದರೆ ಇದೇ ಸೌಲಭ್ಯ ಕೆಲವೊಮ್ಮೆ ನಿಮ್ಮ ವೈಯಕ್ತಿಕ ಮಾಹಿತಿಯ ಗೌಪ್ಯತೆಗೆ ಸಮಸ್ಯೆಯಾಗಬಹುದು. ನಿಮ್ಮ ಫೋನ್ ಬೇರೆಯವರ ಕೈಯಲ್ಲಿರುವಾಗ ಲಾಕ್ ಸ್ಕ್ರೀನ್ನಲ್ಲಿ OTP ಕಾಣಿಸಿದರೆ, ಅವರು ಆ ಕೋಡ್ ಅನ್ನು ನೋಡಬಹುದು. ಅದು ಭದ್ರತಾ ಅಪಾಯವನ್ನು ಹೆಚ್ಚಿಸಬಹುದು. ಹೀಗಾಗಿ ಸುರಕ್ಷತೆಯ ದೃಷ್ಠಿಯಿಂದ ಫೋನ್ ಲಾಕ್ ಸ್ಕ್ರೀನ್ನಲ್ಲಿ OTP ಮೆಸೆಜ್ಗಳು ಕಾಣಿಸದಂತೆ ಮಾಡುವುದು ಉತ್ತಮ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ಕಡಿಮೆ ಬೆಲೆಯಲ್ಲಿ ಲಭ್ಯವಿರುವ Airtel ಸಂಸ್ಥೆಯ ಈ ಯೋಜನೆಯಲ್ಲಿ 25GB ಡೇಟಾ ಸೌಲಭ್ಯ!
ಸ್ಯಾಮ್ಸಂಗ್, ವಿವೋ, ಒಪ್ಪೋ, ಒನ್ಪ್ಲಸ್, ಶಿಯೋಮಿ, ಮೊಟೊರೊಲಾ ಸೇರಿದಂತೆ ವಿವಿಧ ಕಂಪನಿಗಳ ಆಂಡ್ರಾಯ್ಡ್ ಫೋನ್ಗಳಲ್ಲಿ ಸೆಟ್ಟಿಂಗ್ಗಳ ಹೆಸರು ಸ್ವಲ್ಪ ಬದಲಾಗಬಹುದು. ಆದರೂ ಸಾಮಾನ್ಯವಾಗಿ ಈ ಹಂತಗಳನ್ನು ಅನುಸರಿಸಬಹುದು.
ಹಂತ 1: ನಿಮ್ಮ ಫೋನ್ನ ಸೆಟ್ಟಿಂಗ್ಸ್ ತೆರೆಯಿರಿ.
ಹಂತ 2: Notifications ಅಥವಾ Notifications ಮತ್ತು Status Bar ಆಯ್ಕೆಯನ್ನು ಸರ್ಚ್ ಮಾಡಿ.
ಹಂತ 3: Lock screen notifications ಅಥವಾ ಅದಕ್ಕೆ ಸಮಾನವಾದ ಆಯ್ಕೆಯನ್ನು ತೆರೆಯಿರಿ.
ಹಂತ 4: ಇಲ್ಲಿ Hide content, Hide sensitive content ಅಥವಾ Don’t show sensitive notification content ಎಂಬ ಆಯ್ಕೆ ಇದ್ದರೆ ಅದನ್ನು ಸಕ್ರಿಯಗೊಳಿಸಿ.
ಈ ಸೆಟ್ಟಿಂಗ್ ಸಕ್ರಿಯವಾದ ಬಳಿಕ ಲಾಕ್ ಸ್ಕ್ರೀನ್ನಲ್ಲಿ ಸಂದೇಶದ ಸಂಪೂರ್ಣ ವಿವರಗಳ ಬದಲಿಗೆ, ಹೊಸ ಸಂದೇಶ ಬಂದಿದೆ ಎಂಬ ಮಾಹಿತಿ ಮಾತ್ರ ಕಾಣಿಸಬಹುದು. ಆದರೆ ಫೋನ್ನ ಮಾದರಿ ಮತ್ತು ಆವೃತ್ತಿಗೆ ಅನುಗುಣವಾಗಿ ಫಲಿತಾಂಶ ಬದಲಾಗಬಹುದು.
ಹಂತ 1: ಐಫೋನ್ನಲ್ಲಿ ಸೆಟ್ಟಿಂಗ್ಸ್ ತೆರೆಯಿರಿ.
ಹಂತ 2: ಬಳಿಕ Notifications ಆಯ್ಕೆಗೆ ಹೋಗಿ.
ಹಂತ 3: ನಂತರ ಪಟ್ಟಿಯಲ್ಲಿ Messages ಆಯ್ಕೆ ಮಾಡಿ.
ಹಂತ 4: ಆ ಬಳಿಕ Show Previews ಆಯ್ಕೆಯನ್ನು ತೆರೆಯಿರಿ.
ಹಂತ 5: When Unlocked ಆಯ್ಕೆಮಾಡಿ. ಇನ್ನಷ್ಟು ಗೌಪ್ಯತೆ ಬೇಕಿದ್ದರೆ Never ಆಯ್ಕೆಯನ್ನೂ ಬಳಸಬಹುದು.
When Unlocked: ಫೋನ್ ಅನ್ಲಾಕ್ ಮಾಡಿದಾಗ ಮಾತ್ರ ಸಂದೇಶದ ಪೂರ್ವವೀಕ್ಷಣೆ ಕಾಣಿಸುತ್ತದೆ.
Never: ನೋಟಿಫಿಕೇಶನ್ನಲ್ಲಿ ಸಂದೇಶದ ಪೂರ್ಣ ವಿಷಯ ತೋರಿಸುವುದನ್ನು ನಿರ್ಬಂಧಿಸುತ್ತದೆ.